2012 ವಿಶ್ಚಕಪ್ (2012 World Cup) ನ ಹೀರೋ (Hero) ಅಂದರೆ ಅವರೇ ನಮ್ಮ ಯುವರಾಜ್ ಸಿಂಗ್ (Yuvaraj Singh) . 6 ಎಸೆತಗಳನ್ನು ಸಿಕ್ಸರ್ (Sixer) ಬಾರಿಸಿದ ದಾಂಡಿಗ. ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್. ಒಂದು ಕಾಲದಲ್ಲಿ ಇವರಂಥ ಎಡಗೈ ಬ್ಯಾಟ್ಸ್ಮೆನ್ (Left Hand Batsman) ಭಾರತ ತಂಡದಲ್ಲಿ ಇರಲಿಲ್ಲ. ಈಗಲೂ ಇವರ ರೀತಿ ಆಟ ಆಡುವ ಮತ್ತೊಬ್ಬ ಆಟಗಾರನಿಲ್ಲ. ಕೇವಲ ಗ್ರೌಂಡ್ನಲ್ಲಿ ಎದುರಾಳಿ ವಿರುದ್ಧ ಹೋರಾಡಿದ್ದಲ್ಲದೇ, ಕ್ಯಾನ್ಸರ್ (Cancer) ವಿರುದ್ಧ ಹೋರಾಡಿ ಗೆದ್ದ ವೀರ ನಮ್ಮ ಯುವರಾಜ್ ಸಿಂಗ್. ಎಲ್ಲಾ ಫಾರ್ಮೆಟ್ನ ಕ್ರಿಕೆಟ್ಗೂ ಯುವರಾಜ್ಸಿಂಗ್ ವಿದಾಯ ಹೇಳಿದ್ದಾರೆ. ಯುವರಾಜ್ ಸಿಂಗ್ ಇದೀಗ ತಮ್ಮ ಅಭಿಮಾನಿಗಳಿಗೆ ಬಿಗ್ ಆಫರ್ವೊಂದನ್ನು ನೀಡಿದ್ದಾರೆ. ತಮ್ಮ ಗೋವಾ (Goa Home) ದಲ್ಲಿರುವ ಮನೆಯಲ್ಲಿ 6 ಜನ ಅದೃಷ್ಟಶಾಲಿಗಳೊಂದಿಗೆ ತಂಗಲಿದ್ದಾರೆ. ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು Airbnb ಆತಿಥ್ಯ ವಹಿಸುತ್ತಿದ್ದಾರೆ. ಗೋವಾದಲ್ಲಿರುವ ತಮ್ಮ ಮನೆಯಲ್ಲಿ ಆರು ಜನರ ಗುಂಪಿಗೆ ಒಂದು ಬಾರಿ ಮಾತ್ರ ತಂಗಲು ವಿಶೇಷ ಅವಕಾಶವನ್ನು ನೀಡುತ್ತಿದ್ದಾರೆ.
ಗೋವಾದ ಬೆಟ್ಟದ ಮೇಲಿದೆ ಯುವ್ವಿ ಮನೆ!
ಬೆಟ್ಟದ ಮೇಲಿರುವ ಯುವರಾಜ್ ಸಿಂಗ್ ಅವರ ಮನೆ ವಿಸ್ತಾರವಾದ ಸಮುದ್ರದ ರಮ್ಯ ನೋಟವನ್ನೂ ನೀಡುತ್ತದೆ. ಗೋವಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಗೌರವದ ಪ್ರತೀಕವೂ ಆಗಿದೆ. ಪ್ರಾಚೀನ ಕಡಲತೀರಗಳು, ಅನನ್ಯ ಪಾಕಪದ್ಧತಿ ಮತ್ತು ಬೆಚ್ಚಗಿನ ಆತಿಥ್ಯಕ್ಕೆ ಗೋವಾ ಪ್ರಸಿದ್ಧವಾಗಿದೆ. ಈ ಕಾರಣಕ್ಕಾಗಿಯೇ ಪ್ರವಾಸಿಗರು ಜಗತ್ತಿನೆಲ್ಲೆಡೆಯಿಂದ ಗೋವಾಕ್ಕೆ ದಾಂಗುಡಿ ಇಡುತ್ತಿದ್ದಾರೆ. ಯುವರಾಜ್ ಸಿಂಗ್ ಅವರು ಅಮೋಘ ಆಟದೊಂದಿಗೆ ತಮ್ಮ ಸುದೀರ್ಘ ವೃತ್ತಿ ಜೀವನವನ್ನು ಸುವರ್ಣಾಕ್ಷರಗಳಿಂದ ಬರೆದಿದ್ದಾರೆ. ಅವರೀಗ Airbnb ಆತಿಥ್ಯ ವಹಿಸುವ ಮೂಲಕ ಈ ಮೈಲಿಗಲ್ಲನ್ನು ಸ್ಥಾಪಿಸಿದ ಭಾರತದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟಿಗರೂ ಆಗಿದ್ದಾರೆ.
ಯುವರಾಜ್ ಮನೆಯಲ್ಲಿ 6 ದಿನ ಇರಿ!
ಮೂರು ಬೆಡ್‌ರೂಂಗಳುಳ್ಳ ಈ ಹಾಲಿಡೇ ಹೋಮ್ ಸಿಂಗ್ ಅವರ ವಿಶೇಷ ನೆನಪುಗಳು ಮತ್ತು ಅವರ ಸುದೀರ್ಘ ಕ್ರಿಕೆಟ್ ಬದುಕಿನ ಅರ್ಥಪೂರ್ಣ ಸ್ಮರಣಿಕೆಗಳನ್ನು ಒಳಗೊಂಡಿದೆ, ಆರು ಅತಿಥಿಗಳು ಇದಕ್ಕೆ ಪ್ರವೇಶವನ್ನು ಪಡೆಯುತ್ತಾರೆ. ಯುವರಾಜ್ ಸಿಂಗ್ ಅವರ ಜನ್ಮದಿನ ಹಾಗೂ ಜೆರ್ಸಿ ಸಂಖ್ಯೆಗೆ ಸರಿಹೊಂದುವಂತೆ ಅವರ ಮನೆಗೆ ಪ್ರವೇಶವು ಒಂದು ರಾತ್ರಿಗೆ ರೂ. 1212* ಕ್ಕೆ ಲಭ್ಯವಿರುತ್ತದೆ. ಅಕ್ಟೋಬರ್ 14ರಿಂದ 16, 2022ರ ವರೆಗೆ ಎರಡು ರಾತ್ರಿಗಳ ಕಾಲ ತಂಗಲು ಅವಕಾಶವಿರುತ್ತದೆ. ನೀವು ಯುವರಾಜ್ ಸಿಂಗ್ ಅವರ ಮನೆಯಲ್ಲಿ ಇರಬೇಕು ಅಂದರೆ airbnb.com/yuvrajsingh ಈ ವೆಬ್ಸೈಟ್ಗೆ ಹೋಗಿ ಬುಕ್ ಮಾಡಬೇಕು.
ನಿಮ್ಮನ್ನು ವೆಲ್ಕಮ್ ಮಾಡೋದಕ್ಕೆ ಯುವ್ವಿ ಕಾಯ್ತಿದ್ದಾರೆ!
“ಗೋವಾದ ನನ್ನ ಮನೆ ನನಗೆ ಯಾವಾಗಲೂ ಅತ್ಯಂತ ಸ್ಪೆಷಲ್ ಆಗಿರುತ್ತದೆ. ಕೆಲಸದ ನಿಮಿತ್ತ ನಾನು ಪ್ರಪಂಚದ ಎಲ್ಲ ಕಡೆಗಳಲ್ಲಿ ಓಡಾಡುತ್ತಿರುತ್ತೇನೆ. ನನ್ನ ಪತ್ನಿ, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಕಾಲ ಕಳೆಯಲು ಆಗಾಗ ಈ ವಿಲ್ಲಾದಲ್ಲಿ ಒಟ್ಟಿಗೆ ಸೇರುತ್ತೇವೆ. ನಾನು Airbnb ಆತಿಥ್ಯ ವಹಿಸಲು ಎದುರು ನೋಡುತ್ತಿದ್ದೇನೆ. ಅದೃಷ್ಟಶಾಲಿ ಆರು ಜನರ ಗುಂಪಿಗೆ ನನ್ನ ಮನೆಯ ಬಾಗಿಲು ತೆರೆಯಲು ಉತ್ಸುಕನಾಗಿದ್ದೇನೆ" ಎಂದು ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಎದುರು ಆಸ್ಟ್ರೇಲಿಯಾಗೆ ಭರ್ಜರಿ ಜಯ, ವ್ಯರ್ಥವಾದ ಪಾಂಡ್ಯ-ರಾಹುಲ್ ಆಟ
ಹೇಗಿರುತ್ತೆ ಅತಿಥ್ಯಾ?
● ಆಗಮಿಸಿದ ಬಳಿಕ ಯುವರಾಜ್ ಸಿಂಗ್ ಅವರಿಂದ ವರ್ಚುವಲ್ ಭೇಟಿ ಮತ್ತು ಶುಭಾಶಯ
● ಗೋವಾದಲ್ಲಿ ಸಿಂಗ್ ಅವರ ನೆಚ್ಚಿನ ಪ್ರವಾಸಿ ತಾಣಗಳನ್ನು ಹಂಚಿಕೊಳ್ಳುವ ವೈಯಕ್ತೀಕರಿಸಿದ ಸ್ವಾಗತ ಭಾಷಣ
● ಮ್ಯಾಂಗ್ರೋವ್ ಕ್ಷೇತ್ರಗಳು, ಚರ್ಚ್‌ಗಳು, ದೇವಾಲಯಗಳು ಮತ್ತು ಸುಂದರವಾದ ಮನೆಗಳಿಗೆ ಹಾಗೂ ದಿವಾರ್ ದ್ವೀಪಕ್ಕೆ ಇ-ಬೈಕ್‌ನಲ್ಲಿ ವಿಹಾರ
● ಹೊರಾಂಗಣ ಡೆಕ್‌ನಲ್ಲಿರುವ ಸನ್‌ಡೌನರ್‌ಗಳು ಯುವರಾಜ್ ಅವರ ನೆಚ್ಚಿನ ಸ್ಥಳೀಯ ಭಕ್ಷ್ಯಗಳಿರುವ ಬೆಸ್ಪೋಕ್ ಭೋಜನವನ್ನು ಒಳಗೊಂಡಿವೆ
● ಯುವರಾಜ್ ಅವರ ಅಮೋಘ ಇನ್ನಿಂಗ್ಸ್ ಒಂದರ ಪ್ರದರ್ಶನ - ಕ್ರಿಕೆಟಿಗನ ಮನೆಯಲ್ಲಿ ಆ ಕ್ಷಣಗಳನ್ನು ಮೆಲುಕು ಹಾಕುವಂತೆ ಮಾಡಲಿದೆ
● ತಂಗುವ ಅವಧಿಯು ಯುವರಾಜ್ ಅವರ ಮೆಚ್ಚಿನ ಭಕ್ಷ್ಯಗಳಿರುವ ಮೆನುವನ್ನು ಒಳಗೊಂಡಿರುತ್ತದೆ
ಇದನ್ನೂ ಓದಿ: ಸೌದಿ ಮಾಡೆಲ್ ಫಸ್ಟ್ ಲುಕ್ಗೆ ಕ್ಲೀನ್ ಬೋಲ್ಡ್ ಆದ ಪಠಾಣ್, ಇಬ್ಬರ ನಡುವಿನ ವಯಸ್ಸಿನ ಅಂತರ ಗೊತ್ತಾ?
● ಯುವರಾಜ್ ಅವರ ವೈಯಕ್ತಿಕ ಸ್ಮರಣಿಗೆಗಳೂ ಇವೆ
ಬುಕ್ ಮಾಡುವುದು ಹೇಗೆ?:
ಬುಕಿಂಗ್‌ಗಳನ್ನು ಸೆಪ್ಟೆಂಬರ್ 28ರಂದು ಭಾರತೀಯ ಕಾಲಮಾನದಲ್ಲಿ ಮಧ್ಯಾಹ್ನ 1 ಗಂಟೆಗೆ airbnb.com/yuvrajsingh ನಲ್ಲಿ ತೆರೆಯಲಾಗುತ್ತದೆ. ಅತಿಥಿಗಳು ಗೋವಾಕ್ಕೆ ಮತ್ತು ಮರುಪ್ರಯಾಣಕ್ಕೆ ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು.ತೆರಿಗೆಗಳು ಮತ್ತು ಶುಲ್ಕಗಳು ಅನ್ವಯ. ಈ ಎರಡು ರಾತ್ರಿಯ ವಾಸ್ತವ್ಯವು ಸ್ಪರ್ಧೆಯಲ್ಲ. Airbnb ಭಾರತದಲ್ಲಿ COVID-19 ಸೋಂಕಿನ ದರಗಳು ಮತ್ತು ಸರ್ಕಾರದ ನೀತಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ವಾಸ್ತವ್ಯವನ್ನು ರದ್ದುಗೊಳಿಸಲು ಅಗತ್ಯವಿದ್ದರೆ ಬುಕಿಂಗ್ ಮಾಡಿರುವ ಅತಿಥಿಗಳಿಗೆ USD 1,000 ವನ್ನು Airbnb ಜಮಾ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ