FIFA: ಫಿಫಾ ಅಭಿಮಾನಿಗಳೇ ಹುಷಾರ್! ಇಲ್ಲಿ ನೀವು "ಅದನ್ನು" ಮಾಡುತ್ತಾ ಸಿಕ್ಕಿಬಿದ್ದರೆ 7 ವರ್ಷ ಜೈಲುವಾಸ ಗ್ಯಾರೆಂಟಿ

ಈ ಬಾರಿ ಫಿಫಾ 2022 ಸರಣಿಯು ಕತಾರ್ ದೇಶದಲ್ಲಿ ನಡೆಯಲಿದೆ. ಹಾಗಾಗಿ ಕತಾರ್ ದೇಶವು ಈ ವಿಶ್ವಕಪ್ ಅನ್ನು ಹೋಸ್ಟ್ ಮಾಡಲು ಎಲ್ಲ ರೀತಿಯಿಂದ ಸಜ್ಜಾಗುತ್ತಿದೆ. ಆದರೆ, ಈ ಮಧ್ಯೆ ಈ ದೇಶದಲ್ಲಿ ಅನೇಕ ಆರೋಪಗಳು ಕೇಳಿಬರುತ್ತಿದೆ. ದೇಶದಲ್ಲಿರುವ ಕಟ್ಟಡ ನಿರ್ಮಾಣ ಕೆಲಸಗಾರರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿರುವುದರ ಬಗ್ಗೆ ಈಗಾಗಲೇ ಸಾಕಷ್ಟು ಆಪಾದನೆಗಳು ಕೇಳಿ ಬಂದಿವೆ. ಇದನ್ನೆಲ್ಲ ಗಮನಿಸಿ ದೇಶದಲ್ಲೀಗ ಕಠಿಣ ಕಾನೂನುಗಳಿವೆ ಎನ್ನಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕ್ರಿಕೆಟ್ ನಂತೆಯೇ  ಫುಟ್ಬಾಲ್ (Foot Ball) ಕ್ರೀಡೆಗೂ ವಿಶ್ವಕಪ್ (World Cup) ಎಂಬುದು ಇದ್ದು ಜಗತ್ತಿನಾದ್ಯಂತ ಕ್ರಿಕೆಟ್ ಗಿಂತಲೂ ಇದು ಹೆಚ್ಚು ಜನಪ್ರೀಯವಾಗಿದೆ ಎಂದರೆ ತಪ್ಪಿಲ್ಲ. ಅಪ್ಪಟ ಫುಟ್ಬಾಲ್ ಅಭಿಮಾನಿಗಳು ಫಿಫಾ ವಿಶ್ವಕಪ್ ಎಂದು ಕರೆಯಲ್ಪಡುವ ಈ ಫುಟ್ಬಾಲ್ ಪಂದ್ಯಾವಳಿಗಳನ್ನು (Match) ನೋಡಲು ತುದಿಗಾಲ ಮೇಲೆ ನಿಂತಿರುತ್ತಾರೆ. ಈ ಬಾರಿ ಫಿಫಾ 2022 ಸರಣಿಯು ಕತಾರ್ (Qatar) ದೇಶದಲ್ಲಿ ನಡೆಯಲಿದೆ. ಹಾಗಾಗಿ ಕತಾರ್ ದೇಶವು ಈ ವಿಶ್ವಕಪ್ ಅನ್ನು ಹೋಸ್ಟ್ ಮಾಡಲು ಎಲ್ಲ ರೀತಿಯಿಂದ ಸಜ್ಜಾಗುತ್ತಿದೆ. ಆದರೆ, ಈ ಮಧ್ಯೆ ಈ ದೇಶದಲ್ಲಿ ಅನೇಕ ಆರೋಪಗಳು ಕೇಳಿಬರುತ್ತಿದೆ. ದೇಶದಲ್ಲಿರುವ ಕಟ್ಟಡ ನಿರ್ಮಾಣ ಕೆಲಸಗಾರರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿರುವುದರ ಬಗ್ಗೆ ಈಗಾಗಲೇ ಸಾಕಷ್ಟು ಆಪಾದನೆಗಳು ಕೇಳಿ ಬಂದಿವೆ. ಇದನ್ನೆಲ್ಲ ಗಮನಿಸಿ ದೇಶದಲ್ಲೀಗ ಕಠಿಣ ಕಾನೂನುಗಳಿವೆ (Law) ಎನ್ನಲಾಗಿದೆ.

ಕಠಿಣ ನಿಯಮಗಳ ಕುರಿತು ತಿಳಿದುಕೊಳ್ಳುವುದು ಉತ್ತಮ
ಇನ್ನು ಕತಾರ್ ದೇಶದಲ್ಲಿ ಹೋಮೋಫೋಬಿಕ್ ಅಂದರೆ ಸಲಿಂಗಕಾಮಕ್ಕೆ ಸಂಬಂಧಿಸಿದಂತೆ ಹಲವು ಕಠಿಣ ನಿಯಮಗಳಿದ್ದು ಅಲ್ಲಿನ ವಾಸಿಗಳು ಅದಕ್ಕೆ ಹೊಂದಿಕೊಂಡಿದ್ದಾರೆ. ಆದರೆ, ಈ ಬಾರಿ ನಡೆಯಲಿರುವ ಫಿಫಾ ಕ್ರೀಡೆಗಳನ್ನು ವೀಕ್ಷಿಸಲು ವಿದೇಶಗಳಿಂದ ಅನೇಕ ಅಭಿಮಾನಿಗಳು ಕತಾರ್ ದೇಶಕ್ಕೆ ಬರುವ ನಿರೀಖ್ಷೆಯಿದ್ದು ಅವರೂ ಸಹ ಈ ದೇಶದಲ್ಲಿ ಜಾರಿಯಲ್ಲಿರುವ ಕಠಿಣ ನಿಯಮಗಳ ಕುರಿತು ಮೊದಲೇ ತಿಳಿದುಕೊಳ್ಳುವುದು ಉತ್ತಮ.

ಒನ್ ನೈಟ್ ಸ್ಟ್ಯಾಂಡ್ ನಲ್ಲಿ ಸಿಲುಕಿ ಹಾಕಿಕೊಂಡರೆ ಏಳು ವರ್ಷ ಸೆರೆವಾಸ
ವಿದೇಶದಿಂದ ಬರುವ ಫುಟ್ಬಾಲ್ ಅಭಿಮಾನಿಗಳು ಒಂದು ವೇಳೆ ಈ ದೇಶದಲ್ಲಿ ಒನ್ ನೈಟ್ ಸ್ಟ್ಯಾಂಡ್ ನಂತಹ ಪ್ರಸಂಗದಲ್ಲಿ ಸಿಲುಕಿ ಹಾಕಿಕೊಂಡರೆ ಗರಿಷ್ಠ ಏಳು ವರ್ಷಗಳ ಸೆರೆವಾಸ ಅನುಭವಿಸುವ ಎಲ್ಲ ಸಾಧ್ಯತೆಯಿದೆ. ಕತಾರ್ ದೇಶದಲ್ಲಿ ಸೆಕ್ಸ್ ಅಥವಾ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಅತಿ ಕಠಿಣ ನಿಯಮಗಳು ಜಾರಿಯಲ್ಲಿದ್ದು ಮದುವೆಯ ಹೊರಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ನಿಷೇಧಿಸಲಾಗಿದೆ. ಕತಾರಿ ನಾಗರಿಕರು ಈ ಎಲ್ಲ ನಿಯಮಗಳ ಬಗ್ಗೆ ಅರಿವು ಹೊಂದಿದ್ದಾರೆ, ಆದರೆ, ಇಲ್ಲಿಗೆ ಭೇಟಿ ನೀಡುವ ವಿದೇಶಿಗರು ಸಹ ಈ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳುವುದು ಅವರ ಒಳಿತಿಗಾಗಿಯೇ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು.

ಇದನ್ನೂ ಓದಿ:  Arjun Tendulkar: ಪ್ರೀತಿಯ ತಂದೆಗೆ ಬ್ರೇಕ್ ಫಾಸ್ಟ್ ಕುಕ್ ಮಾಡಿದ ಮಗ ಅರ್ಜುನ್ ತೆಂಡೂಲ್ಕರ್

ಕತಾರ್ ಪೊಲೀಸ್ ವಿಭಾಗದ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ದೇಶವು ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ದೇಶದಲ್ಲಿ ಕಠಿಣ ಕಾನೂನುನನ್ನು ಹೊಂದಿದ್ದು ಈ ಎಲ್ಲ ಕಾನೂನುಗಳು ಫಿಫಾ ಫುಟ್ಬಾಲ್ ಕ್ರೀಡೆಗಳಲ್ಲೂ ಜಾರಿಯಲ್ಲಿರುತ್ತದೆ. ಯಾವ ವ್ಯಕ್ತಿಯೇ ಆಗಲಿ ಕಾನೂನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ಆ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ. ಈ ರೀತಿಯ ಕಾನೂನು ಉಲ್ಲಂಘನೆಯಾದಲ್ಲಿ ಆಯಾ ಪ್ರಕರಣದ ತೀವ್ರತೆಗೆ ಸಂಬಂಧಿಸಿದಂತೆ ಒಂದರಿಂದ ಏಳು ವರ್ಷಗಳ ಕಾಲ ಕಾರಾಗೃಹ ವಾಸ ಅನುಭವಿಸಬಹುದೆನ್ನಲಾಗಿದೆ.

ಈ ಬಾರಿಯ ಫಿಫಾದಲ್ಲಿ 'ಸೆಕ್ಸ್' ಚಟುವಟಿಕೆ ಬ್ಯಾನ್
ಪೊಲೀಸ್ ಇಲಾಖೆಯ ಪ್ರಕಾರ, ದೇಶದಲ್ಲಿ ಖಂಡಿತವಾಗಿಯೂ ನೀವು ಗಂಡ-ಹೆಂಡತಿಯಾಗಿದ್ದರೆ ಮಾತ್ರ ಸಂಭೋಗಕ್ಕೆ ಅವಕಾಶವಿದ್ದು ಮಿಕ್ಕಂತೆ ಪರ ಪುರುಷ ಅಥವಾ ಪರಮಹಿಳೆಯೊಂದಿಗೆ ಸೆಕ್ಸ್ ಅಥವಾ 'ಒಂದು ರಾತ್ರಿ' ಅನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಪಾರ್ಟಿಗಳಿಗೆ ಇಲ್ಲಿ ಅವಕಾಶ ನೀಡಲಾಗಿಲ್ಲ. ಹಾಗಾಗಿ ಕ್ರೀಡೆ ವೀಕ್ಷಿಸ ಬಯಸಿ ಇಲ್ಲಿಗೆ ಬರುವ ಫುಟ್ಬಾಲ್ ಅಭಿಮಾನಿಗಳು ಕೇವಲ ಕ್ರೀಡಾ ವೀಕ್ಷಣೆಯ ಆನಂದವನ್ನು ಮಾತ್ರ ಪಡೆಯಲು ಬಂದಿರುವ ಮನಸ್ಥಿತಿಯನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ. ಡೈಲಿ ಸ್ಟಾರ್ ಹೇಳಿರುವಂತೆ ಈ ಬಾರಿಯ ಫಿಫಾದಲ್ಲಿ 'ಸೆಕ್ಸ್' ಚಟುವಟಿಕೆಯನ್ನು ಬ್ಯಾನ್ ಮಾಡಿರುವುದು ಇತಿಹಾಸದಲ್ಲಿ ಇದೇ ಮೊದಲ ಬಾರಿ ಎನ್ನಲಾಗಿದೆ.

ಇದನ್ನೂ ಓದಿ:  Happy Birthday Lionel Messi: 2 ಪಾಸ್​ಪೋರ್ಟ್ ಹೊಂದಿದ್ದಾರಂತೆ ಈ ಖ್ಯಾತ ಫುಟ್ಬಾಲ್ ಆಟಗಾರ

ಸಲಿಂಗಕಾಮವನ್ನೂ ಸಹ ಬ್ಯಾನ್ ಮಾಡಿದ ಕತಾರ್
ಮದುವೆಯ ಹೊರಗೆ ಲೈಂಗಿಕ ಕ್ರಿಯೆ ನಡೆಸುವಿಕೆಯನ್ನು ನಿಷೇಧ ಮಾಡಿರುವ ಕತಾರ್ ದೇಶವು ಸಲಿಂಗಕಾಮವನ್ನೂ ಸಹ ಬ್ಯಾನ್ ಮಾಡಿದೆ. ಅಲ್ಲಿನ ಕಾನೂನಿನ ಪ್ರಕಾರ, ಪೀನಲ್ ಕೋಡ್ 2004 ರ ಅಡಿಯಲ್ಲಿ ಸಲಿಂಗ ಕಾಮವು ಶಿಕ್ಷಾರ್ಹ ಅಪರಾಧವಾಗಿದ್ದು ಇಂತಹ ಪ್ರಕರಣಗಳು ಕಂಡುಬಂದಲ್ಲಿ ಒಂದು ವರ್ಷದವರೆಗೆ ಸೆರೆವಾಸದ ಶಿಕ್ಷೆ ವಿಧಿಸಲಾಗುತ್ತದೆ. ಈ ಕಾನೂನನ್ನು ಕತಾರ್ ಜಾರಿಗೆ ತಂದಾಗ ಪಾಶ್ಚಿಮಾತ್ಯ ದೇಶಗಳಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಆದರೂ ಈ ಕಾನೂನು ದೇಶದಲ್ಲಿ ಜಾರಿಯಲ್ಲಿದೆ.
Published by:Ashwini Prabhu
First published: