• Home
  • »
  • News
  • »
  • sports
  • »
  • Asia Cup 2022 IND W vs SL W: ಲಂಕಾ ಎದುರು ಭರ್ಜರಿ ಜಯ ದಾಖಲಿಸಿದ ಭಾರತ ವನಿತೆಯರ ತಂಡ, ಏಷ್ಯಾ ಕಪ್​ನಲ್ಲಿ ಶುಭಾರಂಭ

Asia Cup 2022 IND W vs SL W: ಲಂಕಾ ಎದುರು ಭರ್ಜರಿ ಜಯ ದಾಖಲಿಸಿದ ಭಾರತ ವನಿತೆಯರ ತಂಡ, ಏಷ್ಯಾ ಕಪ್​ನಲ್ಲಿ ಶುಭಾರಂಭ

ಭಾರತ ವನಿತೆಯರಿಗೆ ಜಯ

ಭಾರತ ವನಿತೆಯರಿಗೆ ಜಯ

Asia Cup 2022 IND W vs SL W: ಭಾರತವು ಮಹಿಳಾ ಏಷ್ಯಾ ಕಪ್‌ನಲ್ಲಿ ಗೆಲುವಿನೊಂದಿಗೆ ಪ್ರಾರಂಭಿಸಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 41 ರನ್‌ಗಳಿಂದ ಸೋಲಿಸಿತು. ಹೇಮಲತಾ ಅವರು ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದು ಮಿಂಚಿದರು.

  • Share this:

 ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ಇಂದು ಮಹಿಳೆಯರ ಏಷ್ಯಾಕಪ್ ಆರಂಭವಾಗಿದೆ.  ಭಾರತ ಮಹಿಳಾ ಕ್ರಿಕೆಟ್ (womens Team India) ತಂಡ ಏಷ್ಯಾಕಪ್‌ನಲ್ಲಿ (Asia Cup 2022) ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು (IND W vs SL W) 41 ರನ್‌ಗಳಿಂದ ಸೋಲಿಸಿತು. 20 ಓವರ್‌ಗಳಲ್ಲಿ 151 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ 18.2 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಹೇಮಲತಾ 3 ವಿಕೆಟ್ ಪಡೆದರು. ಅದೇ ಸಮಯದಲ್ಲಿ ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಕರ್ 2-2 ವಿಕೆಟ್ ಪಡೆದರು. ಇದಕ್ಕೂ ಮುನ್ನ ಹೇಮಲತಾ ಕೂಡ 10 ಎಸೆತಗಳಲ್ಲಿ ಔಟಾಗದೆ 13 ರನ್ ಗಳಿಸಿದ್ದರು.


ಉತ್ತಮ ಮೊತ್ತ ಕಲೆಹಾಕಿದ ಭಾರತ ತಂಡ:


ಇದಕ್ಕೂ ಮೊದಲು ಟಾಸ್ ಗೆದ್ದ ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮಣಿಕಟ್ಟಿನ ಗಾಯದಿಂದಾಗಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳದ ಜೆಮಿಮಾ ರಾಡ್ರಿಗಸ್ ತಂಡಕ್ಕೆ ಮರಳಿದ್ದರು. ಆದರೆ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಜೋಡಿ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ 13 ರನ್ ಸೇರಿಸಲಷ್ಟೇ ಶಕ್ತರಾದರು. ಅದೇ ಸ್ಕೋರ್ ನಲ್ಲಿ 6 ರನ್ ಗಳಿಸಿ ಮಂಧಾನ ಔಟಾದರು. ಆ ಬಳಿಕ ಶೆಫಾಲಿ ಕೂಡ 10 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್ ಉತ್ತಮವಾಗಿ ಆಡಿದರು.ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಇವರಿಬ್ಬರ ನಡುವೆ ಮೂರನೇ ವಿಕೆಟ್‌ಗೆ 71 ಎಸೆತಗಳಲ್ಲಿ 92 ರನ್‌ಗಳ ಜೊತೆಯಾಟ ಆಡುವ ಮೂಲಕ ತಂಡ 150 ರನ್ ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ರನ್​ ಬೆನ್ನಟ್ಟುವಲ್ಲಿ ಸೋತ ಲಂಕಾ ಕೇಔಲ 109 ರನ್​ಗಳಿಸುವ ಮೂಲಕ 41 ರನ್‌ಗಳಿಂದ ಸೋತಿತು. ಈ ಮೂಲಕ ಭಾರತ ವನಿತೆಯರು ಟೂರ್ನಿಯಲ್ಲಿ ಶುಭಾರಂಬ ಮಾಡಿದ್ದಾರೆ.


ಇದನ್ನೂ ಓದಿ: Prithvi Shaw: ಪೃಥ್ವಿ ಶಾ ಜೊತೆ ಇರುವ ಮಿಸ್ಟರಿ ಗರ್ಲ್ ಯಾರು? ಇಲ್ಲಿದೆ ವೈರಲ್ ಫೋಟೋ


ಭರ್ಜರಿ ಕಂಬ್ಯಾಕ್​ ಮಾಡಿದ ಜೆಮಿಮಾ:


ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಜೆಮಿಮಾ ರಾಡ್ರಿಗಸ್ ಮಣಿಕಟ್ಟಿನ ಗಾಯಕ್ಕೆ ಒಳಗಾಗಿದ್ದರು. ಇದರಿಂದಾಗಿ ಇಂಗ್ಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಿಂದ ಹೊರಗುಳಿಯಬೇಕಾಯಿತು. ಏತನ್ಮಧ್ಯೆ, ಜೆಮಿಮಾ ಒಂದು ತಿಂಗಳ ಕಾಲ ಬ್ಯಾಟ್ ಕೂಡ ಹಿಡಿದಿರಲಿಲ್ಲ. ಆದರೆ ನಂತರ ಅವರು ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ 76 ರನ್‌ಗಳನ್ನು ಗಳಿಸುವ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಜೆಮಿಮಾ ರಾಡ್ರಿಗಸ್ 11 ಬೌಂಡರಿ ಮತ್ತು ಒಂದು ಸಿಕ್ಸರ್ nಎರವಿನಿಂದ 76 ರನ್ ಸಿಡಿಸಿದರು. ಈ ಪಂದ್ಯದಲ್ಲಿ ಆರಂಭಿಕರಾದ ಸ್ಮೃತಿ ಮಂಧಾನ (6) ಮತ್ತು ಶಫಾಲಿ ವರ್ಮಾ (10) ಬೇಗ ಫೆವೆಲಿಯನ್​ಗೆ ಮರಳಿದರು. ಆದರೆ ನಂತರ ಜೆಮಿಮಾ ಮತ್ತು ನಾಯಕಿ ಹರ್ಮನ್‌ಪ್ರೀತ್ ಜೊತೆಗೂಡಿ ಟೀಮ್ ಇಂಡಿಯಾ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು. ಇವರಿಬ್ಬರು ಮೂರನೇ ವಿಕೆಟ್‌ಗೆ 92 ರನ್‌ಗಳ ಮಹತ್ವದ ಜೊತೆಯಾಟ ನೀಡಿದರು. ಹರ್ಮನ್ 33 ರನ್ ಗಳಿಸಿ ಔಟಾದರು.


ಇದನ್ನೂ ಓದಿ: IND vs SA 2nd T20: ನಾಳೆ ಭಾರತ-ಆಫ್ರಿಕಾ ಮ್ಯಾಚ್​; ಪಂದ್ಯ ಆರಂಭ, ಪಿಚ್​ ರಿಪೋರ್ಟ್ & ಪ್ಲೇಯಿಂಗ್​ 11


ಅಕ್ಟೋಬರ್ 7 ರಂದು ಗ್ರ್ಯಾಂಡ್ ಮ್ಯಾಚ್:


ಈ ಮಹಿಳಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಿವೆ. ಆದ್ದರಿಂದ ಈ ಟೂರ್ನಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಪ್ರತಿ ತಂಡವು 6-6 ಪಂದ್ಯಗಳನ್ನು ಆಡುತ್ತದೆ. ಆದರೆ ಎಲ್ಲರ ಗಮನ ಈ ಟೂರ್ನಿಯ ಪ್ರಮುಖ ಘಟ್ಟದ ​​ಮೇಲಿರುತ್ತದೆ. ಮಹಿಳೆಯರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಅಕ್ಟೋಬರ್ 7 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಭಾರತವನ್ನು ಎದುರಿಸಲಿದೆ.

Published by:shrikrishna bhat
First published: