ಮ್ಯಾಥ್ಯೂಸ್ ನಾಯಕ ಸ್ಥಾನದಿಂದ ವಜಾ: ನನ್ನ ಬಲಿಪಶು ಮಾಡಿದ್ದಾರೆಂದು ಕಣ್ಣೀರಿಟ್ಟ ಮಾಜಿ ಕ್ಯಾಪ್ಟನ್

news18
Updated:September 25, 2018, 3:05 PM IST
ಮ್ಯಾಥ್ಯೂಸ್ ನಾಯಕ ಸ್ಥಾನದಿಂದ ವಜಾ: ನನ್ನ ಬಲಿಪಶು ಮಾಡಿದ್ದಾರೆಂದು ಕಣ್ಣೀರಿಟ್ಟ ಮಾಜಿ ಕ್ಯಾಪ್ಟನ್
ಶ್ರೀಲಂಕಾ ತಂಡ ಭಾರತ ವಿರುದ್ಧ ಸರಣಿ ಜಯಿಸಲೇ ಬೇಕೆಂದು ಟಿ-20 ಪಂದ್ಯಕ್ಕೆ ಒಂದುವರೆ ವರ್ಷದ ಬಳಿಕ ಅನುಭವಿ ಆ್ಯಂಜಲೋ ಮ್ಯಾಥ್ಯೂಸ್ ಅವರನ್ನು ತಮಡಕ್ಕೆ ಸೇರಿಸಿಕೊಂಡಿತ್ತು. ಆದರೆ, ಅದರಲ್ಲೂ ಎಡವಿತು.
  • News18
  • Last Updated: September 25, 2018, 3:05 PM IST
  • Share this:
ನ್ಯೂಸ್ 18 ಕನ್ನಡ

ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್​​ನಲ್ಲಿ ಶ್ರೀಲಂಕಾ ತಂಡ ಹೀನಾಯ ಪ್ರದರ್ಶನ ತೋರಿದ ಹಿನ್ನಲ್ಲೆಯಲ್ಲಿ ತಂಡದ ನಾಯಕ ಏಂಜೆಲೋ ಮ್ಯಾಥ್ಯೂಸ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಲಾಗಿದೆ. ಮ್ಯಾಥ್ಯೂಸ್ ಬದಲಿಗೆ ದಿನೇಶ್ ಚಾಂಡಿಮಲ್​​ಗೆ ನಾಯಕತ್ವದ ಹೊಣೆ ನೀಡಲಾಗಿದ್ದು, ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಚಾಂಡಿಮಲ್ ತಂಡವನ್ನು ಮುನ್ನಡೆಸಲಿದ್ದಾರೆ. ಏಷ್ಯಾ ಕಪ್​​ನಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ವಿರುದ್ಧ ಸೋತು ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರ ಬಿದ್ದಿತ್ತು. ಇದನ್ನೆಲ್ಲಾ ಮನಗಂಡು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮ್ಯಾಥ್ಯೂಸ್ ಅವರನ್ನು ನಾಯಕತ್ವ ಸ್ಥಾನದಿಂದ ವಜಾಮಾಡಿದೆ.

ಆದರೆ ಈ ಬಗ್ಗೆ ಮ್ಯಾಥ್ಯೂಸ್ ಬೇಸರ ವ್ಯಕ್ತಡಿಸಿದ್ದು, ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಹೇಳಿದ್ದಾರೆ. ಏಷ್ಯಾ ಕಪ್​​ನಲ್ಲಿ ತಂಡದ ಸೋಲಿನ ಆರೋಪ ಹೊರಲು ನಾನು ಸಿದ್ಧ. ಆದರೆ, ಈ ಇಡೀ ಸೋಲಿನ ಹೊಣೆಯನ್ನು ನನ್ನೊಬ್ಬನ ಮೇಲೆ ಕಟ್ಟಲಾಗುತ್ತಿದೆ. ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಈ ಹಿಂದೆ 2012ರಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮ್ಯಾಥ್ಯೂಸ್ ಅವರನ್ನು ನಾಯಕನಾಗಿ ಆಯ್ಕೆಮಾಡಿತ್ತು. ಬಳಿಕ 2017ರಲ್ಲಿ ಮತ್ತೆ ಬದಲಾವಣೆ ಮಾಡಿ ಒಂದು ವರ್ಷದ ಅವಧಿಯಲ್ಲಿ ಉಪುಲ್ ತರಂಗ, ತಿರಿಮನ್ನೆ, ಕಪುಗೆದರ, ಲಸಿತ್ ಮಾಲಿಂಗ ಹಾಗೂ ತಿಸೆರಾ ಪೆರೇರಾ ಅವರನ್ನು ನಾಯಕನಾಗಿ ಆಯ್ಕೆ ಮಾಡಿತ್ತು. ಆದರೆ ಏಷ್ಯಾ ಕಪ್ ಹೊತ್ತಿಗೆ ಮ್ಯಾಥ್ಯೂಸ್​​ ಅವರಿಗೆ ಮತ್ತೆ ನಾಯಕನ ಸ್ಥಾನ ನೀಡಲಾಗಿತ್ತು. ಸದ್ಯ ವಿಶ್ವಕಪ್​​ ಹತ್ತಿರವಾಗುತ್ತಿರುವಾಗಲೇ ತಂಡದ ನಾಯಕತ್ವದಲ್ಲಿ ಮತ್ತೆ ಮತ್ತೆ ಬದಲಾವಣೆ ಮಾಡುತ್ತಿರುವುದು ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಎಲ್ಲವು ಸರಿಯಿಲ್ಲ ಎಂಬುದು ಎದ್ದು ಕಾಣುತ್ತಿದೆ.
First published: September 25, 2018, 3:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading