ನ್ಯೂಸ್ 18 ಕನ್ನಡ
ಮಹಿಳಾ ಟಿ-20 ವಿಶ್ವಕಪ್ ಟೂರ್ನಿ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಮೊನ್ನೆಯಷ್ಟೆ ಪಂದ್ಯ ಆರಂಭಕ್ಕೂ ಮುನ್ನ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ರಾಷ್ಟ್ರಗೀತೆ ಆಗುವವೇಳೆ, ತನ್ನ ಜೊತೆಗಿದ್ದ ವೆಸ್ಟ್ ಇಂಡೀಸ್ ಪುಟ್ಟ ಬಾಲಕಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಬಳಿಕ ಬಾಲಕಿಯನ್ನು ಎತ್ತಿ ಕ್ರೀಡಾಂಗಣದ ಮ್ಯಾನೇಜ್ಮೆಂಟ್ಗೆ ಹಸ್ತಾಂತರಿಸಿದ್ದರು. ಈ ವಿಡಿಯೋ ಸಾಮಾಜಿ ತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಸದ್ಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪಂದ್ಯಗಳ ನಡುವೆ ನಡೆದ ಘಟನೆಯೊಂದು ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಇದನ್ನೂ ಓದಿ: ಐಪಿಎಲ್ ಆರಂಭಕ್ಕೂ ಮುನ್ನವೇ ಮುಂಬೈಗೆ ಟಾಂಗ್ ನೀಡಿದ ಚೆನ್ನೈ ಸೂಪರ್ ಕಿಂಗ್ಸ್
ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 33 ರನ್ಗಳ ಸೋಲು ಅನುಭವಿಸಿತ್ತು. ಆದರೆ, ಕಿವೀಸ್ ತಂಡದ ಸ್ಟಾರ್ ಆಟಗಾರ್ತಿ ಸೂಜಿ ಬೇಟ್ಸ್ ಅವರು ಹಿಡಿದ ಆ ಒಂದು ಕ್ಯಾಚ್ ಈ ಪಂದ್ಯದ ಪ್ರಮುಖ ಅಂಶವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡ ಉತ್ತಮ ರನ್ ಕಲೆಹಾಕಿತ್ತು. ಆದರೆ, ಪಂದ್ಯದ 15ನೇ ಓವರ್ನ ಲೀ ಕ್ಯಾಸ್ಪೆರೆಕ್ ಅವರ 2ನೇ ಎಸೆತದಲ್ಲಿ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ಮನ್ ಆಶ್ಲೇ ಗಾರ್ಡ್ನರ್ ಅವರು ಚೆಂಡನ್ನು ಸಿಕ್ಸ್ಗೆ ಅಟ್ಟಲು ಯತ್ನಿಸಿದರು. ಈ ಸಂದರ್ಭ ಲಾಂಗ್ ಆನ್ನಲ್ಲಿದ್ದ ಬೇಟ್ಸ್ ಅವರು ಅತ್ಯುತ್ತಮ ಕ್ಯಾಚ್ ಪಡೆಯುವ ಮೂಲಕ ಗಾರ್ಡ್ನರ್ ಅವರಿಗೆ ಪೆವಿಲಿಯನ್ ಹಾದಿ ತೋರಿದರು. ಬೇಟ್ಸ್ ಅವರ ಕೈಯಿಂದ ಚೆಂಡು ಎರಡು ಬಾರಿ ನೆಲಕ್ಕೆ ಮುಟ್ಟಲು ಇತ್ತಾದರು, ಮೂರನೇ ಬಾರಿ ಅದ್ಭುತವಾಗಿ ಹಿಡಿದು, ಬ್ಯಾಟ್ಸ್ಮನ್ಗೆ ಶಾಕ್ ನೀಡಿದರು.
ಇದನ್ನೂ ಓದಿ: 'ಎಫ್-1 ರೇಸ್ ಭಾರತದಲ್ಲಿ ವಿಚಿತ್ರ ಅನುಭವ ನೀಡಿತು, ಅದೊಂದು ಬಡ ಪ್ರದೇಶ: ಲೆವಿಸ್ ಹ್ಯಾಮಿಲ್ಟನ್
ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಬೇಟ್ಸ್ ಅವರ ಈ ಅದ್ಭುತ ಪ್ರಯತ್ನಕ್ಕೆ ಐಸಿಸಿ ಕೂಡ ಟ್ವಿಟರ್ನಲ್ಲಿ ಬೇಷ್ ಎಂದಿದೆ.
You've got to #WatchThis! A brilliant tumbling, juggling catch by @SuzieWBates to dismiss @akgardner97! 👌
WATCH ▶️ https://t.co/P60vMtZ4A0#AUSvNZ #WT20 pic.twitter.com/XxSIxgJe4n
— ICC (@ICC) November 14, 2018
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ