ಮಹಿಳಾ ಪ್ರೀಮಿಯರ್ ಲೀಗ್‌ನ (WPL 2023) ಮೊದಲ ಋತುವಿನ ಹರಾಜು ಇಂದು ನಡೆಯಲಿದೆ. ಮಾರ್ಚ್ 4 ರಿಂದ ಲೀಗ್ ಆರಂಭವಾಗಲಿದೆ. ಪಂದ್ಯಾವಳಿಯ ಫೈನಲ್ ಪಂದ್ಯವು ಮಾರ್ಚ್ 26ರಂದು ನಡೆಯಲಿದೆ. ಐಪಿಎಲ್ನ (IPL) ಮೊದಲ ಸೀಸನ್‌ನಂತೆ, ಮಹಿಳಾ ಪ್ರೀಮಿಯರ್ ಲೀಗ್ (WPL) ಹರಾಜಿನ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಯಾವ ಆಟಗಾರ್ತಿಯರು ಯಾವ ತಂಡವನ್ನು ಸೇರುತ್ತಾರೆ, ಯಾರು ಯಾಔ ತಂಡದ ನಾಯಕಿಯಾಗ್ತಾರೆ ಎಂಬ ಹಲವು ನಿರೀಕ್ಷೆಗಳು ಇದೀಗ ಎಲ್ಲರಲ್ಲಿ ಮನೆ ಮಾಡಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಆಕಾಶ್ ಚೋಪ್ರಾ (Aakash Chopra) ಟ್ವೀಟ್ ಮೂಲಕ ಕೆಲ ಉತ್ತರಗಳನ್ನು ನೀಡಿದ್ದಾರೆ.
ಈ ಆಟಗಾರ್ತಿಯರು ಕ್ಯಾಪ್ಟನ್ ಆಗೋದು ಫಿಕ್ಸ್:
ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು ಲೀಗ್‌ನಲ್ಲಿ 5 ತಂಡಗಳನ್ನು ಮುನ್ನಡೆಸಬಲ್ಲ ಆಟಗಾರರನ್ನು ಹೆಸರಿಸಿದ್ದಾರೆ. ಆಕಾಶ್ ಚೋಪ್ರಾ ಟ್ವೀಟ್ ಮಾಡಿ ಬರೆದುಕೊಂಡಿದ್ದು, ಮಹಿಳಾ ಐಪಿಎಲ್ ಹರಾಜಿನ ದಿನ ಬಂದಿದೆ. ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ದೀಪ್ತಿ ಶರ್ಮಾ ನಾಯಕಿಯರಾಗಲು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. 2 ವಿದೇಶಿ ಆಟಗಾರ್ತಿಯರು ನಾಯಕಿಯರಾಗಬಹುದು. ಎಲ್ಲಿಸ್ ಪೆರ್ರಿ ಸಹ ಒಂದು ತಂಡದ ನಾಯಕಿಯಾಗಬಹುದು. ಐದನೇ ನಾಯಕನಾಗಿ ಆಸ್ಟ್ರೇಲಿಯಾದ ಗಾರ್ಡನರ್, ಇಂಗ್ಲೆಂಡ್‌ನ ಆಲ್‌ರೌಂಡರ್ ಸೈವರ್ ಮತ್ತು ವೆಸ್ಟ್ ಇಂಡೀಸ್‌ನ ಹೇಲಿ ಮ್ಯಾಥ್ಯೂಸ್ ಆಯ್ಕೆಯಾಗುವ ಸಾಧ್ಯತೆಯನ್ನು ಆಕಾಶ್ ಚೋಪ್ರಾ ವ್ಯಕ್ತಪಡಿಸಿದ್ದಾರೆ.‘
WPL Auction Day. No Marquee Players like the first edition of the IPL. All teams need captains.
Harmanpreet Kaur, Smriti Mandhana and Dipti Sharma are the three probable captains. 2 overseas contenders? Ellyse Perry could be one. 5th? Gardner, Sciever, Hayley Mathews? @JioCinema
— Aakash Chopra (@cricketaakash) February 13, 2023
ಫ್ರಾಂಚೈಸಿಯ ಪರ್ಸ್‌ನಲ್ಲಿ 12 ಕೋಟಿ ಇರಲಿದೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ 5 ತಂಡಗಳು ಬಿಡ್ಡಿಂಗ್ ಮಾಡಲಿದೆ. ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ಈಗಾಗಲೇ ಐಪಿಎಲ್ ಪುರುಷರ ತಂಡವನ್ನೂ ಹೊಂದಿದೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಈ ತಂಡಗಳನ್ನು ಇದೇ ಹೆಸರಿನಿಂದ ಕರೆಯಲಾಗುತ್ತದೆ. ಅದೇ ಸಮಯದಲ್ಲಿ, ಅಹಮದಾಬಾದ್ ತಂಡದ ಹೆಸರು ಗುಜರಾತ್ ಜೈಂಟ್ಸ್ ಮತ್ತು ಲಕ್ನೋದ ಯುಪಿ ವಾರಿಯರ್ಸ್ ಎಂದು ಹೇಳಲಾಗಿದೆ.
ಇದನ್ನೂ ಓದಿ: Hardik Pandya: ಮತ್ತೆ ಮದ್ವೆಯಾಗ್ತಾರಂತೆ ಹಾರ್ದಿಕ್ ಪಾಂಡ್ಯಾ! ಹುಡುಗಿ ಯಾರು ಅಂತ ಗೊತ್ತಾದ್ರೆ ಶಾಕ್ ಆಗ್ತೀರಿ!
ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ಪರ್ಸ್‌ನಲ್ಲಿ 12-12 ಕೋಟಿ ರೂ. ಹೊಂದಿದೆ. ಈ ಪೈಕಿ ಕಡ್ಡಾಯವಾಗಿ 9 ಕೋಟಿ ರೂ. ಹರಾಜಿನಲ್ಲಿ ಖರ್ಚು ಮಾಡಲೇಬೇಕಿದೆ. ಈ ಹರಾಜಿನಲ್ಲಿ 24 ಆಟಗಾರ್ತಿಯರ ಮೂಲ ಬೆಲೆಯನ್ನು 50 ಲಕ್ಷ ರೂ.ಗೆ ಇರಿಸಲಾಗಿದ್ದು, ಇದರಲ್ಲಿ ಭಾರತದ 8 ಆಟಗಾರ್ತರಿಯರು ಸೇರಿದ್ದಾರೆ. ಅದೇ ವೇಳೆ 24 ಆಟಗಾರರ ಮೂಲ ಬೆಲೆ 30 ಲಕ್ಷ ರೂ. ಇದೆ.
60 ಭಾರತೀಯ ಆಟಗರ್ತಿಯರು:
ಈ ಪ್ರತಿಷ್ಠಿತ ಟೂರ್ನಿಯಲ್ಲಿ 30 ವಿದೇಶಿ ಹಾಗೂ 60 ಭಾರತೀಯ ಆಟಗಾರರು ಭಾಗವಹಿಸಲಿದ್ದಾರೆ. ಆಸ್ಟ್ರೇಲಿಯಾದ 28, ಇಂಗ್ಲೆಂಡ್‌ನ 27 ಆಟಗಾರ್ತಿಯರು ಮಹಿಳೆಯರ ಐಪಿಎಲ್ ಹರಾಜಿನಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್‌ನಿಂದ 23 ಮತ್ತು ನ್ಯೂಜಿಲೆಂಡ್‌ನ 19 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ದಕ್ಷಿಣ ಆಫ್ರಿಕಾದ 17, ಶ್ರೀಲಂಕಾದ 15 ಮತ್ತು ಜಿಂಬಾಬ್ವೆಯ 11, ಬಾಂಗ್ಲಾದೇಶದ 9, ಐರ್ಲೆಂಡ್‌ನ 6 ಮತ್ತು ಅಸೋಸಿಯೇಟ್ ದೇಶದ 8 ಆಟಗಾರ್ತಿಯರು ಭಾಗವಹಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ