• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • WU19 T20 WC: ನ್ಯೂಜಿಲ್ಯಾಂಡ್​ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ವಿಶ್ವಕಪ್​ ಫೈನಲ್​ ಪ್ರವೇಶಿಸಿದ ಟೀಂ ಇಂಡಿಯಾ

WU19 T20 WC: ನ್ಯೂಜಿಲ್ಯಾಂಡ್​ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ವಿಶ್ವಕಪ್​ ಫೈನಲ್​ ಪ್ರವೇಶಿಸಿದ ಟೀಂ ಇಂಡಿಯಾ

ಭಾರತ ತಂಡಕ್ಕೆ ಜಯ

ಭಾರತ ತಂಡಕ್ಕೆ ಜಯ

WU19 T20 WC: 19 ವರ್ಷದೊಳಗಿನವರ ಭಾರತ ಮಹಿಳಾ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಟಿ20 ವಿಶ್ವಕಪ್‌ನ ಫೈನಲ್‌ಗೆ ಲಗ್ಗೆ ಇಟ್ಟಿದೆ. ಶುಕ್ರವಾರ ನ್ಯೂಜಿಲೆಂಡ್ ವಿರುದ್ಧ ಣಾರತ ಮಹಿಳಾ ತಂಡ ಭರ್ಜರಿ ಜಯ ದಾಖಲಿಸಿದೆ.

  • Share this:

ಭಾರತ ಮಹಿಳಾ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ 19 ವರ್ಷದೊಳಗಿನವರ ಟಿ20 ವಿಶ್ವಕಪ್‌ನ (WU19 T20 WC) ಫೈನಲ್‌ಗೆ ಲಗ್ಗೆ ಇಟ್ಟಿದೆ. ಶುಕ್ರವಾರ ನ್ಯೂಜಿಲೆಂಡ್ (IND vs NZ) ವಿರುದ್ಧ, ಪಾರ್ಶ್ವಿ ಚೋಪ್ರಾ ಅವರ ಮಾರಕ ಬೌಲಿಂಗ್ ಮತ್ತು ಶ್ವೇತಾ ಸೆಹ್ರಾವತ್ (Shweta Sehrawat) ಅವರ ಅದ್ಭುತ ಬ್ಯಾಟಿಂಗ್ ಆಧಾರದ ಮೇಲೆ ಟೀಂ ಇಂಡಿಯಾ (Team India) ಭರ್ಜರಿ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 9 ವಿಕೆಟ್‌ಗೆ 107 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ 14.2 ಓವರ್‌ಗಳಲ್ಲಿ ಗೆಲುವಿನ ಗುರಿಯನ್ನು ಸಾಧಿಸಿ ಅಂತಿಮ ಫೈನಲ್​ಗೇರಿದೆ. ಭಾರತವು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಸೆಮಿಫೈನಲ್‌ನಲ್ಲಿ ಗೆದ್ದ ತಂಡದ ವಿರುದ್ಧ ಫೈನಲ್​ನಲ್ಲಿ ಸೆಣಸಲಿದೆ


ಫೈನಲ್​ಗೇರಿದ ಭಾರತ ಮಹಿಳಾ ತಂಡ:


ಶುಕ್ರವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಅಂಡರ್-19 ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡ ಕೇವಲ 107 ರನ್‌ಗಳಿಗೆ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡಿತು. ಚಾರ್ಜಿಯಾ ಪ್ಲಿಮ್ಮರ್ ಅವರು 35 ರನ್ ಮತ್ತು ಇಸಾಬೆಲ್ ಗೇಜ್ 26 ರನ್‌ ಗಳಿಸಿದ್ದೇ ತಂಡದ ವೈಯಕ್ತಿಕ ಗರಿಷ್ಠ ರನ್​ ಸ್ಕೋರ್​ ಆಗಿದೆ. ಭಾರತದ ಪರ ಪಾರ್ಶ್ವಿ ಚೋಪ್ರಾ 4 ಓವರ್ ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದು ಕಿವೀಸ್ ತಂಡದ ಕುಸಿತಕ್ಕೆ ಕಾರಣರಾದರು.



ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್:


ಭಾರತದ ಆರಂಭಿಕ ಆಟಗಾರ್ತಿ ಶ್ವೇತಾ ಸೆಹ್ರಾವತ್ ಮತ್ತೊಂದು ಬಿರುಸಿನ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಫೈನಲ್‌ಗೆ ಕೊಂಡೊಯ್ದರು. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ನಾಯಕಿ ಶೆಫಾಲಿ ವರ್ಮಾ ಔಟಾದ ನಂತರ, ಅವರು ಅಜೇಯರಾಗಿ ಉಳಿದು ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಇಂದಿನ ಪಂದ್ಯದಲ್ಲಿ ಅವರು 45 ಎಸೆತಗಳಲ್ಲಿ 10 ಬೌಂಡರಿಗಳನ್ನು ಗಳಿಸುವ ಮೂಲಕ 61 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದರು. ಈ ಮೂಲಕ ಭಾರತ ತಂಡ ಅಂಡರ್​ 19 ಮಹಿಳಾ ಟಿ20 ವಿಶ್ವಕಪ್​​ನ ಮೊದಲ ಫೈನಲ್​ ತಂಡವಾಗಿ ಎಂಟ್ರಿಕೊಟ್ಟಿದೆ.


ಇದನ್ನೂ ಓದಿ: IND vs NZ 1st T20I: ಕಿವೀಸ್​ ವಿರುದ್ಧ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11? ಯುವಕರಿಗೆ ಸಿಗುತ್ತಾ ಚಾನ್ಸ್?


ಫೈನಲ್‌ಗೆ ಭಾರತದ ಪಯಣ :


ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಅಮೋಘ ಆಟ ಪ್ರದರ್ಶಿಸಿದೆ. ಆತಿಥೇಯ ದಕ್ಷಿಣ ಆಫ್ರಿಕಾ, ಯುಎಇ ಮತ್ತು ಸ್ಕಾಟ್ಲೆಂಡ್ ಜೊತೆಗೆ ಡಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್ ಸಿಕ್ಸ್‌ಗೆ ಲಗ್ಗೆ ಇಟ್ಟಿತು. ಇಲ್ಲಿ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲು ಕಂಡರು. ಇದಾದ ಬಳಿಕ ಭಾರತ ತಂಡ ಶ್ರೀಲಂಕಾವನ್ನು ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು. ಇಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‌ಗಳ ದೊಡ್ಡ ಗೆಲುವು ಸಾಧಿಸುವ ಮೂಲಕ ತಂಡವು ಫೈನಲ್​ ಟಿಕೆಟ್ ಅನ್ನು ಖಚಿತಪಡಿಸಿಕೊಂಡಿದೆ.




ಟಿ20 ವಿಶ್ವಕಪ್​ಗೆ ಭಾರತ ಮಹಿಳಾ ತಂಡ:


ಶಫಾಲಿ ವರ್ಮಾ (ನಾಯಕಿ), ಶ್ವೇತಾ ಸೆಹ್ರಾವತ್ (ಉಪನಾಯಕಿ), ರಿಚಾ ಘೋಷ್ (WK), ಜಿ ತ್ರಿಶಾ, ಸೌಮ್ಯ ತಿವಾರಿ, ಸೋನಿಯಾ ಮೆಹದಿಯಾ, ಹರ್ಲಿ ಗಾಲಾ, ಹೃಷಿತಾ ಬಸು (WK), ಸೋನಮ್ ಯಾದವ್, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಟಿಟಾಸ್ ಸಾಧು, ಫಲಕ್ ನಾಜ್, ಶಬ್ನಮ್ ಎಂಡಿ.
ಸ್ಟ್ಯಾಂಡ್‌ಬೈ ಆಟಗಾರರು: ಶಿಖಾ, ನಜ್ಲಾ ಸಿಎಂಸಿ, ಯಶಶ್ರೀ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು