• Home
  • »
  • News
  • »
  • sports
  • »
  • CWG 2022: ಪಾಕೆಟ್​ಮನಿಗೂ ಕಷ್ಟಪಡುತ್ತಿದ್ದ ವ್ಯಕ್ತಿ ಈಗ ಬಂಗಾರದ ಹುಡುಗ!

CWG 2022: ಪಾಕೆಟ್​ಮನಿಗೂ ಕಷ್ಟಪಡುತ್ತಿದ್ದ ವ್ಯಕ್ತಿ ಈಗ ಬಂಗಾರದ ಹುಡುಗ!

ಟ್ರಿಪಲ್ ಜಂಪ್ ನಲ್ಲಿ ಚಿನ್ನದ ಪದಕ ಗೆದ್ದ ಎಲ್ದೋಸ್ ಪೌಲ್

ಟ್ರಿಪಲ್ ಜಂಪ್ ನಲ್ಲಿ ಚಿನ್ನದ ಪದಕ ಗೆದ್ದ ಎಲ್ದೋಸ್ ಪೌಲ್

ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಟ್ರಿಪಲ್ ಜಂಪ್ ನಲ್ಲಿ ಚಿನ್ನಕ್ಕೆ ಕೊರಳೊಡ್ಡಿರುವ ಎಲ್ದೋಸ್ ಪೌಲ್ ಅವರನ್ನು ದೇಶವೇ ಕೊಂಡಾಡುತ್ತಿದೆ. ಐತಿಹಾಸಿಕ ಗೆಲುವಿಗೆ ಕಾರಣರಾಗಿರುವ ಎಲ್ದೋಸ್ ಪೌಲ್ ಜೀವನ ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ.

  • Share this:

ಬರ್ಮಿಂಗ್ಹ್ಯಾಮ್ ನಲ್ಲಿ (Birmingham) ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games 2022) ಟ್ರಿಪಲ್ ಜಂಪ್ ನಲ್ಲಿ (Triple Jump) ಭಾರತ ಐತಿಹಾಸಿಕ ಗೆಲುವು ಪಡೆದುಕೊಂಡಿದೆ. ಪುರುಷರ ವಿಭಾಗದಲ್ಲಿ ಇಬ್ಬರು ಬಂಗಾರ ಮತ್ತು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಪುರುಷರ ಟ್ರಿಪಲ್ ಜಂಪಿನಲ್ಲಿ ಎಲ್ದೋಸ್ ಪೌಲ್ (Eldhose Paul) ಎಂಬ ಅಥ್ಲೀಟ್ 17.03 ಮೀಟರ್ ಜಿಗಿತದೊಂದಿಗೆ ಬಂಗಾರದ ಪದಕ (Gold Medal) ಗೆದ್ದರೆ, ಅಬ್ದುಲ್ಲಾ ಅಬೂಬಕರ್ 17.02 ಮೀಟರ್ ಜಿಗಿದು ಬೆಳ್ಳಿ ಪದಕ ಜಯಿಸಿದ್ದಾರೆ. ಚಿನ್ನಕ್ಕೆ ಕೊರಳೊಡ್ಡಿರುವ ಎಲ್ದೋಸ್ ಪೌಲ್ ಅವರನ್ನು ದೇಶವೇ ಕೊಂಡಾಡುತ್ತಿದೆ. ಐತಿಹಾಸಿಕ ಗೆಲುವಿಗೆ ಕಾರಣರಾಗಿರುವ ಎಲ್ದೋಸ್ ಪೌಲ್ ಜೀವನ ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ.


ಕಷ್ಟದ ಹಾದಿಯಲ್ಲಿಯೇ ಬೆಳೆದು ಬಂದ ಯುವಕ ಇಂದು ದೇಶದ ಮುಕುಟವಾಗಿದ್ದಾನೆ. ಹಾಗಾದರೆ ‘ಬಂಗಾರ’ದ ಹುಡುಗನ ಜೀವನ ಹೇಗಿತ್ತು? ಆತನ ಕೋಚ್ ಅವರ ಬಗ್ಗೆ ಏನು ಹೇಳಿದ್ದಾರೆ ಎಂದು ನಾವಿಲ್ಲಿ ತಿಳಿಯೋಣ.


ಬಡ ಕುಟುಂಬದ ಯುವಕನಿಂದ ಅಭೂತಪೂರ್ವ ಸಾಧನೆ
ಎಲ್ದೋಸ್ ಪೌಲ್ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿ ಬೆಳೆದರು. ಮೊದಲಿನಿಂದಲೂ ಕಷ್ಟದ ಜೀವನವನ್ನೇ ನಡೆಸುತ್ತಿದ್ದ ಪೌಲ್ ಗೆ ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ಇತ್ತು. ಎರ್ನಾಕುಲಂ ನಗರದಿಂದ 26 ಕಿಲೋಮೀಟರ್ ದೂರದಲ್ಲಿರುವ ಕೋಲೆಂಚೇರಿಯ ಎಲ್ದೋಸ್ ಪೌಲ್, ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಅದನ್ನು ನಿಭಾಯಿಸಲು ಕ್ರೀಡೆಯನ್ನು ಕೆಲಸವಾಗಿ ಆಯ್ಕೆ ಮಾಡಿಕೊಂಡನು. ಇದೇ ಕೆಲಸ ಪ್ರಸ್ತುತ ಪೌಲ್ ಗೆ ವರದಾನವಾಗಿದ್ದು, ಚಿನ್ನ ಗೆಲ್ಲುವತ್ತ ಕರೆದುಕೊಂಡು ಬಂದಿದೆ.


“ಪೌಲ್ ತುಂಬಾ ಬಡ ಕುಟುಂಬದಿಂದ ಬಂದ ಯುವಕ. ತಾಯಿ ಮರಣದ ಬಳಿಕ ಅಜ್ಜಿಯ ಆಶ್ರಯದಲ್ಲಿ ಬೆಳೆದ. ಆತನ ಅಜ್ಜಿಗೆ ಈಗ 80 ವರ್ಷ ಈತನ ತಂದೆ ಕೂಲಿ ಕೆಲಸ ಮಾಡುತ್ತಿದ್ದರಿಂದ ಮಕ್ಕಳ ಕಾಳಜಿ ಮಾಡದೇ ನಿರ್ಲಕ್ಷ್ಯಿಸಿ ಬಿಟ್ಟರು” ಎಂದು ಪೌಲ್ ಅವರ ಶಿಕ್ಷಕ ಟಿಪಿ ಔಸೆಫ್ ತಿಳಿಸಿದರು.


ಸಾಧನೆಯ ಬಗ್ಗೆ ಪೌಲ್ ಅವರ ಕೋಚ್ ಔಸೆಫ್ ಏನು ಹೇಳಿದ್ದಾರೆ ನೋಡಿ
ಹೀಗೆ ಅಜ್ಜಿಯ ಜೊತೆ ಬೆಳೆದು ಶಾಲಾ ಮತ್ತು ಕಾಲೇಜು ಜೀವನ ಮುಗಿಸಿದ ಪೌಲ್ 12ನೇ ತರಗತಿಯ ನಂತರ ಕೋತಮಂಗಲಂನಲ್ಲಿರುವ ಮಾರ್ ಅಥಾನಾಸಿಯಸ್ ವಿಶ್ವವಿದ್ಯಾಲಯದ (MAC) ಕ್ರೀಡಾ ಚಟುವಟಿಕೆಗಳ ಹಾಸ್ಟೆಲ್‌ನಲ್ಲಿ ಪ್ರವೇಶ ಪಡೆಯಲು ನಿರ್ಧರಿಸಿದನು. ಈ ವಿಶ್ವವಿದ್ಯಾನಿಲಯವು ಕೇರಳದಲ್ಲಿ ವೃತ್ತಿಪರ ಅಥ್ಲೀಟ್‌ಗಳನ್ನು ಸರಿಯಾದ ರೀತಿಯಲ್ಲಿ ತಯಾರು ಮಾಡುವ ಧ್ಯೇಯದ ಜೊತೆ ಕೆಲಸ ಮಾಡುತ್ತದೆ. ಮೊದಮೊದಲು ಪೌಲ್ ಅವರನ್ನು ಕೋಚ್ ಔಸೆಫ್ ನಿರಾಕರಿಸಿದ್ದರು.


ಇದನ್ನೂ ಓದಿ: PV Sindhu: ಎಲ್ಲಾ ಓಕೆ, ಪಿವಿ ಸಿಂಧು ಫೋಟೋ ವಾರ್ನರ್​ ಹಾಕಿದ್ಯಾಕೆ?


“ಟ್ರಿಪಲ್ ಜಂಪ್ ಗೆ ಪೌಲ್ ಎತ್ತರ ಕಡಿಮೆ ಇದ್ದರಿಂದ ನಾನು ನಿರಾಕರಿಸಿದ್ದೆ. ಆತ ಕೇವಲ 5 ಅಡಿ 8 ಇಂಚು ಎತ್ತರವಿದ್ದ. ಪೌಲ್ ಮೊದಲ ವರ್ಷದಲ್ಲಿ ಗಮನಾರ್ಹವಾದ ಪ್ರದರ್ಶನ ನೀಡಿರಲಿಲ್ಲ” ಎಂದು ಔಸೆಫ್ ಹೇಳಿದ್ದಾರೆ. ನಂತರದ ದಿನಗಳಲ್ಲಿ ಪೌಲ್ ಪ್ರತಿಭೆ ಅನಾವರಣವಾಗುತ್ತಾ ಹೋಯಿತು. ಅವನು ಸುಮಾರು 13 ಮೀ ಜಿಗಿಯುತ್ತಿದ್ದ, ನಂತರ 14 ಮೀ ಗೆ ಹೆಚ್ಚಿಸಿಕೊಂಡ ಮತ್ತು ಅಂತಿಮವಾಗಿ ಪೌಲ್ 16 ಮೀ ಹತ್ತಿರತ್ತಿರ ಜಿಗಿಯುತ್ತಿದ್ದನು. ಆ ನಂತರ, ಈ ಚಿಕ್ಕ ಹುಡುಗ ಭಾರತಕ್ಕೆ ಖಂಡಿತವಾಗಿಯೂ ಪದಕಗಳನ್ನು ಗೆಲ್ಲುತ್ತಾನೆ ಎಂದು ನಾನು ಭಾವಿಸಿದ್ದೆ” ಎನ್ನುತ್ತಾರೆ ಪೌಲ್ ಕೋಚ್ ಔಸೆಫ್.


ಪಾಕೆಟ್ ಮನಿ ಸಂಪಾದಿಸಲು ಕೆಲಸ
ಪೌಲ್ ಆರ್ಥಿಕ ಸಂಕಷ್ಟದಲ್ಲಿದ್ದಾಗ ಸ್ವತಃ ಕೋಚ್ ಅವನಿಗೆ ನೆರವಾಗುತ್ತಿದ್ದರಂತೆ. ಮನೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದ ಪೌಲ್ ಹಾಸ್ಟೆಲ್ ನಿಂದ ಮನೆಗೆ ವಾರದಲ್ಲಿ ಒಂದು ಅಥವಾ ಎರಡು ದಿನ ಹೋಗಿ ಬರುತ್ತಿದ್ದರಂತೆ. ಹಾಸ್ಟೆಲ್ ನಿಂದ ಮನೆಗೆ ಹೋಗಿ ತನ್ನ ಅಜ್ಜಿಯ ಮಿಲ್ ನಲ್ಲಿ ಕೆಲಸ ಮಾಡಿ ಪಾಕೆಟ್ ಮನಿ ಸಂಪಾದಿಸುತ್ತಿದ್ದರಂತೆ. “ಪೌಲ್ ನಿಜವಾಗಿಯೂ ಸರಳ, ಉತ್ತಮ ನಡತೆ, ಮತ್ತು ಅವನ ಗುರಿ ಬಗ್ಗೆ ಸಾಕಷ್ಟು ಗಮನವಹಿಸಿದ್ದ. ಆತ ಬೇರೆ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿದ್ದ” ಎನ್ನುತ್ತಾರೆ ಕೋಚ್ ಔಸೆಫ್.


2016 ರಲ್ಲಿ ಪೌಲ್ ಭಾರತೀಯ ನೌಕಾಪಡೆಗೆ ಆಯ್ಕೆ
2016ರಲ್ಲಿ ಪೌಲ್ ಭಾರತೀಯ ನೌಕಾಪಡೆಗೆ ಆಯ್ಕೆಯಾಗುತ್ತಾರೆ. ಹೀಗಾಗಿ ವಿಶ್ವವಿದ್ಯಾಲಯದಲ್ಲಿ ಕೋರ್ಸ್ ಅನ್ನು ಅರ್ಧಕ್ಕೆ ನಿಲ್ಲಿಸುವಂತಾಗುತ್ತದೆ. ಅಲ್ಲೂ ಕೂಡ ಟ್ರಿಪಲ್ ಜಂಪ್ ಅಭ್ಯಾಸ ಬಿಡದ ಪೌಲ್ ಸತತ ಅಭ್ಯಾಸದಲ್ಲಿ ತೊಡಗಿದ್ದರು. ಇವರ ಎಲ್ಲಾ ಪ್ರಯತ್ನದಿಂದಾಗಿ ಪೌಲ್ ಕಾಮನ್ ವೆಲ್ತ್ ಗೇಮ್ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಈ ಮೂಲಕ ಎಲ್ದೋಸ್ ಪೌಲ್ 17 ಮೀಟರ್ ಮಾರ್ಕ್ ದಾಟಿದ ಮೊದಲ ಆಟಗಾರನಾದರು ಮತ್ತು ಅವರು ತಮ್ಮ ಮೂರನೇ ನೆಗೆತದೊಂದಿಗೆ 17.03 ಮೀ. ಜಂಪ್ ಮಾಡುವ ಮೂಲಕ ಬಂಗಾರದ ಪದಕ ಜಯಿಸಿದರು.


ಇದನ್ನೂ ಓದಿ: Serena Williams: ಗ್ರ್ಯಾಂಡ್ ಸ್ಲಾಮ್ ರಾಣಿ ಸೆರೆನಾ ವಿಲಿಯಮ್ಸ್ , ಇಲ್ಲಿದೆ ಟೆನಿಸ್ ದಂತಕಥೆಯ ಸಾಧನೆ


"ಪೌಲ್ ಚಿನ್ನದ ಪದಕ ಗೆದ್ದಿರುವ ಬಗ್ಗೆ ಕೇಳಲು ನನಗೆ ತುಂಬಾ ಸಂತೋಷವಾಗಿದೆ. ಅವರ ಕುಟುಂಬದ ಸದಸ್ಯರೊಬ್ಬರು ಇಂದು ನನಗೆ ಕರೆ ಮಾಡಿ ಮಾಹಿತಿ ನೀಡಿದರು. ನಾನು ಕೋಚ್ ಮಾಡಿದ್ದ ವೃತ್ತಿಪರ ಅಥ್ಲೀಟ್ ನಿಜವಾಗಿಯೂ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾನೆ ಎಂದು ನನಗೆ ತುಂಬಾ ಸಂತೋಷವಾಗಿದೆ” ಎಂದು ಔಸೆಫ್ ಹೇಳಿದರು.

Published by:Ashwini Prabhu
First published: