ಮಹಿಳಾ ಟಿ20 ವಿಶ್ವಕಪ್‌ನ 2023ರ (T20 World Cup) ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ (IND vs AUS) ವಿರುದ್ಧ ಸೋತಿದೆ. ಈ ಪಂದ್ಯವನ್ನು ಆಸ್ಟ್ರೇಲಿಯಾ 5 ರನ್‌ಗಳಿಂದ ಗೆದ್ದು ಏಳನೇ ಬಾರಿಗೆ ಫೈನಲ್ ಪ್ರವೇಶಿಸಿತು. ಭಾರತ ತಂಡ ಮತ್ತೊಮ್ಮೆ ನಿರಾಸೆ ಅನುಭವಿಸಿತು. ಈ ಸೋಲಿನ ನಂತರ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಭಾವುಕರಾದರು. ಪಂದ್ಯದ ನಂತರ, ಮಾತನಾಡುವಾಗ ಹರ್ಮನ್ ಕನ್ನಡಕವನ್ನು ಧರಿಸಿದ್ದರು. ಕಾರ್ಯಕ್ರಮ ನಿರೂಪಕಿ ಮಾತನಾಡುತ್ತಾ, ದೇಶ ನಾನು ಅಳುವುದನ್ನು ನೋಡಲು ಬಯಸುವುದಿಲ್ಲ ಎಂದು ಹೇಳಿದರು. ಹಾಗಾಗಿ ಕನ್ನಡಕ ಹಾಕಿಕೊಂಡು ಇಲ್ಲಿಗೆ ಬಂದಿದ್ದೇನೆ ಎಂದು ಭಾವುಕರಾಗಿ ನುಡಿದರು.
ಭಾವುಕರಾದ ಹರ್ಮನ್:
ನನ್ನ ಕಣ್ಣಲ್ಲಿ ನೀರು ಬರುವುದನ್ನು ದೇಶ ನೋಡುವುದು ಬೇಡ ಎಂದು ಕನ್ನಡಕ ಹಾಕಿಕೊಂಡು ಇಲ್ಲಿಗೆ ಬಂದಿದ್ದೇನೆ. ಆದರೆ ನಾವು ಆಟವನ್ನು ಸುಧಾರಿಸುತ್ತೇವೆ ಮತ್ತು ದೇಶಕ್ಕೆ ಮತ್ತೊಮ್ಮೆ ಈ ರೀತಿಯ ನಿರಾಸೆಗೆ ಅವಕಾಶ ನೀಡುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ ಎಂದು ಹರ್ಮನ್‌ಪ್ರೀತ್ ಹೇಳಿದ್ದಾರೆ.
Harmanpreet Kaur : don't want my country to see my crying, hence I am wearing these glasses, I promise, we will improve and wont let out nation down like this again.
What a statement from the Champ.#INDWvsAUSW pic.twitter.com/FHbwGjNg2q
— Roshan Rai (@RoshanKrRaii) February 23, 2023
ಇದನ್ನೂ ಓದಿ: IND vs AUS: ಪಂದ್ಯದ ಗತಿಯನ್ನೇ ಬದಲಿಸಿದ ಆ ಒಂದು ವಿಕೆಟ್, ವಿಶ್ವಕಪ್ನಲ್ಲಿ ಭಾರತದ ಸೋಲಿಗೆ ಇದೇ ಕಾರಣ
ಪಂದ್ಯದ ಸೋಲಿಗೆ ಕಾರಣ ತಿಳಿಸಿದ ನಾಯಕಿ:
ಸೋಲಿಗೆ ಕಾರಣಗಳನ್ನು ವಿವರಿಸಿದ ಹರ್ಮನ್, ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡರೂ, ನಾವು ಉತ್ತಮ ಬ್ಯಾಟಿಂಗ್ ಲೈನ್‌ಅಪ್ ಅನ್ನು ಹೊಂದಿದ್ದೇವೆ ಎಂದು ನಮಗೆ ತಿಳಿದಿತ್ತು. ಜೇಮಿ ತನ್ನ ಬ್ಯಾಟಿಂಗ್‌ಗೆ ಮನ್ನಣೆ ನೀಡಿದಳು. ಅವಳು ನಮಗೆ ಬೇಕಾದ ರೀತಿಯಲ್ಲಿಯೇ ವೇಗವಾಗಿ ರನ್ ಗಳಿಸಿದಳು. ಅಂತಹ ಪ್ರದರ್ಶನವು ಎಲ್ಲರಿಗೂ ಸಂತೋಷವನ್ನು ತರುತ್ತದೆ. ತನ್ನ ಸಹಜ ಆಟವನ್ನು ಆಡುತ್ತಾ ಖುಷಿಪಟ್ಟಳು. ಆದರೆ ನಾವು ಕ್ಯಾಚ್ ಅನ್ನು ಸುಲಭವಾಗಿ ಬಿಟ್ಟಿದ್ದೇವೆ. ಮಿಸ್ಫೀಲ್ಡ್ ಕೂಡ ಮಾಡಿದ್ದು ದೊಡ್ಡ ತಪ್ಪಾಯಿತು. ಇದರಿಂದ ಕಲಿಯಬೇಕಿದೆ ಮತ್ತು ಈ ತಪ್ಪುಗಳನ್ನು ಪುನರಾವರ್ತಿಸದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ನಿರ್ಣಾಯಕ ಹಂತದಲ್ಲಿ ಕೌರ್ ವಿಕೆಟ್:
ಇನ್ನು, ಜೆಮಿಮಾ ರೋಡ್ರಿಗಸ್ ಔಟಾದ ನಂತರ ಹರ್ಮನ್‌ಪ್ರೀತ್ ಕೌರ್ ಸ್ಫೋಟಕ ಆಟ ಮುಂದುವರೆಸಿದರು. ರಿಚಾ ಘೋಷ್ ಜೊತೆಗೂಡಿ 36 ರನ್‌ಗಳನ್ನು ಕಲೆಹಾಕಿದರು. ಆದರೆ, ಭಾರತಕ್ಕೆ ಅದೃಷ್ಟ ಕೈಕೊಟ್ಟಿತ್ತು, ಉತ್ತಮವಾಗಿ ಆಡುತ್ತಿದ್ದ ಹರ್ಮನ್‌ಪ್ರೀತ್ ಕೌರ್ ರನೌಟ್ ಆದರು. ಅವರು 34 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 52 ರನ್ಗಳಿಸಿದ್ದ ಭಾರತಕ್ಕೆ ಗೆಲ್ಲಲು 32 ಎಸೆತಗಳಲ್ಲಿ 40 ರನ್ಗಳ ಅವಶ್ಯಕತೆ ಇದ್ದಾಗ ವಿಕೆಟ್ ಒಪ್ಪಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ