ಮೊದಲೆಲ್ಲಾ ಆಯಾ ದೇಶದ ಕ್ರಿಕೆಟ್ ಆಟಗಾರರು (Cricket Players) ಅವರ ದೇಶದ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸಾಕಷ್ಟು ಶ್ರಮ ಪಡುತ್ತಿದ್ದರು. ಆದರೆ ಈಗ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಬಂದಾಗಿನಿಂದ ಅನೇಕ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರಿಸುವುದಕ್ಕೆ ಇದೊಂದು ಒಳ್ಳೆಯ ವೇದಿಕೆಯಾಗಿದೆ ಅಂತ ಹೇಳಬಹುದು. ಯಾರಿಗೆ ತಮ್ಮ ದೇಶದ ಕ್ರಿಕೆಟ್ ತಂಡದಲ್ಲಿ ಆಡುವ ಅವಕಾಶ ಸಿಗುವುದಿಲ್ಲವೋ? ಅಂತಹವರು ಐಪಿಎಲ್ ನಲ್ಲಿ ಅವಕಾಶ ಪಡೆದು 5-6 ವರ್ಷ ಚೆನ್ನಾಗಿ ಆಡಿದರೆ ಸಾಕು ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳಬಹುದು ಮತ್ತು ಅದಕ್ಕೆ ತಕ್ಕಂತೆ ಸರಿಯಾಗಿ ಹಣ ಸಹ ಸಂಪಾದನೆ ಮಾಡಬಹುದು ಅಂತ ಅನೇಕ ಕ್ರಿಕೆಟ್ (Cricket) ಆಟಗಾರರಿಗೆ ಗೊತ್ತಿದೆ.
ಐಪಿಎಲ್ ನಲ್ಲಿ ಆಡುವ ಅವಕಾಶವನ್ನು ಆಟಗಾರರು ಪಡೆದರೆ ಅವರು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾಗುತ್ತಾರೆ. ಉದಯೋನ್ಮುಖ ಯುವಕರು ದೊಡ್ಡ ಮೊತ್ತದ ಹಣಕ್ಕೆ ಬೇರೆ ಬೇರೆ ತಂಡ ಸೇರುವುದನ್ನು ನಾವು ಆಗಾಗ್ಗೆ ನೋಡುತ್ತಲೇ ಇರುತ್ತೇವೆ.
3-4 ವರ್ಷಗಳ ಸಮಯದ ವರೆಗೆ ಚೆನ್ನಾಗಿ ಆಡಿ, ಹಣ ಮಾಡಿಕೊಂಡು ಇದ್ದಕ್ಕಿದ್ದಂತೆ ಆಟಗಾರರಿಗೆ ಹರಾಜಿನಲ್ಲಿ ಯಾವುದೇ ತಂಡದವರು ಬಿಡ್ ಮಾಡದೆ ಇರುವುದನ್ನು ಸಹ ನಾವು ಕೆಲವೊಮ್ಮೆ ನೋಡಿರುತ್ತೇವೆ.
ಇದನ್ನೂ ಓದಿ: ಐಪಿಎಲ್ ಮಿನಿ ಹರಾಜಿಗೆ ದಿನಗಣನೆ; ಯಾವಾಗ? ಎಲ್ಲಿ? ಎಷ್ಟು ಗಂಟೆಗೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ಈ ಅನುಭವಿ ಆಟಗಾರನನ್ನ ಯಾರೂ ಬಿಡ್ ಮಾಡಿಲ್ವಂತೆ..
ಈ ಬಾರಿಯ ಐಪಿಎಲ್ ಹರಾಜಿನಲ್ಲಿಯೂ ಸಹ ಕೆಲವು ಅನುಭವಿ ಆಟಗಾರರಿಗೆ ಯಾವ ತಂಡದವರು ಮಣೆ ಹಾಕದಿರುವುದು ಆಟಗಾರರನ್ನು ನಿರಾಶೆಗೊಳಿಸಿದೆ ಅಂತಾನೆ ಹೇಳಬಹುದು. ಕೊಚ್ಚಿಯಲ್ಲಿ ಶುಕ್ರವಾರ ನಡೆದ ಹರಾಜಿನಲ್ಲಿ ಒಂದೇ ಒಂದು ಫ್ರಾಂಚೈಸಿಯಿಂದ ಯಾವುದೇ ಆಸಕ್ತಿಯನ್ನು ಆಕರ್ಷಿಸದ ಭಾರತದ ವೇಗಿ ಸಂದೀಪ್ ಶರ್ಮಾ ಅವರದ್ದು ಸಹ ಇದೇ ಪರಿಸ್ಥಿತಿ ಆಗಿತ್ತು ಅಂತ ಹೇಳಬಹುದು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂದೀಪ್, ತಾನು ಮಾರಾಟವಾಗದೇ ಹೋಗುವುದನ್ನು ನೋಡಿ "ಆಘಾತ ಮತ್ತು ನಿರಾಶೆಯಾಗಿದೆ" ಎಂದು ಹೇಳಿದ್ದಾರೆ.
ಸಂದೀಪ್ ಗೆ ಆಘಾತ ಮತ್ತು ನಿರಾಶೆಯಾಗಿದೆಯಂತೆ..
"ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ತುಂಬಾನೇ ನಿರಾಶೆಗೊಂಡಿದ್ದೇನೆ" ಎಂದು ಸಂದೀಪ್ ಶರ್ಮಾ ಕ್ರಿಕೆಟ್ ಡಾಟ್ ಕಾಂ ಗೆ ಹೇಳಿದರು.
"ನಾನು ಏಕೆ ಮಾರಾಟವಾಗದೆ ಹೋದೆನೋ ನನಗೆ ಗೊತ್ತಿಲ್ಲ. ಈ ಹಿಂದೆ ನಾನು ಯಾವುದೇ ತಂಡಕ್ಕಾಗಿ ಆಡಿದರೂ ಸಹ, ನಾನು ಉತ್ತಮವಾಗಿಯೇ ಆಡಿದ್ದೇನೆ ಮತ್ತು ಕೆಲವು ತಂಡವು ನನಗಾಗಿ ಬಿಡ್ ಮಾಡುತ್ತದೆ ಎಂದು ನಾನು ನಿಜವಾಗಿಯೂ ಭಾವಿಸಿದ್ದೆ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ಅದು ಎಲ್ಲಿ ತಪ್ಪಾಗಿದೆ ಎಂದು ಸಹ ನನಗೆ ತಿಳಿಯುತ್ತಿಲ್ಲ. ದೇಶೀಯ ಕ್ರಿಕೆಟ್ ನಲ್ಲಿ ನಾನು ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ.
ರಣಜಿ ಟ್ರೋಫಿಯಲ್ಲಿ, ಕೊನೆಯ ಸುತ್ತಿನಲ್ಲಿ, ನಾನು ಏಳು ವಿಕೆಟ್ ಗಳನ್ನು ಪಡೆದೆ. ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿಯೂ ಸಹ ನಾನು ತುಂಬಾನೇ ಚೆನ್ನಾಗಿ ಆಡಿದ್ದೆ” ಎಂದು ಹೇಳಿದರು.
ಸಂದೀಪ್ ಅವರು ಯಾವುದೇ ಫ್ರಾಂಚೈಸಿಗಾಗಿ ಆಡಿದರೂ, ವಿಶೇಷವಾಗಿ ಪವರ್ ಪ್ಲೇ ನಲ್ಲಿ ವಿಕೆಟ್ ಪಡೆಯುವ ಬೌಲರ್ ಆಗಿದ್ದಾರೆ. ವಾಸ್ತವವಾಗಿ, ಪ್ರತಿ ಇನ್ನಿಂಗ್ಸ್ ಅನುಪಾತಕ್ಕೆ ವಿಕೆಟ್ ಗಳ ಅನುಪಾತದ ವಿಷಯಕ್ಕೆ ಬಂದಾಗ, ಸಂದೀಪ್ ಸಾರ್ವಕಾಲಿಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ.
ಅವರ ಹೆಸರಿನಲ್ಲಿ ಪ್ರತಿ ಇನ್ನಿಂಗ್ಸ್ ಗೆ 1.09 ವಿಕೆಟ್ ಗಳನ್ನು ಪಡೆದಿದ್ದಾರೆ. ಆದರೆ, ಐಪಿಎಲ್ 2023 ರ ಹರಾಜಿನಲ್ಲಿ, ಅವರನ್ನು ಯಾರೊಬ್ಬರೂ ಬಿಡ್ ಮಾಡದೆ ಇರುವುದು ಈಗ ವೇಗಿಯ ನಿದ್ದೆಗೆಡೆಸಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಅವಕಾಶ ಸಿಗದೇ ಇರುವುದಕ್ಕೆ ಏನ್ ಹೇಳಿದ್ರು ವೇಗಿ ಸಂದೀಪ್?
"ನನ್ನ ಬೌಲಿಂಗ್ ನಲ್ಲಿ ಸ್ಥಿರವಾಗಿರಲು ನಾನು ಯಾವಾಗಲೂ ಶ್ರಮಿಸಿದ್ದೇನೆ ಮತ್ತು ಅದು ಮಾತ್ರ ನನ್ನ ಕೈಯಲ್ಲಿದೆ. ಆಯ್ಕೆ ಮಾಡುವುದು ಅಥವಾ ಮಾಡದೆ ಇರುವುದು ನಮ್ಮ ಕೈಯಲ್ಲಿ ಇಲ್ಲ ಮತ್ತು ಅದನ್ನು ನಿಯಂತ್ರಿಸಲು ನನಗೆ ಸಾಧ್ಯವೂ ಇಲ್ಲ. ಅವಕಾಶ ಸಿಕ್ಕರೆ ಒಳ್ಳೆಯದು, ಇಲ್ಲದಿದ್ದರೆ, ನಾನು ಉತ್ತಮ ಆಟವನ್ನು ಹೀಗೆ ಮುಂದುವರೆಸುತ್ತೇನೆ" ಎಂದು ಸಂದೀಪ್ ನೋವಿನಿಂದ ಹೇಳಿದರು.
50 ಲಕ್ಷ ರೂಪಾಯಿಗಳ ಮೂಲ ಬೆಲೆಯನ್ನು ನಿಗದಿಪಡಿಸಿದ್ದ ಸಂದೀಪ್, ಹರಾಜಿನಲ್ಲಿ 10 ಫ್ರಾಂಚೈಸಿಗಳಲ್ಲಿ ಯಾವುದೇ ಫ್ರಾಂಚೈಸಿಗಳಿಂದ ಬಿಡ್ ಪಡೆಯಲು ಸಾಧ್ಯವಾಗದಿರಬಹುದು, ಆದರೆ ಅವರು ಇನ್ನೂ ಗಾಯಗೊಂಡವರ ಬದಲಿ ಆಟಗಾರನಾಗಿ ಐಪಿಎಲ್ ನಲ್ಲಿ ಆಡಬಹುದು.
ಟ್ವೆಂ ಟಿ20 ಲೀಗ್ ನ ಡೈನಾಮಿಕ್ಸ್ ಅನ್ನು ಪರಿಗಣಿಸಿದರೆ, ಆಟಗಾರರಿಗೆ ಗಾಯಗಳು ತುಂಬಾ ಸಾಮಾನ್ಯವಾಗಿದೆ. ಸಂದೀಪ್, ಅವರಲ್ಲಿರುವ ಪ್ರತಿಭೆ ಮತ್ತು ಅನುಭವವನ್ನು ಪರಿಗಣಿಸಿ, ಅಗತ್ಯವಿದ್ದರೆ ಬದಲಿ ಆಟಗಾರನಾಗಿ ಫ್ರಾಂಚೈಸಿಗಳ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆಯಬಹುದು.
Story link: 'Hell yeah he should open for India at World Cup': Lee names Rahul's replacement | Cricket - Hindustan Times
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ