• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • WPL 2023: ಮಹಿಳಾ ಐಪಿಎಲ್‌ ರಂಗೇರಿಸಲು ಸ್ಪೆಷಲ್ ಸಾಂಗ್, ಓಪನಿಂಗ್ ಸೆರೆಮನಿಗೆ ಬಾಲಿವುಡ್‌ ಸ್ಟಾರ್ಸ್ ರಂಗು!

WPL 2023: ಮಹಿಳಾ ಐಪಿಎಲ್‌ ರಂಗೇರಿಸಲು ಸ್ಪೆಷಲ್ ಸಾಂಗ್, ಓಪನಿಂಗ್ ಸೆರೆಮನಿಗೆ ಬಾಲಿವುಡ್‌ ಸ್ಟಾರ್ಸ್ ರಂಗು!

WPL 2023

WPL 2023

WPL 2023: ಚೊಚ್ಚಲ ಮಹಿಳಾ ಐಪಿಎಲ್​ಗಾಗಿ ಬಿಸಿಸಿಐ ಅದ್ಧೂರಿ ಉದ್ಘಾಟನೆಗೆ ಮುಂದಾಗಿದೆ ಇದರ ಭಾಗವಾಗಿ ವಿಶೇಷ ಹಾಡನ್ನು ರಿಲೀಸ್​ ಮಾಡಿದೆ.

  • Share this:

ಇಂದಿನಿಂದ ಮಹಿಳಾ ಪ್ರೀಮಿಯರ್​ ಲೀಗ್​ 2023ಗೆ (Women’s Premier League) ಅದ್ಧೂರಿ ಚಾಲನೆ ದೊರಕಲಿದೆ. ಈಗಾಗಲೇ ಈ ಮೆಗಾ ಟೂರ್ನಿಗಾಗಿ ಬಿಸಿಸಿಐ (BCCI) ಭರ್ಜರಿ ಸಿದ್ಧತೆ ನಡೆಸಿದೆ. ಅದರ ಭಾಗವಾಗಿ ಉದ್ಘಾಟನಾ ಆವೃತ್ತಿಯ ಲೀಗ್​​ಗೆ ಬಾಲಿವುಡ್​​​ ಮೆರಗು ನೀಡಿದೆ. ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟಿಯರಾದ ಕಿಯಾರಾ ಅಡ್ವಾಣಿ (Kiara Advani), ಕೃತಿ ಸನನ್ (Kriti Sanon)​​​​ ಭಾಗಿಯಾಗಲಿದ್ದಾರೆ. ಇದರ ನಡುವೆ ಇದೀಗ ಬಿಸಿಸಿಐ ಅಧಿಕೃತ ಮಹಿಳಾ ಐಪಿಎಲ್​ ಹಾಡೊಂದನ್ನು ಬಿಡುಗಡೆ ಮಾಡಿದೆ. ಈ ಸಾಂಗ್​ನ್ನು ಬಿಸಿಸಿಐ ಟ್ವಿಟರ್​ ಮೂಲಕ ಬಿಡುಗಡೆ ಮಾಡಿದ್ದು, ಸಖತ್ ವೈರಲ್ ಆಗಿದೆ.


ಮಹಿಳಾ ಐಪಿಎಲ್​ಗಾಗಿ ನ್ಯೂ ಸಾಂಗ್​:


ಹೌದು, ಚೊಚ್ಚಲ ಮಹಿಳಾ ಐಪಿಎಲ್​ಗಾಗಿ ಬಿಸಿಸಿಐ ಅದ್ಧೂರಿ ಉದ್ಘಾಟನೆಗೆ ಮುಂದಾಗಿದೆ ಇದರ ಭಾಗವಾಗಿ ವಿಶೇಷ ಹಾಡನ್ನು ರಿಲೀಸ್​ ಮಾಡಿದೆ. ಈ ವಿಶೇಷ ಹಾಡಿಗೆ ಶಂಕರ್​ ಮಹದೇವನ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಉಳಿದಂತೆ ಶಂಕರ್​ ಮಹದೇವನ್​, ಹರ್ಷದೀಪ್​ ಕೌರ್​, ನೀತಿ ಮೋಹನ್, ಐಷಾನ್ಯ ಜೋಶಿ ಮತ್ತು ಅಕೃತಿ ಕಕ್ಕರ್​ ಕಂಠದಾನ ಮಾಡಿದ್ದಾರೆ.ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ:


ಇನ್ನು, ಮಹಿಳಾ ಪ್ರೀಮಿಯರ್ ಲೀಗ್​​​​​​​​ನ​ ಮೊದಲ ಆವೃತ್ತಿಯನ್ನು ಅದ್ಧೂರಿಯಾಗಿ ಪ್ರಾರಂಭಿಸಲು ಬಿಸಿಸಿಐ ಯೋಜಿಸಿದೆ. ಇದರ ಭಾಗವಾಗಿ ಪಂದ್ಯಕ್ಕೂ ಮುನ್ನ ಗಾಯಕ ಶಂಕರ್ ಮಹದೇವನ್ ಅಧಿಕೃತ ಹಾಡನ್ನು ಹಾಡಲಿದ್ದಾರೆ. ಅವರ ಜೊತೆಗೆ ಬಾಲಿವುಡ್ ತಾರೆಯರಾದ ಗಾಯಕ ಎಪಿ ಧಿಲ್ಲೋನ್, ಕೃತಿ ಸನನ್, ಕಿಯಾರಾ ಅಡ್ವಾಣಿ ಹಾಗೂ ಅವರ ತಂಡ ವಿವಿಧ ಪ್ರದರ್ಶನ ನೀಡಲಿದ್ದಾರೆ.


ಇದನ್ನೂ ಓದಿ: Virat Kohli: ರಾಹುಲ್​ ರೀತಿ ಕೊಹ್ಲಿಯನ್ನೂ ತಂಡದಿಂದ ಕೈಬಿಡಬೇಕು! ವಿರಾಟ್​ಗೆ ಇದೇ ಲಾಸ್ಟ್​​ ಚಾನ್ಸ್​


8ಕ್ಕೆ ಪಂದ್ಯ ಆರಂಭ:


ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಮಹಿಳೆಯರ ನಡುವಿನ ಮಹಿಳಾ ಪ್ರೀಮಿಯರ್ ಲೀಗ್ 2023 ರ ಆರಂಭಿಕ ಪಂದ್ಯದ ಸಮಸಯವನ್ನು ಮರು ನಿಗದಿಪಡಿಸಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ. ಟಾಸ್ ರಾತ್ರಿ 7.30ಕ್ಕೆ ನಡೆಯಲಿದೆ. ಪಂದ್ಯಾವಳಿಯ ಆರಂಭಕ್ಕೂ ಮುನ್ನ ನಡೆಯಲಿರುವ ಉದ್ಘಾಟನಾ ಸಮಾರಂಭವು ಸಂಜೆ 6:25ಕ್ಕೆ ಆರಂಭವಾಗಲಿದೆ. ಅಭಿಮಾನಿಗಳಿಗಾಗಿ 4 ಗಂಟೆಗೆ ಗೇಟ್‌ಗಳು ತೆರೆಯಲ್ಪಡುತ್ತವೆ ಮತ್ತು ಅವರು 6:25ಕ್ಕೆ ಪ್ರಾರಂಭವಾಗುವ ಭವ್ಯ ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.
GUJ-W vs MI-W ಸಂಭಾವ್ಯ ಪ್ಲೇಯಿಂಗ್ 11:


ಗುಜರಾತ್ ಜೈಂಟ್ಸ್ ಸಂಭಾವ್ಯ ಪ್ಲೇಯಿಂಗ್ 11: ಬೆತ್ ಮೂನಿ (C/WK), ಸೋಫಿಯಾ ಡಂಕ್ಲೆ, ಆಶ್ಲೀ ಗಾರ್ಡ್ನರ್, ಸುಷ್ಮಾ ವರ್ಮಾ, ಡೇಂಡ್ರಾ ಡಾಟಿನ್, ಅಶ್ವನಿ ಕುಮಾರಿ, ಹರ್ಲೀನ್ ಡಿಯೋಲ್, ಸ್ನೇಹ ರಾಣಾ, ಮಾನ್ಸಿ ಜೋಶಿ, ಮೋನಿಕಾ ಪಟೇಲ್, ತನುಜಾ ಕನ್ವರ್


ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ 11: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (WK), ನ್ಯಾಟ್ ಸ್ಕಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (c), ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಅಮನ್ಜೋತ್ ಕೌರ್, ಪೂಜಾ ವಸ್ತ್ರಕರ್, ಸೋನಮ್ ಯಾದವ್, ಸೈಕಾ ಇಶಾಕ್, ಹುಮೈರಾ ಕಾಜಿ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು