'ವಿಶ್ವದ ಭಯಾನಕ ಮನುಷ್ಯ' (World's Scariest Man)ಎಂದೇ ಖ್ಯಾತಿಹೊಂದಿರುವ ಮಾರ್ಟಿನ್ ಫೋರ್ಡ್ ಮತ್ತು ದಿ ರಾಕ್ (The Rock) ಇಬ್ಬರೂ ಶೀಘ್ರದಲ್ಲಿ ರೆಸ್ಲಿಂಗ್ ರಿಂಗ್ನನಲ್ಲಿ ಗುದ್ದಾಡಲಿದ್ದಾರೆ. ‘ಇರಾನಿಯನ್ ಹಲ್ಕ್' ಘರಿಬಿ ವಿರುದ್ಧ ಹೋರಾಡಿದ ನಂತರ ಫೋರ್ಡ್, ರೆಸ್ಲಿಂಗ್ ಸೂಪರ್ ಸ್ಟಾರ್, ನಟ ರಾಕ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಬಾಡಿಬಿಲ್ಡಿಂಗ್ ದೈತ್ಯ ಮಾರ್ಟಿನ್ ಫೋರ್ಡ್ WWE ದಂತಕಥೆ ಮತ್ತು ನಟ ಡ್ವೇನ್ ಜಾನ್ಸನ್ 'ದಿ ರಾಕ್' (WWE Champion ) ವಿರುದ್ಧ ಹೋರಾಡಲು ಉತ್ಸುಕರಾಗಿದ್ದಾರೆ. ಫೋರ್ಡ್ 'ಇರಾನಿಯನ್ ಹಲ್ಕ್' - ಸಜಾದ್ ಘರಿಬಿ (Sajad Gharibi) ವಿರುದ್ಧದ ಅತ್ಯಂತ ನಿರೀಕ್ಷಿತ ಹೋರಾಟದ ನಂತರ 'ದಿ ರಾಕ್' ಜೊತೆ ಕಣಕ್ಕಿಳಿಯುತ್ತಿದ್ದಾರೆ.
ಫೋರ್ಡ್,'ವಿಶ್ವದ ಭಯಾನಕ ಮನುಷ್ಯ'ಎಂಬ ಅಡ್ಡಹೆಸರಿಂದಲೇ ಪ್ರಸಿದ್ಧವಾಗಿದ್ದಾರೆ. ಇರಾನಿನ ಹಲ್ಕ್ ಎಂದು ಪ್ರಸಿದ್ಧವಾಗಿರುವ ಸಜಾದ್ ಘರಿಬಿಯೊಂದಿಗೆ ಫೋರ್ಡ್ ವೃತ್ತಿಜೀವನದ ಹೆಚ್ಚು ಪಂದ್ಯಗಳಲ್ಲಿ ಹೋರಾಡಿದ್ದಾನೆ. ಪ್ರಸ್ತುತ ಫೋರ್ಡ್ ಮತ್ತು ಘರಿಬಿ ಕಣಕ್ಕಿಳಿದಿದ್ದಾರೆ. ಪಂದ್ಯದ ಫಲಿತಾಂಶವು ಇನ್ನೂ ಹೊರಬಿದ್ದಿಲ್ಲವಾದರೂ, ಫೋರ್ಡ್ ಘರಿಬಿಯನ್ನು ಸೋಲಿಸುವ ಎಲ್ಲಾ ಮುನ್ಸೂಚನೆ ಕಂಡು ಬರುತ್ತಿವೆ.
ಎಂದು ನಡೆಯಲಿದೆ ಪಂದ್ಯ?
ಮಾರ್ಟಿನ್ ಫೋರ್ಡ್ ಸದ್ಯ ನಟ ಡ್ವೇನ್ 'ದಿ ರಾಕ್' ಜಾನ್ಸನ್ ಮೇಲೆ ಕಣ್ಣಿಟ್ಟಿದ್ದು, ಇಬ್ಬರೂ ಬಾಡಿಬಿಲ್ಡರ್ಗಳು WWE ಪಂದ್ಯದಲ್ಲಿ ಹೋರಾಡಲಿದ್ದಾರೆ. ಈ ವರ್ಷದ ಏಪ್ರಿಲ್ 2 ರಂದು ಲಂಡನ್ನ O2 ಅರೆನಾದಲ್ಲಿ ವ್ರೆಸ್ಲಿಂಗ್ ರಿಂಗ್ಗೆ ಕಾಲಿಡಲಿದ್ದಾರೆ.
39 ರ ಹರೆಯದ ಫೋರ್ಡ್, ಅವರು 6 ಅಡಿ 9 ಇಂಚು ಎತ್ತರ ಮತ್ತು 130 ಕೆಜಿ, ತೂಕವನ್ನು ಹೊಂದಿದ್ದಾರೆ. ರೆಸ್ಲಿಂಗ್ ನಲ್ಲಿ ತನ್ನದೇ ಸಾಮರ್ಥ್ಯ ಹೊಂದಿರುವ ಫೋರ್ಡ್ ಎದುರಾಳಿಯನ್ನು ಸುಲಭವಾಗಿ ಮಣಿಸುತ್ತಾರೆ. ಇನ್ನೂ WWE ದಂತ ಕಥೆ ಎನಿಸಿಕೊಂಡಿರುವ ರಾಕ್ ಸದ್ಯ ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ರಾಕ್ 6 ಅಡಿ 2 ಇಂಚು ಎತ್ತರ ಮತ್ತು 112 ಕೆಜಿ ತೂಕವಿದ್ದು, ಈ ಸೂಪರ್ ಹೆವಿವೇಯ್ಟ್ ಬಾಡಿ ಬಿಲ್ಡರ್ ಗಳ ಕಾದಾಟ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ರಾಕ್ ಜೊತೆ ಕಾದಾಡೋಕೆ ಭರ್ಜರಿ ತಯಾರಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫೋರ್ಡ್, ರಾಕ್ ಜೊತೆ ಕಾದಾಡಲು ತಯಾರಿ ನಡೆಸುತ್ತಿದ್ದೇನೆ ಮತ್ತು ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಫೋರ್ಡ್ ನಾನು ರಾಕ್ಗೆ ಹೋರಾಟಕ್ಕೆ ಇಳಿಯಲು ಸವಾಲು ಹಾಕಲು ಇಷ್ಟಪಡುತ್ತೇನೆ ಎಂದಿದ್ದಾನೆ. ನಾನು ಅದೃಷ್ಟ ಮಾಡಿದ್ದೇನೆ, ರಾಕ್ ಒಬ್ಬ ಅಸಾಧಾರಣ ಪ್ರತಿಭೆ, ಬಲಶಾಲಿ ಮತ್ತು ಅತ್ಯುತ್ತಮ ಕುಸ್ತಿ ಪಟು. ರಾಕ್ ಜೊತೆ ರೆಸ್ಲಿಂಗ್ ಮಾಡುವುದು ಸವಾಲೇ ಸರಿ ಎಂದಿದ್ದಾರೆ.
ಇದನ್ನೂ ಓದಿ: Santhi Soundarajan: ತಮಿಳುನಾಡಿನ ಅಥ್ಲೀಟ್ಗೆ ಇದೆಂಥಾ ಅವಮಾನ.. ಹೆಣ್ಣು ಅನ್ನೋದಕ್ಕೆ ಪ್ರೂಫ್ ಕೊಡು ಎಂದ ಪೊಲೀಸ್!
ಇರಾನಿನ ಹಲ್ಕ್ ವಿರುದ್ಧದ ಪಂದ್ಯದ ಬಗ್ಗೆ ನನಗೆ ಸ್ವಲ್ಪವೂ ಭಯವಿಲ್ಲ, ಘರಿಬಿ ನನಗೆ ಪ್ರತಿಸ್ಪರ್ಧಿಯೇ ಅಲ್ಲ ಎಂದು ಫೋರ್ಡ್ ಹೇಳಿದ್ದಾನೆ.
ಹಲ್ಕ್ ತೀವ್ರತರವಾದ ತರಬೇತಿಯು ಮಾಡುತ್ತಿದ್ದು ಅದರ ತುಣಕನ್ನು ನಾನು ವೀಕ್ಷಿಸಲು ಬಯಸುವುದಿಲ್ಲ ಮತ್ತು ನಾನು ನನ್ನ ಸಮಯವನ್ನು ವ್ಯರ್ಥ ಮಾಡುತ್ತಿದ್ದೇನೆ ಎಂದು ಭಾವಿಸುತ್ತೇನೆ ಏಕೆಂದರೆ ನಾನು ಈಗ ಅವನನ್ನು ಸುಲಭವಾಗಿ ಸೋಲಿಸಬಹುದು ಎಂದು ಇರಾನಿಯನ್ ಹಲ್ಕ್ ಎಂದು ಪ್ರಸಿದ್ಧಿಯಾಗಿರುವ ಘರಿಬಿ ಜೊತೆಗಿನ ಪಂದ್ಯದ ಬಗ್ಗ ಪೋರ್ಡ್ ಮಾತನಾಡಿದ್ದಾರೆ. ರೆಸ್ಲಿಂಗ್ ನಲ್ಲಿ ಘರಿಬಿ ನನಗೆ ಸ್ವಲ್ಪವೂ ಭಯ ಹುಟ್ಟಿಸಿಲ್ಲ ಎಂದಿದ್ದಾನೆ. ಫೋರ್ಡ್ ಅವರು ಆರಾಮವಾಗಿ ಇರಾನಿಯನ್ನು ಸೋಲಿಸುವ ಬಗ್ಗೆ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ: Vinod Kambli: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಬಂಧನ! ಅರೆಸ್ಟ್ ಆಗೋಕೆ ಅವರು ಮಾಡಿದ್ದೇನು?
ಫೋರ್ಡ್ ಗೆ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಉತ್ತರಿಸಿದ ಘರಿಬಿ, "ಫೋರ್ಡ್, ನಿಮಗೆ ಅವಮಾನಿಸುತ್ತಾನೆ ಮತ್ತು ರೆಸ್ಲಿಂಗ್ ರಿಂಗ್ ಒಳಗೆ ಕೋಡಂಗಿ ರೀತಿ ಆಡುತ್ತಾನೆ" ಎಂದು ಪೋಸ್ಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ