World Athletics Day 2022: ಈ ದಿನದ ಇತಿಹಾಸ ಹಾಗೂ ಮಹತ್ವ ಏನು? ಇಲ್ಲಿದೆ ಡಿಟೈಲ್ಸ್

ಯುವಜನರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸಲೆಂದು ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ ವಿಶ್ವ ಅಥ್ಲೆಟಿಕ್ಸ್ ದಿನವನ್ನು ಪರಿಚಯಿಸಿದೆ.

ಯುವಜನರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸಲೆಂದು ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ ವಿಶ್ವ ಅಥ್ಲೆಟಿಕ್ಸ್ ದಿನವನ್ನು ಪರಿಚಯಿಸಿದೆ.

ಯುವಜನರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸಲೆಂದು ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ ವಿಶ್ವ ಅಥ್ಲೆಟಿಕ್ಸ್ ದಿನವನ್ನು ಪರಿಚಯಿಸಿದೆ.

  • Share this:
ಯುವಜನರು (Youths) ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಅಥ್ಲೆಟಿಕ್ಸ್‌ನಲ್ಲಿ (Athletics) ಭಾಗವಹಿಸುವಿಕೆಯನ್ನು ಉತ್ತೇಜಿಸಲೆಂದು ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ (IAAF) ವಿಶ್ವ ಅಥ್ಲೆಟಿಕ್ಸ್ ದಿನವನ್ನು ಪರಿಚಯಿಸಿದೆ. ವಿಶ್ವ ಅಥ್ಲೆಟಿಕ್ಸ್ ದಿನವು ಈ ಫೆಡರೇಷನ್ನಿನ ಸಾಮಾಜಿಕ ಜವಾಬ್ದಾರಿ (Social Responsibility) ಯೋಜನೆಯಡಿ 'ಅಥ್ಲೆಟಿಕ್ಸ್ ಫಾರ್ ಎ ಬೆಟರ್ ವರ್ಲ್ಡ್' ಉಪಕ್ರಮದ ಒಂದು ಭಾಗವಾಗಿದೆ. ಇಂದಿನ ಜಗತ್ತಿನಲ್ಲಿ, ಯುವಜನರಲ್ಲಿ ಸ್ಥೂಲಕಾಯತೆಯ ಪ್ರಮಾಣ ಹೆಚ್ಚುತ್ತಿರುವಾಗ, ಫಿಟ್ನೆಸ್ (Fitness) ಬಗ್ಗೆ ಜನರಿಗೆ ಅರಿವು ಮೂಡಿಸುವುದು ಪ್ರಮುಖ ವಿಷಯವಾಗಿದೆ. ಹೀಗಾಗಿ, ಆರೋಗ್ಯಕ್ಕೆ (Health) ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ದೈಹಿಕ ಸಾಮರ್ಥ್ಯವನ್ನು (Physical fitness) ಉತ್ತೇಜಿಸಲು ವಿಶ್ವ ಅಥ್ಲೆಟಿಕ್ಸ್ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಮೇ 7 ರಂದು ವಿಶ್ವ ಅಥ್ಲೆಟಿಕ್ಸ್ ದಿನವನ್ನು ಆಚರಿಸಲಾಗುತ್ತದೆ.

ವಿಶ್ವಾದ್ಯಂತ ಆಚರಿಸಲಾಗುವ ಈ ದಿನವನ್ನು ನೆನಪಿಟ್ಟುಕೊಳ್ಳುವುದು ಒಂದೆಡೆಯಾದರೆ ಈ ದಿನದ ಮಹತ್ವದ ಬಗ್ಗೆ ಜ್ಞಾನವನ್ನು ಪಡೆಯುವುದು ಸಹ ಮುಖ್ಯವಾಗಿದೆ. ಅಥ್ಲೆಟಿಕ್ಸ್ ಒಂದು ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡೆಯಾಗಿದ್ದು ಇದು ಓಟ, ಜಿಗಿತ, ನಡಿಗೆ ಮತ್ತು ಎಸೆಯುವಿಕೆಯಂತಹ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಅಥ್ಲೀಟ್‌ಗಳು ವಿವಿಧ ವಿಭಾಗಗಳಲ್ಲಿ ಸುಮಾರು ಎರಡು ಡಜನ್ ಗಿಂತಲೂ ವಿಭಿನ್ನ ಕ್ರೀಡಾ ಚಟುವಟಿಕೆಗಳನ್ನು ಇದರಲ್ಲಿ ಆಡುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಆಯೋಜಿಸಲು ಭಾರತ, ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಯುರೋಪ್‌ನಂತಹ ದೇಶಗಳಲ್ಲಿ ಒಳಾಂಗಣ ಸ್ಥಳಗಳು ಲಭ್ಯವಿದೆ.

ಇತಿಹಾಸ

ವಿಶ್ವ ಅಥ್ಲೆಟಿಕ್ಸ್ ದಿನವನ್ನು ಮೊದಲ ಬಾರಿಗೆ 1996 ರಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ (IAAF) ಅಂದಿನ ಅಧ್ಯಕ್ಷರಾಗಿದ್ದ ಪ್ರಿಮೊ ನೆಬಿಯೊಲೊ ಅವರು ಪರಿಚಯಿಸಿದರು. ವಿಶ್ವ ಅಥ್ಲೆಟಿಕ್ಸ್ ದಿನವನ್ನು IAAF ಆಯೋಜಿಸಿದೆ ಮತ್ತು ಪ್ರಾಯೋಜಿಸಿದೆ.

ಇನ್ನು ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ ಎಂಬುದು 17 ಜುಲೈ 1912 ರಂದು ಸ್ಟಾಕ್‌ಹೋಮ್‌ನಲ್ಲಿ (ಸ್ವೀಡನ್) ಫೀಲ್ಡ್ ಅಥ್ಲೆಟಿಕ್ಸ್ ಮತ್ತು ಟ್ರ್ಯಾಕ್‌ನ ಕ್ರೀಡೆಗಳ ಆಡಳಿತ ಕೇಂದ್ರವಾಗಿದೆ. ಅಥ್ಲೆಟಿಕ್ಸ್ ಅಭ್ಯಾಸ ಮಾಡಲು ಯುವಕರಿಗೆ ಶಿಕ್ಷಣ ನೀಡುವ ಅಗತ್ಯತೆಯ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ದಿನವನ್ನು ಪ್ರಾರಂಭಿಸಲಾಯಿತು.

1996 ರಲ್ಲಿ, ಮೊದಲ ವಿಶ್ವ ಅಥ್ಲೆಟಿಕ್ಸ್ ದಿನವು ಅಟ್ಲಾಂಟಾದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದ ಶತಮಾನೋತ್ಸವ ಆವೃತ್ತಿಯ ನೆಲೆಯಲ್ಲಿ ಮೂಡಿಬಂದಿತ್ತು. ಇದರಲ್ಲಿ ವಿಜೇತರಾದವರಲ್ಲಿ, ಪ್ರತಿ ಕಾಂಟಿನೆಂಟಲ್ ಪ್ರದೇಶಗಳಿಂದ (ಆಫ್ರಿಕಾ, ಏಷ್ಯಾ, ಯುರೋಪ್, ಓಷಿಯಾನಿಯಾ, ದಕ್ಷಿಣ ಅಮೇರಿಕಾ, ಉತ್ತರ ಮಧ್ಯ ಅಮೇರಿಕಾ ಮತ್ತು ಕೆರಿಬಿಯನ್) ಇಬ್ಬರು ಹುಡುಗರು ಮತ್ತು ಹುಡುಗಿಯರನ್ನು ಆಯ್ಕೆ ಮಾಡಿ ಅವರನ್ನು ಅಟ್ಲಾಂಟಾ ಒಲಿಂಪಿಕ್ಸ್‌ಗೆ ಹಾಜರಾಗಲು ಅಂತರಾಷ್ಟ್ರೀಯ ಫೆಡರೇಶನ್ ಆಹ್ವಾನಿಸಿತು.

ವಿಜೇತರನ್ನು ವಿಶ್ವಕಪ್‌ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಲು IAAF ಆಹ್ವಾನ

ಈ ಅಭ್ಯಾಸವನ್ನೇ ಸತತವಾಗಿ ಮುಂದಿನ ವರ್ಷಗಳಲ್ಲಿ ಮುಂದುವರಿಸಲಾಯಿತು. ಹೀಗೆ ವಿಶ್ವ ಅಥ್ಲೆಟಿಕ್ಸ್ ದಿನದಂದು ವಿಜೇತರಾದ ಅದೃಷ್ಟಶಾಲಿಗಳನ್ನು ಅಥೆನ್ಸ್ (1997), ಸೆವಿಲ್ಲೆ (1999) ಮತ್ತು (ಜೋಹಾನ್ಸ್‌ಬರ್ಗ್ 1998) ವಿಶ್ವಕಪ್‌ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಲು IAAF ಆಹ್ವಾನಿಸಿತು. 2006 ರಲ್ಲಿ ಈ ಈವೆಂಟ್‌ನಲ್ಲಿ ಭಾಗವಹಿದ್ದವರ ವಯೋಮಾನ 7 ರಿಂದ 15 ರ ಮಧ್ಯದಲ್ಲಿತ್ತು ಆದರೆ ನಂತರ ಈ ಅಂತರವನ್ನು 13 ರಿಂದ 17 ರ ಮಧ್ಯದಲ್ಲಿ ಬದಲಾಯಿಸಲಾಯಿತು.

ಇದನ್ನೂ ಓದಿ: Mother's Day 2022: ಜೀವದ ಗಿಫ್ಟ್ ನೀಡಿದವಳಿಗೆ ಇವುಗಳನ್ನು ಕೊಟ್ಟು, 'ಅಮ್ಮ I Love You' ಅಂತ ಹೇಳಿ

ವಿಶ್ವ ಅಥ್ಲೆಟಿಕ್ಸ್ ದಿನವು ಜಾಗತಿಕ ಮಟ್ಟದಲ್ಲಿ ಎಲ್ಲ ಶಾಲೆಗಳು, ಕಾಲೇಜುಗಳು ಮತ್ತು ಹಲವಾರು ಇತರ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳ ಆಸಕ್ತಿಗಳನ್ನು ಹಲವಾರು ಅಥ್ಲೆಟಿಕ್ ಕ್ರೀಡೆಗಳಲ್ಲಿ ಉತ್ತೇಜಿಸಲು ಪ್ರೋತ್ಸಾಹಿಸುತ್ತದೆ ಹಾಗೂ ಅನುಮತಿಸುತ್ತದೆ. ಓಟದಿಂದ ಹಿಡಿದು ಶಕ್ತಿಯ ಅವಶ್ಯಕತೆಯಿರುವ ಶಾಟ್‌ಪುಟ್‌ವರೆಗೆ, ಎಲ್ಲ ಕ್ರೀಡೆಗಳು ಇದರಲ್ಲಿರುತ್ತವೆ. IAAF ಈ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತದೆ ಮತ್ತು ಆಯೋಜಿಸುತ್ತದೆ. ಆದಾಗ್ಯೂ, ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟು ಇತ್ತೀಚಿನ ದಿನಗಳಲ್ಲಿ ಇದಕ್ಕೆ ಅಡ್ಡಿಪಡಿಸಿದೆ.

ದೈಹಿಕ ಚಟುವಟಿಕೆಯನ್ನು ಉತ್ತೇಜಿಸಲು ಶಾಲೆಗಳು ಅತ್ಯುತ್ತಮ ಸ್ಥಳ

ವಿಶ್ವ ಅಥ್ಲೆಟಿಕ್ಸ್‌ನ ಪ್ರಮುಖ ಗುರಿಯು ಭಾಗವಹಿಸುವಿಕೆಯ ದೃಷ್ಟಿಯಿಂದ ಜಾಗತಿಕವಾಗಿ ಶಾಲೆಗಳಲ್ಲಿ ಅಥ್ಲೆಟಿಕ್ಸ್ ಅನ್ನು ಉನ್ನತ ಕ್ರೀಡೆಯಾಗಿ ಸ್ಥಾಪಿಸುವುದಾಗಿದೆ. ದೈಹಿಕ ಚಟುವಟಿಕೆಯನ್ನು ಉತ್ತೇಜಿಸಲು ಶಾಲೆಗಳು ಅತ್ಯುತ್ತಮ ಸ್ಥಳವೆಂದು ಫೆಡರೇಶನ್ ನಂಬುತ್ತದೆ ಮತ್ತು ಯುವಕರನ್ನು ಪೋಷಿಸುವ ಮತ್ತು ತರಬೇತಿ ನೀಡುವ ಸಾಮರ್ಥ್ಯದ ವಿಷಯದಲ್ಲಿ ಶಾಲೆಗಳೊಂದಿಗೆ ಬೇರೆ ಯಾವುದೇ ಅಡೆತಡೆಗಳಿರುವುದಿಲ್ಲ ಎಂಬುದು ಫೆಡರೇಷನ್ನಿನ ವಿಶ್ವಾಸವಾಗಿದೆ.

ಅಥ್ಲೆಟಿಕ್ಸ್ ಮಕ್ಕಳನ್ನು ಸುಸಜ್ಜಿತ ರೀತಿಯಲ್ಲಿ ಅಭಿವೃದ್ಧಿಪಡಿಸುವ ಮತ್ತು ಇತರ ದೈಹಿಕ ಚಟುವಟಿಕೆಯಲ್ಲಿ ಪ್ರವರ್ಧಮಾನಕ್ಕೆ ಬರಲು ಅನುವು ಮಾಡಿಕೊಡುವ ಒಂದು ಪ್ರಮುಖ ಕ್ರೀಡೆಯಾಗಿದೆ ಎಂದು ಫೆಡರೇಶನ್ ನಂಬಿದ್ದು ಶಾಲೆಗಳ ಕ್ರೀಡಾ ಕಾರ್ಯಕ್ರಮಗಳಲ್ಲಿ ಅಥ್ಲೆಟಿಕ್ಸ್ ಚಟುವಟಿಕೆಗಳಿಗೆ ಹೆಚ್ಚಿನ ಗಮನಕೊಡಬೇಕು ಎಂದು ಅದು ಹೇಳುತ್ತದೆ.

ಇದನ್ನೂ ಓದಿ:  Health Care: ಊಟದ ಬಳಿಕ ಸಿಹಿ ತಿನ್ನೋ ಅಭ್ಯಾಸವಿದ್ರೆ ಇಂದೇ ಬದಲಿಸಿ, ಇಲ್ಲವಾದ್ರೆ ಅನಾರೋಗ್ಯ ಕಾಡುತ್ತೆ

ವಿಶ್ವ ಅಥ್ಲೆಟಿಕ್ಸ್ ದಿನ 2022:  ಉದ್ದೇಶಗಳು

  • ಯುವಜನರಲ್ಲಿ ಸಾರ್ವಜನಿಕ ಅರಿವು ಮತ್ತು ಕ್ರೀಡಾ ಶಿಕ್ಷಣವನ್ನು ಹೆಚ್ಚಿಸುವುದು

  • ಶಾಲೆಗಳು ಮತ್ತು ಕಾಲೇಜುಗಳ ಕ್ರೀಡಾ ಕಾರ್ಯಕ್ರಮಗಳಲ್ಲಿ ಅಥ್ಲೆಟಿಕ್ಸ್‌ಗೆ ಪ್ರಮುಖ ಪಾತ್ರವನ್ನು ನೀಡುವುದು,

  • ಶಾಲೆಗಳಲ್ಲಿ ಮಕ್ಕಳು ಮತ್ತು ಹದಿಹರೆಯದವರನ್ನು ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು

  •  ಭಾರತದಲ್ಲಿ, ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ದೇಶದಲ್ಲಿ ಅಥ್ಲೆಟಿಕ್ಸ್ ಮೇಲ್ವಿಚಾರಣೆ ಮಾಡುವ ಉನ್ನತ ಸಂಸ್ಥೆಯಾಗಿದೆ.

  • AFI ಅನ್ನು 1946 ರಲ್ಲಿ ಸ್ಥಾಪಿಸಲಾಯಿತು. ಇದು IAAF, ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಮತ್ತು AAA ನೊಂದಿಗೆ ಸಂಯೋಜಿತವಾಗಿದೆ.

  • AFI ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ಮತ್ತು ಸಭೆಗಳು, ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ಮತ್ತು ಗ್ರ್ಯಾಂಡ್ ಪ್ರಿಕ್ಸ್ ಸರಣಿಗಳು, ರಾಷ್ಟ್ರೀಯ ಅಂತರ-ಜಿಲ್ಲಾ ಜೂನಿಯರ್ಸ್ ಅಥ್ಲೆಟಿಕ್ಸ್ ಮೀಟ್, IAAF-AFI ಕಿಡ್ಸ್ ಅಥ್ಲೆಟಿಕ್ಸ್, ಮತ್ತು ಭಾರತದಾದ್ಯಂತ ಯುವ ಅಥ್ಲೆಟಿಕ್ ಪ್ರತಿಭೆಯನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಹೊಂದಿದೆ.

Published by:Ashwini Prabhu
First published: