ಮಹಿಳಾ ವಿಶ್ವಕಪ್ ಹಾಕಿ: ಐರ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು

news18
Updated:July 26, 2018, 9:56 PM IST
ಮಹಿಳಾ ವಿಶ್ವಕಪ್ ಹಾಕಿ: ಐರ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು
news18
Updated: July 26, 2018, 9:56 PM IST
ನ್ಯೂಸ್ 18 ಕನ್ನಡ

ಲಂಡನ್​ (ಜುಲೈ. 26): ಲಂಡನ್​ನ ಲೀ ವ್ಯಾಲಿ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಹಾಕಿ ವಿಶ್ವಕಪ್​​ನ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಐರ್ಲೆಂಡ್ ವಿರುದ್ಧ 0-1 ಅಂತರದಲ್ಲಿ ಸೋಲುಂಡಿದೆ. ಸತತ ಎರಡು ಜಯದೊಂದಿದೆ ಐರ್ಲೆಂಡ್ ಕ್ವಾರ್ಟರ್ ಫೈನಲ್​​ಗೆ ಲಗ್ಗೆ ಇಟ್ಟಿದೆ.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಐರ್ಲೆಂಡ್ 12ನೇ ನಿಮಿಷದಲ್ಲಿ ಅನ್ನಾ ಫ್ಲನಾಗನ್ ದಾಖಲಿಸಿದ ಗೋಲಿನಿಂದ ಜಯ ಸಾಧಿಸಿತು. 57ನೇ ನಿಮಿಷದಲ್ಲಿ ಭಾರತದ ನಾಯಕಿ ರಾಣಿ ರಾಮ್ಪಾಲ್ ಅವರಿಗೆ ಪೆನಾಲ್ಟಿ ಕಾರ್ನರ್ ಲಭಿಸಿತ್ತಾದರು, ಗೋಲು ದಾಖಲಿಸುವಲ್ಲಿ ವಿಫಲರಾದರು. ಪಂದ್ಯದುದ್ದಕ್ಕು ಅದ್ಭುತ ಆಟ ಪ್ರದರ್ಶಿಸಿದ ಐರ್ಲೆಂಡ್ ಆಟಗಾರ್ತಿಯರು, ಭಾರತಕ್ಕೆ ಒಂದು ಗೋಲು ಸಿಡಿಸಲು ಅವಕಾಶ ಮಾಡಿಕೊಟ್ಟಿಲ್ಲ.

ಈ ಮೂಲಕ ಕಳಪೆ ಆಟದೊಂದಿಗೆ ಭಾರತ ಹೀನಾಯ ಸೋಲು ಕಂಡಿದ್ದು, ಜುಲೈ. 29ರಂದು ನಡೆಯುವ ಪಂದ್ಯದಲ್ಲಿ ಭಾರತ ತಂಡ ಅಮೆರಿಕಾ ವಿರುದ್ಧ ಗೆದ್ದರೆ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯುವ ಅವಕಾಶ ಹೊಂದಿದೆ.
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ