• Home
  • »
  • News
  • »
  • sports
  • »
  • Womens Asia Cup 2022: ಮಹಿಳಾ ಏಷ್ಯಾ ಕಪ್ 2022​ ತಂಡಗಳು, ಲೈವ್​ ಸ್ಟ್ರೀಮಿಂಗ್​ಗಳ ಸಂಪೂರ್ಣ ವಿವರ

Womens Asia Cup 2022: ಮಹಿಳಾ ಏಷ್ಯಾ ಕಪ್ 2022​ ತಂಡಗಳು, ಲೈವ್​ ಸ್ಟ್ರೀಮಿಂಗ್​ಗಳ ಸಂಪೂರ್ಣ ವಿವರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Womens Asia Cup 2022: ಅಕ್ಟೋಬರ್​​ 1ರಿಂದ ಮಹಿಳಾ ಏಷ್ಯಾ ಕಪ್​ 2022 ಆರಂಭವಾಗಲಿದೆ. ಈಗಾಗಲೇ ಮೆಗಾ ಟೂರ್ನಿಗೆ ಎಲ್ಲಾ ದೇಶದವರು ತಮ್ಮ ತಮ್ಮ ತಂಡಗಳು ಪ್ರಕಟಿಸುತ್ತಿದೆ.

  • Share this:

ಮಹಿಳಾ ಏಷ್ಯಾಕಪ್‌ನ 2022 (Womens Asia Cup 2022) ಹೊಸ ಆವೃತ್ತಿಗೆ ಹಾಲಿ ಚಾಂಪಿಯನ್ ಬಾಂಗ್ಲಾದೇಶ (Bangladesh) ಆತಿಥ್ಯವನ್ನು ವಹಿಸಿಕೊಂಡಿದೆ. ಮಹಿಳೆಯರ ಏಷ್ಯಾ ಕಪ್ 2022 ಅಕ್ಟೋಬರ್ 1ರಿಂದ ಆರಂಭವಾಗಲಿದೆ. ಈ ಬಾರಿ ಏಷ್ಯಾ ಕಪ್​ ಪ್ರಶಸ್ತಿಗಾಗಿ 7 ತಂಡಗಳು ಸೆಣಸಾಡಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಯುಎಇ, ಮಲೇಷ್ಯಾ ಮತ್ತು ಥೈಲ್ಯಾಂಡ್ ತಂಡಗಳು ಸೆಣಸಾಡಲಿದ್ದು, ಒಟ್ಟು 24 ಪಂದ್ಯಗಳು ನಡೆಯಲಿವೆ. ಅಂತಿಮ ಪಂದ್ಯವು ಅಕ್ಟೋಬರ್ 15 ರಂದು ನಡೆಯಲಿದೆ. ಹಾಗಿದ್ದರೆ ಮಹಿಳಾ ಏಷ್ಯಾ ಕಪ್​ 2022ರ ತಂಡಗಳು ಮತ್ತು ಮಹಿಳಾ ಏಷ್ಯಾ ಕಪ್ 2022 ಲೈವ್ ಸ್ಟ್ರೀಮಿಂಗ್ (Live Streaming) ಎಲ್ಲಿ ಎಂಬ ಸಂಪೂರ್ಣ ವಿಷಯವನ್ನು ತಿಳಿದುಕೊಳ್ಳೋಣ ಬನ್ನಿ.


ನೇರ ಪ್ರಸರಾ ಮತ್ತು ಲೈವ್​ ಸ್ಟ್ರೀಮಿಂಗ್ ಎಲ್ಲಿ?:


ಇನ್ನು, ಮಹಿಳಾ ಏಷ್ಯಾ ಕಪ್​ 2022 ಪಂದ್ಯವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರದಲ್ಲಿ ನೋಡಬಹುದು. ಅದರಂತೆ ಮೊಬೈಲ್​ನಲ್ಲಿ ಅಂದರೆ ಲೈವ್​ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಜೊತೆಗೆ ಕೆಲ ಪಂದ್ಯಗಳು ಬೆಳಿಗ್ಗೆ 9 ಗಂಟೆಯಿಂದ ಮತ್ತು ಕೆಲ ಮ್ಯಾಚ್​ಗಳು ಮಧ್ಯಾಹ್ನ 1:30ರಿಂದ ಆರಂಭವಾಗಲಿದೆ.


ಮಹಿಳಾ ಏಷ್ಯಾ ಕಪ್ 2022 ತಂಡ:


ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (c), ಸ್ಮೃತಿ ಮಂಧಾನ (ವಿಸಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಸಬ್ಬಿನೇನಿ ಮೇಘನಾ, ರಿಚಾ ಘೋಷ್ (wk), ಸ್ನೇಹ ರಾಣಾ, ದಯಾಳನ್ ಹೇಮಲತಾ, ಮೇಘನಾ ಸಿಂಗ್, ರೇಣುಕಾ ಠಾಕೂರ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ರಾಜೇಶ್ವರಿ ಗಾಯಕ್ವಾಡ್ , ಕೆಪಿ ನವಗಿರೆ ರಿಸರ್ವ್ ಆಟಗಾರರು: ತನಿಯಾ ಸಪ್ನಾ ಭಾಟಿಯಾ, ಸಿಮ್ರಾನ್ ದಿಲ್ ಬಹದ್ದೂರ್.


ಇದನ್ನೂ ಓದಿ: Womens Asia Cup 2022: ಮಹಿಳಾ ಏಷ್ಯಾ ಕಪ್​ 2022 ವೇಳಾಪಟ್ಟಿ ಪ್ರಕಟ, ಹೇಗಿದೆ ಟೀಂ ಇಂಡಿಯಾ ವುಮೆನ್ಸ್ ಟೀಂ?


ಪಾಕಿಸ್ತಾನ ತಂಡ: ಬಿಸ್ಮಾ ಮರೂಫ್ (ಸಿ), ಐಮೆನ್ ಅನ್ವರ್, ಅಲಿಯಾ ರಿಯಾಜ್, ಆಯೇಶಾ ನಸೀಮ್, ಡಯಾನಾ ಬೇಗ್, ಕೈನಾತ್ ಇಮ್ತಿಯಾಜ್, ಮುನೀಬಾ ಅಲಿ (ವಾಕ್), ನಿದಾ ದಾರ್, ಒಮೈಮಾ ಸೊಹೈಲ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್, ಸಿದ್ರಾ ಅಮೀನ್, ಸಿದ್ರಾ ನವಾಜ್ (ವಾಕ್) ಮತ್ತು ತುಬಾ ಹಸನ್ . ಮೀಸಲು ಆಟಗಾರರು: ನಶ್ರಾ ಸುಂಧು, ನತಾಲಿಯಾ ಪರ್ವೈಜ್, ಉಮ್ಮೆ ಹನಿ ಮತ್ತು ವಹೀದಾ ಅಖ್ತರ್


ಶ್ರೀಲಂಕಾ ತಂಡ: ಚಾಮರಿ ಅಥಾಪತ್ತು (ಸಿ), ಹಾಸಿನಿ ಪೆರೇರಾ, ಹರ್ಷಿತಾ ಸಮರವಿಕ್ರಮ, ಕವೀಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವನಿ (ವಾಕ್), ಕೌಶಿನಿ ನುತ್ಯಂಗಾ, ಓಷಧಿ ರಣಸಿಂಗ್, ಮಲ್ಷಾ ಶೆಹಾನಿ, ಮದುಶಿಕಾ ಮೆತ್ತಾನಂದ, ಇನೋಕಾ ರಣವೀರ, ಸುಗಂಧಿಕಾ, ರಶ್ಮಿ ಸಿಲ್ವಾ, ರಶ್ಮಿ ಸಿಲ್ವಾ ಸೆವ್ವಂಡಿ.


ಇದನ್ನೂ ಓದಿ: Sunil Chhetri: ಇದು ರೊನಾಲ್ಡೊ, ಮೆಸ್ಸಿ ಕಥೆಯಲ್ಲ, ನಮ್ಮ ನಾಯಕ ಸುನೀಲ್​ ಛೆಟ್ರಿ ಸ್ಟೋರಿ! ಫಿಫಾದಿಂದಲೇ ಗೌರವ


ಮಲೇಷ್ಯಾ ತಂಡ: ವಿನಿಫ್ರೆಡ್ ದುರೈಸಿಂಗಮ್ (ಸಿ), ಮಾಸ್ ಎಲಿಸಾ (ವಿಸಿ), ಸಶಾ ಅಜ್ಮಿ, ಐಸ್ಯಾ ಎಲೀಸಾ, ಐನ್ನಾ ಹಮೀಜಾ ಹಾಶಿಮ್, ಎಲ್ಸಾ ಹಂಟರ್, ಜಮಾಹಿದಯಾ ಇಂಟಾನ್, ಮಹಿರಾ ಇಜ್ಜಾತಿ ಇಸ್ಮಾಯಿಲ್, ವಾನ್ ಜೂಲಿಯಾ (ವಾಕ್), ಧನುಸ್ರಿ ಮುಹುನನ್, ಐನಾ ನಜ್ವಾ (ವಾಕ್ಸೆ), ನುರಿಲ್ಯಾ, ನೂರ್ ಅರಿಯಾನ್ನಾ ನತ್ಸ್ಯಾ, ನೂರ್ ದಾನಿಯಾ ಸ್ಯುಹದಾ, ನೂರ್ ಹಯಾತಿ ಜಕಾರಿಯಾ.


ಆದರೆ ಇನ್ನೂ, ಬಾಂಗ್ಲಾದೇಶ, ಥೈಲ್ಯಾಂಡ್ ಮತ್ತು ಯುಎಇ ತಮ್ಮ ತಂಡಗಳನ್ನು ಪ್ರಕಟಿಸಬೇಕಿದೆ.

Published by:shrikrishna bhat
First published: