• Home
  • »
  • News
  • »
  • sports
  • »
  • Dinesh Karthik: ಕಾರ್ತಿಕ್​ ವಿಭಿನ್ನ ಹೆಲ್ಮೆಟ್ ಧರಿಸುವ​ ಹಿಂದಿನ ಕಾರಣವೇನು? ಇಲ್ಲಿದೆ ಇಂಟ್ರೆಸ್ಟಿಂಗ್​ ಸ್ಟೋರಿ!

Dinesh Karthik: ಕಾರ್ತಿಕ್​ ವಿಭಿನ್ನ ಹೆಲ್ಮೆಟ್ ಧರಿಸುವ​ ಹಿಂದಿನ ಕಾರಣವೇನು? ಇಲ್ಲಿದೆ ಇಂಟ್ರೆಸ್ಟಿಂಗ್​ ಸ್ಟೋರಿ!

ದಿನೇಶ್​ ಕಾರ್ತಿಕ್

ದಿನೇಶ್​ ಕಾರ್ತಿಕ್

Dinesh Karthik: ದಿನೇಶ್ ಕಾರ್ತಿಕ್ ದೇಶದ ಟಾಪ್ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ಸದ್ಯ ಅವರು ಟೀಂ ಇಂಡಿಯಾದ ಸ್ಟಾರ್​ ಪ್ಲೇಯರ್​, ಫಿನಿಶರ್​ ಎಂದರೂ ತಪ್ಪಾಗಲಾರದು. ಧೋನಿ ನಂತರ ಡಿಕೆ ಇದೀಗ ಫಿನಿಶರ್​ ಸ್ಥಾನವನ್ನು ಸಂಪೂರ್ಣವಾಗಿ ತುಂಬಿದ್ದಾರೆ ಎನ್ನಬಹುದು.

  • Share this:

ಭಾರತೀಯ ಕ್ರಿಕೆಟ್ ಲೋಕದಲ್ಲಿ ಸದ್ಯ ದಿನೇಶ್ ಕಾರ್ತಿಕ್ (Dinesh Karthik)​ ಹೆಸರು ಸಖತ್ ಸುದ್ದಿಯಲ್ಲಿರುತ್ತದೆ. ಅದರಲ್ಲಿಯೂ ಧೋನಿಯ (Dhoni) ನಂತರ ಅವರಫಿನಿಶರ್ ಸ್ಥಾನವನ್ನು ಡಿಕೆ ತುಂಬುತ್ತಿದ್ದಾರೆ ಎಂಬ ಮಾತುಗಳು ಎಲ್ಲಡೆ ಕೇಳಿಬರುತ್ತಿವೆ. ಈ ಬಾರಿಯ ಐಪಿಎಲ್ (IPL)​ ನಿಂದ ಕಾರ್ತಿಕ್​ ಆಟದಲ್ಲಿ ಮಹತ್ವದ ಬದಲಾವಣೆ ಆಗಿದ್ದು, ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಆದರೆ ಇದೀಗ DK ತಮ್ಮ ಬ್ಯಾಟಿಂಗ್​ ಹೊರತಾಗಿ ಬೇರೊಂದು ವಿಷಯಕ್ಕಾಗಿ ಚರ್ಚೆಯಲ್ಲಿದ್ದಾರೆ. ಹೌದು, ಕಾರ್ತಿಕ್​ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಮಾಡುವಾಗ ಧರಿಸುವ ಹೆಲ್ಮೆಟ್ (Helmet ) ಇತರೆ ಆಟಗಾರರು ಧರಿಸುವ ಹೆಲ್ಮೆಟ್ ಗಿಂತ ಬಹಳ ವಿಭಿನ್ನವಾಗಿರುವುದನ್ನು ಗಮನಿಸಿರಬಹುದು. ಆದರೆ ಇದರ ಹಿಂದೆ ಒಂದು ಇಂಟ್ರೆಸ್ಟಿಂಗ್​ ಕಹಾನಿ ಇದೆ ಎಂದು ಅನೇಕರಿಗೆ ತಿಳಿದಿಲ್ಲ. ಹಾಗಿದ್ದರೆ ಆ ವಿಶೇಷ ಮಾಹಿತಿ ಏನೆಂದು ನೋಡೋಣ ಬನ್ನಿ.


ವಿಭಿನ್ನ ಹೆಲ್ಮೆಟ್​ ಧರಿಸುವ ಡಿಕೆ:


ಹೌದು, ದಿನೇಶ್​ ಕಾರ್ತಿಕ್​ ಅವರು ಎಲ್ಲರೂ ಧರಿಸುವ ಹೆಲ್ಮೆಟ್​ ಅನ್ನು ಧರಿಸುವುದಿಲ್ಲ. ಬದಲಿಗೆ ಅವರು ಧರಿಸುವ ಹೆಲ್ಮೆಟ್​ ಸ್ವಲ್ಪ ವಿಭಿನ್ನವಾಗಿದೆ. ಈ ಅಂಶವನ್ನು ನೀವೂ ಸಹ ಗಮನಿಸಿರಬಹುದು. ಅವರು ಐಪಿಎಲ್ ಮತ್ತು ಟೀಂ ಇಂಡಿಯಾ ಪರ ಆಡುವಾಗ ವಿಭಿನ್ನ ಹೆಲ್ಮೆಟ್​ ಧರಿಸುತ್ತಾರೆ. ಆದರೆ ಇದರ ಹಿಂದೆ ಅನೇಕ ಪ್ರಯೋಜನಗಳು ಇರುವುದರಿಂದ ಅವರು ಬೇರೆ ರೀತಿಯ ಹೆಲ್ಮೆಟ್​ ಧರಿಸುತ್ತಾರಂತೆ. ಆದರೆ ಆರಂಭದಲ್ಲಿಎಲ್ಲರಂತೆಯೇ ಹೆಲ್ಮೆಟ್ ಹಾಕಿದ್ದ ಕಾರ್ತಿಕ್ ನಂತರ ಅಮೆರಿಕನ್​​​ ಬೇಸ್​​ ಬಾಲ್​​​​​ ಮತ್ತು ರಗ್ಬಿಯಲ್ಲಿ ಬಳಸುವ ಹೆಲ್ಮೆಟ್​​ಮಾದರಿಯನ್ನು ಬಳಸುತ್ತಿದ್ದಾರೆ.
ಡಿಕೆ ಧರಿಸುವ ಈ ಹೆಲ್ಮೆಟ್​ ಬೇರೆ ಹೆಲ್ಮೆಟ್​ಗಳಿಗಿಂತ ಡಿಫರೆಂಟ್ ಆಗಿದ್ದು, ಇದು ಬೇರೆಯದರಕ್ಕಿಂತ ತೂಕದಲ್ಲಿ ತುಂಬಾನೇ ಹಗುರವಾಗಿದೆ. ಇದರಿಂದ ಸರಾಗವಾಗಿ ಯಾವುದೇ ಒತ್ತಡ ಇಲ್ಲದೆ ಬ್ಯಾಟಿಂಗ್ ಮತ್ತು ಕೀಪಿಂಗ್​ ಮಾಡಲು ಸಹಾಯಕವಾಗುತ್ತದೆಯಂತೆ. ಇದೇ ಕಾರಣದಿಂದ ದಿನೇಶ್​ ಕಾರ್ತಿಕ್​ ವಿಭಿನ್ನವಾದ ಹೆಲ್ಮೆಟ್​ ಧರಿಸುತ್ತಿದ್ದಾರೆ. ಕಾರ್ತಿಕ್​ ಧರಿಸುವ ಹೆಲ್ಮೆಟ್​ನ ಮೇಲ್ಭಾಗ ಬದಿಗಳು ಹಾಗು ಹಿಂಭಾಗದಲ್ಲಿ ಇರುವ ಸಣ್ಣ ತೂತುಗಳು ಗಾಳಿ ಬರಲು ಸಹಾಯವಾಗಿರುತ್ತದೆ. ಆಟಗಾರ ರಿಲ್ಯಾಕ್ಸ್ ಆಗಿರಲು ಅನುವು ಮಾಡುತ್ತದೆ.


ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್ ಬಹುಮಾನದ ಮೊತ್ತ ಘೋಷಣೆ, ಚಾಂಪಿಯನ್​ ತಂಡಕ್ಕೆ ಇಷ್ಟು ಕೋಟಿ ಸಿಗುತ್ತೆ!


ಹೆಲ್ಮೆಟ್​ ವಿಚಾರವಾಗಿ ಕ್ರಿಕೆಟ್​ ರೂಲ್ಸ್ ಏನಿದೆ?:


ಇನ್ನು, ಹೆಲ್ಮೆಟ್​ ವಿಚಾರವಾಗಿ ಕ್ರಿಕೆಟ್​ನಲ್ಲಿ ವಿಸ್ತಾರವಾದ ನಿಯಮಾವಳಿಗಳೇ ಇದೆ. ಅದರ ಪ್ರಕಾರ ಆಟಗಾರರು ಆಟದ ವೇಳೆ ಕೆಲ ವಿಧದ ಹೆಲ್ಮೆಟ್​ಗಳನ್ನು ಮಾತ್ರ ಧರಿಸಲು ಅವಕಾಶವಿದೆ. ಆದರೆ ಡಿಕೆ ಬ್ಯಾಟಿಂಗ್​ ಮತ್ತು ಕೀಪಿಂಗ್​ ಮಾಡುವಾಗ ಬೇರೆ ಬೇರೆ ಹೆಲ್ಮೆಟ್​ಗಳನ್ನು ಧರಿಸುತ್ತಾರೆ. ಈ ಹೆಲ್ಮೆಟ್ ಹೆಚ್ಚಿನ ರಕ್ಷಣೆ ನೀಡುವುದರ ಜೊತೆಗೆ ತಾಪಮಾನವನ್ನು ಕಡಿಮೆ ಮಾಡುತ್ತದೆ. ಇದೇ ಕಾರಣಕ್ಕಾಗಿ ಕ್ರಿಕೆಟ್ ರೂಲ್ಸ್ ನಲ್ಲಿ ಈ ಹೆಲ್ಮೆಟ್ ಗೆ ಅನುಮತಿಯನ್ನ ನೀಡಲಾಗಿದೆ. ಡಿಕೆ ಬಳಸುವ ಹೆಲ್ಮೆಟ್​ ಅನ್ನು ಮೂನ್‌ವಾಕರ್ ಕ್ರಿಕೆಟ್ ಹೆಲ್ಮೆಟ್ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ: IND vs SA: ಮತ್ತೊಂದು ದಾಖಲೆ ಬರೆದ ರೋಹಿತ್​, ಈ ಬಾರಿ ಧೋನಿಯನ್ನೇ ಹಿಂದಿಕ್ಕಿದ ಹಿಟ್​ಮ್ಯಾನ್


ಭರ್ಜರಿ ಪ್ರದರ್ಶನ ನೀಡುತ್ತಿರುವ ಕಾರ್ತಿಕ್:


ಇನ್ನು, ಸದ್ಯ ದಿನೇಶ್​ ಕಾರ್ತಿಕ್​ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ನಿರತರಾಗಿದ್ದಾರೆ. ಅಲ್ಲದೇ ಅವರ ಅದ್ಭುತ ಪ್ರದರ್ಶನದಿಂದಾಗಿ ಈ ಬಾರಿಯ ಐಸಿಸಿ ಟಿ20 ವಿಶ್ವಕಪ್​ನಲ್ಲಿಯೂ ಸ್ಥಾನ ಪಡೆದಿದ್ದಾರೆ. ಭಾರತದ ಪರ ಧೋನಿ ನಂತರ ಫಿನಿಶರ್​ ಸ್ಥಾನವನ್ನು ಜವಬ್ದಾರಿಯುತವಾಗಿ ಡಿಕೆ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾದ ಫಿನಿಶರ್​ ಎಂದು ಅವರನ್ನು ಕರೆಯಲಾಗುತ್ತಿದೆ.

Published by:shrikrishna bhat
First published: