Pro Kabaddi 2022: ಬೆಂಗಳೂರು ಬುಲ್ಸ್​ ಕಟ್ಟಿ ಹಾಕಲು ಯುಪಿ ಯೋಧಾ ಪ್ಲ್ಯಾನ್​.. ಆದ್ರೆ, ಮದವೇರಿದ ಗೂಳಿಗಳನ್ನು ತಡೆಯೋಕಾಗಲ್ಲ!

ಇಂದು ಬೆಂಗಳೂರು ಬುಲ್ಸ್​ ವಿರುದ್ಧ ಯುಪಿ ಯೋಧಾ ಗೆಲ್ಲಲು ಸಾಧ್ಯವೇ ಇಲ್ಲ ಅಂತ ಫ್ಯಾನ್ಸ್​ ಹೇಳುತ್ತಿದ್ದಾರೆ ಅದಕ್ಕೂ ಒಂದು ಕಾರಣವಿದೆ. ಕಳೆದ ಕೆಲ ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ಕಳಪೆ ಪ್ರದರ್ಶನ ತೋರಿತ್ತು. ಇವತ್ತು ಅವರು ಕಮ್​ಬ್ಯಾಕ್(Comeback)​ ಮಾಡಲಿದ್ದಾರೆ ಅಂತ ಕಬಡ್ಡಿ ಪ್ರೇಮಿಗಳು ಹೇಳುತ್ತಿದ್ದಾರೆ.

ಬೆಂಗಳೂರು ಬುಲ್ಸ್​ V\S ಯುಪಿ ಯೋಧಾ

ಬೆಂಗಳೂರು ಬುಲ್ಸ್​ V\S ಯುಪಿ ಯೋಧಾ

  • Share this:
ಪ್ರೋ ಕಬಡ್ಡಿ 2022 ಟೂರ್ನಿ ಆರಂಭವಾಗಿ ಮುಕ್ಕಾಲು ಪಂದ್ಯಗಳು ನಡೆದಿದೆ. ಹಲವು ಕಾದಾಟ, ರಣ ರೋಚಕ ಪಂದ್ಯಗಳಿಗೆ ಈ ಬಾರಿಯ ಕಬಡ್ಡಿ ಟೂರ್ನಿ(Kabaddi Tournament) ಸಾಕ್ಷಿಯಾಗಿತ್ತು. ಒಟ್ಟು  12 ಟೀಂಗಳು ಈ ಬಾರಿಯ ಕಬಡ್ಡಿ ಲೀಗ್​ನಲ್ಲಿ ಭಾಗಿಯಾಗಿವೆ. ಇಲ್ಲಿಯವರೆಗೂ ಒಟ್ಟು 83 ಪಂದ್ಯಗಳು ನಡೆದಿವೆ. ಕೊರೋನಾ ಕಾರ್ಮೋಡದ ನಡುವೆಯೂ ಪ್ರೋ ಕಬಡ್ಡಿ ಟೂರ್ನಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಎರಡು ಹಂತದಲ್ಲಿ ಪಂದ್ಯಗಳು ನಡೆಯಲಿವೆ.ಇಂದು ಕೂಡ  ಎರಡು ರಣರೋಚಕ  ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್(Bengal Warriors)​ಗೆ ಗುಜರಾತ್​​ ಜೈಂಟ್ಸ್(Gujarat Jaints​) ಸವಾಲೊಡ್ಡಲಿದ್ದಾರೆ. ಇನ್ನೂ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​(Bengaluru Bulls) ಕಟ್ಟಿಹಾಕುವುದಕ್ಕೆ ಯುಪಿ ಯೋಧಾ(UP Yoddha) ಟೀಂ ಸಜ್ಜಾಗಿ ನಿಂತಿದೆ. ಆದರೆ, ಇಂದು ಬೆಂಗಳೂರು ಬುಲ್ಸ್​ ವಿರುದ್ಧ ಯುಪಿ ಯೋಧಾ ಗೆಲ್ಲಲು ಸಾಧ್ಯವೇ ಇಲ್ಲ ಅಂತ ಫ್ಯಾನ್ಸ್​ ಹೇಳುತ್ತಿದ್ದಾರೆ ಅದಕ್ಕೂ ಒಂದು ಕಾರಣವಿದೆ. ಕಳೆದ ಕೆಲ ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ಕಳಪೆ ಪ್ರದರ್ಶನ ತೋರಿತ್ತು. ಇವತ್ತು ಅವರು ಕಮ್​ಬ್ಯಾಕ್(Comeback)​ ಮಾಡಲಿದ್ದಾರೆ ಅಂತ ಕಬಡ್ಡಿ ಪ್ರೇಮಿಗಳು ಹೇಳುತ್ತಿದ್ದಾರೆ. ಇವತ್ತು ಬೆಂಗಳೂರು ಬುಲ್ಸ್​ ತಂಡದ ಆಟಗಾರರು ಮದವೇರಿದ ಗೂಳಿಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಕಳೆದ 6 ಪಂದ್ಯದಲ್ಲಿ 5ರಲ್ಲಿ ಸೋತಿರುವ ಬುಲ್ಸ್​!

ಕಳೆದ 6 ಪಂದ್ಯಗಳಲ್ಲಿ 5ರಲ್ಲಿ ಸೋಲನುಭಸಿರುವ ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಮಂಗಳವಾರ ಯು.ಪಿ.ಯೋಧಾಎದುರಿಸಲಿದೆ. ಒಟ್ಟು 16 ಪಂದ್ಯಗಳಲ್ಲಿ 8 ಜಯದೊಂದಿಗೆ 46 ಅಂಕ ಗಳಿಸಿರುವ ಬುಲ್ಸ್‌ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕೆಲ ಪಂದ್ಯಗಳಿಂದ ಕಳೆದುಕೊಂಡಿರುವ ಲಯ ಹುಡುಕುವ ತವಕದಲ್ಲಿ ಬೆಂಗಳೂರು ಬುಲ್ಸ್​​ ತಂಡ ಇದೆ. ಹೀಗಾಗಿ ಪ್ಲೇ ಆಫ್‌ ಸ್ಥಾನಕ್ಕೇರಲು ಎದುರು ನೋಡುತ್ತಿರುವ ಬುಲ್ಸ್‌ ಈ ಪಂದ್ಯದಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಇಂದು ಯುಪಿ ಯೋಧಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಲು ಸಜ್ಜಾಗಿ ನಿಂತಿದೆ.

ಇದನ್ನು ಓದಿ: ಈ ಬಾರಿ ಚಾಂಪಿಯನ್ಸ್​ ಆಗೋ ಎಲ್ಲ ಅರ್ಹತೆ ಇರೋದು ಈ ಟೀಮ್​ಗೆ ಮಾತ್ರ ಅಂತೆ!

6 ಪಂದ್ಯದಲ್ಲಿ ನಾಲ್ಕರಲ್ಲಿ ಗೆಲ್ಲುವುದು ಅನಿವಾರ್ಯ​!

ಸೋಲಿನ ಸುಳಿಯಿಂದ ಮೇಲೇರಲು ಪರದಾಡುತ್ತಿರುವ ಬೆಂಗಳೂರು ಬುಲ್ಸ್​​ ತಂಡಕ್ಕೆ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಲು ಇನ್ನುಳಿದ 6 ಪಂದ್ಯಗಳಲ್ಲಿ ಕನಿಷ್ಠ 4ರಲ್ಲಿ ಗೆಲುವು ಅನಿವಾರ್ಯ. ನಾಯಕ ಪವನ್‌ ಶೆರಾವತ್‌ ಅವರನ್ನೇ ತಂಡ ನಂಬಿಕೊಂಡಿದೆ. ಪವನ್​ ಹೆಚ್ಚು ಹೊತ್ತು ಅಂಕಣದಲ್ಲಿದ್ದರೆ ಪಾಯಿಂಟ್ಸ್​ಗೆ ಯಾವುದೇ ಕೊರತೆ ಇಲ್ಲ. ಆದರೆ, ಪವನ್​ ಅವರನ್ನು ಅಂಕಣದಿಂದ ಹೊರಗಿಟ್ಟರೆ ಗೆಲುವು ಸುಲಭವಾಗಲಿದೆ ಎನ್ನುವುದು ಎದುರಾಳಿಗಳಿಗೆ ತಿಳಿದಿದೆ.  ಇನ್ನೊಂದೆಡೆ, ಯೋಧಾ 14 ಪಂದ್ಯಗಳಲ್ಲಿ ಕೇವಲ 5ರಲ್ಲಿ ಜಯ ಸಾಧಿಸಿದೆ. ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ತಂಡ ಹ್ಯಾಟ್ರಿಕ್‌ ಸೋಲು ತಪ್ಪಿಸಲು ಎದುರು ನೋಡುತ್ತಿದೆ.

ಇದನ್ನು ಓದಿ : ದಬಂಗ್ ಡೆಲ್ಲಿ ಮತ್ತೆ ಟಾಪ್; ಯು ಮುಂಬಾ, ಗುಜರಾತ್ ಜೈಂಟ್ಸ್ ಪಂದ್ಯ ಡ್ರಾ

ಬೆಂಗಳೂರು ಬುಲ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ!
 ಕಳೆದ ಬಾರಿಗಿಂತ ಈ ಬಾರಿ ಬುಲ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಅಬೋಲ್ಫಾಜ್ಲ್ ಮಗ್ಸೋಡ್ಲೌ ಮಹಾಲಿ (ಇರಾನ್), ಡಾಂಗ್ ಜಿಯೋನ್ ಲೀ (ದಕ್ಷಿಣ ಕೊರಿಯಾ), ಜಿಯಾವುರ್ ರೆಹಮಾನ್ (ಬಾಂಗ್ಲಾದೇಶ) ಆಟಗಾರರು ತಂಡ ಸೇರಿಕೊಂಡಿದ್ದಾರೆ ಪವನ್ ಕುಮಾರ್ ಸೆಹ್ರಾವತ್ ನಾಯಕನಾಗಿ ಬುಲ್ಸ್ ತಂಡ ಮುನ್ನಡೆಸುತ್ತಿದ್ದಾರೆ. ಇನ್ನು ಡಿಫೆಂಡರ್ ಮಹೇಂದರ್ ಸಿಂಗ್ ಬೆಂಗಳೂರು ಬುಲ್ಸ್ ಶಕ್ತಿ.  ಹೀಗಾಗಿ ಈ ಬಾರಿ ಕಪ್​ ನಮ್ದೆ ಅಂತ ಟ್ವೀಟರ್​ನಲ್ಲಿ ಟ್ರೆಡಿಂಗ್​ ಆಗುತ್ತಿದೆ.
Published by:Vasudeva M
First published: