ಯುವರಾಜ್​​ ಬ್ಯಾಟ್​ನಿಂದ ಹಿಂದೆಂದು ನೋಡದ ಶಾಟ್; ಐಪಿಎಲ್​​​ಗೂ ಮುನ್ನ ಅಬ್ಬರಿಸಿದ ಯುವಿ

ಯುವರಾಜ್ ತಮ್ಮ ಕ್ರಿಕೆಟ್​ ಕೆರಿಯರ್​​ನಲ್ಲಿ ಹಿಂದೆಂದು ಆಡದ ರೀತಿಯಲ್ಲಿ ರಿವರ್ಸ್​​ ಸ್ವೀಪ್​​​​ನಲ್ಲಿ ಚೆಂಡನ್ನು ಸಿಕ್ಸ್​ಗೆ ಅಟ್ಟಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಇದೇ ಮಾದರಿಯಲ್ಲಿ ಸಿಕ್ಸ್​ ಸಿಡಿಸಿಸುತ್ತಿದ್ದರು.

Vinay Bhat | news18
Updated:February 19, 2019, 3:18 PM IST
ಯುವರಾಜ್​​ ಬ್ಯಾಟ್​ನಿಂದ ಹಿಂದೆಂದು ನೋಡದ ಶಾಟ್; ಐಪಿಎಲ್​​​ಗೂ ಮುನ್ನ ಅಬ್ಬರಿಸಿದ ಯುವಿ
ಯುವರಾಜ್ ಸಿಂಗ್
  • News18
  • Last Updated: February 19, 2019, 3:18 PM IST
  • Share this:
ಐಪಿಎಲ್​​​ ಚುಟುಕು ಸಮರಕ್ಕೆ ಹಾಗೂ ವಿಶ್ವಕಪ್​​ ಆರಂಭಕ್ಕೆ ಇನ್ನೇನು ಕೆಲವು ತಿಂಗಳುಗಳಷ್ಟೆ ಬಾಕಿ ಉಳಿದಿವೆ. ಹೀಗಿರುವಾಗ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ತುದಿಗಾಲಿನಲ್ಲಿ ನಿಂತಿರುವ ಯುವರಾಜ್ ಸಿಂಗ್ ಸದ್ಯ ವಿಭಿನ್ನ ರೀತಿಯಲ್ಲಿ ಸಿಕ್ಸ್​​ ಸಿಡಿಸಿ ಸುದ್ದಿಯಲ್ಲಿದ್ದಾರೆ.

ಯುವರಾಜ್ ತಮ್ಮ ಕ್ರಿಕೆಟ್​ ಕೆರಿಯರ್​​ನಲ್ಲಿ ಹಿಂದೆಂದು ಆಡದ ರೀತಿಯಲ್ಲಿ ರಿವರ್ಸ್​​ ಸ್ವೀಪ್​​​​ನಲ್ಲಿ ಚೆಂಡನ್ನು ಸಿಕ್ಸ್​ಗೆ ಅಟ್ಟಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಇದೇ ಮಾದರಿಯಲ್ಲಿ ಸಿಕ್ಸ್​ ಸಿಡಿಸಿಸುತ್ತಿದ್ದರು. ತುಂಬಾ ಅಪಾಯಕಾರಿಯಾದ ಶಾಟ್ ಇದಾಗಿದ್ದು, ಎಲ್ಲದರು ಚೆಂಡು ಬ್ಯಾಟ್​ಗೆ ಸಿಕ್ಕಲ್ಲವೆಂದಾದರೆ, ಬ್ಯಾಟ್ಸ್​ಮನ್​​​ ಔಟ್ ಆಗುವುದು ಖಚಿತ.

ಇದನ್ನೂ ಓದಿ: ಪುಲ್ವಾಮ ದಾಳಿ: ಐಪಿಎಲ್​​​​ನಿಂದ ಎಬಿಡಿ, ಪೊಲಾರ್ಡ್​​ ಸೇರಿ ಪ್ರಮುಖ ಆಟಗಾರರ ನಿಷೇಧಕ್ಕೆ ಹೆಚ್ಚಿದ ಒತ್ತಡ

ಸದ್ಯ ಯುವಿ ಕೂಡ ಇಂತಹ ಕಷ್ಟದ ಹೊಡೆತ ಹೊಡೆದು ತಮ್ಮ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಏರ್ ಇಂಡಿಯಾ ಹಾಗೂ ಮಾಲ್ಡೀವ್ಸ್​​ ಕ್ರಿಕೆಟ್ ತಂಡದ ನಡುವಣ ಸ್ನೇಹಪೂರ್ವಕ ಪಂದ್ಯದಲ್ಲಿ ಸಿಕ್ಸರ್​​​ಗಳ ಸರದಾರ ಸಿಕ್ಸ್​ ಸಿಡಿಸಿ ಎಲ್ಲರ ಗಮನ ಸೆಳೆದರು. ಯುವರಾಜ್ ಏರ್ ಇಂಡಿಯ ತಂಡದ ಪರ ಆಡಿದ್ದರು.

 First published: February 19, 2019, 3:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading