ಕ್ರಿಕೆಟ್ ಕಾಶಿಯಲ್ಲಿ ಗೆದ್ದು ಬೀಗಿದ ಆಂಗ್ಲರು; ಕೊಹ್ಲಿ ಪಡೆಗೆ ಸತತ 2ನೇ ಸೋಲು

news18
Updated:August 12, 2018, 10:45 PM IST
ಕ್ರಿಕೆಟ್ ಕಾಶಿಯಲ್ಲಿ ಗೆದ್ದು ಬೀಗಿದ ಆಂಗ್ಲರು; ಕೊಹ್ಲಿ ಪಡೆಗೆ ಸತತ 2ನೇ ಸೋಲು
news18
Updated: August 12, 2018, 10:45 PM IST
ನ್ಯೂಸ್ 18 ಕನ್ನಡ 

ಲಂಡನ್ (ಆ. 12): ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದ್ದು, ನಾಲ್ಕೇ ದಿನದಲ್ಲಿ ಪಂದ್ಯ ಮುಕ್ತಾಯಗೊಂಡಿದೆ. ಭಾರತ ವಿರುದ್ಧ ಇಂಗ್ಲೆಂಡ್ ಇನ್ನಿಂಗ್ಸ್ ಸೇರಿದಂತೆ 159 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಆಂಗ್ಲರ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಸತತ 2ನೇ ಸೋಲು ಅನುಭವಿಸಿದೆ.

ಮೊದಲ ಇನ್ನಿಂಗ್ಸ್ ಭಾರತ 107 ರನ್ ಆಲೌಟ್ ಆಗಿದ್ದಕ್ಕೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 6 ವಿಕೆಟ್ ನಷ್ಟಕ್ಕೆ 396 ರನ್ ದಾಖಲಿಸಿ 289 ರನ್​ಗಳ ಭರ್ಜರಿ ಮುನ್ನಡೆ ಸಾಧಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಟಾಪ್ ಆರ್ಡರ್ ಬ್ಯಾಟ್ಸ್​ಮನ್​​ಗಳ ವೈಫಲ್ಯದಿಂದಾಗಿ ಕೇವಲ 61 ರನ್​ ಆಗುವ ಹೊತ್ತಿಗೆ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡಿತು. ಮುರಳಿ ವಿಜಯ್ ಶೂನ್ಯಕ್ಕೆ ಔಟ್ ಆದರೆ, ಕೆ. ಎಲ್. ರಾಹುಲ್ 12 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ಉಪನಾಯಕ ರಹಾನೆ ಕೂಡ ಹೆಚ್ಚು ಕ್ರೀಸ್​ನಲ್ಲಿ ನಿಲ್ಲದೆ 13 ರನ್​ಗೆ ಸುಸ್ತಾದರು. ಇತ್ತ ಎಚ್ಚರಿಕೆಯಿಂದ ಇನ್ನಿಂಗ್ಸ್​ ಕಟ್ಟಲು ಹೊರಟ ಪೂಜಾರ ಹಾಗೂ ಕೊಹ್ಲಿಗೆ ಬ್ರಾಡ್ ಶಾಕ್ ನೀಡಿದರು. ಇಬ್ಬರು ತಲಾ 17 ರನ್ ಗಳಿಸಿ ಬ್ರಾಡ್ ಎಸೆತದಲ್ಲಿ ಔಟ್ ಆಗಿ ತಮ್ಮ ಇನ್ನಿಂಗ್ಸ್​ ಅನ್ನು ಕೊನೆಗೊಳಿಸಿದರು. ಬಳಿಕ ಬಂದ ದಿನೇಶ್ ಕಾರ್ತಿಕ್ ಕೂಡ ತಮ್ಮ ಕಳಪೆ ಆಟವನ್ನು ಮುಂದುವರೆಸಿ ಶೂನ್ಯಕ್ಕೆ ಔಟ್ ಆದರು. ಈ ಸಂದರ್ಭ ಜೊತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ಆರ್. ಅಶ್ವಿನ್ ಅರ್ಧಶತಕದ ಜೊತೆಯಾಟ ನೀಡಿದರಾದರು ಯಾವುದೇ ಪ್ರಯೋಜನವಾಗಿಲ್ಲ. ಪಾಂಡ್ಯ 26 ರನ್​ಗಳಿಸಿ ಔಟ್ ಆದ ಹೊತ್ತಿಗೆ ಭಾರತದ ಸೋಲು ಖಚಿತವಾಯಿತು. ಬಳಿಕ ಬಂದ ಕುಲ್ದೀಪ್ ಯಾದವ್ ಹಾಗೂ ಮೊಹಮ್ಮದ್ ಶಮಿ ಸೊನ್ನೆ ಸುತ್ತಿಗೊಂಡರೆ, ಇಶಾಂತ್ ಶರ್ಮಾ 2 ರನ್​ಗಳಿಸಿ ಔಟ್ ಆಗುವುದರೊಂದಿಗೆ ಟೀಂ ಇಂಡಿಯಾ 130 ರನ್​​ಗಳಿಗೆ ಸರ್ವಪತನ ಕಂಡಿತು. ಟೀಂ ಇಂಡಿಯಾ ಪರ ಆರ್. ಅಶ್ವಿನ್ ಅಜೇಯ 33 ರನ್​ ಗಳಿಸಿದ್ದೆ ಗರಿಷ್ಠ ಮೊತ್ತವಾಗಿತ್ತು. ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ ಹಾಗೂ ಆಂಡರ್ಸರ್ 4 ವಿಕೆಟ್ ಪಡೆದು ಮಿಂಚಿದರೆ, ಕ್ರಿಸ್ ವೋಕ್ಸ್ 2 ವಿಕೆಟ್ ಪಡೆದರು.

ಈ ಗೆಲುವಿನ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 2-0 ಮುನ್ನಡೆ ಸಾಧಿಸಿದೆ. ಮುಂದಿನ 3ನೇ ಟೆಸ್ಟ್​ ಪಂದ್ಯ ಆಗಸ್ಟ್​ 18ರಿಂದ ನ್ಯಾಟಿಂಗ್​ಹ್ಯಾಮ್​ನ ಟ್ರೆಂಟ್​​ ಬ್ರಿಡ್ಜ್​​ನಲ್ಲಿ ನಡೆಯಲಿದೆ.

ಪಂದ್ಯ ಶ್ರೇಷ್ಠ: ಕ್ರಿಸ್ ವೋಕ್ಸ್​
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626