ಇನ್ನೇನು ಇದೇ ಮಾರ್ಚ್ 31ಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 2023 ಶುರುವಾಗಲಿದ್ದು, ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಮತ್ತು ತಂಡದ ಹೊಡಿ ಬಡಿ ಪ್ರದರ್ಶನವನ್ನು ನೋಡಲು ತುಂಬಾನೇ ಕಾತುರತೆಯಿಂದ ಕಾಯುತ್ತಿದ್ದಾರೆ. ಈ ವರ್ಷದ ಐಪಿಎಲ್ ಶುರುವಾಗುವ ಮೊದಲು ಭಾರತದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಟಿ20 ಲೀಗ್ ನ ಕೊನೆಯ ಸೀಸನ್ ಅನ್ನು ಆಡಬಹುದು ಎಂಬ ಊಹಾಪೋಹಗಳು ಎದ್ದಿದ್ದವು ಅಂತ ಹೇಳಬಹುದು. ಮಾರ್ಚ್ 31 ರಂದು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (GT vs CSK) ನಡುವಿನ ಪಂದ್ಯದೊಂದಿಗೆ ಐಪಿಎಲ್ 2023 ರಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಮುನ್ನಡೆಸಲಿದ್ದಾರೆ. ಆದಾಗ್ಯೂ, ವಿಶ್ವದಾದ್ಯಂತದ ಧೋನಿ ಅಭಿಮಾನಿಗಳಿಗೆ ಇಲ್ಲಿ ಇನ್ನೊಂದು ಗುಡ್ ನ್ಯೂಸ್ ಇದೆ ನೋಡಿ.
ಧೋನಿ ಬಗ್ಗೆ ಭವಿಷ್ಯ ನುಡಿದ್ರು ರೈನಾ:
ಏನಪ್ಪಾ ಆ ಗುಡ್ ನ್ಯೂಸ್ ಅಂತೀರಾ? ಸಿಎಸ್‌ಕೆ ತಂಡದ ಮಾಜಿ ಬ್ಯಾಟರ್ ಸುರೇಶ್ ರೈನಾ ಅವರು ಐಪಿಎಲ್ 2024 ರಲ್ಲಿ ಆಡಲು ಧೋನಿ ಲಭ್ಯವಿರಬಹುದು ಎಂಬ ಸುಳಿವನ್ನು ಈಗ ನೀಡಿದ್ದಾರೆ. ಕಳೆದ ಋತುವಿನಲ್ಲಿ ಐಪಿಎಲ್ ನಿಂದ ನಿವೃತ್ತರಾದ ಮತ್ತು ಪ್ರಸ್ತುತ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್‌ಸಿ) 2023 ರಲ್ಲಿ ಇಂಡಿಯಾ ಮಹಾರಾಜಾಸ್ ಪರ ಆಡುತ್ತಿರುವ ಸುರೇಶ್ ರೈನಾ ಅವರು, ಧೋನಿ ಅವರು 2024ರ ಐಪಿಎಲ್ ನಲ್ಲಿ ಆಡುತ್ತಾರೆ ಎಂಬುವುದು ಈ ವರ್ಷದ ಐಪಿಎಲ್ ಸೀಸನ್ ನಲ್ಲಿ ಧೋನಿ ಅವರ ಫಾರ್ಮ್ ಮತ್ತು ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ ಎಂದು ಹೇಳುವ ಮೂಲಕ ಎಂ.ಎಸ್ ಧೋನಿ ಐಪಿಎಲ್‌ನಲ್ಲಿ ಆಡಬಹುದು ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಧೋನಿ ನಿವೃತ್ತಿ:
ಕೆಲವು ಸಮಯದಿಂದ ಐಪಿಎಲ್ ನಿಂದ ಎಂಎಸ್ ಧೋನಿ ಅವರು ನಿವೃತ್ತಿ ಪಡೆಯುತ್ತಾರೆ ಅನ್ನೋ ಕೆಲವು ವದಂತಿಗಳು ಹರಿದಾಡುತ್ತಿದ್ದವು. 2023ರಲ್ಲಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿರುವ ಧೋನಿ, ಹಲವಾರು ಸಂದರ್ಭಗಳಲ್ಲಿ ಈಗಾಗಲೇ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದಾರೆ. ಧೋನಿ ಈಗಾಗಲೇ ಹೊಸ ಐಪಿಎಲ್ ಸೀಸನ್ ಗಾಗಿ ತರಬೇತಿಯನ್ನು ಪ್ರಾರಂಭಿಸಿದ್ದಾರೆ ಮತ್ತು ಅಭಿಮಾನಿಗಳು ಮತ್ತೊಮ್ಮೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಅವರ ಆಟವನ್ನು ನೋಡಲು ಸಿದ್ಧರಾಗಿದ್ದಾರೆ.
ಧೋನಿ ಮುಂದಿನ ಐಪಿಎಲ್ ನಲ್ಲೂ ಆಡಬಹುದು:
ಸಿಎಸ್‌ಕೆ ತಂಡದ ಮಾಜಿ ಸ್ಟಾರ್ ಬ್ಯಾಟರ್ ಸುರೇಶ್ ರೈನಾ ಅವರು ಈಗ ಧೋನಿ ಅವರ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದ್ದು, ಭಾರತದ ಮಾಜಿ ನಾಯಕ ಮುಂದಿನ ವರ್ಷ ಸಹ ಐಪಿಎಲ್ ನಲ್ಲಿ ಆಡಬಹುದು ಎಂದು ಅವರು ಹೇಳಿದ್ದಾರೆ. ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಮತ್ತು ತುಂಬಾನೇ ಫಿಟ್ ಆಗಿ ಕಾಣುತ್ತಿದ್ದಾರೆ, ಅವರು ನಿವೃತ್ತಿ ಪಡೆಯುತ್ತಾರೆ ಅಥವಾ ಇಲ್ಲವೇ ಎಂಬುದು ಈ ವರ್ಷದ ಐಪಿಎಲ್ ಪ್ರದರ್ಶನದ ಮೇಲೆ ಅವಲಂಬಿತವಾಗಿರುತ್ತದೆ.
ಇದನ್ನೂ ಓದಿ: Rohit Sharma: ಪತ್ನಿ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ರೋಹಿತ್ ಶರ್ಮಾ, ಹಿಟ್ಮ್ಯಾನ್ ಸ್ಟೆಪ್ಗೆ ಫ್ಯಾನ್ಸ್ ಫುಲ್ ಫಿದಾ
ಅವರು ಮತ್ತು ಅಂಬಾಟಿ ರಾಯುಡು ಒಂದು ವರ್ಷದಿಂದ ಪಂದ್ಯಾವಳಿಯನ್ನು ಆಡದ ಕಾರಣ ಈ ಐಪಿಎಲ್ ಸ್ವಲ್ಪ ಮಟ್ಟಿಗೆ ಸವಾಲಿನದ್ದಾಗಿರಬಹುದು. ತಂಡವು ಸಾಕಷ್ಟು ಪ್ರಬಲವಾಗಿದೆ ಎಂದು ನಾನು ಭಾವಿಸುತ್ತೇನೆ, ಬಹಳಷ್ಟು ಯುವ ಆಟಗಾರರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರವೀಂದ್ರ ಜಡೇಜಾ, ಬೆನ್ ಸ್ಟೋಕ್ಸ್, ದೀಪಕ್ ಚಹರ್ ಮತ್ತು ಆ ತಂಡದಲ್ಲಿ ಹೆಚ್ಚು ಯುವ ಮತ್ತು ಕ್ರಿಯಾತ್ಮಕ ಆಟಗಾರರು ಇದ್ದಾರೆ. ಅವರು ಈ ಬಾರಿ ಐಪಿಎಲ್ ನಲ್ಲಿ ಹೇಗೆ ಆಡುತ್ತಾರೆಂದು ನೋಡೋಣ ಎಂದು ಅವರು ಹೇಳಿದರು.
ಧೋನಿ ಸಾಮಾನ್ಯವಾಗಿ ಫೋನ್ ನಲ್ಲಿ ಯಾರಿಗೂ ಲಭ್ಯವಿರುವುದಿಲ್ಲ ಎಂದು ಹಲವಾರು ಕ್ರಿಕೆಟಿಗರು ಹೇಳುತ್ತಾರೆ. ಆದರೆ ರೈನಾ ಅವರು ಅವರ ಜೊತೆ ಸಂಪರ್ಕದಲ್ಲಿದ್ದಾರೆ ಮತ್ತು ಅಭ್ಯಾಸದಲ್ಲಿ ಅವರು ತೋರಿಸುವ ಬದ್ಧತೆಗಾಗಿ ಅವರ ಮಾಜಿ ನಾಯಕನನ್ನು ರೈನಾ ಅವರು ತುಂಬಾನೇ ಶ್ಲಾಘಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ