• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • WPL 2023: ಉದ್ಘಾಟನಾ ಪಂದ್ಯದಲ್ಲಿ ಮುಂಬೈ-ಗುಜರಾತ್​ ಹಣಾಹಣಿ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

WPL 2023: ಉದ್ಘಾಟನಾ ಪಂದ್ಯದಲ್ಲಿ ಮುಂಬೈ-ಗುಜರಾತ್​ ಹಣಾಹಣಿ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

GUJ-W vs MI-W

GUJ-W vs MI-W

WPL 2023: ಇಂದಿನಿಂದ ಮಹಿಳಾ ಪ್ರೀಮಿಯರ್​ ಲೀಗ್​ 2023 ಆರಂಭವಾಗಲಿದೆ. ಮುಂಬೈನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿ ಆಗಲಿದೆ.

  • Share this:

ಬಿಸಿಸಿಐ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಅನ್ನು ಮೊದಲ ಬಾರಿಗೆ ಆಯೋಜಿಸುತ್ತಿದೆ. ಮಹಿಳಾ ಐಪಿಎಲ್ ಇಂದಿನಿಂದ ಮುಂಬೈನಲ್ಲಿ ಆರಂಭವಾಗಲಿದೆ. ಈ ಲೀಗ್‌ನಲ್ಲಿ 5 ತಂಡಗಳು ಭಾಗವಹಿಸುತ್ತಿವೆ. ಮಹಿಳಾ ಪ್ರೀಮಿಯರ್​ ಲೀಗ್​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ (GT vs MI) ತಂಡಗಳು ಸೆಣಸಾಡಲಿದೆ. ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ (D Y Patil Sports Stadium) ನಡೆಯಲಿದೆ. ಗುಜರಾತ್ ಜೈಂಟ್ಸ್ ಅನ್ನು ಆಸ್ಟ್ರೇಲಿಯಾದ ಬೆತ್ ಮೂನಿ ಮುನ್ನಡೆಸಿದರೆ, ಮುಂಬೈ ಇಂಡಿಯನ್ಸ್ ಅನ್ನು ಭಾರತೀಯ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಹಾಗಿದ್ದರೆ ಈ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಪಂದ್ಯದ ವಿವರ:


ಮಹಿಳಾ ಐಪಿಎಲ್​ 2023ರ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿ ಆಗಲಿದೆ. ಈ ಪಂದ್ಯವು ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಆರಂಭವಾಗಲಿದ್ದು, 7 ಗಂಟೆಗೆ ಟಾಸ್​ ನಡೆಯಲಿದೆ. ಟೆಲಿಕಾಸ್ಟ್ ಮತ್ತು ಲೈವ್ ಸ್ಟ್ರೀಮಿಂಗ್ ಸ್ಪೋರ್ಟ್ಸ್ 18 ಮತ್ತು ಜಿಯೋ ಸಿನಿಮಾ ಅಪ್ಲಿಕೇಶನ್​ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಹೆಚ್ಚಿನ ಅಪ್​ಡೇಟ್​ಗಾಗಿ News18 Kannada ವೆಬ್​ ಸೈಟ್​ ಅನುಸರಿಸಿ.



ಪಿಚ್ ವರದಿ:


ಐಪಿಎಲ್​ 2022 ಪಂದ್ಯಗಳು ಮತ್ತು ಇತ್ತೀಚಿನ ಮಹಿಳಾ ಅಂತರರಾಷ್ಟ್ರೀಯ ಪಂದ್ಯಗಳು ಡಿವೈ ಪಾಟೀಲ್​ ಮೂದಾನದಲ್ಲಿ ನಡೆದಿದೆ. ಈ ಪಿಚ್‌ಲ್ಲಿ ಕೆಲವು ಹೆಚ್ಚಿನ ಸ್ಕೋರಿಂಗ್ ಪಂದ್ಯಗಳು ನಡೆದಿವೆ. ಆದ್ದರಿಂದ ನಿಧಾನಗತಿಯ ಬೌಲರ್‌ಗಳಿಗೆ ಸ್ವಲ್ಪ ಬೆಂಬಲದೊಂದಿಗೆ ಬ್ಯಾಟಿಂಗ್-ಸ್ನೇಹಿ ಪಿಚ್​ ಇದಾಗಿದೆ. ಹೀಗಾಗಿ ಟಾಸ್​ ಗೆದ್ದ ನಾಯಕಿ ಮೊದಲು ಬೌಲಿಂಗ್​ ತೆಗದುಕೊಂಡು ಬಳಿಕ ಚೇಸಿಂಗ್​ ಮಾಡುವ ಸಾಧ್ಯತೆ ಇದೆ.


ಇದನ್ನೂ ಓದಿ: Rishabh Pant: ಸೋಲಿನ ಬಳಿಕ ನೆನಪಾದ ರಿಷಭ್​ ಪಂತ್​, ಮಿಸ್​ ಯು ಹೀರೋ ಎಂದ ಫ್ಯಾನ್ಸ್


ಉದ್ಘಾಟನಾ ಸಮಾರಂಭ:


ಮಹಿಳಾ ಪ್ರೀಮಿಯರ್​ ಲೀಗ್​ ಆರಂಭಕ್ಕೂ ಮುನ್ನ ಭರ್ಜರಿ ಮನರಂಜಾನಾ ಕಾರ್ಯಕ್ರಮಗಳನ್ನು ಬಿಸಿಸಿಐ ಆಯೋಜಿಸಿದೆ. ಇದಕ್ಕಾಗಿ ಬಾಲಿವುಡ್ ಸ್ಟಾರ್‌ಗಳಾದ ಕಿಯಾರಾ ಅಡ್ವಾಣಿ ಹಾಗೂ ಕೃತಿ ಸನೋನ್ ರಂಜಿಸಲು ಸಿದ್ಧರಾಗಿದ್ದಾರೆ. ಜನಪ್ರಿಯ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಅವರು ಸಂಭ್ರಮಾಚರಣೆಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಅಧಿಕೃತ ಹಾಡನ್ನು ಹಾಡಲಿದ್ದಾರೆ.




GUJ-W vs MI-W ಸಂಭಾವ್ಯ ಪ್ಲೇಯಿಂಗ್ 11:


ಗುಜರಾತ್ ಜೈಂಟ್ಸ್ ಸಂಭಾವ್ಯ ಪ್ಲೇಯಿಂಗ್ 11: ಬೆತ್ ಮೂನಿ (C/WK), ಸೋಫಿಯಾ ಡಂಕ್ಲೆ, ಆಶ್ಲೀ ಗಾರ್ಡ್ನರ್, ಸುಷ್ಮಾ ವರ್ಮಾ, ಡೇಂಡ್ರಾ ಡಾಟಿನ್, ಅಶ್ವನಿ ಕುಮಾರಿ, ಹರ್ಲೀನ್ ಡಿಯೋಲ್, ಸ್ನೇಹ ರಾಣಾ, ಮಾನ್ಸಿ ಜೋಶಿ, ಮೋನಿಕಾ ಪಟೇಲ್, ತನುಜಾ ಕನ್ವರ್


ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ 11: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (WK), ನ್ಯಾಟ್ ಸ್ಕಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (c), ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಅಮನ್ಜೋತ್ ಕೌರ್, ಪೂಜಾ ವಸ್ತ್ರಕರ್, ಸೋನಮ್ ಯಾದವ್, ಸೈಕಾ ಇಶಾಕ್, ಹುಮೈರಾ ಕಾಜಿ.

Published by:shrikrishna bhat
First published: