ಎಲ್ಲರಿಗೂ ಅನ್ವಯವಾಗುವ ನಿಯಮ ಧೋನಿ-ಧವನ್​ಗೆ ಮಾತ್ರ ಏಕಿಲ್ಲ?: ಸುನೀಲ್ ಗವಾಸ್ಕರ್ ಪ್ರಶ್ನೆ

ಬಿಸಿಸಿಐ ನಿಯಮದ ಪ್ರಕಾರ ಧೋನಿ ತನ್ನ ತವರು ತಂಡವಾದ ಜಾರ್ಖಂಡ್ ಹಾಗೂ ಧವನ್ ಡೆಲ್ಲಿ ತಂಡದ ಪರ ಆಡಬೇಕು. ಆದರೆ, ಇವರಿಬ್ಬರು ಯಾಕೆ ಆಡುತ್ತಿಲ್ಲ?- ಸುನೀಲ್ ಗವಾಸ್ಕರ್

Vinay Bhat | news18
Updated:December 6, 2018, 4:00 PM IST
ಎಲ್ಲರಿಗೂ ಅನ್ವಯವಾಗುವ ನಿಯಮ ಧೋನಿ-ಧವನ್​ಗೆ ಮಾತ್ರ ಏಕಿಲ್ಲ?: ಸುನೀಲ್ ಗವಾಸ್ಕರ್ ಪ್ರಶ್ನೆ
Pic: Twitter
Vinay Bhat | news18
Updated: December 6, 2018, 4:00 PM IST
ಟೀಂ ಇಂಡಿಯಾದ ಮಾಜಿ ನಾಯಕ ಎಂ. ಎಸ್ ಧೋನಿ ಹಾಗೂ ಶಿಖರ್ ಧವನ್ ವಿಚಾರವಾಗಿ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಅವರು ಬಿಸಿಸಿಐಗೆ ಪ್ರಶ್ನೆ ಮಾಡಿದ್ದಾರೆ.

ಧೋನಿ ಹಾಗೂ ಆಸ್ಟ್ರೇಲಿಯಾ ಟೆಸ್ಟ್​ ಸರಣಿಯಿಂದ ಹೊರಗುಳಿದಿರುವ ಧವನ್ ಅವರು ಸದ್ಯ ಭಾರತದಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಆದರೆ, ರಾಷ್ಟ್ರೀಯ ತಂಡದಲ್ಲಿ ಆಡದ ಅಥವಾ ಬ್ಯಾಡ್ ಫಾರ್ಮ್​ನಲ್ಲಿರುವ ಕ್ರಿಕೆಟಿಗರು ದೇಶೀಯ ಕ್ರಿಕೆಟ್​ನಲ್ಲಿ ಆಟವಾಡಬೇಕೆಂಬುದು ಬಿಸಿಸಿಐ ನಿಯಮ. ಎಲ್ಲ ಆಟಗಾರರು ಈ ನಿಯಮವನ್ನು ಪಾಲಿಸುತ್ತಾರೆ. ಆದರೆ, ಧೋನಿ ಮತ್ತು ಧವನ್​​​ ಅವರಿಗೆ ಈ ನಿಯಮ ಯಾಕೆ ಅನ್ವಯ ಆಗುತ್ತಿಲ್ಲ ಎಂದು ಸುನೀಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಳಪೆ ಫಾರ್ಮ್​​ನಲ್ಲಿದ್ದರು ಕಳೆದುಕೊಳ್ಳದ ಗತ್ತು: ಯುವಿ ಮೂಲ ಬೆಲೆ 1 ಕೋಟಿ ನಿಗದಿ

ಸದ್ಯ ಆಸ್ಟ್ರೇಲಿಯಾದಲ್ಲಿ ಭಾರತ ತನ್ನ ಟೆಸ್ಟ್​​ ಸರಣಿಯನ್ನು ಆರಂಭಿಸಿದೆ. ಧೋನಿ ಅವರು ಈಗಾಗಲೇ ಟೆಸ್ಟ್​​ ಕ್ರಿಕೆಟ್​​ನಿಂದ ನಿವೃತ್ತಿ ಹೊಂದಿದ್ದಾರೆ. ಇತ್ತ ಧವನ್ ಆಸೀಸ್​ ವಿರುದ್ಧದ ಟೆಸ್ಟ್​​ ಸರಣಿಗೆ ಆಯ್ಕೆಯಾಗಿಲ್ಲ. ಇಬ್ಬರು ಆಟಗಾರರು ಬಿಡುವಿನಲ್ಲಿದ್ದಾರೆ. ಜೊತೆಗೆ ರಣಜಿ ಕ್ರಿಕೆಟ್ ನಡೆಯುತ್ತಿದೆ. ಹೀಗಾಗಿ ಬಿಸಿಸಿಐ ನಿಯಮದ ಪ್ರಕಾರ ಧೋನಿ ತನ್ನ ತವರು ತಂಡವಾದ ಜಾರ್ಖಂಡ್ ಹಾಗೂ ಧವನ್ ಡೆಲ್ಲಿ ತಂಡದ ಪರ ಆಡಬೇಕು. ಆದರೆ, ಇವರಿಬ್ಬರು ಯಾಕೆ ಆಡುತ್ತಿಲ್ಲ? ಎಂಬುದು ಗವಾಸ್ಕರ್ ಅವರ ಪ್ರಶ್ನೆಯಾಗಿದೆ. ಈ ಬಗ್ಗೆ ಬಿಸಿಸಿಐ ಧೋನಿ ಹಾಗೂ ಧವನ್ ಬಳಿ ಕೇಳಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: ಪೂಜಾರ 123 ಔಟ್: ದಿನದಾಟದ ಅಂತ್ಯಕ್ಕೆ ಭಾರತ 250/9

ಇಷ್ಟೇ ಅಲ್ಲದೆ ಈ ಹಿಂದೆ ಧೋನಿ ಅವರಿಗೆ ಬಿಸಿಸಿಐ ದೇಶೀಯ ಕ್ರಿಕೆಟ್​ನಲ್ಲಿ ಜಾರ್ಖಂಡ್ ತಂಡದ ಪರ ಆಡಲು ಸೂಚಿಸಿತ್ತು. ಆದರೆ, ಧೋನಿ ಅವರು ಇದನ್ನ ತಿರಸ್ಕರಿಸಿದ್ದರು.

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...