ಮಹಿಳಾ ವಿಶ್ವಕಪ್ ಹಾಕಿ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತೀಯ ವನಿತೆಯರು

news18
Updated:July 29, 2018, 1:09 PM IST
ಮಹಿಳಾ ವಿಶ್ವಕಪ್ ಹಾಕಿ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತೀಯ ವನಿತೆಯರು
news18
Updated: July 29, 2018, 1:09 PM IST
ನ್ಯೂಸ್ 18 ಕನ್ನಡ

ಲಂಡನ್ (ಜುಲೈ. 29): ರಾಣಿ ರಾಪಾಲ್ ನೇತೃತ್ವದ ಭಾರತದ ಮಹಿಳಾ ಹಾಕಿ ತಂಡ ಇಂದು ಅಮೆರಿಕ ವಿರುದ್ಧ ಮಾಡಿ ಇಲ್ಲವೇ ಮಡಿ ಪಂದ್ಯವನ್ನ ಆಡಲಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತ ಮಹಿಳಾ ಹಾಕಿ ತಂಡ ಏಳನೇ ರ್ಯಾಂಕಿಂಗ್​ನಲ್ಲಿರುವ ಅಮೆರಿಕಾ ವಿರುದ್ಧ ಲೀ ವ್ಯಾಲಿ ಹಾಕಿ ಸೆಂಟರ್​​​​ನಲ್ಲಿ ಗೆದ್ದರೆ ಅಥವಾ ಕನಿಷ್ಠ ಡ್ರಾ ಸಾಧಿಸಿದರೆ ಮಾತ್ರ ನಾಕೌಟ್ ಅಂತಕ್ಕೇರುವ ಅವಕಾಶ ಹೊಂದಿದೆ.

ಆಡಿರುವ ಎರಡು ಪಂದ್ಯದಲ್ಲಿ ಭಾರತ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿ, ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 0-1 ಅಂತರದಲ್ಲಿ ಹೀನಾಯ ಸೋಲು ಕಂಡಿತ್ತು. ಬಿ ಗುಂಪಿನಲ್ಲಿ ಸದ್ಯ ಆಡಿರುವ ಎರಡೂ ಪಂದ್ಯ ಗೆದ್ದಿರುವ ಐರ್ಲೆಂಡ್ 6 ಅಂಕದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 2 ಅಂಕದೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸಿದೆ. ಅಂತೆಯೆ ಭಾರತ ಹಾಗೂ ಅಮೆರಿಕ ಕೇವಲ ಒಂದು ಅಂಕವನ್ನಷ್ಟೆ ಹೊಂದಿದೆ.

ನಮ್ಮ ಕಾರ್ಯತಂತ್ರದ ಬಗ್ಗೆ ಯಾವುದೇ ತಕರಾರಿಲ್ಲ. ಅಮೆರಿಕ ವಿರುದ್ಧದ ಪಂದ್ಯದಲ್ಲಿ ರಕ್ಷಣಾ ವಲಯ ನಮ್ಮ ಮುಖ್ಯ ಅಸ್ತ್ರವಾಗಿದೆ. ಅಮೆರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿ ನಾಕೌಟ್ ಪ್ರವೇಶ ಪಡೆಯಲಿದ್ದೇವೆ ಎಂದು ಭಾರತ ಮಹಿಳಾ ಹಾಕಿ ತಂಡದ ಕೋಚ್ ಜೋಯರ್ಡ್​ ಮರಿಜಿನ್ ಹೇಳಿದ್ದಾರೆ.
First published:July 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...