82 ವರ್ಷದ ಹಳೆಯ ದಾಖಲೆ ನೆಲಸಮ ಮಾಡಿದ ಪಾಕ್ ಕ್ರಿಕೆಟಿಗ

4ನೇ ದಿನದಾಟದಲ್ಲಿ ವಿಲಿಯಮ್ ಸೊಮರ್ವಿಲ್ಲೆ ವಿಕೆಟನ್ನು ಉರುಳಿಸಿದ ಯಾಸಿರ್,  ಟೆಸ್ಟ್​​ನಲ್ಲಿ ಅತ್ಯಂತ ವೇಗವಾಗಿ 200 ವಿಕೆಟ್ ಮೈಲುಗಲ್ಲು ತಲುಪಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು

Vinay Bhat | news18
Updated:December 6, 2018, 4:37 PM IST
82 ವರ್ಷದ ಹಳೆಯ ದಾಖಲೆ ನೆಲಸಮ ಮಾಡಿದ ಪಾಕ್ ಕ್ರಿಕೆಟಿಗ
ಯಾಸಿರ್ ಶಾ (ಪಾಕಿಸ್ತಾನ ಸ್ಪಿನ್ನರ್)
Vinay Bhat | news18
Updated: December 6, 2018, 4:37 PM IST
ದುಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಯಾಸಿರ್ ಶಾ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಯಾಸಿರ್ 82 ವರ್ಷಗಳ ಹಳೆಯ ದಾಖಲೆಯೊಂದನ್ನು ನೆಲಸಮ ಮಾಡಿದ್ದಾರೆ.

4ನೇ ದಿನದಾಟದಲ್ಲಿ ವಿಲಿಯಮ್ ಸೊಮರ್ವಿಲ್ಲೆ ವಿಕೆಟನ್ನು ಉರುಳಿಸಿದ ಯಾಸಿರ್,  ಟೆಸ್ಟ್​​ನಲ್ಲಿ ಅತ್ಯಂತ ವೇಗವಾಗಿ 200 ವಿಕೆಟ್ ಮೈಲುಗಲ್ಲು ತಲುಪಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು 1936ರಲ್ಲಿ ಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಕ್ಲಾರ್ರಿ ಗ್ರಿಮ್ಮೆಟ್ ಅವರು 36 ಟೆಸ್ಟ್ ಪಂದ್ಯಗಳಲ್ಲಿ 200 ವಿಕೆಟ್ ಪಡೆದಿದ್ದರು. ಇದೀಗ ಯಾಸಿರ್ ಶಾ ಕೇವಲ 33ನೇ ಟೆಸ್ಟ್ ಪಂದ್ಯದಲ್ಲಿ 200 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಎಲ್ಲರಿಗೂ ಅನ್ವಯವಾಗುವ ನಿಯಮ ಧೋನಿ-ಧವನ್​ಗೆ ಮಾತ್ರ ಏಕಿಲ್ಲ?: ಸುನೀಲ್ ಗವಾಸ್ಕರ್ ಪ್ರಶ್ನೆ

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 274ಕ್ಕೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ 348 ರನ್ ಕಲೆಹಾಕಿತು. ಸದ್ಯ ತನ್ನ 2ನೇ ಇನ್ನಿಂಗ್ಸ್​ ಆರಂಭಿಸಿರುವ ನ್ಯೂಜಿಲೆಂಡ್ ತಂಡ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ.
First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...