• Home
  • »
  • News
  • »
  • sports
  • »
  • Womens Asia Cup 2022: ಮಹಿಳಾ ಏಷ್ಯಾ ಕಪ್​ 2022 ವೇಳಾಪಟ್ಟಿ ಪ್ರಕಟ, ಹೇಗಿದೆ ಟೀಂ ಇಂಡಿಯಾ ವುಮೆನ್ಸ್ ಟೀಂ?

Womens Asia Cup 2022: ಮಹಿಳಾ ಏಷ್ಯಾ ಕಪ್​ 2022 ವೇಳಾಪಟ್ಟಿ ಪ್ರಕಟ, ಹೇಗಿದೆ ಟೀಂ ಇಂಡಿಯಾ ವುಮೆನ್ಸ್ ಟೀಂ?

Women Asia Cup 2022

Women Asia Cup 2022

Womens Asia Cup 2022: ಪುರುಷರ ವಿಭಾಗದಲ್ಲಿ ಏಷ್ಯಾ ಕಪ್ (Asia Cup 2022) ಮುಗಿದು ಇನ್ನೂ ಒಂದು ತಿಂಗಳು ಕಳೆದಿಲ್ಲ, ಆದರೆ ಇದೀಗ ಮತ್ತೆ ಏಷ್ಯಾ ಕಪ್​ ಮತ್ತೊಮ್ಮೆ ಕ್ರಿಕೆಟ್ (Cricket)  ಪ್ರೇಮಿಗಳನ್ನು ರಂಜಿಸಲು ಬರುತ್ತಿದೆ. ಹೌದು, ಬಾಂಗ್ಲಾದೇಶದಲ್ಲಿ ಏಷ್ಯಾಕಪ್ ಮಹಿಳಾ ವಿಭಾಗದಲ್ಲಿ ನಡೆಯಲಿದೆ. 

ಮುಂದೆ ಓದಿ ...
  • Share this:

ಪುರುಷರ ವಿಭಾಗದಲ್ಲಿ ಏಷ್ಯಾ ಕಪ್ (Asia Cup 2022) ಮುಗಿದು ಇನ್ನೂ ಒಂದು ತಿಂಗಳು ಕಳೆದಿಲ್ಲ, ಆದರೆ ಇದೀಗ ಮತ್ತೆ ಏಷ್ಯಾ ಕಪ್​ ಮತ್ತೊಮ್ಮೆ ಕ್ರಿಕೆಟ್ (Cricket)  ಪ್ರೇಮಿಗಳನ್ನು ರಂಜಿಸಲು ಬರುತ್ತಿದೆ. ಹೌದು, ಬಾಂಗ್ಲಾದೇಶದಲ್ಲಿ ಏಷ್ಯಾಕಪ್ ಮಹಿಳಾ ವಿಭಾಗದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯು ಅಕ್ಟೋಬರ್ 1 ರಿಂದ 15 ರವರೆಗೆ ನಡೆಯಲಿದೆ. ಒಟ್ಟು 7 ತಂಡಗಳು ಭಾಗವಹಿಸುತ್ತಿವೆ. ಭಾರತ ಮಹಿಳಾ ತಂಡದ (Womens Team India) ಜೊತೆಗೆ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ, ಥಾಯ್ಲೆಂಡ್ ಮತ್ತು ಯುಎಇ ತಂಡಗಳಿವೆ. ಇದುವರೆಗೆ ಈ ಟೂರ್ನಿ 7 ಬಾರಿ ನಡೆದಿದ್ದು. ಭಾರತ 6 ಬಾರಿ ಗೆದ್ದಿದೆ. ಬಾಂಗ್ಲಾದೇಶ ತಂಡ ಒಮ್ಮೆ ಗೆದ್ದಿದೆ. ಈ ಟೂರ್ನಿಯಲ್ಲಿ ದಾಖಲೆಯ 8ನೇ ಬಾರಿ ಗೆಲ್ಲುವ ಗುರಿಯೊಂದಿಗೆ ಭಾರತ ಕಣಕ್ಕೆ ಇಳಿಯಲಿದೆ. 


ಮಹಿಳಾ ಏಷ್ಯಾ ಕಪ್​ 2022 ಪಂದ್ಯಾವಳಿ:


ಅಕ್ಟೋಬರ್ 1 ರಂದು ಬಾಂಗ್ಲಾದೇಶ ಮತ್ತು ಥಾಯ್ಲೆಂಡ್ ನಡುವಿನ ಮೊದಲ ಪಂದ್ಯದೊಂದಿಗೆ ಪಂದ್ಯಾವಳಿಯು ಪ್ರಾರಂಭವಾಗಲಿದೆ. ಅದೇ ದಿನ ಭಾರತವೂ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ಆಡಲಿದೆ. ಎಲ್ಲಾ 7 ತಂಡಗಳ ನಡುವೆ ರೌಂಡ್ ರಾಬಿನ್ ಲೀಗ್ ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು ಉಳಿದ 6 ತಂಡಗಳ ವಿರುದ್ಧ ಒಂದು ಪಂದ್ಯವನ್ನು ಆಡಲಿದೆ. ಈ ಪಂದ್ಯಗಳು ಮುಗಿದ ನಂತರ ಅಗ್ರ 4 ತಂಡಗಳು ಸೆಮಿಫೈನಲ್ ತಲುಪಲಿವೆ.


ಮಹಿಳಾ ಏಷ್ಯಾ ಕಪ್​ 2022 ವೇಳಾಪಟ್ಟಿ:


ಅಕ್ಟೋಬರ್ 1: ಬಾಂಗ್ಲಾದೇಶ vs ಥೈಲ್ಯಾಂಡ್- ಬೆಳಗ್ಗೆ 8.30
ಅಕ್ಟೋಬರ್ 1: ಭಾರತ vs ಶ್ರೀಲಂಕಾ- ಮಧ್ಯಾಹ್ನ 1.00
ಅಕ್ಟೋಬರ್ 2: ಮಲೇಷ್ಯಾ vs ಪಾಕಿಸ್ತಾನ- ಬೆಳಗ್ಗೆ 8.30
ಅಕ್ಟೋಬರ್ 2: ಶ್ರೀಲಂಕಾ vs ಯುಎಇ- ಮಧ್ಯಾಹ್ನ 1.00
ಅಕ್ಟೋಬರ್ 3: ಮಲೇಷ್ಯಾ vs ಪಾಕಿಸ್ತಾನ- ಬೆಳಗ್ಗೆ 8.30
ಅಕ್ಟೋಬರ್ 3: ಭಾರತ vs ಮಲೇಷ್ಯಾ- ಮಧ್ಯಾಹ್ನ 1.00
ಅಕ್ಟೋಬರ್ 4: ಶ್ರೀಲಂಕಾ vs ಥೈಲ್ಯಾಂಡ್ - ಬೆಳಗ್ಗೆ 8.30
ಅಕ್ಟೋಬರ್ 4: ಭಾರತ vs ಯುಎಇ - ಮಧ್ಯಾಹ್ನ 1.00
ಅಕ್ಟೋಬರ್ 5: ಮಲೇಷ್ಯಾ vs ಯುಎಇ - ಮಧ್ಯಾಹ್ನ 1.00
ಅಕ್ಟೋಬರ್ 6: ಪಾಕಿಸ್ತಾನ vs ಥೈಲ್ಯಾಂಡ್ - ಬೆಳಗ್ಗೆ 8.30


ಇದನ್ನೂ ಓದಿ: Sunil Chhetri: ಇದು ರೊನಾಲ್ಡೊ, ಮೆಸ್ಸಿ ಕಥೆಯಲ್ಲ, ನಮ್ಮ ನಾಯಕ ಸುನೀಲ್​ ಛೆಟ್ರಿ ಸ್ಟೋರಿ! ಫಿಫಾದಿಂದಲೇ ಗೌರವ


ಅಕ್ಟೋಬರ್ 6: ಬಾಂಗ್ಲಾದೇಶ vs ಮಲೇಷ್ಯಾ - ಮಧ್ಯಾಹ್ನ 1.00
ಅಕ್ಟೋಬರ್ 7: ಥೈಲ್ಯಾಂಡ್ vs ಯುಎಇ - ಬೆಳಗ್ಗೆ 8.30
ಅಕ್ಟೋಬರ್ 7: ಭಾರತ vs ಪಾಕಿಸ್ತಾನ - ಮಧ್ಯಾಹ್ನ 1.00
ಅಕ್ಟೋಬರ್ 8: ಮಲೇಷ್ಯಾ vs ಶ್ರೀಲಂಕಾ - ಬೆಳಗ್ಗೆ 8.30
ಅಕ್ಟೋಬರ್ 8: ಭಾರತ vs ಬಾಂಗ್ಲಾದೇಶ - ಮಧ್ಯಾಹ್ನ 1.00
ಅಕ್ಟೋಬರ್ 9: ಮಲೇಷ್ಯಾ vs ಥೈಲ್ಯಾಂಡ್- ಬೆಳಗ್ಗೆ 8.30
ಅಕ್ಟೋಬರ್ 9: ಪಾಕಿಸ್ತಾನ vs ಯುಎಇ - ಮಧ್ಯಾಹ್ನ 1.00
ಅಕ್ಟೋಬರ್ 10: ಬಾಂಗ್ಲಾದೇಶ vs ಶ್ರೀಲಂಕಾ -  ಬೆಳಗ್ಗೆ 8.30
ಅಕ್ಟೋಬರ್ 10: ಭಾರತ vs ಥೈಲ್ಯಾಂಡ್- ಮಧ್ಯಾಹ್ನ 1.00
ಅಕ್ಟೋಬರ್ 11: ಬಾಂಗ್ಲಾದೇಶ vs ಯುಎಇ - ಬೆಳಗ್ಗೆ 8.30
ಅಕ್ಟೋಬರ್ 11: ಪಾಕಿಸ್ತಾನ vs ಶ್ರೀಲಂಕಾ - ಮಧ್ಯಾಹ್ನ 1.00
ಅಕ್ಟೋಬರ್ 13: ಸೆಮಿಫೈನಲ್ 10 - ಬೆಳಗ್ಗೆ 8.30
ಅಕ್ಟೋಬರ್ 13: ಸೆಮಿಫೈನಲ್ 2  - ಮಧ್ಯಾಹ್ನ 1.00
ಅಕ್ಟೋಬರ್ 15: ಫೈನಲ್​ ಪಂದ್ಯ - ಮಧ್ಯಾಹ್ನ 1.00


ಇದನ್ನೂ ಓದಿ: IND vs SA ODI: ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾದ ಈ ಸ್ಟಾರ್ ಆಟಗಾರನಿಗೆ ಉಪನಾಯಕನ ಪಟ್ಟ?


ಮಹಿಳಾ ಏಷ್ಯಾ ಕಪ್​ 2022 ಭಾರತ ತಂಡ:


ಹರ್ಮನ್‌ಪ್ರೀತ್ ಕೌರ್ (c), ಸ್ಮೃತಿ ಮಂಧಾನ (ವಿಸಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಸಬ್ಬಿನೇನಿ ಮೇಘನಾ, ರಿಚಾ ಘೋಷ್ (wk), ಸ್ನೇಹ ರಾಣಾ, ದಯಾಳನ್ ಹೇಮಲತಾ, ಮೇಘನಾ ಸಿಂಗ್, ರೇಣುಕಾ ಠಾಕೂರ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ರಾಜೇಶ್ವರಿ ಗಾಯಕ್ವಾಡ್ , ಕೆಪಿ ನವಗಿರೆ ರಿಸರ್ವ್ ಆಟಗಾರರು: ತನಿಯಾ ಸಪ್ನಾ ಭಾಟಿಯಾ, ಸಿಮ್ರಾನ್ ದಿಲ್ ಬಹದ್ದೂರ್

Published by:shrikrishna bhat
First published: