Neeraj Chopra: ಜರ್ಮನಿಯ ಪುಟ್ಟ ಹಳ್ಳಿಯಲ್ಲಿ ಚಿನ್ನದ ಹುಡುಗ ನೀರಜ್ ಚೋಪ್ರಾ ಕಲರವ..!

ನೀರಜ್ ಚೋಪ್ರಾ

ನೀರಜ್ ಚೋಪ್ರಾ

ನೀರಜ್‌ರಿಗೆ ತರಬೇತಿ ನೀಡಿದ ಇಬ್ಬರು ಜರ್ಮನಿಯ ತರಬೇತುದಾರರು ಕೂಡ ಇದೀಗ ತಮ್ಮ ತಾಯ್ನಾಡಿನಲ್ಲಿ ವಿಶಿಷ್ಟ ಗೌರವಕ್ಕೆ ಪಾತ್ರರಾಗಿದ್ದಾರೆ.

  • Share this:

ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ನೀರಜ್‌ರನ್ನು ಸುತ್ತುಗಟ್ಟಿದ ಜನಸಂದಣಿ, ಕೋಟ್ಯಾಂತರ ಜನರು ಹಾರೈಸುತ್ತಿರುವ ಶುಭಾಶಯಗಳು, ನೀರಜ್‌ರಿಗೆ ದೇಶಾದ್ಯಂತ ನಡೆಯುತ್ತಿರುವ ಸನ್ಮಾನಗಳು, ನಗದು ಬಹುಮಾನಗಳ ಘೋಷಣೆಯಿಂದಲೇ ರಾತ್ರಿ ಬೆಳಗಾಗುವುದರೊಳಗೆ ನೀರಜ್ ಸ್ಟಾರ್ ಆಗಿದ್ದಾರೆ. ಹಲವಾರು ವರುಷಗಳ ಕಠಿಣ ಪರಿಶ್ರಮ ನೀರಜ್‌ರಿಗೆ ಉತ್ತಮ ಕೀರ್ತಿ ಹಾಗೂ ಹೆಸರನ್ನು ತಂದುಕೊಟ್ಟಿದೆ. ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಹಾರಿಸಿದ ಕೀರ್ತಿಗೆ ನೀರಜ್ ಭಾಜನರಾಗಿದ್ದಾರೆ.


ನೀರಜ್‌ರಿಗೆ ತರಬೇತಿ ನೀಡಿದ ಇಬ್ಬರು ಜರ್ಮನಿಯ ತರಬೇತುದಾರರು ಕೂಡ ಇದೀಗ ತಮ್ಮ ತಾಯ್ನಾಡಿನಲ್ಲಿ ವಿಶಿಷ್ಟ ಗೌರವಕ್ಕೆ ಪಾತ್ರರಾಗಿದ್ದಾರೆ. ಒಂದೂವರೆ ವರ್ಷದ ಬಳಿಕ ತಾಯ್ನಾಡಿಗೆ ಮರಳಿದ ಚೋಪ್ರಾ ಅವರ 73 ವರ್ಷದ ಬಯೋಮೆಕಾನಿಕಲ್ ತಜ್ಞರಾದ ಡಾ.ಕ್ಲಾಸ್ ಬಾರ್ಟೋನಿಯೆಟ್ಜ್ ಮೊದಲು ರೈಲಿನಲ್ಲಿ ಪ್ರಯಾಣಿಸಿದರು ಮತ್ತು ನಂತರ ರಸ್ತೆಯ ಮೂಲಕ ಪ್ರಯಾಣಿಸಿ ಆಗ್ನೇಯ ಜರ್ಮನಿಯ 130 ನಿವಾಸಿ ದೂರದ ಹಳ್ಳಿಯಾದ ಪುಟ್ಟ ಒಬರ್‌ಸ್ಲೆಟೆನ್‌ಬಾಚ್ ತಲುಪಿದರು.


ತನ್ನ ಕುಟುಂಬ ವೈದ್ಯರೊಂದಿಗೆ ಹೆಚ್ಚು ಸಮಯದ ಕಾಲ ಬಾಕಿ ಇದ್ದ ಅಪಾಯಿಂಟ್‌ಮೆಂಟ್ ಅನ್ನು ಹೊಂದಿಸಿಕೊಳ್ಳುತ್ತಿರುವಾಗ, ಬಾರ್ಟೋನಿಯೆಟ್ಜ್ ತಮ್ಮ ನೆಚ್ಚಿನ ಹುಡುಗ ನೀರಜ್‌ರನ್ನು ಸುತ್ತುವರೆದಿದ್ದ ಜನಸಮೂಹವನ್ನು ನೋಡಿ ಸಂಭ್ರಮಿಸಿದರು. ನೀರಜ್‌ರನ್ನು ಸುತ್ತುವರೆದಿರುವ ಮಿಲಿಟರಿ ಪಡೆಯನ್ನು ನೋಡಿ ನಾನು ಆಘಾತಕ್ಕೊಳಗಾದೆ. ನಿಜವಾಗಿಯೂ ನನ್ನ ಹುಡುಗನ ಪ್ರತಿಭೆ ನೋಡಿ ಭಾರತೀಯರು ಅವನ ಅಭಿಮಾನಿಯಾಗಿಬಿಟ್ಟಿದ್ದಾರೆ. ಆತನನ್ನು ಸುತ್ತುಗಟ್ಟಿರುವ ಅಭಿಮಾನಿಗಳಿಂದ ನೀರಜ್‌ರನ್ನು ರಕ್ಷಿಸಲು ಭದ್ರತಾ ಪಡೆಗಳನ್ನು ಕರೆಸಿರುವುದನ್ನು ನಾನು ನೋಡಿದೆ ಎಂದು ಬಾರ್ಟೋನಿಯೆಟ್ಜ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಒಬರ್‌ಸ್ಕ್ಲೆಟೆನ್‌ಬಾಚ್‌ ಸ್ಥಳದಿಂದ ತಿಳಿಸಿದ್ದಾರೆ.


ಇದನ್ನೂ ಓದಿ:Coronavirus: ಅಮೆರಿಕಾದಲ್ಲಿ ಶಾಲೆಗಳು ತೆರೆಯುತ್ತಿದ್ದಂತೆ 94,000 ಮಕ್ಕಳಲ್ಲಿ ಪತ್ತೆಯಾದ ಕೊರೋನಾ ಸೋಂಕು!

ಜಾವೆಲಿನ್ ಕ್ರೀಡೆಯಲ್ಲಿ ನೀರಜ್‌ರ ಪ್ರಧಾನ ತರಬೇತುದಾರರಾಗಿದ್ದ ಉವೆ ಹೋನ್ ಕೂಡ ರೈನ್ಸ್‌ಬರ್ಗ್‌ನಲ್ಲಿ ನೆಲೆಸಿದ್ದರು. ಭಾರತಕ್ಕೆ ನೀರಜ್ ಪಡೆದ ಚಿನ್ನದ ಪದಕ ಎಷ್ಟು ಮಹತ್ವವಾಗಿರುವಂತಹದ್ದು ಎಂಬುದು ದೇಶದ ಸಂಭ್ರಮದಿಂದಲೇ ತಿಳಿಯುವಂತಾಗಿದೆ ಎಂಬುದು ಉವೆ ಅವರ ಅಭಿಪ್ರಾಯವಾಗಿದೆ. 8000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಪಟ್ಟಣದಲ್ಲಿ ತಮ್ಮ ತಾಯಿ ಹಾಗೂ ಸಹೋದರಿಯೊಂದಿಗೆ ವಾಸಿಸುತ್ತಿರುವ ಉವೆ ಹೋನ್ ಟೋಕಿಯೋ, ಭಾರತ ಹಾಗೂ ಚಿನ್ನದ ಪದಕರ ಕುರಿತು ಸಂಭಾಷಿಸಲು ಮಾಧ್ಯಮಕ್ಕೆ ಕರೆ ಮಾಡಿದ್ದಾರೆ.


ಒಬ್ಬ ಜಾವೆಲಿನ್ ಕ್ರೀಡಾಪಟುವಾಗಿ ನೀರಜ್ ಈ ಎಲ್ಲಾ ಗೌರವಕ್ಕೆ ಅರ್ಹರಾಗಿದ್ದಾರೆ. ಇವರು ಭಾರತದ ಎಲ್ಲಾ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ. ನೀರಜ್‌ಗೆ ತರಬೇತುದಾರರಿಲ್ಲದ ಕಾರಣ ನಾನು ತರಬೇತಿ ನೀಡಲು ಭಾರತಕ್ಕೆ ಬರಬೇಕಾಯಿತು. ನೀರಜ್ ನನ್ನ ಗರಡಿಯಲ್ಲಿ ಪಳಗಿದ ಹುಡುಗ ಎಂಬುದು ತಿಳಿದು ನನಗೆ ಖುಷಿಯಾಗುತ್ತಿದೆ. ಆತನ ಪರಿಶ್ರಮಕ್ಕೆ ತಕ್ಕ ಗೌರವ ಸಂದಿದೆ ಎಂದು ಹೋನ್ ತಿಳಿಸಿದ್ದಾರೆ.


ಇದನ್ನೂ ಓದಿ:ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಮವಾರದಿಂದ ‘ವೈದ್ಯರ ನಡೆ ಮನೆ ಬಾಗಿಲಿನ ಕಡೆ‘ ಅಭಿಯಾನ ಆರಂಭ

ಇತರ ದೇಶದಲ್ಲಿ ಕ್ರೀಡಾಪಟುವಿಗೆ ಕಡಿಮೆ ನಗದು ಹಣವನ್ನು ನೀಡಿದ ಗೌರವಿಸಲಾಗುತ್ತದೆ. ಆದರೆ ನೀರಜ್‌ಗೆ ಹರಿದು ಬಂದಿರುವ ನಗದು ಸನ್ಮಾನಗಳಿಂದಲೇ ಕ್ರೀಡಾಪಟುವಿಗೆ ದೇಶವು ನೀಡಿರುವ ಅಭಿಮಾನ ಕಂಡು ಕಣ್ಣುತುಂಬಿ ಬಂದಿದೆ ಎಂದು ಹೋನ್ ಗದ್ಗಿತರಾಗಿದ್ದಾರೆ.




ಸೆಪ್ಟೆಂಬರ್ ಅಂತ್ಯದ ವೇಳೆಗೆ, ಬಾರ್ಟೋನಿಯೆಟ್ಜ್ ಭಾರತಕ್ಕೆ ಮರಳಲು ನಿರ್ಧರಿಸಿದ್ದಾರೆ. ಹೋನ್‌ಗೂ ಮನೆಯಲ್ಲಿರಲು ಹೆಚ್ಚು ಸಮಯ ಸಿಗುವುದಿಲ್ಲ ಎಂದು ತಿಳಿದು ಬಂದಿದೆ. 2022 ರ ವಿಶ್ವಚಾಂಪಿಯನ್‌ಶಿಪ್‌ಗಳು, ಕಾಮನ್‌ವೆಲ್ತ್ ಗೇಮ್‌ಗಳು, ಏಷ್ಯನ್ ಗೇಮ್‌ಗಳು ನಮ್ಮ ಬರವನ್ನು ಕಾಯುತ್ತಿವೆ ಎಂದು ಹೋನ್ ತಿಳಿಸಿದ್ದಾರೆ.

Published by:Latha CG
First published: