• Home
  • »
  • News
  • »
  • sports
  • »
  • T20 World Cup 2022: ಬುಮ್ರಾ ಬದಲಿಗೆ ಯಾರಿಗೆ ಸಿಗುತ್ತೆ ಚಾನ್ಸ್? ಟಿ20 ವಿಶ್ವಕಪ್​ಗೆ ಆಯ್ಕೆ ಆಗ್ತಾರಾ RCB ಬೌಲರ್​?

T20 World Cup 2022: ಬುಮ್ರಾ ಬದಲಿಗೆ ಯಾರಿಗೆ ಸಿಗುತ್ತೆ ಚಾನ್ಸ್? ಟಿ20 ವಿಶ್ವಕಪ್​ಗೆ ಆಯ್ಕೆ ಆಗ್ತಾರಾ RCB ಬೌಲರ್​?

ಬೂಮ್ರಾ

ಬೂಮ್ರಾ

T20 World Cup 2022: ಮೊದಲು ಏಷ್ಯಾಕಪ್ ಮತ್ತು ಇದೀಗವಿಶ್ವಕಪ್ ನಿಂದಲೂ ಬುಮ್ರಾ ಹೊರಗುಳಿಯುತ್ತಿದ್ದಾರೆ. ಇದರ ಪರಿಣಾಮವಾಗಿ, ವಿಶ್ವಕಪ್‌ಗೆ ಅಂತಿಮ 15 ರಲ್ಲಿ ಬುಮ್ರಾ ಬದಲಿಗೆ ಹೊಸ ಬೌಲರ್ ಅನ್ನು ಭಾರತೀಯ ಆಯ್ಕೆ ಸಮಿತಿ ಆಯ್ಕೆ ಮಾಡಲಿದೆ.

  • Share this:

ಟಿ20 ವಿಶ್ವಕಪ್ 2022 (T20 World Cup 2022) ಅಭಿಯಾನಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳುವ ಮುನ್ನ ಭಾರತ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಬೆನ್ನುನೋವಿನ ಉಲ್ಬಣವು ಭಾರತ ತಂಡದ ನಿರ್ವಹಣೆ ಮತ್ತು ಆಯ್ಕೆ ಸಮಿತಿಗೆ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿದೆ. ಬುಮ್ರಾ ಅವರನ್ನು ವಿಶ್ವಕಪ್‌ಗೆ ಟೀಮ್ ಇಂಡಿಯಾದಗೆ (Team India) ಆಯ್ಕೆ ಮಾಡಲಾಗಿತ್ತು. ಆದರೆ ಮೊದಲು ಅವರು ಏಷ್ಯಾಕಪ್ ಮತ್ತು ಇದೀಗ ವಿಶ್ವಕಪ್ ಅನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ, ವಿಶ್ವಕಪ್‌ಗೆ ಅಂತಿಮ 15 ರಲ್ಲಿ ಬುಮ್ರಾ ಬದಲಿಗೆ ಹೊಸ ಬೌಲರ್ ಅನ್ನು ಭಾರತೀಯ ಆಯ್ಕೆ ಸಮಿತಿ ಆಯ್ಕೆ ಮಾಡಬೇಕಾಗಿದೆ.


ಬುಮ್ರಾ ಬದಲಿಗೆ ಯಾರಾಗ್ತಾರೆ ಆಯ್ಕೆ?:


ವಿಶ್ವಕಪ್‌ಗೆ ತಂಡವನ್ನು ಆಯ್ಕೆ ಮಾಡುವಾಗ ಟೀಂ ಇಂಡಿಯಾ ನಾಲ್ವರು ಆಟಗಾರರನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಿತ್ತು. ಮೊಹಮ್ಮದ್ ಶಮಿ, ದೀಪಕ್ ಚಹಾರ್, ರವಿ ಬಿಷ್ಣೋಯ್ ಮತ್ತು ಶ್ರೇಯಸ್ ಅಯ್ಯರ್ ಸ್ಟ್ಯಾಂಡ್-ಬೈ ಆಟಗಾರರಾಗಿ ಆಯ್ಕೆ ಆಗಿದ್ದಾರೆ. ಅವರಲ್ಲಿ, ಬುಮ್ರಾ ಬದಲಿಗೆ ಇಬ್ಬರು ವೇಗದ ಬೌಲರ್‌ಗಳು ಶಮಿ ಮತ್ತು ದೀಪಕ್ ಚಹಾರ್. ಆದರೆ ಕೊರೊನಾದಿಂದಾಗಿ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಕಳೆದುಕೊಳ್ಳಬೇಕಾಗಿದೆ. ಹಾಗಾಗಿ ತಿರುವನಂತಪುರಂನ ಟಿ20ಯಲ್ಲಿ ದೀಪಕ್ ಚಹಾರ್ ಗೆ ಅವಕಾಶ ಸಿಕ್ಕಿದೆ. ಅಲ್ಲದೆ ಎರಡು ವಿಕೆಟ್ ಪಡೆದರು. ಹಾಗಾಗಿ ಶಮಿಗಿಂತ ದೀಪಕ್ ಚಹಾರ್ ಅಂತಿಮ 15ರೊಳಗೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಿದೆ.


RCB ಪ್ಲೇಯರ್​ಗೆ ಸಿಗುತ್ತಾ ಚಾನ್ಸ್?:


ಆದರೆ ಈಗ ಬುಮ್ರಾ ಅವರ ಸ್ಥಾನಕ್ಕೆ ಮತ್ತೊಂದು ಹೆಸರು ಚರ್ಚೆಯಾಗುತ್ತಿದೆ. ಹೌದು, ಮೊಹಮ್ಮದ್ ಸಿರಾಜ್ ಈ ಆಯ್ಕೆ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿರಾಜ್ ದಿಟ್ಟ ಪ್ರದರ್ಶನ ನೀಡಿದ್ದರು. ಹಾಗಾಗಿ ಆಸ್ಟ್ರೇಲಿಯಾದ ಪಿಚ್ ಗಳನ್ನು ಗಮನಿಸಿದರೆ ಮೊಹಮ್ಮದ್ ಸಿರಾಜ್ ಅವರಿಗೂ ಆಸ್ಟ್ರೇಲಿಯಾ ಟಿಕೆಟ್ ಸಿಗುವುದನ್ನು ತಳ್ಳಿ ಹಾಕುವಂತಿಲ್ಲ. ಇದಲ್ಲದೆ, ಸಿರಾಜ್ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ.


ಇದನ್ನೂ ಓದಿ: Team India: ಟೀಂ ಇಂಡಿಯಾಗೆ ಶಾಪವಾಗಿ ಪರಿಣಮಿಸಿದೆ ಆ ಒಂದು ಓವರ್​!


ಬುಮ್ರಾ ಚೇತರಿಸಿಕೊಳ್ಳುವುದು ಅನುಮಾನ:


ಏತನ್ಮಧ್ಯೆ, ಗಾಯದ ನಂತರ ಬುಮ್ರಾ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕಳುಹಿಸಲಾಗಿದೆ. ಬಿಸಿಸಿಐ ವೈದ್ಯಕೀಯ ತಂಡ ಅವರ ಗಾಯದ ಮೇಲೆ ನಿಗಾ ಇರಿಸಿದೆ. ಈ ಗಾಯದ ಸ್ವರೂಪದ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗಗೊಂಡಿಲ್ಲ. ಆದರೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಈ ಗಾಯದಿಂದ ಚೇತರಿಸಿಕೊಳ್ಳಲು ಬುಮ್ರಾ ಆರು ತಿಂಗಳ ಕಾಲ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಅವರನ್ನು ಮತ್ತೆ ವಿಶ್ವಕಪ್​ ತಂಡಕ್ಕೆ ಆಯ್ಕೆ ಆಗುವುದು ಅನುಮಾನ ಎನ್ನಲಾಗುತ್ತಿದೆ.


ಇದನ್ನೂ ಓದಿ: Suryakumar Yadav: ಟೀಂ ಇಂಡಿಯಾಗೆ ಸಿಕ್ರು ಹೊಸ ಸಿಕ್ಸರ್​ ಕಿಂಗ್​, ವಿಶ್ವ ದಾಖಲೆ ಬರೆದ ಯಾದವ್


2022 ರಲ್ಲಿ ಕೇವಲ 5 ಪಂದ್ಯಗಳು:


ಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಸಮಸ್ಯೆಯಿಂದಾಗಿ, ಅವರು ಈ ವರ್ಷ ಕೆಲವೇ ಕೆಲವು ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧ ಎರಡು, ಆಗಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಒಂದು ಮತ್ತು ಇತ್ತೀಚಿನ ಆಸ್ಟ್ರೇಲಿಯಾ ವಿರುದ್ಧದ ಎರಡು ಸರಣಿ ಸೇರಿದಂತೆ ಈ ವರ್ಷ ಒಟ್ಟು 5 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಲ್ಲಿ ಟೀಂ ಇಂಡಿಯಾದ ಈ ಸ್ಟಾರ್ ಬೌಲರ್ ಫಿಟ್ನೆಸ್ ಬಗ್ಗೆ ಚಿಂತೆ ಹೆಚ್ಚಾಗಿದೆ.

Published by:shrikrishna bhat
First published: