ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಷನ್ ನಡೆಸುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ (World Badminton Championship) ಸರಣಿಯು ಇಂದು (ಆಗಸ್ಟ್ 22 ರಂದು) ಜಪಾನಿನ ಟೋಕಿಯೊದಲ್ಲಿ ಪ್ರಾರಂಭವಾಗಿದೆ. ಬ್ಯಾಡ್ಮಿಂಟನ್ ಕ್ರೀಡೆಗೆ ಸಂಬಂಧಿಸಿದಂತೆ ಭಾರತವೂ (India) ಈ ಸರಣಿಯಲ್ಲಿ ಪಾಲ್ಗೊಂಡಿದೆ. ಆಗಸ್ಟ್ 22 ಹಾಗೂ 23ರಂದು ನಡೆಯಲಿರುವ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳ ಮೂಲಕ ಈ ಬಾರಿಯ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಚಾಲನೆ ಪಡೆದುಕೊಳ್ಳಲಿದ್ದು, ನಂತರದ ದಿನಗಳಲ್ಲಿ ಎರಡನೇ ಹಾಗೂ ಮೂರನೇ ಸುತ್ತಿನ ಪಂದ್ಯಗಳು, ಕ್ವಾರ್ಟರ್ ಫೈನಲ್ ಸುತ್ತಿನ ಪಂದ್ಯಗಳು ಹಾಗೂ ಸೆಮಿ ಫೈನಲ್ (Semi Final) ಪಂದ್ಯಗಳು ನಡೆಯಲಿವೆ. ಇನ್ನು ಆಗಸ್ಟ್ 28ರ ಭಾನುವಾರದಂದು ನಡೆಯಲಿರುವ ಫೈನಲ್ ಪಂದ್ಯದ (Final match) ಮೂಲಕ ಟೂರ್ನಿಗೆ ತೆರೆ ಬೀಳಲಿದೆ.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ 2022: ಭಾರತದ ಸ್ಕ್ವಾಡ್ ಹೀಗಿದೆ:
ಪುರುಷರ ಸಿಂಗಲ್ಸ್ ವಿಭಾಗದಲ್ಲಿ
- ಲಕ್ಷ್ಯ ಸೇನ್
- ಕಿಡಾಂಬಿ ಶ್ರೀಕಾಂತ್
- ಬಿ. ಸಾಯಿ ಪ್ರಣೀತ್
- ಹೆಚ್.ಎಸ್ ಪ್ರನಾಯ್
ಸ್ತ್ರೀಯರ ಸಿಂಗಲ್ಸ್ ವಿಭಾಗದಲ್ಲಿ
- ಸೈನಾ ನೆಹವಾಲ್
- ಮಾಳವಿಕಾ ಬನ್ಸೋದ್
ಪುರುಷರ ಡಬಲ್ಸ್ ವಿಭಾಗದಲ್ಲಿ
- ಚಿರಾಗ್ ಶೆಟ್ಟಿ/ ಸಾತ್ವಿಕಸಾಯಿರಾಜ್ ರಂಕಿರೆಡ್ಡಿ
- ಮನು ಅತ್ರಿ/ ಬಿ ಸುಮೀತ್ ರೆಡ್ಡಿ
- ಕೃಷ್ಣ ಪ್ರಸಾದ್ ಗರಗ/ ವಿಷ್ಣುವರ್ಧನ್ ಗೌಡ ಪಂಜುಲಾ
- ಎಂಆರ್ ಅರ್ಜುನ್/ ಧ್ರುವ್ ಕಪಿಲಾ
ಸ್ತ್ರೀಯರ ಡಬಲ್ಸ್ ವಿಭಾಗದಲ್ಲಿ
- ತ್ರೀಶಾ ಜಾಲಿ/ಗಾಯತ್ರಿ ಗೋಪಿಚಂದ್
- ಅಶ್ವಿನಿ ಪೊನ್ನಪ್ಪ/ಎನ್ ಸಿಕ್ಕಿ ರೆಡ್ಡಿ
- ಅಶ್ವಿನಿ ಭಟ್/ಶಿಖಾ ಗೌತಮ್
- ಪೂಜಾ ದಂಡು/ಸಂಜನಾ ಸಂತೋಶ್
ಮಿಕ್ಸ್ ಡಬಲ್ಸ್ ವಿಭಾಗದಲ್ಲಿ
- ಇಶಾನ್ ಭಟ್ನಾಗರ್/ತನಿಶಾ ಕ್ರಾಸ್ಟೊ
- ವೆಂಕಟ್ ಗೌರವ್ ಪ್ರಸಾದ್/ಜೂಹಿ ದೇವಾಂಗನ್
ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಷನ್ ಚಾಂಪಿಯನ್ಶಿಪ್ಸ್ 2022 ಭಾರತದ ವೇಳಾಪಟ್ಟಿ ಒಂದನೇ ದಿನ (ಆಗಸ್ಟ್ 22)
ಮುಖ್ಯ ಸ್ಥಳ 1 : ಬೆಳಗ್ಗೆ 9 ಗಂಟೆಯಿಂದ ಪ್ರಾರಂಭ
- ಅಶ್ವಿನಿ ಪೊನ್ನಪ್ಪ / ಸಿಕ್ಕಿ ರೆಡ್ಡಿ ಜೊತೆ ಅಮಿನಾಥ್ ನಬೀಹಾ ಅಬ್ದುಲ್ ರಜಾಕ್/ಫಾಹಿಮಾತ್ ನಬಾಹಾ ಅಬ್ದುಲ್ ರಜಾಕ್
- ಸಾಯಿ ಪ್ರಣೀತ್ ಜೊತೆ ಚೌ ಟಿಯಾನ್-ಚೆನ್
ಬೆಳಗ್ಗೆ 11 ಗಂಟೆಯ ಮುಂಚೆ ಇಲ್ಲದಂತೆ
- ಮನು ಅತ್ರಿ / ಬಿ ಸುಮೀತ್ ರೆಡ್ಡಿ ಜೊತೆ ಹಿರೋಕಿ ಒಕಾಮುರಾ / ಮಾಸಾಯುಕಿ ಒನೊದೇರಾ
- ಲಕ್ಷ್ಯ ಸೇನ್ ಜೊತೆ ಹಾನ್ಸ್ ಕ್ರಿಸ್ಟಿಯನ್ ಸೋಲ್ಬರ್ಗ್ ವಿಟ್ಟಿಂಘಸ್
2 ಗಂಟೆಯ ಮುಂಚೆ ಇಲ್ಲದಂತೆ
- ಎಂಆರ್ ಅರ್ಜುನ್ / ಧ್ರುವ್ ಕಪಿಲಾ ಜೊತೆ ಸುಪಕ್ ಜೊಮ್ಕೋಹ್ / ಕಿಟ್ಟಿನುಪಾಂಗ್ ಕೆದ್ರೆನ್
ಇದನ್ನೂ ಓದಿ: Virat Kohli-Anushka Sharma: ಮುಂಬೈ ಬೀದಿಗಳಲ್ಲಿ ಸುತ್ತಾಡಿದ ವಿರಾಟ್-ಅನುಷ್ಕಾ, ಸ್ಕೂಟರ್ ಸವಾರಿ ಮಾಡಿದ ಸ್ಟಾರ್ ಜೋಡಿ
ಮುಖ್ಯ ಸ್ಥಳ 2:
2 ಗಂಟೆಯ ಮುಂಚೆ ಇಲ್ಲದಂತೆ
- ಹೆಚ್ ಎಸ್ ಪ್ರನಾಯ್ ಜೊತೆ ಲುಕಾ ವ್ರ್ಯಾಬರ್
- ಕಿಡಾಂಬಿ ಶ್ರೀಕಾಂತ್ ಜೊತೆ ಹಾತ್ ಗ್ಯೂಯೆನ್
ಮುಖ್ಯ ಸ್ಥಳ 3:
11 ಗಂಟೆಯ ಮುಂಚೆ ಇಲ್ಲದಂತೆ
- ಮಾಳವಿಕಾ ಬನ್ಸೋದ್ ಜೊತೆ ಲೈನ್ ಕ್ರಿಸ್ಟೋಫರ್ಸನ್
2 ಗಂಟೆಯ ಮುಂಚೆ ಇಲ್ಲದಂತೆ
- ಪೂಜಾ ದಂಡು / ಸಂಜನಾ ಸಂತೋಶ್ ಜೊತೆ ಐನೆಸ್ ಲುಸಿಯಾ ಕಾಸ್ಟಿಲ್ಲೊ ಸಲಜಾರ್ / ಪೌಲಾ ಲಾ ಟೊರೆ ರಿಗಲ್
ಮುಖ್ಯ ಸ್ಥಳ 4:
ಬೆಳಗ್ಗೆ 9: 15 ಮುಂಚೆ ಇಲ್ಲದಂತೆ
- ಇಶಾನ್ ಭಟ್ನಾಗರ್ / ತನಿಶಾ ಕ್ರಾಸ್ಟೊ ಜೊತೆ ಪ್ಯಾಟ್ರಿಕ್ ಶಿಯೆಲ್ / ಫ್ರಾಂಜಿಸ್ಕಾ ವೊಲ್ಕ್ ಮನ್
ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್ಶಿಪ್ ನೇರ ಪ್ರಸಾರ : ಎಲ್ಲಿ ವೀಕ್ಷಿಸಬಹುದು
ಭಾರತದಲ್ಲಿ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್ಶಿಪ್ 2022 ನೇರ ಪ್ರಸಾರ : ಇನ್ನು ಭಾರತಕ್ಕೆ ಸಂಬಂಧಿಸಿದಂತೆ ಟೋಕಿಯೋದಲ್ಲಿ ಸದ್ಯ ನಡೆಯುತ್ತಿರುವ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್ಶಿಪ್ 2022 ನೇರ ಪ್ರಸಾರವು ಸ್ಪೋರ್ಟ್ಸ್ 18, ಡಿಡಿ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದ್ದು ಇದರ ಲೈವ್ ಸ್ಟ್ರೀಮಿಂಗ್ ವೂಟ್, ಜಿಯೋ ಟಿವಿ ಮತ್ತು http://bwf.tv. ಗಳಲ್ಲಿ ಲಭ್ಯವಾಗಲಿದೆ.
ಇದನ್ನೂ ಓದಿ: Cricket News: ಅತಿ ಹೆಚ್ಚು ಪ್ಲೇಯರ್ ಆಫ್ ದಿ ಸೀರೀಸ್ ಗೆದ್ದವರಾರು? ಕ್ರಿಕೆಟ್ ದೇವರ ದಾಖಲೆ ಮುರಿಯೋರು ಯಾರೂ ಇಲ್ವಂತೆ
ಭಾರತದ ಮಟ್ಟಿಗೆ ಹೇಳುವುದಾದರೆ ಭಾರತದ ಪ್ರಸಿದ್ಧ ಬ್ಯಾಡ್ಮಿಂಟನ್ ಕ್ರೀಡಾ ಪಟು ಸಾನಿಯಾ ನೆಹವಾಲ್ ಟೋಕಿಯೊದಲ್ಲಿ ನಡೆಯುತ್ತಿರುವ ಈ ಪಂದ್ಯಗಳ ಮೂಲಕ ಮತ್ತೆ ತಮ್ಮ ಅದ್ಭುತ ಫಾರ್ಮಿಗೆ ಮರಳಲಿದ್ದಾರೆ ಎಂಬ ವಿಶ್ವಾಸ ಭಾರತದ ಕ್ರೀಡಾಭಿಮಾನಿಗಳಲ್ಲಿ ಮೂಡಿದೆ. ಆದರೆ ಇನ್ನೊಂದೆಡೆ ಮತ್ತೊಬ್ಬ ಪ್ರಸಿದ್ಧ ಬ್ಯಾಡ್ಮಿಂಟನ್ ಕ್ರೀಡಪಟು ಪಿವಿ ಸಿಂಧು ಈ ಬಾರಿ ಸಿಂಗಲ್ಸ್ ನಲ್ಲಿ ಕಾಣಿಸಿಕೊಳ್ಳದೆ ಇರುವುದು ಸ್ವಲ್ಪ ಮಟ್ಟಿಗೆ ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ ಎಂತಲೂ ಹೇಳಬಹುದು. ಕೆಲವು ಕ್ರೀಡೆಗೆ ಸಂಬಂಧಿಸಿದ ಒತ್ತಡಗಳ ಕಾರಣದಿಂದಾಗಿ ಪಿವಿ ಸಿಂಧು ವಿಶ್ರಾಂತಿ ಪಡೆಯುತ್ತಿದ್ದು ಈ ಸರಣಿಯಲ್ಲಿ ಭಾಗವಹಿಸಿಲ್ಲ.