• Home
  • »
  • News
  • »
  • sports
  • »
  • Asia Cup 2022 IND W vs PAK W: ಇಂದು ಭಾರತ-ಪಾಕಿಸ್ತಾನ ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

Asia Cup 2022 IND W vs PAK W: ಇಂದು ಭಾರತ-ಪಾಕಿಸ್ತಾನ ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs PAK

IND vs PAK

Asia Cup 2022 IND W vs PAK W: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಕಣಕ್ಕಿಳಿಯಲು ಸಜ್ಜಾಗಿದೆ. ಆದರೆ ಮೊದಲೆರಡು ಪಂದ್ಯಗಳನ್ನು ಗೆದ್ದ ಪಾಕಿಸ್ತಾನಕ್ಕೆ ಗ್ರ್ಯಾಂಡ್ ಫೈನಲ್‌ಗೂ ಮುನ್ನ ಥಾಯ್ಲೆಂಡ್‌ ಎದುರು ಸೋತಿರುವುದು ಕೊಂಚ ಹಿನ್ನಡೆಯಾಗಿದೆ.

  • Share this:

ಮಹಿಳೆಯರ ಏಷ್ಯಾಕಪ್‌ನಲ್ಲಿ (womens Team India) ಶುಕ್ರವಾರ ಭಾರತ ಮತ್ತು ಪಾಕಿಸ್ತಾನ ಮಹತ್ವದ ಪಂದ್ಯವನ್ನು ಆಡಲಿವೆ. ಹರ್ಮನ್‌ಪ್ರೀತ್ ಕೌರ್ (Harmanpreet Kaur) ನೇತೃತ್ವದ ಭಾರತ ತಂಡ ಟೂರ್ನಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಭಾರತ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾವನ್ನು (SL) ಸೋಲಿಸಿತು. ಆ ಬಳಿಕ ಮಲೇಷ್ಯಾ ಮತ್ತು ಯುಎಇಯಂತಹ ದುರ್ಬಲ ತಂಡಗಳನ್ನು ಸುಲಭವಾಗಿ ಸೋಲಿಸಿತು. ಹೀಗಾಗಿ ಟೀಂ ಇಂಡಿಯಾ ಪಾಕಿಸ್ತಾನದ (IND W vs PAK W ವಿರುದ್ಧ ಮೈದಾನಕ್ಕಿಳಿಯಲು ಸಂಪೂರ್ಣ ಸಜ್ಜಾಗಿದೆ. ಆದರೆ ಮೊದಲೆರಡು ಪಂದ್ಯಗಳನ್ನು ಗೆದ್ದ ಪಾಕಿಸ್ತಾನಕ್ಕೆ ಗ್ರ್ಯಾಂಡ್ ಫೈನಲ್‌ಗೂ ಮುನ್ನ ಥಾಯ್ಲೆಂಡ್‌ ಎದುರು ಸೋತಿರುವುದು ಕೊಂಚ ಹಿನ್ನಡೆಯಾಗಿದೆ.


ಪಂದ್ಯದ ವಿವರ:


ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ಇಂದು ಮಹಿಳೆಯರ ಏಷ್ಯಾಕಪ್ 2022ರಲ್ಲಿ ಮಹತ್ವದ ಪಂದ್ಯ ನಡೆಯಲಿದೆ. ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಟಾಸ್ ಮತ್ತು 1:30ಕ್ಕೆ ಪಂದ್ಯ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ+ಹಾಟ್‌ಸ್ಟಾರ್ ನೀವು ಪಂದ್ಯದ ನೇರಪ್ರಸಾರವನ್ನು ನೋಡಬಹುದು.


ಪಿಚ್​ ವರದಿ:


ಈ ಮೇಲ್ಮೈಯಲ್ಲಿ ರನ್ ಗಳಿಸುವುದು ಕಷ್ಟಕರವಾದ ಕಾರಣ ಈ ಪಿಚ್‌ನಲ್ಲಿ ಟಾಸ್ ಪಾತ್ರವನ್ನು ವಹಿಸುತ್ತದೆ. ತಂಡಗಳು ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ ನಿರ್ಬಂಧಿಸಲು ನೋಡುತ್ತವೆ ಮತ್ತು ನಂತರ ಅದನ್ನು ಸುಲಭವಾಗಿ ಬೆನ್ನಟ್ಟುತ್ತವೆ. ಇದು ಸ್ಪಿನ್ನರ್ ಸ್ನೇಹಿ ಟ್ರ್ಯಾಕ್ ಆಗಿದೆ. ಹೀಗಾಗಿ ಇಂದು ಟಾಸ್​ ಗೆದ್ದ ತಂಡ ಮೊದಲು  ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ: Mohammed Shami: ದಸರಾಗೆ ಶುಭಾಶಯ ಕೋರಿದ್ದೇ ತಪ್ಪಾಯ್ತಾ? ಟೀಂ ಇಂಡಿಯಾ ಸ್ಟಾರ್​ ಆಟಗಾರನಿಗೆ ಬೆದರಿಕೆ!


ಭಾರತ-ಪಾಕ್​ ಹೆಡ್​ ಟು ಹೆಡ್​:


ಭಾರತ ಮತ್ತು ಪಾಕಿಸ್ತಾನ ಮಹಿಳೆಯರ ತಂಡ ಟಿ20ಯಲ್ಲಿ ಇದುವರೆಗೆ ಒಟ್ಟು 12 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ ತಂಡ 10 ಪ.ದ್ಯಗಳನ್ನು ಗೆದ್ದರೆ ಪಾಕಿಸ್ತಾನ ಕೇವಲ 2ರಲ್ಲಿ ಗೆದ್ದಿದೆ. ಅಲ್ಲದೇ ಈ ಏಷ್ಯಾ ಕಪ್​ನಲ್ಲಿ ಟೀಂ ಇಂಡಿಯಾ ವನಿತೆಯರು ಭರ್ಜರಿ ಫಾರ್ಮ್​ನಲ್ಲಿದ್ದು, ಸತತ 3 ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಇಂದು ಪಾಕ್​ ವಿರುದ್ಧ ಭಾರತ ಗೆಲ್ಲುವ ಫೆವರೇಟ್​ ಟೀಂ ಆಗಿದೆ.


ಪಾಕ್​ ಸೋಲಿಸಲು ಟೀಂ ಇಂಡಿಯಾ ಸಜ್ಜು:


ಕಳೆದ ಮೂರು ಪಂದ್ಯಗಳಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಇಂದಿನ ಪಾಕ್​ ವಿರುದ್ಧದ ಪಂದ್ಯದಲ್ಲಿಯೂ ಹರ್ಮನ್‌ಪ್ರೀತ್ ಕೌರ್ ತಂಡ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿಯಲಿದೆ. ಏತನ್ಮಧ್ಯೆ, ಈ ಪಂದ್ಯವನ್ನು ಗೆದ್ದರೆ, ಟೀಂ ಇಂಡಿಯಾ ಸತತ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಇದಕ್ಕೂ ಮುನ್ನ ಎರಡು ತಿಂಗಳ ಹಿಂದೆ ಭಾರತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು.


ಇದನ್ನೂ ಓದಿ: Sandeep Lamichhane: ಅತ್ಯಾಚಾರದ ಆರೋಪದಡಿ ಖ್ಯಾತ ಕ್ರಿಕೆಟ್ ಆಟಗಾರನ ಬಂಧನ


IND W vs PAK W ಸಂಭಾವ್ಯ ತಂಡ:


ಭಾರತ ಸಂಭಾವ್ಯ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ಸಿ), ರಿಚಾ ಘೋಷ್ (ವಾಕ್), ದಯಾಲನ್ ಹೇಮಲತಾ, ದೀಪ್ತಿ ಶರ್ಮಾ, ಸ್ನೇಹ ರಾಣಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್/ ರಾಜೇಶ್ವರಿ ಗಾಯಕ್‌ವಾಡ್, ರೇಣುಕಾ ಸಿಂಗ್


ಪಾಕಿಸ್ತಾನ ಸಂಭಾವ್ಯ ತಂಡ: ಮುನೀಬಾ ಅಲಿ (wk), ಸಿದ್ರಾ ಅಮೀನ್, ಬಿಸ್ಮಾ ಮರೂಫ್ (c), ಒಮೈಮಾ ಸೊಹೈಲ್, ನಿದಾ ದಾರ್, ಅಲಿಯಾ ರಿಯಾಜ್, ಆಯೇಶಾ ನಸೀಮ್, ಕೈನಾತ್ ಇಮ್ತಿಯಾಜ್, ಡಯಾನಾ ಬೇಗ್, ತುಬಾ ಹಸನ್, ನಶ್ರಾ ಸಂಧು

Published by:shrikrishna bhat
First published: