ವಿಂಬಲ್ಡನ್: ಪುರುಷರ ಸಿಂಗಲ್ಸ್ ಫೈನಲ್ ಪ್ರವೇಶಿಸಿದ ನೊವಾಕ್ ಜೊಕೋವಿಕ್


Updated:July 14, 2018, 9:32 PM IST
ವಿಂಬಲ್ಡನ್: ಪುರುಷರ ಸಿಂಗಲ್ಸ್ ಫೈನಲ್ ಪ್ರವೇಶಿಸಿದ ನೊವಾಕ್ ಜೊಕೋವಿಕ್
  • Share this:
-ನ್ಯೂಸ್ 18

ಲಂಡನ್(ಜು.14): ವಿಂಬಲ್ಡನ್​ನ 2ನೇ ಅತ್ಯಂತ ದೀರ್ಘಾವಧಿಯ ಪಂದ್ಯದಲ್ಲಿ ಶನಿವಾರ ರಾಫೆಲ್ ನಡಾಲ್ ಅವರನ್ನ 6-4, 3-6, 7-6(11/9), 3-6, 10-8ರ ಅಂತರದಿಂದ ಮಣಿಸಿದ ನೊವಾಕ್ ಜೊಕೋವಿಕ್ ವಿಂಬಲ್ದನ್ ಸಿಂಗಲ್ಸ್ ಫೈನಲ್​ಗೇರಿದ್ದಾರೆ.

2011, 2014 ಮತ್ತು 2015ರ ಚಾಂಪಿಯನ್ ಜೊಕೋವಿಕ್, 97 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಫೈನಲ್​ಗೆ ಲಗ್ಗೆ ಇಟ್ಟಿರುವ ದಕ್ಷಿಣ ಆಫ್ರಿಕಾದ ಕೆವಿನ್ ಅಂಡರ್ಸನ್ ವಿರುದ್ಧ ಫೈನಲ್​ನಲ್ಲಿ ಸೆಣೆಸಲಿದ್ದಾರೆ. ಒಂದೊಮ್ಮೆ ನಾಳಿನ ಫೈನಲ್​ನಲ್ಲಿ ಜೊಕೋವಿಕ್ ಜಯ ಗಳಿಸಿದರೆ 13ನೇ ಗ್ರ್ಯಾನ್ ಸ್ಲ್ಯಾಮ್ ಗೆದ್ದಂತಾಗುತ್ತದೆ. ನಡಾಲ್ 17 ಮತ್ತು ರೋಜರ್ ಫೆಡರರ್ 20 ಗ್ರ್ಯಾನ್ ಸ್ಲ್ಯಾಮ್ ಸಾಧನೆ ಮಾಡಿದ್ದಾರೆ.

ಶುಕ್ರವಾರ ನಡೆದ ಮೊದಲ ಸೆಮಿಫೈನಲ್​ನಲ್ಲಿ .ಜಾನ್ ಇಸ್ನೇರ್ ಅವರನ್ನ ಮಣಿಸಲು ಅಂಡರ್ಸ್ನ್ 6 ಗಂಟೆ 36 ನಿಮಿಷ ತೆಗೆದುಕೊಂಡಿದ್ದರು.ಇದೀಗ, ಜೊಕೋವಿಕ್ ಮತ್ತು ನಡಾಲ್ ನಡುವಿನ ಪಂದ್ಯ 5 ಗಂಟೆ 14 ನಿಮಿಷ ತೆಗೆದುಕೊಂಡಿದ್ದು, 2ನೇ ದೀರ್ಘಾವಧಿಯ ಪಂದ್ಯ ಎನಿಸಿಕೊಂಡಿದೆ.

ನಿನ್ನೆ ಪಂದ್ಯ ಸ್ಥಗಿತಗೊಂಡಾಗ ಜೊಕೋವಿಕ್ 2-1 ಸೆಟ್ ಮುನ್ನಡೆ ಪಡೆದಿದ್ದರು. ಇವತ್ತು 4ನೇ ಸೆಟ್ ಗೆಲ್ಲುವ ಮೂಲಕ ಫೈನಲ್​ಗೆ ಅರ್ಹತೆ ಗಿಟ್ಟಿಸಿದರು. ದೀರ್ಘಾವಧಿಯ ಪಂದ್ಯದಿಂದಾಗಿ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯವೂ ತಡವಾಗಿದೆ.
First published:July 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ