Asia Cup 2022: ಏಷ್ಯಾಕಪ್​ಗಾಗಿ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ, ಟೀಂ ಇಂಡಿಯಾಗೆ ಎಂಟ್ರಿ ಕೊಟ್ರಾ ಸ್ಟಾರ್​ ಪ್ಲೇಯರ್​

ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ವೇಗಿಗಳ ಕೊರತೆ ಕಾಣುತ್ತಿದೆ. ಏಷ್ಯಾ ಕಪ್​ 2022ಗೆ ಈಗಾಗಲೇ ತಂಡ ಪ್ರಕಟಿಸಿದ್ದು, ಜಸ್​ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್​ ಇಬ್ಬರೂ ಆಟಗಾರರು ಟೂರ್ನಿಯಿಂದ ಹೊರಗುಳಿದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯನ್ನು ಈ ಬಾರಿ ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಸದ್ಯ ಟೂರ್ನಿಯ ವೇಳಾಪಟ್ಟಿ ಸಹ ಪ್ರಕಟವಾಗಿದ್ದು, ಈಗಾಗಲೇ ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಭಾರತ ತಂಡವನ್ನು ರೋಹಿತ್​ ಶರ್ಮಾ (Rohit Sharma) ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದರೆ, ಕನ್ನಡಿಗ ಕೆಎಲ್​ ರಾಹುಲ್ (KL Rahul)​ ಅವರನ್ನು ಉಪ ನಾಯಕನನ್ನಾಗಿ ಆಯ್ಕೆ ಮಾಡಿದೆ.  ಆದರೆ ಈ ಬಾರಿ ಏಷ್ಯಾ ಕಪ್​ಗಾಗಿ ಆಯ್ಕೆ ಆದ ತಂಡದಲ್ಲಿ ವೇಗಿಗಳ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಹೌದು, ಈಗಾಗಲೇ ಜಸ್​ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್​ ಇಬ್ಬರೂ ಆಟಗಾರರು ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ತಂಡಕ್ಕೆ ಹೊಸ ವೇಗಿ ಆಗಮನ ಆಗುವ ಸಾಧ್ಯತೆ ಇದೆ.

ಟೀಂ ಇಂಡಿಯಾಗೆ ಎಂಟ್ರಿ ಕೊಡ್ತಾರಾ ದೀಪಕ್:

ಹೌದು, ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ವೇಗಿಗಳ ಕೊರತೆ ಕಾಣುತ್ತಿದೆ. ಏಷ್ಯಾ ಕಪ್​ 2022ಗೆ ಈಗಾಗಲೇ ತಂಡ ಪ್ರಕಟಿಸಿದ್ದು, ಜಸ್​ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್​ ಇಬ್ಬರೂ ಆಟಗಾರರು ಟೂರ್ನಿಯಿಂದ ಹೊರಗುಳಿದಿದ್ದಾರೆ. ಇವರ ಅನುಪಸ್ಥಿತಿ ಭಾರತಕ್ಕೆ ಕೊಂಚ ಹಿನ್ನಡೆಯಾಗುವ ಸಾಧ್ಯತೆ ಇದೆ. ಆದರೆ ಇದನ್ನು ಸಮದೂಗಿಸಲು ಬಿಸಿಸಿಐ ಚಿಂತಿಸಿದ್ದು, ಪರಿಯಾಯವಾಗಿ ದೀಪಕ್ ಚಹಾರ್ ಅವರನ್ನು ತಂಡದಲ್ಲಿ ಸೇರಿಸಲು ನಿರ್ಧರಿಸಿರುವುದಾಗಿ ಕಮಡುಬರುತ್ತಿದೆ.

ಈಗಾಗಲೇ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆ ಆಗಿರುವ ದೀಪಕ್ ಅವರ ಪ್ರದರ್ಶನದ ಆಧಾರದ ಮೇಲೆ ಅವರ ಏಷ್ಯಾ ಕಪ್ ಭವಿಷ್ಯ ನಿರ್ಧಾರವಾಗಲಿದೆ. ಹೀಗಾಗಿ ಜಿಂಬಾಬ್ವೆ ಪ್ರವಾಸದಲ್ಲಿ ದೀಪಕ್ ಮಿಮಚಿದ್ದಲ್ಲಿ ಅವರು ನೇರವಾಗಿ ಏಷ್ಯಾ ಕಪ್​ 2022ರ ಟೀಂ ಇಂಡಿಯಾದ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆವೇಶ್ ಖಾನ್​ ಅವರ ಬದಲಿಗೆ ದೀಪಕ್ ಅವರ ಆಯ್ಕೆ ಆಗುವ ಸಾಧ್ಯತೆ ಹೆಚ್ಚು ಕಾಣುತ್ತಿದೆ. ಅಲ್ಲದೇ ದೀಪಕ್ ಅನುಭವಿ ಭೌಲರ್ ಸಹ ಆಗಿದ್ದಾರೆ.

ಇದನ್ನೂ ಓದಿ: IND vs PAK: ಈ ಬಾರಿಯೂ ಇರುತ್ತಾ ಮೌಕಾ ಮೌಕಾ? ಡೌಟ್​ ಅಂತಿದ್ದಾರೆ ಅಭಿಮಾನಿಗಳು

ವಿರಾಟ್-ರಾಹುಲ್ ಕಂಬ್ಯಾಕ್​:

ಇಂಗ್ಲೆಂಡ್ ಪ್ರವಾಸದ ಬಳಿಕ ವಿಶ್ರಾಂತಿ ಪಡೆದಿದ್ದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಸರಣಿಯ ನಂತರ ವಿರಾಟ್ ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದಿದ್ದರು. ವಿರಾಟ್ ಜೊತೆಗೆ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಕೆಎಲ್​ ರಾಹುಲ್ ಕೂಡ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಅಲ್ಲದೇ ಕನ್ನಡಿಗ ಕೆಎಲ್ ಆರಹುಲ್ ಏಷ್ಯಾ ಕಪ್​ 2022ರಲ್ಲಿ ಭಾರತ ತಂಡದ ಉಪ ನಾಯಕರಾಗಿ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ: Asia Cup 2022: ಹೇಗಿದೆ ಭಾರತ - ಪಾಕ್​​ ತಂಡಗಳ ಬಲಾಬಲ? ಇವರೇ ಟೀಂ ಇಂಡಿಯಾದ ಕೀ ಪ್ಲೇಯರಂತೆ

ಏಷ್ಯಾ ಕಪ್​ಗೆ ಟೀಂ ಇಂಡಿಯಾ: 

ರೋಹಿತ್ ಶರ್ಮಾ (ನಾಯಕ), ಲೋಕೇಶ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್,  ದೀಪಕ್ ಚಹರ್.
Published by:shrikrishna bhat
First published: