• Home
  • »
  • News
  • »
  • sports
  • »
  • Lionel Messi: ಚರ್ಚೆಗೆ ಕಾರಣವಾಯ್ತು ಮೆಸ್ಸಿ ಧರಿಸಿದ್ದ ಡ್ರೆಸ್​​, ಏನಿದು ಕತಾರ್​ ಬಿಷ್ಟ್​?

Lionel Messi: ಚರ್ಚೆಗೆ ಕಾರಣವಾಯ್ತು ಮೆಸ್ಸಿ ಧರಿಸಿದ್ದ ಡ್ರೆಸ್​​, ಏನಿದು ಕತಾರ್​ ಬಿಷ್ಟ್​?

ಫಿಫಾ ವಿಶ್ವಕಪ್​ ಗೆದ್ದ ಅರ್ಜೆಂಟಿನಾ

ಫಿಫಾ ವಿಶ್ವಕಪ್​ ಗೆದ್ದ ಅರ್ಜೆಂಟಿನಾ

FIFA World Cup 2022: ಗೆಲುವಿನ ನಂತರ ವಿಶ್ವಕಪ್ ಟ್ರೋಫಿ ಸ್ವೀಕರಿಸಲು ಮೆಸ್ಸಿ ವೇದಿಕೆಗೆ ಹೋದಾಗ, ಅವರು ಕಪ್ಪು ಬಟ್ಟೆಯನ್ನು ಧರಿಸಿದ್ದರು. ಇತರ ಆಟಗಾರರು ಜರ್ಸಿಯಲ್ಲಿದ್ದಾಗ ಮೆಸ್ಸಿ ಧರಿಸಿರುವ ಈ ಕಪ್ಪು ಉಡುಗೆ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ

  • Share this:

ಒಂದು ತಿಂಗಳ ಕಾಲ ಫುಟ್ಬಾಲ್ ಪ್ರೇಮಿಗಳನ್ನು ರಂಜಿಸಿದ ಫಿಫಾ ವಿಶ್ವಕಪ್ 2022ಗೆ (Fifa World Cup 2022) ಅದ್ಧೂರಿ ತೆರೆಬಿದ್ದಿದೆ. ಫೈನಲ್​ ಪಂದ್ಯದಲ್ಲಿ ಮೆಸ್ಸಿ (Lionel Messi) ನಾಯಕತ್ವದ ಅರ್ಜೆಂಟಿನಾ  ಫ್ರಾನ್ಸ್​ ವಿರುದ್ಧ ಗೆದ್ದು ಫಿಫಾ ವಿಶ್ವಕಪ್​ 2022ರ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಈ ಮೂಲಕ ಅರ್ಜೆಂಟೀನಾ (Argentina) 36 ವರ್ಷಗಳ ನಂತರ ಫಿಫಾ ವಿಶ್ವಕಪ್ ಟ್ರೋಫಿ ಗೆದ್ದಿದೆ. ಈ ಮೂಲಕ ಮೆಸ್ಸಿಯ ವಿಶ್ವಕಪ್ ಕನಸು ನನಸಾಯಿತು. ಗೆಲುವಿನ ನಂತರ ವಿಶ್ವಕಪ್ ಟ್ರೋಫಿ ಸ್ವೀಕರಿಸಲು ಮೆಸ್ಸಿ ವೇದಿಕೆಗೆ ಹೋದಾಗ, ಕತಾರ್ (Qatar)​ ದೇಶವು ಮೆಸ್ಸಿ ಅವರಿಗೆ ಕಪ್ಪು ಬಟ್ಟೆಯನ್ನು ಧರಿಸಿತು. ಈ ಬಟ್ಟೆಯಲ್ಲಿಯೇ ಮೆಸ್ಸಿ ಫಿಫಿ ವಿಶ್ವಕಪ್​ ಟ್ರೋಫಿಯನ್ನು ಸ್ವೀಕರಿಸಿದರು. ಇತರ ಆಟಗಾರರು ಜೆರ್ಸಿಯಲ್ಲಿದ್ದಾಗ ಮೆಸ್ಸಿ ಧರಿಸಿರುವ ಈ ಕಪ್ಪು ಉಡುಗೆ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಚರ್ಚೆಗೆ ಕಾರಣವಾಗಿದೆ.


ಕಪ್ಪು ಬಟ್ಟೆಯಲ್ಲಿ ಮೆಸ್ಸಿ:


ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಸಾಂಪ್ರದಾಯಿಕವಾಗಿ ಪ್ರಶಸ್ತಿಗಳು, ಪದಕಗಳು ಮತ್ತು ಟ್ರೋಫಿಗಳನ್ನು ನೀಡಲಾಗುತ್ತಿತ್ತು. ಆರಂಭದಲ್ಲಿ, ಅರ್ಜೆಂಟೀನಾದ ಎಲ್ಲಾ ಆಟಗಾರರಿಗೆ ಪದಕಗಳನ್ನು ನೀಡಲಾಯಿತು. ನಂತರ ಮೆಸ್ಸಿ ನಾಯಕನಾಗಿ ಕೊನೆಯದಾಗಿ ಪದಕ ಸ್ವೀಕರಿಸಿದರು. ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಅಹ್ಮದ್ ಅಲ್ ಥಾನಿ ಅವರು ಮೆಸ್ಸಿಗೆ ವಿಶೇಷ ಉಡುಗೆ ನೀಡಿದರು. ಕಪ್ಪು ಬಣ್ಣದ ಈ ಉಡುಪನ್ನು ನೆಟ್ ಬಟ್ಟೆಯಿಂದ ತಯಾರಿಸಲಾಗಿದೆ. ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಲು ಮೆಸ್ಸಿ ಅದೇ ಡ್ರೆಸ್ ಧರಿಸಿ ಅರ್ಜೆಂಟೀನಾ ತಂಡದೊಂದಿಗೆ ಸಂಭ್ರಮಿಸಿದರು. ಅಲ್ಲದೇ ಫೋಟೋ ಸೆಷನ್‌ನಲ್ಲೂ ಸಹ ಮೆಸ್ಸಿ ಅದೇ ಉಡುಗೆಯಲ್ಲಿ ಕಾಣಿಸಿಕೊಂಡರು.


ಈ ಉಡುಗೆಯ ಮಹತ್ವವೇನು?:


ಕತಾರ್‌ನಲ್ಲಿ ಈ ಉಡುಗೆಗೆ ವಿಶೇಷ ಮಹತ್ವವಿದೆ. ಈ ಉಡುಪನ್ನು ವಿಶೇಷ ಸಂದರ್ಭಗಳಲ್ಲಿ ಧರಿಸಲಾಗುತ್ತದೆ. ಪಂದ್ಯಾವಳಿಯ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಸನ್ ಅಲ್ ತವಾಡಿ, ಮೆಸ್ಸಿಗೆ ಅವರ ಗೆಲುವಿನ ಗೌರವಾರ್ಥವಾಗಿ ಈ ಉಡುಪನ್ನು ನೀಡಲಾಯಿತು ಎಂದು ಹೇಳಿದ್ದಾರೆ. ಈ ಉಡುಪನ್ನು ಬಿಷ್ಟ್ ಎಂದೂ ಕರೆಯುತ್ತಾರೆ. ಇದು ಅರಬ್ ದೇಶಗಳ ಸಾಂಸ್ಕೃತಿಕ ಪರಂಪರೆಯ ಉಡುಗೆ ಮತ್ತು ವಿಶೇಷ ಸಂದರ್ಭಗಳಲ್ಲಿ ಧರಿಸಲಾಗುತ್ತದೆ. ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ಗೆಲುವು ಸಾಧಿಸಿದ್ದು ಮೆಸ್ಸಿಗೆ ವಿಶೇಷವಾದ ಕಾರಣ ಆ ಕ್ಷಣವನ್ನು ಇನ್ನಷ್ಟು ಸ್ಮರಣೀಯವಾಗಿಸಲು ಮೆಸ್ಸಿಗೆ ಈ ಡ್ರೆಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: IND vs BAN 2nd Test: 2ನೇ ಟೆಸ್ಟ್​ಗೂ ಮುನ್ನ ಟೀಂ ಇಂಡಿಯಾಗೆ ಆಘಾತ, ಸ್ಟಾರ್​ ಪ್ಲೇಯರ್​ ಔಟ್​!


ಇದೇ ವೇಳೆ ಮೆಸ್ಸಿ ಈ ಕಪ್ಪು ಡ್ರೆಸ್ ಧರಿಸಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿದೆ. ಈ ಉಡುಗೆ ಮೆಸ್ಸಿಯ ಮ್ಯಾಜಿಕ್ ಸಂಖ್ಯೆಯನ್ನು ಮುಚ್ಚಿದೆ ಎಂದು ಟ್ವಿಟರ್‌ನಲ್ಲಿ ಅನೇಕ ಬಳಕೆದಾರರು ಹೇಳಿದ್ದಾರೆ. ಆ ಸಂಖ್ಯೆಯೇ ಅವನ ಗುರುತು. ವಿಜಯೋತ್ಸವದ ಸಂಭ್ರಮದಲ್ಲಿರುವ ಮೆಸ್ಸಿ ಕಪ್ಪು ಡ್ರೆಸ್‌ ಧರಿಸಿದ್ದಕ್ಕೆ ಅನೇಕರು ಸಂಘಟಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಮೆಸ್ಸಿ ಹೆಸರಲ್ಲಿಉಚಿತ ಚಹಾ:


ಹೌದು, ಇತ್ತ ಭಾರತದಲ್ಲಿಯೂ ಫುಟ್​ಬಾಲ್​ ಫೀವರ್​ ಹೆಚ್ಚಿತ್ತು ಎಂದರೆ ತಪ್ಪಾಗಲಾರದು. ಅದರಲ್ಲಿಯೂ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಫಿಫಾ ವಿಶ್ವಕಪ್​ ನೋಡುಗರ ಸಂಖ್ಯೆ ಹೆಚ್ಚಿತ್ತು. ಕೇರಳದಲ್ಲಿ ರೋನಾಲ್ಡೋ ಮತ್ತು ಮೆಸ್ಸಿಯ ಆಳೆತ್ತರದ ಕಟೌಟ್​ಗಳನ್ನು ನಿರ್ಮಿಸಿದರೆ, ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ತಮ್ಮ ಮೆಸ್ಸಿಯ ಮೇಲಿನ ಮತ್ತು ಫುಟ್​ಬಾಲ್​ ಪ್ರೀತಿಗೆ ಬೇರೆಯದೇ ರೀತಿಯಲ್ಲಿ ಸುದ್ದಿಯಾಗಿದ್ದಾರೆ.


ಉಚಿತ ಟೀ ಮಾರುತ್ತಿರುವ ಮಹಿಳೆ


ಟೀ ಸ್ಟಾಲ್ ಹೊಂದಿರುವ ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಈಗ ಇಂಟರ್ನೆಟ್ ಸೆಲೆಬ್ರಿಟಿಯಾಗಿದ್ದಾರೆ. ಅವರು ಮೆಸ್ಸಿ ನಾಯಕತ್ವದ ಅರ್ಜೆಂಟಿನಾ ತಂಡ ಫೈನಲ್​ನಲ್ಲಿ ಗೆದ್ದ ಕಶರಣ ಉಚಿತವಾಗಿ ಟೀ ನೀಡುತ್ತಿದ್ದಾರೆ. ಇದರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Published by:shrikrishna bhat
First published: