ಮಹಿಳಾ ಪ್ರೀಮಿಯರ್ ಲೀಗ್ (WPL 2023) ಹರಾಜು ಮುಕ್ತಾಯಗೊಂಡಿದ್ದು, ಲೀಗ್‌ನ ವೇಳಾಪಟ್ಟಿಯನ್ನು BCCI ಪ್ರಕಟಿಸಿದೆ. ಮೊದಲ ಆವೃತ್ತಿಯ ಉದ್ಘಾಟನಾ ಪಂದ್ಯವು ಮಾರ್ಚ್ 4ರಂದು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ (MI vs GG) ವಿರುದ್ಧ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ (DY Patil Sports Stadium) ನಡೆಯಲಿದೆ. ಈ ಸಂಪೂರ್ಣ ಟೂರ್ನಿಯು ಮಾರ್ಚ್ 4ರಿಂದ ಆರಂಭವಾಗಿ ಮಾರ್ಚ್ 26ರ ವರೆಗೆ ನಡೆಯಲಿದೆ. ಮಾರ್ಚ್ 26 ರಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಚೊಚ್ಚಲ ಕಪ್ಗಾಗಿ ಒಟ್ಟು 5 ತಂಡಗಳು ಸೆಣಸಲಿದ್ದು, ಈಗಾಗಲೇ ನಡೆದ ಹರಾಜಿನಲ್ಲಿ ಒಟ್ಟು ಎಲ್ಲಾ ಫ್ರಾಂಚೈಸಿಗಳು 87 ಆಟಗಾರರನ್ನು ಖರೀದಿಸಿದೆ.
WPL 2023 ಸಂಪೂರ್ಣ ವೇಳಾಪಟ್ಟಿ:
4 ಮಾರ್ಚ್- GG vs MI - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
5 ಮಾರ್ಚ್- RCB vs DC - ಬ್ರಬೋರ್ನ್ CCI - 3:30 PM
5 ಮಾರ್ಚ್ - UPW vs GG - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
5 ಮಾರ್ಚ್ - UPW vs GG - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
6 ಮಾರ್ಚ್- MI vs RCB - ಬ್ರಬೋರ್ನ್ CCI - 7:30 PM
7 ಮಾರ್ಚ್- DC vs UPW - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
8 ಮಾರ್ಚ್- GG vs RCB - ಬ್ರಬೋರ್ನ್ CCI - 7:30 PM
9 ಮಾರ್ಚ್- DC vs MI - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
10 ಮಾರ್ಚ್- RCB vs UPW - ಬ್ರಬೋರ್ನ್ CCI - 7:30 PM
11 ಮಾರ್ಚ್- GG vs DC - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
🚨 NEWS 🚨: BCCI announces schedule for Women’s Premier League 2023. #WPL
More Details 🔽https://t.co/n92qVFwu1x
— Women's Premier League (WPL) (@wplt20) February 14, 2023
ಇದನ್ನೂ ಓದಿ: WPL Auction 2023: ಮಹಿಳಾ ಐಪಿಎಲ್ನಲ್ಲಿ ಶುರುವಾಯ್ತು RCB ಅಬ್ಬರ, ಹೊಡಿಬಡಿ ಆಟಗಾರ್ತಿಗೆ ಬೆಂಗಳೂರು ಮಣೆ!
18 ಮಾರ್ಚ್- RCB vs GG - ಬ್ರಬೋರ್ನ್ CCI -7:30 PM
20 ಮಾರ್ಚ್- GG vs UPW - ಬ್ರಬೋರ್ನ್ CCI - 3:30 PM
20 ಮಾರ್ಚ್- MI vs DC - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
21 ಮಾರ್ಚ್- RCB vs MI - ಡಿವೈ ಪಾಟೀಲ್ ಕ್ರೀಡಾಂಗಣ - 3:30 PM
21 ಮಾರ್ಚ್- UPW vs DC - ಬ್ರಬೋರ್ನ್ CCI - 7:30 PM
24 ಮಾರ್ಚ್- ಎಲಿಮಿನೇಟರ್ - ಡಿವೈ ಪಾಟೀಲ್ ಕ್ರೀಡಾಂಗಣ - 7:30 PM
26 ಮಾರ್ಚ್- ಅಂತಿಮ - ಬ್ರಬೋರ್ನ್ CCI - 7:30 PM
ಪಂದ್ಯಾವಳಿಯ ಸ್ವರೂಪ:
ಇನ್ನು, ಒಟ್ಟು 5 ತಂಡಗಳು ಸೆಣಸಲಿದ್ದು, ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಹಾಗೂ ಡಬಲ್ ಹೆಡ್ಡರ್ ಪಂದ್ಯಗಳಲ್ಲಿ ಮಧ್ಯಾಹ್ನ 3:30ಕ್ಕೆ ಒಂದು ಪಂದ್ಯ ನಡೆಯಲಿದೆ. ಉಳಿದಂತೆ ಮಾರ್ಚ್ 24ರಂದು ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಲೀಗ್‌ನ ಫೈನಲ್ ಪಂದ್ಯ ಮಾರ್ಚ್ 26 ರಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯಾವಳಿಯು ಒಟ್ಟು 23 ದಿನಗಳವರೆಗೆ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ