ಬಿಸಿಸಿಐ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಅನ್ನು ಮೊದಲ ಬಾರಿಗೆ ಆಯೋಜಿಸುತ್ತಿದೆ. ಮಹಿಳಾ ಐಪಿಎಲ್ ಇಂದಿನಿಂದ ಮುಂಬೈನಲ್ಲಿ ಆರಂಭವಾಗಲಿದೆ. ಈ ಲೀಗ್‌ನಲ್ಲಿ 5 ತಂಡಗಳು ಭಾಗವಹಿಸುತ್ತಿವೆ. ಇತ್ತೀಚೆಗೆ ನಡೆದ ಆಟಗಾರರ ಹರಾಜಿನಲ್ಲಿ 87 ಮಹಿಳಾ ಆಟಗಾರ್ತಿಯರನ್ನು ಫ್ರಾಂಚೈಸಿಗಳು ಬಿಡ್ ಮಾಡಿದ್ದವು. ಮುಂಬೈನ ಡಿವೈ ಪಾಟೀಲ್ (D Y Patil Sports Stadium) ಮತ್ತು ಬ್ರಬೋರ್ನ್ ಸ್ಟೇಡಿಯಂನಲ್ಲಿ (CCI-Brabourne Stadium) ಲೀಗ್ ಪಂದ್ಯಗಳು ನಡೆಯಲಿವೆ. ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಈ ಲೀಗ್‌ನಲ್ಲಿ 22 ಪಂದ್ಯಗಳು ನಡೆಯಲಿವೆ. ಲೀಗ್‌ನ ಮೊದಲ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ (GT vs MI) ನಡುವೆ ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮಹಿಳೆಯರಿಗೆ ಉಚಿತ ಪ್ರವೇಶ:
ಗುಜರಾತ್ ಟೈಟಾನ್ಸ್‌ನ ನಾಯಕತ್ವ ಆಸ್ಟ್ರೇಲಿಯಾದ ಅನುಭವಿ ಬೆತ್ ಮೂನಿ ಕೈಯಲ್ಲಿದ್ದು, ಮುಂಬೈ ತಂಡದ ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್ ಆಯ್ಕೆ ಆಗಿದ್ದಾರೆ. ಜೊತೆಗೆ ಆರ್ಸಬಿ ನಾಯಕಿಯಾಗಿ ಸ್ಮೃತಿ ಮಂಧನಾ ಕಾಣಿಸಿಕೊಳ್ಳಲಿದ್ದಾರೆ. ಮಹಿಳಾ ಐಪಿಎಲ್‌ನಲ್ಲಿ ಹುಡುಗಿಯರು ಮತ್ತು ಮಹಿಳೆಯರು ಕ್ರೀಡಾಂಗಣದಲ್ಲಿ ಕುಳಿತು ಎಲ್ಲಾ ಪಂದ್ಯಗಳನ್ನು ಉಚಿತವಾಗಿ ಆನಂದಿಸಬಹುದು. ಬಿಸಿಸಿಐ ಹುಡುಗಿಯರು ಮತ್ತು ಮಹಿಳೆಯರಿಗೆ ಕ್ರೀಡಾಂಗಣದಲ್ಲಿ ಉಚಿತ ಪ್ರವೇಶವನ್ನು ಇರಿಸಿದೆ. ಪುರುಷರಿಗೆ ಟಿಕೆಟ್ ದರ 100 ರೂ. ಎಂದು ಬಿಸಿಸಿಐ ತಿಳಿಸಿದೆ. ಮಾರ್ಚ್ 26 ರಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇದಾದ ಬಳಿಕ ಪುರುಷರ ಐಪಿಎಲ್ ಮಾರ್ಚ್ 31ರಿಂದ ಆರಂಭವಾಗಲಿದೆ.
ಎಲ್ಲಿ ಲೈವ್ ಪಂದ್ಯಗಳನ್ನು ನೋಡಬಹುದು:
ಮಹಿಳಾ ಪ್ರೀಮಿಯರ್ ಲೀಗ್‌ನ ನೇರ ಪ್ರಸಾರವು ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿರುತ್ತದೆ ಮತ್ತು ನೀವು ಮೊಬೈಲ್‌ನಲ್ಲಿ ಜಿಯೋ ಸಿನಿಮಾ ಮೂಲಕ ಲೈವ್ ಸ್ಟ್ರೀಮಿಂಗ್ ಅನ್ನು ಆನಂದಿಸಬಹುದು. ಡಬಲ್ ಹೆಡರ್ ದಿನದಂದು ಮೊದಲ ಪಂದ್ಯ ಮಧ್ಯಾಹ್ನ 3:30 ರಿಂದ ನಡೆಯಲಿದ್ದು, ದಿನದ ಎರಡನೇ ಪಂದ್ಯ ಸಂಜೆ 7:30 ರಿಂದ ನಡೆಯಲಿದೆ.
ಇದನ್ನೂ ಓದಿ: WPL 2023: ಐಪಿಎಲ್ ನೋಡೋಕೆ ಮಹಿಳೆಯರಿಗೆ ಸಿಗುತ್ತೆ ಫ್ರೀ ಟಿಕೆಟ್, ಗಂಡು ಹೈಕ್ಳಿಗೂ ಐತೆ ಡಿಸ್ಕೌಂಟ್!
WPL 2023 ಸಂಪೂರ್ಣ ವೇಳಾಪಟ್ಟಿ:
4 ಮಾರ್ಚ್- GG vs MI - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
5 ಮಾರ್ಚ್- RCB vs DC - ಬ್ರಬೋರ್ನ್ CCI - 3:30 PM
5 ಮಾರ್ಚ್ - UPW vs GG - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
5 ಮಾರ್ಚ್ - UPW vs GG - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
6 ಮಾರ್ಚ್- MI vs RCB - ಬ್ರಬೋರ್ನ್ CCI - 7:30 PM
7 ಮಾರ್ಚ್- DC vs UPW - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
8 ಮಾರ್ಚ್- GG vs RCB - ಬ್ರಬೋರ್ನ್ CCI - 7:30 PM
9 ಮಾರ್ಚ್- DC vs MI - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
10 ಮಾರ್ಚ್- RCB vs UPW - ಬ್ರಬೋರ್ನ್ CCI - 7:30 PM
11 ಮಾರ್ಚ್- GG vs DC - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
12 ಮಾರ್ಚ್- UPW vs MI - ಬ್ರಬೋರ್ನ್ CCI -7:30 PM
13 ಮಾರ್ಚ್- DC vs RCB - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
14 ಮಾರ್ಚ್- MI vs GG - ಬ್ರಬೋರ್ನ್ CCI - 7:30 PM
15 ಮಾರ್ಚ್- UPW vs RCB - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
16 ಮಾರ್ಚ್- DC vs GG - ಬ್ರಬೋರ್ನ್ CCI -7:30 PM
18 ಮಾರ್ಚ್- MI vs UPW - ಡಿವೈ ಪಾಟೀಲ್ ಕ್ರೀಡಾಂಗಣ - 3:30 PM
18 ಮಾರ್ಚ್- RCB vs GG - ಬ್ರಬೋರ್ನ್ CCI -7:30 PM
20 ಮಾರ್ಚ್- GG vs UPW - ಬ್ರಬೋರ್ನ್ CCI - 3:30 PM
20 ಮಾರ್ಚ್- MI vs DC - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
21 ಮಾರ್ಚ್- RCB vs MI - ಡಿವೈ ಪಾಟೀಲ್ ಕ್ರೀಡಾಂಗಣ - 3:30 PM
21 ಮಾರ್ಚ್- UPW vs DC - ಬ್ರಬೋರ್ನ್ CCI - 7:30 PM
24 ಮಾರ್ಚ್- ಎಲಿಮಿನೇಟರ್ - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
26 ಮಾರ್ಚ್- ಅಂತಿಮ - ಬ್ರಬೋರ್ನ್ CCI - 7:30 PM
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ