• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • WPL 2023 Auction: ಮಹಿಳಾ ಐಪಿಎಲ್​ನ ಆಟಗಾರ್ತಿಯರ ಮೂಲ ಬೆಲೆ ರಿಲೀಸ್​, ಇಲ್ಲಿಯೂ ಭಾರತೀಯರದ್ದೇ ಅಬ್ಬರ

WPL 2023 Auction: ಮಹಿಳಾ ಐಪಿಎಲ್​ನ ಆಟಗಾರ್ತಿಯರ ಮೂಲ ಬೆಲೆ ರಿಲೀಸ್​, ಇಲ್ಲಿಯೂ ಭಾರತೀಯರದ್ದೇ ಅಬ್ಬರ

WPL 2023

WPL 2023

WPL 2023 Auction: ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್‌ನ ದಿನಾಂಕಗಳನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿದ್ದು, 50 ಲಕ್ಷ ಮೂಲ ಬೆಲೆಯ 24 ಆಟಗಾರರು ಹೆಸರನ್ನು ನೊಂದಾಯಿಸಿದ್ದಾರೆ.

  • Share this:

ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್‌ನ ದಿನಾಂಕಗಳನ್ನು ಬಿಸಿಸಿಐ (BCCI) ಈಗಾಗಲೇ ಪ್ರಕಟಿಸಿದೆ. ಈ ಟೂರ್ನಿಯ ಮೊದಲ ಸೀಸನ್ ಮಾರ್ಚ್ 4 ರಂದು ಆರಂಭವಾಗಲಿದೆ. ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯ ಮಾರ್ಚ್ 26ರಂದು ನಡೆಯಲಿದೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL 2023) ಒಟ್ಟು 22 ಪಂದ್ಯಗಳನ್ನು ಆಯೋಜಿಸಲಾಗಿದೆ. ಎಲ್ಲಾ ಪಂದ್ಯಗಳು ಮುಂಬೈನಲ್ಲಿ (Mumbai) ಮಾತ್ರ ನಡೆಯಲಿವೆ ಎಂದು BCCI ತಿಳಿಸಿದೆ. ಮುಂಬೈನ ಬ್ರಬೋರ್ನ್ ಮತ್ತು ಡೆವೊಯ್ ಪಾಟೀಲ್ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ.


ಫೆಬ್ರವರಿ 13 ರಂದು ಹರಾಜು:


WPL ಹರಾಜಿನ ದಿನಾಂಕವನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದೆ. ಫೆಬ್ರವರಿ 13 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಒಟ್ಟು 1,525 ಮಹಿಳಾ ಕ್ರಿಕೆಟಿಗರು ಡಬ್ಲ್ಯುಪಿಎಲ್‌ಗಾಗಿ ನೋಂದಾಯಿಸಿಕೊಂಡಿದ್ದರು. ಈ ಪೈಕಿ 409 ಕ್ರಿಕೆಟಿಗರನ್ನು ಮಾತ್ರ ಹರಾಜಿಗೆ ಆಯ್ಕೆ ಮಾಡಲಾಗಿದೆ. 409 ರಲ್ಲಿ 256 ಭಾರತೀಯ ಕ್ರಿಕೆಟಿಗರು ಮತ್ತು 163 ಆಟಗಾರರು ವಿದೇಶಿಯರು ಎಂದು ಬಿಸಿಸಿಐ ತಿಳಿಸಿದೆ. ಈ 409 ಕ್ರಿಕೆಟಿಗರಲ್ಲಿ 202 ಕ್ಯಾಪ್ಟಡ್​ ಮತ್ತು 199 ಅನ್‌ಕ್ಯಾಪ್ಡ್ ಆಟಗಾರರು ಇದ್ದಾರೆ. ಇದಲ್ಲದೇ 8 ಆಟಗಾರರು ಅಸೋಸಿಯೇಟ್ ನೇಷನ್​ವರಾಗಿದ್ದಾರೆ. ಈ 409 ಮಹಿಳಾ ಕ್ರಿಕೆಟಿಗರ ಪೈಕಿ ಕೇವಲ 90 ಮಂದಿಯ ಮಹಿಳಾ ಆಟಗಾರ್ತಿಯರು ಖರೀದಿಯಾಗಲಿದ್ದಾರೆ. ಹರಾಜಿನಲ್ಲಿ 5 ತಂಡಗಳಿಂದ ಒಟ್ಟು 90 ಸ್ಲಾಟ್‌ಗಳನ್ನು ಭರ್ತಿ ಮಾಡಲಾಗುತ್ತದೆ.ಮಹಿಳಾ ಐಪಿಎಲ್​ನ ಮೂಲ ಬೆಲೆ:


ಹರಾಜಿನಲ್ಲಿ ಅತಿ ದೊಡ್ಡ ಮೂಲ ಬೆಲೆ 50 ಲಕ್ಷವಾಗಿದೆ. ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಸೇರಿದಂತೆ ಒಟ್ಟು 24 ಕ್ರಿಕೆಟಿಗರು ಈ ಪಟ್ಟಿಯಲ್ಲಿದ್ದಾರೆ. ಇದಲ್ಲದೇ 13 ವಿದೇಶಿ ಆಟಗಾರರು ಕೂಡ 50 ಲಕ್ಷ ಮೂಲ ಬೆಲೆಯಲ್ಲಿದ್ದಾರೆ. ಇದಲ್ಲದೆ, 30 ಕ್ರಿಕೆಟಿಗರು ತಮ್ಮನ್ನು 40 ಲಕ್ಷ ಮೂಲ ಬೆಲೆಗೆ ಇರಿಸಿದ್ದಾರೆ. 409 ಆಟಗಾರರಲ್ಲಿ 246 ಭಾರತೀಯರು ಮತ್ತು 163 ವಿದೇಶಿ ಆಟಗಾರರು ಇದರಲ್ಲಿ 8 ಆಟಗಾರರು ಸಹವರ್ತಿ ರಾಷ್ಟ್ರಗಳಿಂದ ಹೆಸರನ್ನು ನೊಂದಾಯಿಸಿದ್ದಾರೆ. ಒಟ್ಟು ಕ್ಯಾಪ್ಡ್ ಆಟಗಾರರು 202, ಅನ್‌ಕ್ಯಾಪ್ಡ್ ಆಟಗಾರರು 199 ಮತ್ತು 8 ಅಸೋಸಿಯೇಟ್ ರಾಷ್ಟ್ರಗಳಿಂದ ಹೆಸರುಗಳು ಬಂದಿದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: T20 World Cup 2023: ಟಿ20 ವಿಶ್ವಕಪ್​ನಲ್ಲಿ ರಿಚಾ ಘೋಷ್ ಅಬ್ಬರ, ಕೊನೆಯ 2 ಓವರ್​ನಲ್ಲಿ ಸಿಕ್ಸರ್​ಗಳ ಸುರಿಮಳೆ


50 ಲಕ್ಷ ಮೂಲ ಬೆಲೆಯ ಆಟಗಾರ್ತಿಯರು:


ಸೋಫಿ ಡಿವೈನ್, ಸೋಫಿ ಎಕ್ಲೆಸ್ಟೋನ್, ಆಶ್ಲೀಗ್ ಗಾರ್ಡ್ನರ್, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ, ಕ್ಯಾಥರೀನ್ ಬ್ರಂಟ್, ಅಲಿಸ್ಸಾ ಹೀಲಿ, ಡೇನಿಯಲ್ ವ್ಯಾಟ್, ಜೆಸ್ ಜೊನಾಸೆನ್, ಮೆರ್ ಎಸ್ ಜೊನಾಸ್ಸೆನ್, ಬಿ. , ಮೇಘನಾ ಸಿಂಗ್, ಸಿನಾಲೊ ಜಫ್ತಾ, ರೇಣುಕಾ ಸಿಂಗ್, ಲೋರಿನ್ ಫಿರಿ, ಪೂಜಾ ವಸ್ತ್ರಾಕರ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಡಾರ್ಸಿ ಬ್ರೌನ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ದೆಯಾಂಡ್ರಾ ಡಾಟಿನ್.


ಎಷ್ಟು ಆಟಗಾರರನ್ನು ಖರೀದಿಸಬಹುದು?:


ಪ್ರತಿ ತಂಡಕ್ಕೂ 12 ಕೋಟಿ ರೂ. ಪರ್ಸ್​ ನಿಗದಿ ಮಾಡಲಾಗಿದೆ. ಈ ಮೊತ್ತದಲ್ಲಿ ಫ್ರಾಂಚೈಸಿಗಳು 15 ಪ್ಲೇಯರ್​ಗಳನ್ನು ಕಡ್ಡಾಯವಾಗಿ ಖರೀದಿಸಬಹುದಾಗಿದೆ. ಹೆಚ್ಚೆಂದರೆ 18 ಆಟಗಾರ್ತಿಯರನ್ನು ಮಾತ್ರ ಖರೀಸಲು ಅವಕಾಶವಿದೆ. ಪ್ರತಿ ತಂಡಗಳು ಐದು ವಿದೇಶಿ ಆಟಗಾರರನ್ನು ಹೊಂದಬಹದಾಗಿದೆ. ಇದರಲ್ಲಿ ಒಬ್ಬ ಅಸೋಸಿಯೇಟ್​ ರಾಷ್ಟ್ರದ ಆಟಗಾರ್ತಿಗೆ ಅವಕಾಶ ನೀಡಬಹುದಾಗಿದೆ.
WPL 2023 ಹರಾಜು ಸೆಟ್‌ಗಳು:


1ನೇ ಸೆಟ್: ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್, ಸೋಫಿ ಡಿವೈನ್, ಸೋಫಿ ಎಕ್ಲೆಸ್ಟೋನ್, ಆಶ್ಲೀಗ್ ಗಾರ್ಡ್ನರ್, ಹೇಲಿ ಮ್ಯಾಥ್ಯೂ, ಎಲ್ಲಿಸ್ ಪೆರ್ರಿ.
2ನೇ ಸೆಟ್: ಶಬ್ನಿಮ್ ಇಸ್ಮಾಯಿಲ್, ಅಮೆಲಿಯಾ ಕೆರ್, ತಹ್ಲಿಯಾ ಮೆಕ್‌ಗ್ರಾತ್, ಬೆತ್ ಮೂನಿ, ದೀಪ್ತಿ ಶರ್ಮಾ, ರೇಣುಕಾ ಸಿಂಗ್, ನ್ಯಾಟ್ ಸಿವರ್.
3ನೇ ಸೆಟ್: ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಸುಜಿ ಬೇಟ್ಸ್, ಟಮ್ಮಿ ಬ್ಯೂಮಾಂಟ್, ತಜ್ಮಿನ್ ಬ್ರಿಟ್ಸ್, ಸೋಫಿಯಾ ಡಂಕೆಲಿ, ಮೆಗ್ ಲ್ಯಾನಿಂಗ್, ಲಾರಾ ವೊಲ್ವಾರ್ಡ್.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು