ಇಂದಿನಿಂದ ಮಹಿಳಾ ಟಿ-20 ವಿಶ್ವಕಪ್​​: ಉದ್ಘಾಟನಾ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್ ಕಾದಾಟ

ಒಟ್ಟು ಐದು ಬಾರಿ ನಡೆದ ಮಹಿಳಾ ಟಿ-20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಒಂದೂ ಬಾರಿಯು ಪ್ರಶಸ್ತಿಗೆ ಮುತ್ತಿಕ್ಕಿಲ್ಲ. 2009 ಹಾಗೂ 2010 ರಲ್ಲಿ ಸೆಮಿ ಫೈನಲ್ ಹಂತಕ್ಕೇರಿದ್ದೆ ಹೆಚ್ಚು. ಹೀಗಾಗಿ ಈ ಬಾರಿ ವೆಸ್ಟ್​ ಇಂಡೀಸ್ ನಾಡಲ್ಲಿ ಯುವ ಮುಖಗಳನ್ನು ಒಳಗೊಂಡ ಭಾರತ ಮಹಿಳಾ ಪಡೆ ಟ್ರೋಫಿ ಎತ್ತಿ ಹಿಡಿಯಲೇ ಬೇಕೆಂಬ ವಿಶ್ವಾಸದಲ್ಲಿದೆ.

Vinay Bhat | news18
Updated:November 9, 2018, 2:22 PM IST
ಇಂದಿನಿಂದ ಮಹಿಳಾ ಟಿ-20 ವಿಶ್ವಕಪ್​​: ಉದ್ಘಾಟನಾ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್ ಕಾದಾಟ
ಭಾರತ ವನಿತೆಯರ ತಂಡ
Vinay Bhat | news18
Updated: November 9, 2018, 2:22 PM IST
ನ್ಯೂಸ್ 18 ಕನ್ನಡ

ನಾಳೆಯಿಂದ ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಕೆರಿಬಿಯನ್ ನಾಡು ಸಕಲ ತಯಾರಿಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತದ ವನಿತೆಯರು ನ್ಯೂಜಿಲೆಂಡ್ ಜೊತೆ ಮೊದಲ ಸವಾಲು ಎದುರಿಸಲಿದ್ದಾರೆ.

ಇದನ್ನೂ ಓದಿ: 'ಐಪಿಎಲ್​​ನಿಂದ ಈ ಇಬ್ಬರು ಆಟಗಾರರನ್ನು ಹೊರಗಿಡಿ': ಸಿಒಎಗೆ ವಿರಾಟ್ ಕೊಹ್ಲಿ ಮನವಿ

ಒಟ್ಟು ಐದು ಬಾರಿ ನಡೆದ ಮಹಿಳಾ ಟಿ-20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಒಂದೂ ಬಾರಿಯು ಪ್ರಶಸ್ತಿಗೆ ಮುತ್ತಿಕ್ಕಿಲ್ಲ. 2009 ಹಾಗೂ 2010 ರಲ್ಲಿ ಸೆಮಿ ಫೈನಲ್ ಹಂತಕ್ಕೇರಿದ್ದೆ ಹೆಚ್ಚು. ಹೀಗಾಗಿ ಈ ಬಾರಿ ವೆಸ್ಟ್​ ಇಂಡೀಸ್ ನಾಡಲ್ಲಿ ಯುವ ಮುಖಗಳನ್ನು ಒಳಗೊಂಡ ಭಾರತ ಮಹಿಳಾ ಪಡೆ ಟ್ರೋಫಿ ಎತ್ತಿ ಹಿಡಿಯಲೇ ಬೇಕೆಂಬ ವಿಶ್ವಾಸದಲ್ಲಿದೆ. ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ತಂಡ ಪಾಕಿಸ್ತಾನ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧ ಸೆಣೆಸಾಟ ನಡೆಸಲಿದೆ. ಭಾರತ ತಂಡದಲ್ಲಿ ಸ್ಪೋಟಕ ಬ್ಯಾಟ್ಸ್​ಮನ್​​ ಸ್ಮೃತಿ ಮಂದಾನ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು ಭರ್ಜರಿ ಫಾರ್ಮ್​​ನಲ್ಲು ಇದ್ದಾರೆ. ಇವರ ಜೊತೆ ನಾಯಕಿ ಹರ್ಮನ್ ಪ್ರೀತ್ ಕೌರ್, ಮಿಥಾಲಿ ರಾಜ್, ವೇದಾ ಕೃಷ್ಣ ಮೂರ್ತಿಯಂತಹ ಸ್ಟಾರ್ ಬ್ಯಾಟ್ಸ್​ಮನ್​​ಗಳಾಗಿದ್ದಾರೆ.

ವಿಶೇಷ ಎಂದರೆ ಮಹಿಳಾ ಟಿ-20 ವಿಶ್ವಕಪ್​​​​ ಪಂದ್ಯಾವಳಿಯ ನೇರಪ್ರಸಾರ ಜಗತ್ತಿನ 200 ದೇಶಗಳಲ್ಲಿ ನಡೆಯಲಿದೆ. ಅಂತರಾಷ್ಟ್ರೀಯಾ ಕ್ರಿಕೆಟ್ ಸಂಸ್ಥೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ನೇರಪ್ರಸಾರವನ್ನು ಮಾಡುತ್ತಿವೆ.

ಭಾರತ ತಂಡ:  

ಹರ್ಮನ್ ಪ್ರೀತ್ ಕೌರ್ (ನಾಯಕಿ), ಮಿಥಲಿ ರಾಜ್, ಏಕ್ತಾ ಬಿಷ್ಟ್​​, ಸ್ಮೃತಿ ಮಂದಾನಾ, ಪೂನಂ ಯಾದವ್, ವೇದಾ ಕೃಷ್ಣ ಮೂರ್ತಿ,  ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ದಯಾಳನ್ ಹೇಮಲತಾ, ಮಾನ್ಸಿ ಝೋಶಿ, ಅನುಜಾ ಪಾಟೀಲ್, ಅರುಂಧತಿ ರೆಡ್ಡಿ, ಜೆಮಿಮಾಹ್ ರೋಡ್ರಿಗಸ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್​​​, ರಾಧಾ ಯಾದವ್.
First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...