ಅಂತರಾಷ್ಟ್ರೀಯ ಕ್ರಿಕೆಟ್​ಗೆ ಯುವರಾಜ್ ಸಿಂಗ್ ವಿದಾಯ..?

ಯುವರಾಜ್ ಸಿಂಗ್

ಯುವರಾಜ್ ಸಿಂಗ್

  • News18
  • Last Updated :
  • Share this:
ನ್ಯೂಸ್ 18 ಕನ್ನಡ

ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾಗಿದ್ದ ಯುವರಾಜ್ ಸಿಂಗ್ ಸದ್ಯ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳದೆ ವರ್ಷಗಳೇ ಕಳೆದುಹೋಗಿವೆ. 2017ರ ಜೂನ್ ತಿಂಗಳಲ್ಲಿ ಭಾರತ ಪರ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಯುವರಾಜ್ ಈಗಿನ ವರೆಗೆ ತಂಡದಲ್ಲಿನ ಸ್ಥಾನಕ್ಕಾಗಿ ಪರಿಶ್ರಮ ಪಡುತ್ತಿದ್ದಾರೆ.

ಇದನ್ನೂ ಓದಿ: 2019ರ ವಿಶ್ವಕಪ್​​ಗೆ ಧೋನಿ ಬೇಕೆ ಎಂಬ ಪ್ರಶ್ನೆಗೆ ಗವಾಸ್ಕರ್ ಹೇಳಿದ್ದೇನು..?

2007ರಲ್ಲಿ ನಡೆದ ಟಿ-20 ಹಾಗೂ 2011ರ ಏಕದಿನ ವಿಶ್ವಕಪ್​​ನಲ್ಲಿ ಭಾರತದ ಗೆಲುವಿಗೆ ಯುವರಾಜ್ ಸಿಂಗ್ ಅವರ ಪಾತ್ರ ಮುಖ್ಯವಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಬಳಿಕ ಕ್ಯಾನ್ಸರ್​ನಿಂದ ಗುಣಮುಖರಾಗಿ ಟೀಂ ಇಂಡಿಯಾ ಪರ ಕೆಲ ಪಂದ್ಯಗಳನ್ನು ಆಡಿದರಾದರು ಹೇಳಿಕೊಳ್ಳುವಂತಹ ಪ್ರದರ್ಶನ ಯುವಿ ಬ್ಯಾಟ್​​ನಿಂದ ಬಂದಿಲ್ಲ. ಇದರಿಂದ ಯುವರಾಜ್​ರನ್ನು 2014 ರಿಂದ 2016ರ ವರೆಗೆ ಭಾರತ ತಂಡದಿಂದ ಹೊರದೂಡಲ್ಪಟ್ಟರು. ಬಳಿಕ ಐಪಿಎಲ್ ಸೇರಿದಂತೆ ದೇಶಿಯ ಟೂರ್ನಿಯ ಕಡೆ ಯುವಿ ಮುಖಮಾಡಿದರು. ಐಪಿಎಲ್​​​ನಲ್ಲಿ ಪಂಜಾಬ್ ಪರ ಆಡಿದ ಯುವಿಯದ್ದು ಮತ್ತದೆ ಕಳಪೆ ಫಾರ್ಮ್​​​. ನಂತರ ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಥಾನ ನೀಡಲಾಯಿತಾದರು ಯುವಿ ಪ್ರದರ್ಶನ ಸಾಧಾರಣವಾಗಿತ್ತಷ್ಟೆ. ಹೀಗಾಗೆ ದೇವಧರ್ ಟ್ರೋಫಿ ಟೂರ್ನಿಯಲ್ಲೂ ಸ್ಥಾನ ಸಿಗಲಿಲ್ಲ. ಇದರ ಜೊತೆಗೆ ಸದ್ಯ ರಣಜಿ ತಂಡದಿಂದಲೂ ಯುವರಾಜ್​ರನ್ನು ಕೈ ಬಿಡಲಾಗಿದೆ.

ಇದನ್ನೂ ಓದಿ: 2019 ವಿಶ್ವಕಪ್​​ಗೆ ಮತ್ತೆ ಟೀಂ ಇಂಡಿಯಾ ಸೇರಲಿದ್ದಾರೆ ಈ ಹಳೆಯ ಹುಲಿಗಳು

ಇದನ್ನೆಲ್ಲಾ ಗಮನಿಸಿದರೆ 2019ರ ವಿಶ್ವಕಪ್​​ನಲ್ಲಿ ಯುವರಾಜ್​​ಗೆ ಸ್ಥಾನ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ಯುವರಾಜ್ ಸಿಂಗ್​ ಹೇಳಿದ ಮಾತು ಸದ್ಯದಲ್ಲೇ ಕ್ರಿಕೆಟ್​ಗೆ ಗುಡ್​ಬೈ ಹೇಳಲಿದ್ದಾರೆ ಎಂಬ ಅನುಮಾನು ಹುಟ್ಟುಹಾಕಿದೆ. ‘ಭಾರತ ಕ್ರಿಕೆಟ್ ತಂಡಕ್ಕೆ ಪ್ರತಿಭಾವಂತ ಯುವ ಆಟಗಾರರು ಕಾಲಿಡುತ್ತಿದ್ದಾರೆ. ಅದರಲ್ಲು ಮುಂಬರುವ ವಿಶ್ವಕಪ್​​ಗೆ ಭಾರತ ತಂಡ ಈಗಾಗಲೇ ಯುವ ಆಟಗಾರರನ್ನು ತಯಾರುಮಾಡುತ್ತಿದೆ. ಅವರ ಸ್ಥಾನವನ್ನು ಕಿತ್ತುಕೊಳ್ಳಲು ನನಗೆ ಇಷ್ಟವಿಲ್ಲ' ಎಂದು ಸಿಕ್ಸ್​ರ್​ಗಳ ಸರದಾರ ಹೇಳಿದ್ದಾರೆ.

ಸದ್ಯ ಈ ಹೇಳಿಕೆಯನ್ನು ಹಾಗೂ ಯುವಿ ಫಾರ್ಮ್​​​ ಬಗ್ಗೆ ಗಮನಿಸಿದರೆ ಸದ್ಯದಲ್ಲೇ ನಿವೃತ್ತಿ ನೀಡಲಿದ್ದಾರೆ, ಯುವರಾಜ್ ಸಿಂಗ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್​​ ಬದುಕು ಅಂತ್ಯವಾಗಲಿದೆ ಎಂದು ಗೋಚರಿಸುತ್ತಿದೆ.

First published: