ಕಳೆದ ಹಲವು ವರ್ಷಗಳಿಂದ ಮಹಿಳಾ ಐಪಿಎಲ್ (Women's IPL) ಭಾರತದಾದ್ಯಂತ ಚರ್ಚೆಯಾಗಿದೆ. ಆದರೆ ಬಿಸಿಸಿಐನ (BCCI) ಈ ಯೋಜನೆ ಸಾಕಾರಗೊಳ್ಳಲಿಲ್ಲ. ಆದರೆ ಇದೀಗ ಬಿಸಿಸಿಐ ಈ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆಗಳನ್ನು ಇಡಲು ಆರಂಭಿಸಿದ್ದು, ಇದೀಗ ಮಹಿಳಾ ಐಪಿಎಲ್ ಗೆ ಹೆಚ್ಚು ದಿನ ಕಾಯಬೇಕಿಲ್ಲ. ಏಕೆಂದರೆ ಮುಂದಿನ ವರ್ಷ ಬಿಸಿಸಿಐ ಮಹಿಳಾ IPL ಆರಂಭಿಸುವುದು ಬಹುತೇಕ ಖಚಿತವಾಗಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ (T20 World Cup) ಬಳಿಕ ಮಹಿಳಾ ಐಪಿಎಲ್ ಆಯೋಜಿಸಲು BCCI ಮುಂದಾಗಿದೆ. 2023ರ ಮಾರ್ಚ್ ನಲ್ಲಿಯೇ ಈ ಟೂರ್ನಿಯ ಪ್ರಾರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.
ಏನದು ಬಿಸಿಸಿಐ ಯೋಜನೆ?:
ಮಹಿಳಾ ಐಪಿಎಲ್ನಲ್ಲಿ 5 ತಂಡಗಳಲ್ಲಿ 22 ಪಂದ್ಯಗಳನ್ನು ಆಡಲು ಬಿಸಿಸಿಐ ಯೋಜಿಸಿದೆ. ಇದಕ್ಕಾಗಿ 6 ವಿದೇಶಿ ಆಟಗಾರರು ಸೇರಿದಂತೆ 18 ಆಟಗಾರರ ತಂಡ ರಚನೆಯಾಗಲಿದೆ. ಆಡುವ ಹನ್ನೊಂದರಲ್ಲಿ ಗರಿಷ್ಠ 5 ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಬಹುದು. ಈ ಐವರು ಆಟಗಾರರ ಪೈಕಿ 4 ಮಂದಿ ಐಸಿಸಿ ಪೂರ್ಣ ಸದಸ್ಯರ ತಂಡದಿಂದ ಇರುತ್ತಾರೆ. ಆದ್ದರಿಂದ 1 ಆಟಗಾರನು ಸಹವರ್ತಿ ತಂಡದ ಸದಸ್ಯರಾಗಿರುತ್ತಾರೆ. ಒಂದು ತಂಡವು ಪ್ರತಿ ತಂಡದ ವಿರುದ್ಧ 2 ಎರಡು ಪಂದ್ಯಗಳನ್ನು ಆಡುತ್ತದೆ. ಜೊತೆಗೆ ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ನಲ್ಲಿ ಮುಖಾಮುಖಿಯಾಗಲಿವೆ.
According to the reports,
BCCI is planning to have five teams for the inaugural season of Women's IPL. #CricketTwitter pic.twitter.com/DV9HEvjYoh
— Female Cricket (@imfemalecricket) October 13, 2022
ಮಹಿಳಾ ಟಿ20 ವಿಶ್ವಕಪ್ನ ಫೈನಲ್ ಪಂದ್ಯ ಫೆಬ್ರವರಿ 26 ರಂದು ನಡೆಯಲಿದೆ. ಅದರ ನಂತರ ಮಾರ್ಚ್ ತಿಂಗಳಲ್ಲಿ ಮಹಿಳಾ ಐಪಿಎಲ್ ಆಡಲು ಬಿಸಿಸಿಐ ಚಿಂತನೆ ನಡೆಸಿದೆ. ಏತನ್ಮಧ್ಯೆ, ಪುರುಷರ ಐಪಿಎಲ್ಗಿಂತ ಮೊದಲು ಪಂದ್ಯಾವಳಿಯನ್ನು ಮುಗಿಸಲು ಪ್ರಯತ್ನಗಳು ಮುಂದುವರಿದಿವೆ. ಈ ಟೂರ್ನಿಯನ್ನು ಹೋಮ್-ಅವೇ ಮಾದರಿಯಲ್ಲಿಯೂ ಆಡುವ ಯೋಜನೆ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್ನಲ್ಲಿ ಬಿಗ್ ಟ್ವಿಸ್ಟ್, ಭಾರತ-ಪಾಕ್ ಪಂದ್ಯ ನಡೆಯುವುದು ಡೌಟ್?
ಹರಾಜು ಹೇಗಿರುತ್ತದೆ?:
ಈ ಹಿಂದೆ ಬಿಸಿಸಿಐ ಐಪಿಎಲ್ ಮಾದರಿಯಲ್ಲಿ ಮೂರು ತಂಡಗಳಲ್ಲಿ ಮಹಿಳಾ ಟಿ20 ಚಾಲೆಂಜ್ ಆಯೋಜಿಸಿತ್ತು. ಆದರೆ ಈ ವರ್ಷ ಎಲ್ಲಾ ಐದು ತಂಡಗಳಿಗೂ ಫ್ರಾಂಚೈಸಿಗಳನ್ನು ಹುಡುಕಲಾಗುತ್ತದೆ. ದೇಶದ ಪ್ರತಿ ವಲಯದಿಂದ ಒಬ್ಬ ಫ್ರಾಂಚೈಸಿಯನ್ನು ಆಯ್ಕೆ ಮಾಡಲಾಗುತ್ತದೆ. ಉತ್ತರ ವಲಯದಲ್ಲಿ ಜಮ್ಮು ಮತ್ತು ಧರ್ಮಶಾಲಾ, ಪಶ್ಚಿಮ ವಲಯದಲ್ಲಿ ಪುಣೆ ಮತ್ತು ರಾಜ್ಕೋಟ್, ಮಧ್ಯ ವಲಯದಲ್ಲಿ ಇಂದೋರ್, ನಾಗ್ಪುರ ಮತ್ತು ರಾಯ್ಪುರ, ಪೂರ್ವ ವಲಯದಲ್ಲಿ ರಾಂಚಿ ಮತ್ತು ಕಟಕ್, ದಕ್ಷಿಣ ವಲಯದಲ್ಲಿ ಕೊಚ್ಚಿ ಮತ್ತು ವಿಶಾಖಪಟ್ಟಣಂ ಮತ್ತು ಈಶಾನ್ಯ ವಲಯದಲ್ಲಿ ಗುವಾಹಟಿ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಬಂಧನಕ್ಕೆ ಆಗ್ರಹಿಸಿ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್, ಇಲ್ಲಿದೆ ಕಾರಣ
ಇದಲ್ಲದೇ ಹೋಮ್ ಬೇಸ್ ಪಂದ್ಯಗಳನ್ನು ಆಡುವ ಬದಲು ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಪಂದ್ಯಗಳನ್ನು ಆಯೋಜಿಸುವುದು ಬಿಸಿಸಿಐನ ಮತ್ತೊಂದು ಯೋಜನೆಯಾಗಿದೆ. ಅಕ್ಟೋಬರ್ 18 ರಂದು ಬಿಸಿಸಿಐನ ವಾರ್ಷಿಕ ಸಾಮಾನ್ಯ ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಬಿಸಿಸಿಐ ಅಧಿಕಾರಿಗಳ ಮುಂದೆ ಈ ಎಲ್ಲಾ ವಿಷಯಗಳ ಕುರಿತು ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ