Richest Sports Leagues: ಇವು ವಿಶ್ವದ 10 ಶ್ರೀಮಂತ ಕ್ರೀಡಾ ಲೀಗ್‌ಗಳು, ಟಾಪ್ ಲಿಸ್ಟ್​ನಲ್ಲಿದೆ IPL

ಕ್ರೀಡೆಗಳು ದೈಹಿಕ ಚಟುವಟಿಕೆಯಾಗಿದ್ದು ಅದು ವೃತ್ತಿಪರ ವ್ಯಾಪಾರವಾಗಿ ಬೆಳೆದು ಹಲವು ವರ್ಷಗಳೇ ಕಳೆದುಹೋಗಿದೆ. ಕ್ರೀಡಾ ಉದ್ಯಮವು 620 ಬಿಲಿಯನ್ ಡಾಲರ್‌ ಜಾಗತಿಕ ವಹಿವಾಟು ಹೊಂದಿದ್ದು, ಇಂದಿನ ಜಗತ್ತಿನಲ್ಲಿ ವೃತ್ತಿಪರ ಆಟಗಳು ದೊಡ್ಡ ವ್ಯಾಪಾರವಾಗಿ ತಲೆ ಎತ್ತಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕ್ರೀಡೆಗಳು (Sports) ದೈಹಿಕ ಚಟುವಟಿಕೆಯಾಗಿದ್ದು ಅದು ವೃತ್ತಿಪರ ವ್ಯಾಪಾರವಾಗಿ ಬೆಳೆದು ಹಲವು ವರ್ಷಗಳೇ ಕಳೆದುಹೋಗಿದೆ. ಕ್ರೀಡಾ ಉದ್ಯಮವು 620 ಬಿಲಿಯನ್ ಡಾಲರ್‌ ಜಾಗತಿಕ ವಹಿವಾಟು ಹೊಂದಿದ್ದು, ಇಂದಿನ ಜಗತ್ತಿನಲ್ಲಿ ವೃತ್ತಿಪರ ಆಟಗಳು ದೊಡ್ಡ ವ್ಯಾಪಾರವಾಗಿ ತಲೆ ಎತ್ತಿವೆ. ಅಲ್ಲಿ ಹಣವನ್ನು (Money) ವಿವಿಧ ಮೂಲಗಳಿಂದ ಉತ್ಪಾದಿಸಲಾಗುತ್ತಿದೆ. ಇದೇ ಹಾದಿಯಲ್ಲಿ ಇಂದಿನಿಂದ ಆರಂಭವಾಗುತ್ತಿರುವ ಐಪಿಎಲ್ (IPL)​ ಸಹ ಸಾಗುತ್ತಿದೆ. ಜನರು ತಮ್ಮ ನೆಚ್ಚಿನ ಆಟಗಾರ ಅಥವಾ ತಂಡದ ಪ್ರದರ್ಶನವನ್ನು ಲೈವ್ (Live) ಆಗಿ ವೀಕ್ಷಿಸಲು ತಮ್ಮ ಅಮೂಲ್ಯ ಸಮಯ ಮತ್ತು ಹಣವನ್ನು ಹೂಡಿಕೆ ಮಾಡಲು ಸಿದ್ಧರಾಗಿದ್ದಾರೆ. ವೃತ್ತಿಪರ ಕ್ರೀಡಾಪಟುಗಳು ಜನಪ್ರಿಯತೆ ಮತ್ತು ಅಪಾರ ಅಭಿಮಾನಿಗಳನ್ನು ಪಡೆಯುತ್ತಾರೆ. ಮಾತ್ರವಲ್ಲದೆ ಕೆಲವು ಕ್ರೀಡಾಪಟುಗಳು ಪ್ರಪಂಚದ ಶ್ರೀಮಂತ ವ್ಯಕ್ತಿಗಳು ಸಹ ಆಗಿದ್ದಾರೆ. ಹಾಗಾದರೆ ವಿಶ್ವದ ಟಾಪ್ 10 ಶ್ರೀಮಂತ ಕ್ರೀಡಾ ಲೀಗ್‌ಗಳು ಯಾವುವೆಂದು ನೋಡೋಣ.

ವಿಶ್ವದ ಟಾಪ್ 10 ಶ್ರೀಮಂತ ಕ್ರೀಡಾ ಲೀಗ್‌ಗಳು:

1) ನ್ಯಾಷನಲ್ ಫುಟ್ಬಾಲ್ ಲೀಗ್:

ನಂಬರ್ ಒನ್ ಸ್ಥಾನದಲ್ಲಿ ನಾವು ನ್ಯಾಷನಲ್ ಫುಟ್ಬಾಲ್ ಲೀಗ್ ಅನ್ನು ನೋಡಬಹುದು. ಎನ್ಎಫ್ಎಲ್ ಇದು ಜಗತ್ತಿನ ಶ್ರೀಮಂತ ಲೀಗ್ ಎಂದು ಪರಿಗಣಿಸಲ್ಪಟ್ಟಿದೆ. NFL 2017 ಮತ್ತು 2018 ರಲ್ಲಿ 16 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಆದಾಯ ಉತ್ಪಾದಿಸಿದೆ ಮತ್ತು ಅದರ ಆದಾಯವು ಮುಂದಿನ ವರ್ಷದಲ್ಲಿ 5 ಶತಕೋಟಿ ಡಾಲರ್‌ಗಳಷ್ಟು ಬೆಳೆಯುವ ನಿರೀಕ್ಷೆಯಿದೆ. ಇದರ ಆದಾಯವನ್ನು 32 ತಂಡಗಳ ನಡುವೆ ಸಮಾನವಾಗಿ ಹಂಚಲಾಗುತ್ತದೆ.

2) ಮೇಜರ್ ಲೀಗ್ ಬೇಸ್‌ಬಾಲ್:

ಬೇಸ್‌ಬಾಲ್ ಅಮೆರಿಕ ಮತ್ತು ಕೆನಡಾದಂತಹ ಪಾಶ್ಚಿಮಾತ್ಯ ದೇಶಗಳಲ್ಲಿ ಜನಪ್ರಿಯವಾಗಿರುವ ಕ್ರೀಡೆಯಾಗಿದೆ. ಆದರೂ, ಈ ಕ್ರೀಡೆಯು ಸ್ವತಃ ವಾರ್ಷಿಕ 10 ಬಿಲಿಯನ್ ಡಾಲರ್‌ ಒಟ್ಟು ಆದಾಯವನ್ನು ಉತ್ಪಾದಿಸುತ್ತದೆ. ಈ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಎಂಎಲ್‌ಬಿಯ ಒಟ್ಟು ಆದಾಯವು ಆರಂಭದಲ್ಲಿ 1.2 ಬಿಲಿಯನ್ ಡಾಲರ್‌ ಆಗಿತ್ತು. ಆದರೆ ನಂತರ, ಇದು 2018ರಲ್ಲಿ 10.3 ಶತಕೋಟಿ ಡಾಲರ್‌ ಮತ್ತು 2019 ರಲ್ಲಿ 10.7 ಶತಕೋಟಿ ಡಾಲರ್‌ಗೆ ಬೆಳೆದಿದೆ.

ಇದನ್ನೂ ಓದಿ: ಅಭಿಮಾನಿಗಳೇ ಬೇಸರಿಸಬೇಡಿ, ಈ ಆಟಗಾರರಿಗೆ ಇದೇ ಕೊನೆ IPL ಆಗಬಹುದೇ?

3) ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಲೀಗ್:

ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಲೀಗ್ ಆಗಿದ್ದು ಮತ್ತು ಜಗತ್ತಿನ ಶ್ರೀಮಂತ ಆಟಗಾರರನ್ನು ಒಳಗೊಂಡಿದೆ. ಲೆಬ್ರಾನ್ ಜೇಮ್ಸ್, ಆಂಥೋನಿ, ಬಟ್ಲರ್ ಮುಂತಾದ ಆಟಗಾರರು ಕ್ರೀಡಾ ಉದ್ಯಮದಲ್ಲಿ ಜಾಗತಿಕ ಐಕಾನ್‌ಗಳಾಗಿದ್ದಾರೆ. ಇದು ವಾರ್ಷಿಕ 8 ಶತಕೋಟಿ ಡಾಲರ್‌ ವಾರ್ಷಿಕ ಆದಾಯವನ್ನು ಉತ್ಪಾದಿಸುತ್ತದೆ. ಇದು ರಾಷ್ಟ್ರೀಯ ಟಿವಿ ಪ್ರಸಾರಕರೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ, ಅಂತಾರಾಷ್ಟ್ರೀಯ ಮಾಧ್ಯಮ ಆದಾಯದಲ್ಲಿ 500 ಮಿಲಿಯನ್ ಡಾಲರ್‌ ಮೊತ್ತವನ್ನು ಉತ್ಪಾದಿಸುತ್ತದೆ. NBA ಫ್ರ್ಯಾಂಚೈಸ್ ಸ್ವತಃ 1 ಬಿಲಿಯನ್ ಡಾಲರ್‌ ಮೌಲ್ಯದ್ದಾಗಿದೆ.

4) ಇಂಡಿಯನ್ ಪ್ರೀಮಿಯರ್ ಲೀಗ್:

ಐಪಿಎಲ್ ಭಾರತದಲ್ಲಿ ಪ್ರತಿ ವರ್ಷ ನಡೆಯುವ ಪುರುಷರ ವೃತ್ತಿಪರ ಸೀಮಿತ ಸರಣಿ ಕ್ರಿಕೆಟ್ ಲೀಗ್ ಆಗಿದೆ. ಲೀಗ್‌ನಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದವು. ಆದರೆ ಈ ಬಾರಿ ಹೆಚ್ಚುವರಿ ಎರಡು ತಂಡಗಳು ಸೇರ್ಪಡೆಯಾಗಿವೆ. ಇದು ಪ್ರತಿ ವರ್ಷ 7 ಶತಕೋಟಿ ಡಾಲರ್‌ ಒಟ್ಟು ವಾರ್ಷಿಕ ಆದಾಯವನ್ನು ಉತ್ಪಾದಿಸುತ್ತದೆ. ಐಪಿಎಲ್‌ಗೆ ಅಭಿಮಾನಿಗಳ ಸಂಖ್ಯೆ ದೊಡ್ಡದಾಗಿದೆ ಮತ್ತು ವೀಕ್ಷಕರ ಸಂಖ್ಯೆಯೂ ಸಾಕಷ್ಟು ದೊಡ್ಡದಾಗಿದೆ.

5) ಇಂಗ್ಲೀಷ್‌ ಪ್ರೀಮಿಯರ್ ಲೀಗ್:

ಇಂಗ್ಲೀಷ್‌ ಪ್ರೀಮಿಯರ್ ಲೀಗ್ ಇಡೀ ಜಗತ್ತಿನಲ್ಲೇ ಹೆಚ್ಚು ವೀಕ್ಷಿಸಲ್ಪಟ್ಟ ಕ್ರೀಡೆಗಳಲ್ಲಿ ಒಂದಾಗಿದೆ. ಇಂಗ್ಲೀಷ್‌ ಪ್ರೀಮಿಯರ್ ಲೀಗ್‌ನಲ್ಲಿರುವ ಪ್ರತಿಯೊಂದು ಕ್ಲಬ್ ವಾಣಿಜ್ಯ ಮತ್ತು ಪ್ರಾಯೋಜಕತ್ವದ ವ್ಯವಹಾರಗಳ ಮೂಲಕ ತನ್ನ ಆದಾಯವನ್ನು ಗಳಿಸುತ್ತದೆ. ಇದು ಪ್ರತಿ ವರ್ಷ $5.3 ಬಿಲಿಯನ್ ಆದಾಯವನ್ನು ಗಳಿಸುತ್ತದೆ. 2016/17ರ ಸೀಸನ್‌ನಲ್ಲಿ ಈ ಪ್ರೀಮಿಯರ್ ಲೀಗ್ €5.3 ಬಿಲಿಯನ್ ಗಳಿಸಿದೆ. ಈ ಹಣವನ್ನು EPL ನ 20 ಕ್ಲಬ್‌ಗಳ ನಡುವೆ ಸಮಾನವಾಗಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Women’s IPL: ನೋಡೋಕೆ ರೆಡಿಯಾಗಿರಿ, ಶುರುವಾಗಲಿದೆ ಮಹಿಳಾ ಐಪಿಎಲ್‌!

6) ನ್ಯಾಷನಲ್ ಹಾಕಿ ಲೀಗ್:

ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯಾಗಿದೆ. ಇದು ಭಾರತದ ಅತ್ಯಂತ ಪ್ರತಿಷ್ಠಿತ ಮತ್ತು ಹಳೆಯ ಕ್ರೀಡಾಕೂಟವಾಗಿದೆ. ನ್ಯಾಷನಲ್ ಹಾಕಿ ಲೀಗ್ ಪ್ರತಿ ವರ್ಷ 4.8 ಶತಕೋಟಿ ಡಾಲರ್‌ ಮೊತ್ತವನ್ನು ಉತ್ಪಾದಿಸುತ್ತದೆ. 2018/19 ರ ಸೀಸನ್‌ನಲ್ಲಿ, ಇದರ ಆದಾಯ 5.08 ಡಾಲರ್‌ ಶತಕೋಟಿ ತಲುಪಿತ್ತು.

7) ಲಾ ಲಿಗಾ ಸ್ಯಾಂಟ್ಯಾಂಡರ್:

ಇದು ಸ್ಪೇನ್ ಮೂಲದ ಪುರುಷರ ವೃತ್ತಿಪರ ಫುಟ್ಬಾಲ್ ಲೀಗ್ ಆಗಿದೆ. ಇದು ಸ್ಪೇನ್‌ನ ಅಗ್ರ ಕ್ರಮಾಂಕದ ಫುಟ್‌ಬಾಲ್ ಲೀಗ್ ಆಗಿದೆ. ಲಾ ಲಿಗಾ ತನ್ನ ಆದಾಯವನ್ನು ವಾಣಿಜ್ಯ ವ್ಯವಹಾರಗಳು, ವರ್ಗಾವಣೆ ಮಾರಾಟಗಳು, ಪಂದ್ಯದ ಟಿಕೆಟ್ ಮಾರಾಟಗಳು ಮತ್ತು ಮುಖ್ಯವಾಗಿ ಪ್ರಸಾರ ವ್ಯವಹಾರಗಳಿಂದ ಪಡೆಯುತ್ತದೆ. ಇದು ವಾರ್ಷಿಕ $4.5 ಬಿಲಿಯನ್ ಆದಾಯವನ್ನು ಗಳಿಸಿದೆ.

8) ಜರ್ಮನಿಯ ಬುಂಡೆಸ್ಲಿಗಾ:

ಇದು ಜರ್ಮನಿ ಮೂಲದ ವೃತ್ತಿಪರ ಫುಟ್ಬಾಲ್ ಲೀಗ್. ಬುಂಡೆಸ್ಲಿಗಾ 18 ತಂಡಗಳನ್ನು ಒಳಗೊಂಡಿದೆ. ಇದು ವಾರ್ಷಿಕ 4.3 ಬಿಲಿಯನ್ ಡಾಲರ್‌ ಆದಾಯವನ್ನು ಹೊಂದಿದೆ.

9) ಇಟಲಿಯ ಸೀರಿ ಎ:

ಇದು ಇಟಲಿಯ ಟಾಪ್-ಫ್ಲೈಟ್ ಲೀಗ್ ಆಗಿದ್ದು ಇದು ಯುರೋಪ್‌ನಲ್ಲಿ ಮತ್ತು ಸಾಮಾನ್ಯವಾಗಿ ಫುಟ್‌ಬಾಲ್ ಅಭಿಮಾನಿಗಳಿಗೆ ಇಷ್ಟವಾದ ಕ್ರೀಡೆ. ಇದು ಪ್ರತಿ ವರ್ಷ $2.3 ಬಿಲಿಯನ್ ಆದಾಯವನ್ನು ಗಳಿಸುತ್ತದೆ. 2004-05 ರಿಂದ ಉನ್ನತ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದು, ಒಟ್ಟು 20 ಕ್ಲಬ್‌ಗಳಿವೆ. ರೊಮೆಲು ಲುಕಾಕು, ಟಮ್ಮಿ ಅಬ್ರಹಾಂ ಅವರಂತಹ ಉನ್ನತ ಮಟ್ಟದ ಆಟಗಾರರು ಲೀಗ್‌ನಲ್ಲಿದ್ದಾರೆ

10) UEFA ಚಾಂಪಿಯನ್ಸ್ ಲೀಗ್:

ಈ ಒಕ್ಕೂಟವು 1954ರಲ್ಲಿ ಸ್ಥಾಪನೆಯಾದ ವೃತ್ತಿಪರ ಫುಟ್ಬಾಲ್ ಅಸೋಸಿಯೇಷನ್ ಆಗಿದೆ. ಪ್ರತಿ ಕ್ರೀಡಾ ಆವೃತ್ತಿಯಲ್ಲಿ 32 ತಂಡಗಳು ಭಾಗವಹಿಸುತ್ತವೆ. UEFA ಪ್ರತಿ ವರ್ಷ ಒಟ್ಟು 2 ಬಿಲಿಯನ್ ಡಾಲರ್‌ ಉತ್ಪಾದಿಸುತ್ತದೆ.
Published by:shrikrishna bhat
First published: