ಆರ್‌ಸಿಬಿ (RCB) ತಂಡ ಬ್ಯಾಕ್ ಟು ಬ್ಯಾಕ್ ಸೋಲನುಭವಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (Social Media) ಟ್ರೋಲ್‌ಗೆ ಗುರಿಯಾಗಿದೆ. ಇತ್ತ ಭಾರತೀಯ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ಭರವಸೆಯ ಆಟಗಾರರಾಗಿರುವ ಸ್ಮೃತಿ ಶ್ರೀನಿವಾಸ್ ಮಂಧಾನ (Smriti Mandhana) ಕ್ರಿಕೆಟ್ ಜೀವನ ಅದೃಷ್ಟದ ಏರಿಳಿತದಲ್ಲಿ ಸಿಲುಕಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ದೊಡ್ಡ ಮೊತ್ತಲ್ಲೆ ಹರಾಜಾಗಿ ಜಾಕ್‌ಪಾಟ್ (Jackpot) ಹೊಡೆದುದ್ದಲ್ಲದೇ ಸಾಧನೆ, RCB ತಂಡವನ್ನು ಮುನ್ನಡೆಸುವ ನಾಯಕತ್ವದ ಜವಾಬ್ದಾರಿಯನ್ನು ಸ್ಮೃತಿ ಅವರಿಗೆ ನೀಡಲಾಯಿತು. ಇಲ್ಲಿ ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ವಿರಾಟ್ ಕೊಹ್ಲಿ (Virat Kohli) ಹಾಗೂ ಸ್ಮೃತಿ ಅವರ ಜರ್ಸಿ ಸಂಖ್ಯೆ 18 ಎಂಬುದಾಗಿದೆ.
ತಂಡದ ಸೋಲು ಹಿಂದೆ ಪುರುಷರ ತಂಡದಲ್ಲಿ ಕ್ಯಾಪ್ಟನ್ ಆಗಿದ್ದಾಗ ವಿರಾಟ್ ಅನುಭವಿಸಿದ ಒತ್ತಡ, ಆತಂಕವನ್ನು ಮಂಧಾನ ಕೂಡ ಈಗ ಅನುಭವಿಸುತ್ತಿದ್ದಾರೆ ಎಂಬುದಂತೂ ಸ್ಪಷ್ಟವಾಗಿ ಕಾಣಿಸುತ್ತಿದೆ.
ಇದನ್ನೂ ಓದಿ: Virat kohli: ಐಪಿಎಲ್‌ನಲ್ಲಿ ಕೊಹ್ಲಿ ಈ ರೆಕಾರ್ಡ್ಸ್ ಯಾರೂ ಬ್ರೇಕ್ ಮಾಡೋಕೆ ಚಾನ್ಸೇ ಇಲ್ಲ! ಕಿಂಗ್ ಯಾವಾಗಿದ್ರೂ ಕಿಂಗೇ!
ಸೋಲಿನ ರುಚಿ ಕಂಡಿರುವ ಆರ್‌ಸಿಬಿ ಮಹಿಳಾ ತಂಡ
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿರ ಅದೇ ಹಾದಿಯನ್ನೇ ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿಯವರು ಅನುಸರಿಸಲಿದ್ದಾರೆಯೇ ಎಂಬ ಆಶಾವಾದದೊಂದಿಗೆ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದೆ. ಆಕೆಯ ತಂಡ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಒಂದರ ಮೇಲೊಂದರಂತೆ ಸೋಲಿನ ರುಚಿಯನ್ನುಂಡಿದೆ.
RCB v UPW: WPL Game Day
4th consecutive loss and Mike Hesson says, ‘It’s upon each and every individual to reflect on their performances and put in their best in the remainder of the tournament, to get us out of the situation we’ve put ourselves in.’#PlayBold #ನಮ್ಮRCB #WPL2023 pic.twitter.com/qXDrhE46xL
— Royal Challengers Bangalore (@RCBTweets) March 11, 2023
ಒತ್ತಡಕ್ಕೆ ಒಳಗಾಗಿರುವರೇ ತಂಡದ ನಾಯಕಿ ಸ್ಮೃತಿ
ಹರಾಜಿನ ಸಮಯದಲ್ಲಿ ಅನುಭವಿಸುವ ಅದೇ ಒತ್ತಡಕ್ಕೆ ಸ್ಮೃತಿಯವರು ಒಳಗಾಗಿರುವುದು ಕಂಡುಬಂದಿದೆ. ಹರಾಜಿನ ಸಮಯದಲ್ಲಿ ಬಹಳಷ್ಟು ಬೆಲೆಗೆ ತಂಡದಿಂದ ಆಯ್ಕೆಯಾಗುವ ಕ್ರೀಡಾಪಡುವಿನ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಒಂದು ರೀತಿಯ ಮಾಡು ಇಲ್ಲವೇ ಮಡಿ ಎಂಬ ನಿರ್ಧಾರವನ್ನು ಕ್ರೀಡಾಳು ಹೊಂದಿರಬೇಕಾಗುತ್ತದೆ. ಆದರೆ ಸ್ಮೃತಿಯವರ ವಿಷಯದಲ್ಲಿ ಸೋಲು ಎಂಬುದು ಗೆಲುವಿನ ಸೋಪಾನ ಎಂಬಂತೆ ಕಾಣುತ್ತಿದೆ. ಗೆಲುವಿನ ಅದೇ ಹಾದಿಯಲ್ಲಿ ಮುಂದುವರಿಯುವ ಪ್ರಯತ್ನದಲ್ಲಿ ಸ್ಮೃತಿ ಸಾಗುವ ದೀಕ್ಷೆ ತೊಟ್ಟಿರುವುದು ಖಚಿತವಾಗಿದೆ.
ಸ್ಮೃತಿ ಫಾರ್ಮ್ ಕುರಿತು ಸಹಆಟಗಾರರ ಅಭಿಪ್ರಾಯವೇನು?
ಬುಧವಾರ ಗುಜರಾತ್ ಜೈಂಟ್ಸ್ ವಿರುದ್ಧ ಸೋತ ನಂತರ ತಂಡದ ಸಹ ಆಟಗಾರ್ತಿ ಸೋಫಿ ಡಿವೈನ್ ತಂಡದ ನಾಯಕಿ ಸ್ಮೃತಿಯವರ ಮನಸ್ಥಿತಿಯ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಸ್ಮೃತಿಯವರು ಹೇಗಾದರೂ ಆಟವನ್ನು ಗೆಲ್ಲಲೇಬೇಕೆಂಬ ಆಶಯ ಹೊಂದಿದ್ದರು ಎಂದು ತಿಳಿಸಿದ್ದಾರೆ.
ಚೆನ್ನಾಗಿ ಆಡಬೇಕೆಂಬ ಮನೋಭಾವ ಅವರದಾಗಿತ್ತು ಹಾಗೂ ನಾಯಕತ್ವದ ಅದೇ ಗುಣದಿಂದ ತಂಡವನ್ನು ಮುನ್ನಡೆಸುವ ಬಯಕೆ ಅವರಲ್ಲಿತ್ತು ಎಂದು ತಿಳಿಸಿದ್ದಾರೆ. ಆಕೆ ಅದ್ಭುತವಾಗಿ ತಂಡದ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಆದರೆ ನಾಯಕಿಯಾದ ಮೇಲೆ ಪ್ರತಿಯೊಂದು ಅವರ ಹೆಗಲ ಮೇಲಿರುತ್ತದೆ ಅಂದರೆ ಅವರ ಜವಾಬ್ದಾರಿಯಾಗಿರುತ್ತದೆ. ನಾವು ಆಕೆಯನ್ನು ಬೆಂಬಲಿಸುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡಿದ್ದೇವೆ ಎಂದು ಸೋಫಿ ತಿಳಿಸಿದ್ದಾರೆ.
ಪ್ಲೇಆಫ್‌ಗೆ ತಂಡ ಸಾಗುವುದು ಸಂಶಯವಾಗಿದೆ
ಆರ್‌ಸಿಬಿಯಲ್ಲಿರುವ ಸಮಸ್ಯೆಗಳು ಒಂದೆರಡಲ್ಲ. ಎರಡು ಬಾರಿ 200 ಕ್ಕಿಂತ ಹೆಚ್ಚಿನ ರನ್‌ಗಳನ್ನು ಕೈಚೆಲ್ಲಿದೆ. ಗುರಿ ದಾಖಲಿಸುವ ಎಲ್ಲಾ ಸಂದರ್ಭದಲ್ಲಿಯೂ ಕಳಪೆ ಪ್ರದರ್ಶನ ನೀಡಿದೆ ಹಾಗೂ 155 ರನ್‌ಗಳಿಗೆ ಆಲ್‌ಔಟ್ ಆಯಿತು. ಕೇವಲ ಎಂಟು ಪಂದ್ಯಗಳಲ್ಲಿನ ಸಣ್ಣ ಲೀಗ್ ಹಂತದಲ್ಲಿಯೇ ಆರ್‌ಸಿಬಿ ಕಳಪೆ ಪ್ರದರ್ಶನ ತೋರಿದ್ದು, ತಂಡ ಪ್ಲೇ ಆಫ್‌ಗೆ ಹೋಗುವ ಭರವಸೆಯನ್ನು ಕಳೆದುಕೊಂಡಿದೆ ಎಂಬುದು ನಿಚ್ಚಳವಾಗಿದೆ.
ಇನ್ನೂ ಅವಕಾಶವಿದೆ ಹಾಗೂ ಆ ಅವಕಾಶವನ್ನು ಬಳಸಿಕೊಂಡು ಪ್ಲೇ ಆಫ್‌ಗೆ ಹೋಗಲೇಬೇಕಾಗಿದೆ. ಇಲ್ಲಿಯವರೆಗಿನ ಪ್ರಯಾಣವನ್ನು ಯೋಚಿಸುವುದಕ್ಕೂ ಮುನ್ನ ಅದಕ್ಕೂ ಮುನ್ನದ ಮ್ಯಾಚ್‌ಗಳನ್ನು ಗೆಲ್ಲಬೇಕಾಗಿದೆ ಎಂದು RCB ಕ್ರಿಕೆಟ್ ನಿರ್ದೇಶಕರಾದ ಮೈಕ್ ಹೆಸ್ಸನ್ ತಿಳಿಸಿದ್ದಾರೆ.
ಆಫ್ ಸ್ಪಿನ್ ಸಮಸ್ಯೆಯಿಂದ ಸ್ಮೃತಿ ಕಂಗೆಟ್ಟಿದ್ದಾರೆಯೇ?
ಸ್ಮೃತಿ ಮಂಧಾನ ಅವರಿಗೆ ಆಫ್ ಸ್ಪಿನ್ ಸಮಸ್ಯೆ ಬಹುವಾಗಿ ಕಾಡುತ್ತಿದೆ ಎಂಬುದು ಅವರು ಕಲೆಹಾಕುವ ರನ್‌ಗಳಿಂದ ತಿಳಿದುಬಂದಿದೆ. ಎಡಗೈ ಆಟಗಾರ್ತಿಯಾಗಿ ಸ್ಪಿನ್ ಬೌಲ್‌ಗಳಿಗೆ ಹೊಡೆಯುವ ಸಾಮರ್ಥ್ಯ ಅಷ್ಟೊಂದು ಭರವಸೆದಾಯಕವಾಗಿಲ್ಲ. ಇತ್ತೀಚಿನ ವಿಶ್ವಕಪ್ ಸೆಮಿಫೈನಲ್ ಸೇರಿದಂತೆ ಸ್ಮೃತಿಯವರನ್ನು ಈ ಹಿಂದೆ T20 ಗಳಲ್ಲಿ ಆರು ಬಾರಿ ಸೋಲಿಸಿದ ಆಶ್ಲೀಗ್ ಗಾರ್ಡ್ನರ್ ಬಾಲ್‌ಗಳಲ್ಲಿ ಸ್ಮೃತಿಯವರು ಒಂದು ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದುದು ವ್ಯಕ್ತವಾಗಿದೆ.
ಸ್ಮೃತಿಯವರು ಆಫ್ ಸ್ಪಿನ್ನರ್ ಆಟದಲ್ಲಿ ಪರಿಣಿತಿಯನ್ನು ಹೊಂದಬೇಕು ಹಾಗೂ ಅದನ್ನು ಕೈಗೆತ್ತಿಕೊಳ್ಳಲು ಇತರ ಆಟಗಾರರಿಗೆ ಅವಕಾಶಮಾಡಿಕೊಡಬೇಕು ಎಂದು ಆಟಗಾರ ಮತ್ತು ಟಿವಿ ಪಂಡಿತ ಪುನಮ್ ರಾವುತ್ ಕಾಮೆಂಟರಿಯಲ್ಲಿ ಸಲಹೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ