ಪಾಕ್ ವಿರುದ್ಧ ಟೆಸ್ಟ್: ಕೇವಲ 30 ರನ್​ಗೆ ಆಲೌಟ್ ಆದ ನ್ಯೂಜಿಲೆಂಡ್..!

ತನ್ನ ಮೊದಲ ಇನ್ನಿಂಗ್ಸ್​ ಮಾಡಲು ಬಂದ ನ್ಯೂಜಿಲೆಂಡ್ ತಂಡ 50 ರನ್​​ಗೆ ಒಂದೂ ವಿಕೆಟ್ ಕಳೆದುಕೊಳ್ಳದೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಆದರೆ, ಬಳಿಕ 30 ರನ್​ ಕಲೆಹಾಕುವ ಹೊತ್ತಿಗೆ ತನ್ನ ಎಲ್ಲ 10 ವಿಕೆಟ್ ಕಳೆದುಕೊಂಡು ಕಳಪೆ ಆಟವಾಡಿದೆ

Vinay Bhat | news18
Updated:November 26, 2018, 4:44 PM IST
ಪಾಕ್ ವಿರುದ್ಧ ಟೆಸ್ಟ್: ಕೇವಲ 30 ರನ್​ಗೆ ಆಲೌಟ್ ಆದ ನ್ಯೂಜಿಲೆಂಡ್..!
ಯಾಸಿರ್ ಷಾ
  • News18
  • Last Updated: November 26, 2018, 4:44 PM IST
  • Share this:
ದುಬೈನಲ್ಲಿ ಆರಂಭವಾಗಿರುವ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಹಿಂದೆಂದೂ ನೀಡಿದ ಕಳಪೆ ಪ್ರದರ್ಶನ ತೋರಿದೆ.

ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಸಿಕ್ಸರ್​ಗಳ ಸರದಾರ

ತನ್ನ ಮೊದಲ ಇನ್ನಿಂಗ್ಸ್​ ಮಾಡಲು ಬಂದ ನ್ಯೂಜಿಲೆಂಡ್ ತಂಡ 50 ರನ್​​ಗೆ ಒಂದೂ ವಿಕೆಟ್ ಕಳೆದುಕೊಳ್ಳದೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಆದರೆ, ಬಳಿಕ 30 ರನ್​ ಕಲೆಹಾಕುವ ಹೊತ್ತಿಗೆ ತನ್ನ ಎಲ್ಲ 10 ವಿಕೆಟ್ ಕಳೆದುಕೊಂಡು ಹೀನಾಯ ಪ್ರದರ್ಶನ ತೋರಿದೆ. ಪಾಕ್​ನ ಸ್ಪಿನ್ ಮಾಂತ್ರಿಕ ಯಾಸಿರ್ ಷಾ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉರುಳಿದ ನ್ಯೂಜಿಲೆಂಡ್ ಕೇವಲ 90 ರನ್​​ಗೆ ಸರ್ವಪತನ ಕಂಡಿದೆ. ಓಪನರ್​ಗಳಾದ ಜೀತ್ ರಾವಲ್ 31 ಹಾಗೂ ಟಾಮ್ ಲ್ಯಾಥನ್ 22 ರನ್ ಕಲೆಹಾಕಿ ಮೊದಲ ವಿಕೆಟ್​ಗೆ 50 ರನ್​ಗಳ ಕಾಣಿಕೆ ನೀಡಿದ್ದು ಬಿಟ್ಟರೆ, ನಾಯಕ ಕೇನ್ ವಿಲಿಯಮ್ಸನ್ ಅಜೇಯ 28 ರನ್ ಗಳಿಸಿದರು. ಆರು ಬ್ಯಾಟ್ಸ್​ಮನ್​ಗಳು ಶೂನ್ಯಕ್ಕೆ ನಿರ್ಗಮಿಸಿದರು. ಮಾರಕ ಬೌಲಿಂಗ್ ನಡೆಸಿದ ಯಾಸಿರ್ 8 ವಿಕೆಟ್ ಕಿತ್ತ ಸಾಧನೆ ಮಾಡಿದರು.

ಇದಕ್ಕೂ ಮೊದಲು ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ನಷ್ಟಕ್ಕೆ 418 ರನ್ ಗಳಿಸಿರುವಾಗ ಡಿಕ್ಲೇರ್ ಮಾಡಿಕೊಂಡಿತ್ತು.

First published:November 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading