Cricket: RCB ಪರ ಆಡ್ತಾರಾ ಡೇವಿಡ್ ವಾರ್ನರ್..? ಸುಳಿವು ನೀಡಿದ ಕೊಹ್ಲಿ-ವಾರ್ನರ್ ಚರ್ಚೆ

David Warner: ಸದ್ಯ ಕೊಹ್ಲಿ ಹಾಗೂ ವಾರ್ನರ್ ಇನ್ಸ್ಟಾಗ್ರಾಂನಲ್ಲಿ ಮಾಡಿರುವ ಚಾಟ್ ವೈರಲ್ ಆಗುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಹಾಗೂ ವಿರಾಟ್ ಕೊಹ್ಲಿ ಫ್ಯಾನ್ಸ್ ಡೇವಿಡ್ ವಾರ್ನರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರುವುದು ಪಕ್ಕಾ ಎನ್ನುತ್ತಿದ್ದಾರೆ

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್

 • Share this:
  ಐಪಿಎಲ್(IPL) ಮೆಗಾ ಆ್ಯಕ್ಷನ್ ಯಾವಾಗ ನಡೆಯುತ್ತೆ, ಯಾವ ಯಾವ ಟೀಮ್ ಗೆ ಯಾವ ಆಟಗಾರರು(Players) ಬರುತ್ತಾರೆ ಅಂತ ಕ್ರಿಕೆಟ್(Cricket) ಅಭಿಮಾನಿಗಳು ಕುತೂಹಲದಿಂದ ಕಾಯ್ತಾ ಇದ್ದಾರೆ. ಅದ್ರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ(History) ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ(RCB) ಯಾವ ಆಟಗಾರರು ಸೇರ್ಪಡೆಯಾಗ್ತಾರೆ ಅಂತ ತಿಳಿದುಕೊಳ್ಳೋದಕ್ಕೆ ಅಭಿಮಾನಿಗಳು ತುದಿಗಾಗಲ್ಲಿ ನಿಂತಿದ್ದಾರೆ. ಅದ್ರಲ್ಲೂ ಕಿಂಗ್ ಕೊಹ್ಲಿ(Kohli) ಆರ್ ಸಿಬಿ ಕ್ಯಾಪ್ಟೆನ್ಸಿಗೆ ರಾಜೀನಾಮೆ ಕೊಟ್ಟ ಬಳಿಕ ಯಾರು ಬೆಂಗಳೂರು ತಂಡದ ನಾಯಕರಾಗ್ತಾರೆ ಅಂತೆಲ್ಲ ಅಭಿಮಾನಿಗಳು ಚರ್ಚೆ ಮಾಡ್ತಾ ಇದ್ದಾರೆ.. ಹೀಗಿರುವಾಗಲೇ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಹೊರ ಬಿದ್ದಿರುವ ಡೇವಿಡ್ ವಾರ್ನರ್ ಬೆಂಗಳೂರು ತಂಡದ ಪರ ಆಡ್ತಾರೆ ಅನ್ನೋ ಗುಲ್ಲು ಅಭಿಮಾನಿಗಳಲ್ಲಿದೆ.. ಇದಕ್ಕೆ ಸಾಕ್ಷಿ ಎನ್ನುವಂತೆ ವಿರಾಟ್ ಕೊಹ್ಲಿ ಹಾಗೂ ಡೇವಿಡ್ ವಾರ್ನರ್ ನಡುವೆ ನಡೆದಿರುವ ಚರ್ಚೆ ವಾರ್ನರ್ ಆರ್ ಸಿಬಿ ಸೇರೋದು ಪಕ್ಕಾ ಎನ್ನುವದಕ್ಕೆ ಸಾಕ್ಷಿ ನೀಡಿದೆ.

  ವಾರ್ನರ್ ಪೋಸ್ಟ್ ಗೆ ಕಮೆಂಟ್ ಮಾಡಿದ ಕೊಹ್ಲಿ

  ದಕ್ಷಿಣ ಭಾರತದ ಹಾಡುಗಳಿಗೆ ವಿಡಿಯೋ ಮಾಡಿ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನ ಸಂಪಾದನೆ ಮಾಡಿರೋ ಡೇವಿಡ್ ವಾರ್ನರ್ , ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅಭಿಮಾನಿಗಳನ್ನ ರಂಜಿಸುತ್ತಲೆ ಇರುತ್ತಾರೆ. ಅದ್ರಲ್ಲೂ ಅಲ್ಲು ಅರ್ಜುನ್ ರ ಸಾಕಷ್ಟು ಸಾಂಗ್ ಗಳಿಗೆ ವಿಡಿಯೋ ಮಾಡಿರೋ ವಾರ್ನರ್ ಈಗ ಅಲ್ಲು ಅರ್ಜುನ್ ರ ಬಹುನೀರಿಕ್ಷಿತ ಸಿನಿಮಾ ಪುಷ್ಪದ ಹಾಡನ್ನು ಡೇವಿಡ್ ವಾರ್ನರ್ ಈ ರೀತಿ ವಿಡಿಯೋವನ್ನು ಎಡಿಟ್ ಮಾಡಿ ಹಾಕಿದ್ದಾರೆ.. ಈ ಪೋಸ್ಟ್ ಗೆ ಸಾಕಷ್ಟು ಜನ ಕ್ರಿಕೆಟಿಗರು ಕಾಮೆಂಟ್ ಮಾಡಿ ವಾರ್ನರ್ ಕಾಲೆಳೆದಿದ್ದಾರೆ.. ಜೊತೆಗೆ ವಿರಾಟ್ ಕೊಹ್ಲಿ ಸಹ ಇನ್ಸ್ಟಾಗ್ರಾಂ ಪೋಸ್ಟ್‌ಗೆ ವಿರಾಟ್ ಕೊಹ್ಲಿ ಕಾಮೆಂಟ್ ಮಾಡಿದ್ದು 'ಗೆಳೆಯಾ ನೀನು ಆರಾಮಾಗಿದ್ದೀಯಾ?' ಎಂದು ಪ್ರಶ್ನೆಯನ್ನು ಹಾಕಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ಡೇವಿಡ್ ವಾರ್ನರ್ ಗೆಳೆಯಾ ನನ್ನ ತಲೆಯಲ್ಲಿ ಇನ್ನೂ ಕೂಡ ಬೇಸರವಿದೆ, ಅದು ಯಾವತ್ತಿಗೂ ಸರಿಹೋಗುವುದಿಲ್ಲ ಎಂದು ಹಾಸ್ಯಸ್ಪದವಾಗಿ ಮರು ಕಾಮೆಂಟ್ ಹಾಕಿದ್ದಾರೆ.
  ಇದನ್ನೂ ಓದಿ: ಡಿಫರೆಂಟ್ ಆಗಿ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದ ಡೇವಿಡ್ ವಾರ್ನರ್: ವಿಡಿಯೋ ನೋಡಿ

  ಸದ್ಯ ಕೊಹ್ಲಿ ಹಾಗೂ ವಾರ್ನರ್ ಇನ್ಸ್ಟಾಗ್ರಾಂನಲ್ಲಿ ಮಾಡಿರುವ ಚಾಟ್ ವೈರಲ್ ಆಗುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಹಾಗೂ ವಿರಾಟ್ ಕೊಹ್ಲಿ ಫ್ಯಾನ್ಸ್ ಡೇವಿಡ್ ವಾರ್ನರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರುವುದು ಪಕ್ಕಾ ಎನ್ನುತ್ತಿದ್ದಾರೆ. ಇನ್ನು ಇದುವರೆಗೂ ಡೇವಿಡ್ ವಾರ್ನರ್ ಪೋಸ್ಟ್ ಕುರಿತಾಗಿ ಹೆಚ್ಚಾಗಿ ಪ್ರತಿಕ್ರಿಯಿಸದೇ ಇದ್ದ ವಿರಾಟ್ ಕೊಹ್ಲಿ ಈ ಬಾರಿ ಪ್ರತಿಕ್ರಿಯಿಸಿರುವುದನ್ನು ನೋಡಿದರೆ ಎಲ್ಲರಲ್ಲಿಯೂ ವಾರ್ನರ್ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಲಿದ್ದಾರಾ ಎಂಬ ಅನುಮಾನ ಮೂಡಿಸಲು ಕಾರಣವಾಗಿದೆ.

  RCB ಪರ ಆಡುವ ಸೂಚನೆ ನೀಡಿದ್ದ ವಾರ್ನರ್

  ಸದ್ಯ ಡೇವಿಡ್ ವಾರ್ನರ್ ಅವರನ್ನ ಎಸ್ ಆರ್ ಹೆಚ್, ಸಿಎಸ್ ಕೆ ಸೇರಿದಂತೆ ಅನೇಕ ತಂಡಗಳ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಯಾವ ತಂಡದ ಪರ ಆಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳ ಎಡೆಯಲ್ಲಿ ಆರ್ ಸಿಬಿ ಅಭಿಮಾನಿ ಕೂಡ ಕಂಡು ಬಂದಿದ್ದು, ನೀವು ಆರ್ ಸಿಬಿ ಪರ ಆಡಬೇಕೆಂದು ವಾರ್ನರ್ ಅವರಲ್ಲಿ ಮನವಿ ಮಾಡಿದ್ದಾರೆ. ಆದ್ರೆ ಬೇರೆ ಯಾವ ತಂಡದ ಅಭಿಮಾನಿಗಳಿಗೂ ಪ್ರತಿಕ್ರಿಯೆ ನೀಡದೆ ಆರ್ ಸಿಬಿ ಅಭಿಮಾನಿಗಳು ಮಾಡಿದ ಮನವಿಗೆ ವಾರ್ನರ್ ಹಾರ್ಟ್ ಎಮೋಜಿ ಹಾಕಿ ,ನಾನು ಬೆಂಗಳೂರು ಪರ ಆಡುವ ಬಯಕೆ ಹೊಂದಿದ್ದೇನೆ ಅಂತ ಪರೋಕ್ಷವಾಗಿ ಸುಳಿವು ನೀಡಿದ್ರು

  ಇದನ್ನೂ ಓದಿ: ನೀವು ಪ್ರೀತಿಸುವ ತಂಡದಿಂದ ಕಾರಣವೇ ಇಲ್ಲದೆ ಕೈಬಿಟ್ಟಾಗ ನೋವಾಗುತ್ತದೆ: SRH ಬಗ್ಗೆ ವಾರ್ನರ್ ಬೇಸರ!

  ಪುನೀತ್ ಗೆ ಶ್ರದ್ಧಾಂಜಲಿ ಸಲ್ಲಿಸಿದ್ದ ವಾರ್ನರ್

  ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಅನೇಕ ಕ್ರಿಕೆಟಿಗರು ಸಹ ಕಂಬನಿ ಮಿಡಿದಿದ್ರು.. ಅದ್ರಲ್ಲೂ ಡೇವಿಡ್ ವಾರ್ನರ್ ಪುನೀತ್ ರಾಜ್ ಕುಮಾರ್ ಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿ ಕನ್ನಡಿಗರ ಮನಸ್ಸು ಗೆದ್ದಿದ್ರು.ರಾಜಕುಮಾರ ಸಿನಿಮಾದ ‘ಬೊಂಬೆ ಹೇಳುತೈತೆ’ ಹಾಡಿಗೆ ರೀ ಫೇಸ್ ಆ್ಯಪ್ ಮೂಲಕ ಮಾಡಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ರೆಸ್ಪೆಕ್ಟ್ ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಈ ಮೂಲಕ ಅಪ್ಪುಗೆ ವಾರ್ನರ್ ವಿಶೇಷವಾಗಿ ನಮನ ಸಲ್ಲಿಸಿದ್ರು.
  Published by:ranjumbkgowda1 ranjumbkgowda1
  First published: