ಮುಂಬೈ: ಹಲವು ವರ್ಷಗಳ ಬೇಡಿಕೆಯಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ನ (Indian premier League)ಮಹಿಳಾ ಆವೃತ್ತಿಗೆ ಈಗಾಗಲೆ ಬಿಸಿಸಿಐನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಈಗಾಗಲೆ ಐದು ತಂಡಗಳು ಸ್ಪರ್ಧಿಸುವುದು ಪಕ್ಕ ಆಗಿದೆ. ವುಮೆನ್ಸ್ ಪ್ರೀಮಿಯರ್ ಲೀಗ್ನ (Women's Premier League) ಚೊಚ್ಚಲ ಆವೃತ್ತಿ ಇದೇ ಮಾರ್ಚ್ 4ರಿಂದ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ತಿಳಿಸಿದೆ. ಇಡೀ ಟೂರ್ನಿ ಮುಂಬೈ(Mumbai) ನಗರದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಜೇಂಟ್ಸ್ (Gujarat Giants) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ತಂಡಗಳ ನಡುವೆ ನಡೆಯುವ ಸಾಧ್ಯತೆಯಿದೆ. ಬ್ರಬೌರ್ನ್ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಮನಲ್ಲಿ (DY Patil Stadium) ಟೂರ್ನಿಯ ಎಲ್ಲಾ ಪಂದ್ಯಗಳು ಆಯೋಜನೆಯಾಗಲಿದೆ.
ಮಾರ್ಚ್ 4ರಿಂದ 24ರ ವರೆಗೆ ಟೂರ್ನಿ
ಉದ್ಘಾಟನಾ ವುಮೆನ್ಸ್ ಪ್ರೀಮಿಯರ್ ಲೀಗ್ ಆವೃತ್ತಿ ಮಾರ್ಚ್ 4 ರಂದು ಆರಂಭಗೊಂಡು ಮಾರ್ಚ್ 24ರಂದು ಅಂತ್ಯಗೊಳ್ಳಲಿದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಅಧ್ಯಕ್ಷ ಅರುಣ್ ಧುಮಾಲ್ (IPL chairman Arun Dhumal) ಮಾಹಿತಿ ನೀಡಿದ್ದಾರೆ. ಚೊಚ್ಚಲ ಆವೃತ್ತಿ ಸಂಪೂರ್ಣ ಮುಂಬೈನ ಎರಡು ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ಅವರು ಸೋಮವಾರ ಮಾಹಿತಿ ನೀಡಿದ್ದಾರೆ.
ತಂಡಗಳ ವಿವರ
ಈಗಾಗಲೆ ಬಿಡ್ನಲ್ಲಿ ಐದು ತಂಡಗಳು ಬೃಹತ್ ಮೊತ್ತಕ್ಕೆ ಮಾರಾಟವಾಗಿವೆ. ಐಪಿಎಲ್ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಕ್ಯಾಬ್ರಿ ಗ್ಲೋಬಲ್ ಹೋಲ್ಡಿಂಗ್ಸ್(ಲಕ್ನೋ) ಹಾಗೂ ಅದಾನಿ ಸ್ಪೋರ್ಟ್ಸ್ ಲೈನ್ ಮತ್ತೆರಡು ತಂಡಗಳನ್ನು ಖರೀಸಿದಿವೆ. ಐದು ತಂಡಗಳನ್ನು ಬಿಸಿಸಿಐ ಬರೋಬ್ಬರಿ 4669.99 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದೆ. ಇದಲ್ಲದೆ ಮಾಧ್ಯಮ ಪ್ರಸಾರದ ಹಕ್ಕನ್ನು ಕೂಡ 951 ಕೋಟರು ರೂಗಳಿಗೆ ಮಾರಾಟ ಮಾಡಿದೆ.
ಫೆಬ್ರವರಿ 13ರಂದು ಹರಾಜು
ಒಟ್ಟು ಐದು ತಂಡಗಳು ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಸೆಣಸಾಡಲಿವೆ. ಫೆಬ್ರವರಿ 13ರಂದು, ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸುವ ಹಿಂದಿನ ದಿನ ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ವಿಶ್ವದಾದ್ಯಂತ ಸುಮಾರು 1500 ಆಟಗಾರ್ತಿಯರು ಚೊಚ್ಚಲ WPLಗೆ ತಮ್ಮ ಹೆಸರನ್ನು ನೋದಾಯಿಸಿಕೊಂಡಿವೆ. ಇದೇ ವಾರ ಅಂತಿಮ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.
15ರಿಂದ 18 ಆಟಗಾರರನ್ನು ಖರೀದಿಸಲು ಅವಕಾಶ
ಪ್ರತಿ ತಂಡಕ್ಕೂ 12 ಕೋಟಿ ರೂ. ಪರ್ಸ್ ನಿಗದಿ ಮಾಡಲಾಗಿದೆ. ಈ ಮೊತ್ತದಲ್ಲಿ ಫ್ರಾಂಚೈಸಿಗಳು 15 ಪ್ಲೇಯರ್ಗಳನ್ನು ಕಡ್ಡಾಯವಾಗಿ ಖರೀದಿಸಬಹುದಾಗಿದೆ. ಹೆಚ್ಚೆಂದರೆ 18 ಆಟಗಾರ್ತಿಯರನ್ನು ಮಾತ್ರ ಖರೀಸಲು ಅವಕಾಶವಿದೆ. ಪ್ರತಿ ತಂಡಗಳು ಐದು ವಿದೇಶಿ ಆಟಗಾರರನ್ನು ಹೊಂದಬಹದಾಗಿದೆ. ಇದರಲ್ಲಿ ಒಬ್ಬ ಅಸೋಸಿಯೇಟ್ ರಾಷ್ಟ್ರದ ಆಟಗಾರ್ತಿಗೆ ಅವಕಾಶ ನೀಡಬಹುದಾಗಿದೆ.
22 ಪಂದ್ಯಗಳು
ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ನ ಐದು ತಂಡಗಳ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಎರಡು ಮತ್ತು ಮೂರನೇ ತಂಡ ಫೈನಲ್ ಪ್ರವೇಶಿಸಲು ಸೆಣಸಾಡಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ