IPL 2022: ಮೊದಲ ಪಂದ್ಯ ಯಾರಿಗೆ ಶುಭಾರಂಭವಾಗಲಿದೆ?, ಏನು ಹೇಳುತ್ತೆ ಅಂಕಿಅಂಶ

ಐಪಿಎಲ್ 2022ರ (IPL 2022) 15ನೇ ಆವೃತ್ತಿ ಮಾರ್ಚ್ 26ರಿಂದ (ನಾಳೆ) ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡಗಳು ಮುಖಾಮುಖಿಯಾಗಲಿವೆ.

ಚೆನ್ನೈ vs ಕೊಲ್ಕತ್ತಾ

ಚೆನ್ನೈ vs ಕೊಲ್ಕತ್ತಾ

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿ ಮಾರ್ಚ್ 26ರಿಂದ (ನಾಳೆ) ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿದ್ದು, ಶ್ರೇಯಸ್ ಅಯ್ಯರ್ (Shreyas Iyer) ಮತ್ತು ರವೀಂದ್ರ ಜಡೇಜಾ (Ravindra Jadeja) ಅವರ ನೂತನ ನಾಯಕತ್ವದ ಎರಡೂ ತಂಡಗಳು ಕಾದಡಲಿವೆ. ಈ ನಡುವೆ ಎರಡೂ ತಂಡಗಳ ಬಲಾಬಲ ಹೇಗಿರಲಿದೆ ಎನ್ನುವುದರ ಜೊತೆಗೆ ಯಾವ ತಂಡ ಯಾವ ತಂಡದ ಮೇಲೆ ಹೆಚ್ಚು ಗೆಲುವನ್ನು ಸಾಧಿಸಿದೆ ಎಂಬ ಅಂಕಿ ಅಂಶವನ್ನು ತಿಳಿದುಕೊಳ್ಳೋಣ. ಇದರೊಂದಿಗೆ ಈ ಬಾರಿ ಎರಡೂ ತಂಡಗಳಲ್ಲಿಯೂ ಅನೇಕ ಬದಲಾವಣೆಗಳಾಗಿದ್ದು, ನಾಳಿನ ಮೊದಲ ಪಂದ್ಯಕ್ಕೆ ಚೆನ್ನೈ ಮತ್ತು ಕೊಲ್ಕತ್ತಾ ತರಂಡಗಳ ಸಂಭಾವ್ಯ ತಂಡ ಹೇಗಿರಲಿದೆ ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಎರಡೂ ತಂಡಗಳ ನಾಯಕರಲ್ಲಿ ಬದಲಾವಣೆ:

ಐಪಿಎಲ್​ 15ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಬಾರಿ ಈ ಎರಡೂ ತಂಡಗಳಲ್ಲಿನ ನಾಯಕರುಗಳು ಬದಲಾಗಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಶ್ರೇಯಸ್ ಐಯ್ಯರ್ ನಾಯಕನಾದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರವೀಂದ್ರ ಜಡೇಜಾ ನಾಯಕರಾಗಿದ್ದಾರೆ. ಈ ಮೂಲಕ ಇಬ್ಬರೂ ಇದೇ ಮೊದಲ ಬಾರಿಗೆ ನಾಯಕರಾಗುತ್ತಿದ್ದು, ಇಬ್ಬರಲ್ಲಿ ಯಾರು ಮೊದಲು ಗೆಲುವಿನಿಂದ ಪ್ರಾರಂಭ ಮಾಡುತ್ತಾರೆ ಎಂಬುದನ್ನು ನಾಳಿನವರೆಗೆ ಕಾದು ನೋಡಬೇಕಿದೆ.

ಚೆನ್ನೈ ಸೂಪರ್ ಕಿಂಗ್ಸ್ ಪ್ರಾಬಲ್ಯ:

ಕೋಲ್ಕತ್ತಾ ವಿರುದ್ಧ ಚೆನ್ನೈ ಹೆಚ್ಚು ಪ್ರಾಬಲ್ಯ ಹೊಂದಿದೆ. ಈವರೆಗೆ ಈ ತಂಡಗಳ ನಡುವೆ 26 ಪಂದ್ಯಗಳು ನಡೆದಿದ್ದು, ಚೆನ್ನೈ 17ರಲ್ಲಿ ಗೆದ್ದಿದ್ದರೆ, ಕೋಲ್ಕತ್ತಾ ಕೇವಲ 8 ಪಂದ್ಯಗಳಲ್ಲಿ ಗೆಲುವನ್ನು ಕಂಡಿದೆ. ಇನ್ನು, ಕಳೆದ ಬಾರಿ ಅಂಕಿ ಅಂಶಗಳನ್ನು ಗಮನಿಸಿದ್ದಲ್ಲಿ, ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 27 ರನ್‌ಗಳಿಂದ ಕೋಲ್ಕತ್ತಾವನ್ನು ಸೋಲಿಸಿತು. ಆದರೆ, ಚೆನ್ನೈ ಐಪಿಎಲ್‌ನ ಆರಂಭಿಕ ಪಂದ್ಯದಲ್ಲಿ 12 ಬಾರಿ ಆಡಿದ್ದು, ಅದರಲ್ಲಿ 6 ರಲ್ಲಿ ಸೋತಿದೆ. ಕೋಲ್ಕತ್ತಾ 14 ಪಂದ್ಯಗಳಲ್ಲಿ 10 ಅನ್ನು ಗೆದ್ದಿದೆ. ಈ ಅಂಕಿ ಅಂಶವು ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿದೆ.

ಇದನ್ನೂ ಓದಿ: IPL 2022: ನಾಯಕತ್ವಕ್ಕೆ ರಾಜೀನಾಮೆ ನೀಡಿದ ಧೋನಿ, ಚೆನ್ನೈ ತಂಡದ ಹೊಸ ಕ್ಯಾಪ್ಟನ್ ಯಾರು?

ನಾಳಿನ ಫಲಿತಾಂಶ ಏನಾಗಬಹುದು?:

ಐಪಿಎಲ್‌ನ ಮೊದಲ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆಗೆ ಅಂಕಿಅಂಶಗಳ ಪ್ರಕಾರ ನೋಡಿದರೆ ಚೆನ್ನೈ ಸೂಪರ್ ಕಿಂಗ್ಸ್‌ನ ಪರ ಹೆಚ್ಚು ಸಾಧ್ಯತೆಗಳಿವೆ ಎಂದು ಹೇಳಬಹುದು. ಸಿಎಸ್​ಕೆ ಪರ ಅನುಭವಿ ಆಟಗಾರರನ್ನು ನೋಡಿದರೆ, ಈ ಪಂದ್ಯದಲ್ಲಿ ಕೋಲ್ಕತ್ತಾಗೆ ಕೊಂಚ ಹಿನ್ನಡೆಯಾಗಬಹುದು. ಆದರೆ ಕ್ರಿಕೆಟ್​ನಲ್ಲಿ ಏನೂ ಬೇಕಾದರೂ ಆಗಬಹುದಾಗಿದ್ದು, ಇದು ಕೇವಲ ಅಂಕಿ ಅಂಶದ ಆಧಾರವಾಗಿದೆ.

ಎರಡೂ ತಂಗಳ ಸಂಭಾವ್ಯ ತಂಡ:

ಕೆಕೆಆರ್ ಸಂಭಾವ್ಯ ತಂಡ: ವೆಂಕಟೇಶ್ ಅಯ್ಯರ್, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ನಿತೀಶ್ ರಾಣ, ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್, ಸುನೀಲ್ ನರೈನ್, ಟಿಮ್ ಸೌಥೀ, ಶಿವಂ ಮಾವಿ, ವರುಣ್ ಚಕ್ರವರ್ತಿ, ಉಮೇಶ್ ಯಾದವ್.

ಇದನ್ನೂ ಓದಿ: CSK ICICI Bank Credit Card: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರನ್ನು ಭೇಟಿಯಾಗಲು ಹೀಗೆ ಮಾಡಿ!

ಚೆನ್ನೈ ಸಂಭಾವ್ಯ ತಂಡ: ರವೀಂದ್ರ ಜಡೇಜಾ (ನಾಯಕ), ದೀಪಕ್ ಚಹಾರ್, ಎಂಎಸ್ ಧೋನಿ, ಅಂಬಟಿ ರಾಯುಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕ್ರಿಸ್ ಜೋರ್ಡಾನ್, ತುಷಾರ್ ದೇಶಪಾಂಡೆ, ಕೆ ಎಂ ಆಸಿಫ್, ಆಡಮ್ ಮಿಲ್ನೆ, ಪ್ರಶಾಂತ್ ಸೋಲಂಕಿ.
Published by:shrikrishna bhat
First published: