ಅಂದು 19 ಜನವರಿ 2017ರ ಸಮಯ. ಕತಕ್ನಲ್ಲಿ ನಡೆದ ಎರಡನೇ ಒನ್ ಡೇ ಇಂಟರ್ನ್ಯಾಶನಲ್ ಸೀರೀಸ್ನ ಪಂದ್ಯಾಟದಲ್ಲಿ ಆಲ್ರೌಂಡರ್ ಯುವರಾಜ್ ಸಿಂಗ್ (Yuvraj Singh) ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ (MS Dhoni) ಜೊತೆಯಾಟದಿಂದ ಇಂಗ್ಲೆಂಡ್ (England) ವಿರುದ್ಧ ಭಾರತ ಅತ್ಯಂತ ರೋಚಕ ಗೆಲುವನ್ನೇ ದಾಖಲಿಸಿದ ಕ್ಷಣವಾಗಿತ್ತು. 127 ಬಾಲ್ಗಳಲ್ಲಿ ಯುವಿ 150 ರನ್ ದಾಖಲಿಸಿ ತಂಡಕ್ಕೆ ಅಭೂತ ಪೂರ್ವ ಗೆಲುವನ್ನು ತಂದುಕೊಟ್ಟರು.
ಮಾಹಿ ಯುವಿ ಜತೆಯಾಟ:
ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾದ ಅಮೋಘ ಗೆಲುವಿಗೆ ಕಾರಣರಾದ ಯುವಿ ಆಟ ಕ್ರಿಕೆಟ್ ಪ್ರೇಮಿಗಳಿಗೆ ಮರೆಯಲಾರದ ಅನುಭವವನ್ನುಂಟು ಮಾಡಿದ್ದರೆ ಮಾಹಿ ಕೂಡ ಯುವರಾಜ್ಗೆ ಸಾಥ್ ನೀಡಿ ಅದ್ಭುತ ರನ್ ದಾಖಲಿಸಲು ಸಹಕರಿಸಿದ್ದರು. 122 ಬಾಲ್ಗಳಲ್ಲಿ ಮಾಹಿ 134 ರನ್ ದಾಖಲಿಸಿ 50 ಓವರ್ಗಳಲ್ಲಿ ಭಾರತ 381/6 ರನ್ಗಳ ಭರ್ಜರಿ ಮೊತ್ತ ಕಲೆಹಾಕಲು ಕಾರಣರಾಗಿದ್ದರು. ಈ ದಿನದ ಅಭೂತಪೂರ್ವ ಸ್ಮರಣೆಗಳನ್ನು ಸ್ಮರಿಸಿಕೊಂಡ ಯುವಿ ಟ್ವಿಟರ್ನಲ್ಲಿ ಪಂದ್ಯಾಟದ ರೋಚಕ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
Never Give Up ❤️#ThrowbackThursday #ThisDayThatYear pic.twitter.com/gE3SneuQUM
— Yuvraj Singh (@YUVSTRONG12) January 19, 2023
ಧೋನಿಯನ್ನು ಮರೆತ ಯುವಿ:
ಧೋನಿ ಹಾಗೂ ಯುವಿ ಜೊತೆಯಾಟದಿಂದಲೇ ಭಾರತ ಆ ದಿನ ಐತಿಹಾಸಿಕ ಗೆಲುವನ್ನು ದಾಖಲಿಸಿತ್ತು. ಈ ಸಮಯದಲ್ಲಿ ಯುವಿ ಮಾಹಿಯ ಸಹಕಾರವನ್ನು ನೆನೆಸಿಕೊಳ್ಳದೇ ಇರುವುದು ಮಾಹಿ ಅಭಿಮಾನಿಗಳಲ್ಲಿ ಅಸಮಾಧಾನವನ್ನುಂಟು ಮಾಡಿದೆ.
ಇದನ್ನೂ ಓದಿ: Cristiano Ronaldo: ಸೌದಿ ಅರೇಬಿಯಾದಲ್ಲಿ ಫುಟ್ಬಾಲ್ ಆಟಗಾರನಿಗೆ ಗೌರವ, ರೊನಾಲ್ಡೊಗಾಗಿ 2 ಗಂಟೆ ಪಾರ್ಕ್ ಕ್ಲೋಸ್!
ಯುವಿಗೆ ನೇರವಾಗಿಯೇ ಟಾಂಗ್ ಕೊಟ್ಟ ಧೋನಿ ಫ್ಯಾನ್ಸ್
ನೆವರ್ ಗಿವ್ಅಪ್ ಶೀರ್ಷಿಕೆಯೊಂದಿಗೆ ಯುವಿ ಟ್ವಿಟರ್ನಲ್ಲಿ ತಾವೊಬ್ಬರೇ ಇರುವ ಫೋಟೋಗಳನ್ನು ಹಂಚಿಕೊಂಡಿದ್ದು ಧೋನಿ ಫ್ಯಾನ್ಸ್ಗಳು ತಮ್ಮ ನಾಯಕ ಎಲ್ಲಿ ಎಂದು ಯುವಿಯನ್ನೇ ನೇರವಾಗಿ ತರಾಟೆಗೆ ತೆಗೆದುಕೊಳ್ಳುವಂತಹ ಕಾಮೆಂಟ್ಗಳನ್ನು ಮಾಡಿದ್ದಾರೆ.
ಇನ್ನು ಕೆಲವು ಬಳಕೆದಾರರು ಧೋನಿ ಮಾತ್ರವೇ ಇರುವ ಸಿಂಗಲ್ ಫೋಟೋಗಳನ್ನು ಹಾಕಿ ಯುವಿಗೆ ತಿರುಗೇಟು ನೀಡಿದ್ದಾರೆ ಹಾಗೂ ಆ ದಿನ ಧೋನಿಯ ಜತೆಯಾಟದಿಂದ ಟೀಮ್ ಇಂಡಿಯಾ ಗೆದ್ದಿರುವುದು ಎಂಬುದನ್ನು ಮರೆಯದಿರಿ ಎಂಬ ಬಿಸಿ ಮುಟ್ಟಿಸಿದ್ದಾರೆ.
ಧೋನಿ ಇಲ್ಲದ ಫೋಟೋ ಶೇರ್ ಮಾಡಿದ ಯುವಿ
ಧೋನಿ ಹಾಗೂ ಯುವಿ ಜತೆಯಾಟದೊಂದಿಗೆ ಟೀಮ್ ಇಂಡಿಯಾ ಗೆಲುವು ಸಾಧಿಸಿದ್ದು ಆದರೆ ಧೋನಿಯ ಫೋಟೋವನ್ನೇ ಯುವಿ ಶೇರ್ ಮಾಡಿಕೊಂಡಿಲ್ಲ ಎಂದು ಒಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ. ಧೋನಿಯವರ ನಿವೃತ್ತಿ ವಿಡಿಯೋದಲ್ಲಿ ಕಾಣಿಸಿಕೊಳ್ಳುವುದೇ ನಿಮ್ಮ ಅತಿದೊಡ್ಡ ಸಾಧನೆಯಾಗಿರಬಹುದು ಎಂದು ಇನ್ನೊಬ್ಬ ಮಾಹಿ ಫ್ಯಾನ್ ಕಟುವಾಗಿ ಬರೆದುಕೊಂಡಿದ್ದಾರೆ.
ಧೋನಿ ಗಳಿಸಿದ ರನ್ ಆ ದಿನ ಮುಖ್ಯವಾಗಿತ್ತು:
ಯುವಿ ಪಾರ್ಟ್ನರ್ಶಿಪ್ ಮಾಡಿಕೊಂಡು ಆಡಿರುವ ಧೋನಿ ಫೋಟೋವನ್ನೇ ಹಂಚಿಕೊಂಡಿಲ್ಲ ಎಂದು ಬಳಕೆದಾರರೊಬ್ಬರು ಕಾಮೆಂಟ್ನಲ್ಲಿ ತಿಳಿಸಿದ್ದರೆ, ಧೋನಿಯ 134 ರನ್ ಆ ದಿನ ಸ್ಮರಣೀಯವಾದುದು ನಿಮ್ಮ 150 ರನ್ಗಳಲ್ಲ ಎಂದು ನೇರವಾಗಿಯೇ ಇನ್ನೊಬ್ಬ ಫ್ಯಾನ್ ಕಾಮೆಂಟ್ ಮಾಡಿದ್ದಾರೆ. ಈ ದಿನ ಧೋನಿಯ 134 ರನ್ಗೆ ಸ್ಮರಣೀಯವಾದುದು ಎಂದು ಇನ್ನೊಬ್ಬ ಫ್ಯಾನ್ ದನಿಗೂಡಿಸಿದ್ದಾರೆ.
ಧೋನಿಯ ಜೊತೆಗಿರುವ ಫೋಟೋವನ್ನು ಯುವಿಗೆ ಶೇರ್ ಮಾಡಬಹುದಿತ್ತು ಎಂದು ಇನ್ನೊಬ್ಬ ಫ್ಯಾನ್ ತಿಳಿಸಿದ್ದರೆ, ನಾವೆಲ್ಲಾ ಗಂಗೂಲಿ ಬ್ಯಾಚ್ನ ಆಟಗಾರರು ನಾವ್ಯಾಕೆ ಗೌರವ ನೀಡಬೇಕು ಎಂಬ ತಿವಿತದ ಕಾಮೆಂಟ್ ಅನ್ನು ಯುವಿಗೆ ನೀಡಿದ್ದಾರೆ.
ಯುವಿ ಪೋಸ್ಟ್ಗೆ ಬಂದಿದೆ ಭರ್ಜರಿ ಲೈಕ್:
ಯುವರಾಜ್ ಹಂಚಿಕೊಂಡಿರುವ ಪೋಸ್ಟ್ ಟ್ವಿಟರ್ನಲ್ಲಿ 38.5K ಲೈಕ್ಗಳನ್ನು ಪಡೆದುಕೊಂಡಿದೆ. ಧೋನಿ ನೇತೃತ್ವದ 2007 ಹಾಗೂ 2011 ರ ವಿಶ್ವಕಪ್ ವಿಜೇತ ಟೀಮ್ ಇಂಡಿಯಾ ಟ್ವಿಟರ್ ಖಾತೆ 6 ಮಿಲಿಯನ್ ಫಾಲೋವರ್ಗಳನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ