Harshal Patel: ಹರಾಜಿನ ಬೆಲೆಯು ನನ್ನ ಆಟವನ್ನು ವಿಚಲಿತಗೊಳಿಸುವುದಿಲ್ಲ, RCB ಬೌಲರ್

ಹರಿಯಾಣ ವೇಗಿ ಹರ್ಷಲ್ ಪಟೇಲ್ (Harshal Patel) ಇತ್ತೀಚೆಗೆ ಆರ್‌ಸಿಬಿ ತರಬೇತಿ ಶಿಬಿರವನ್ನು ಸೇರಿಕೊಂಡಿದ್ದಾರೆ. ಅಭ್ಯಾಸದ ವೇಳೆ ಆರ್‌ಸಿಬಿಯ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಮಾತನಾಡುತ್ತಾ, ಹರ್ಷಲ್ ತಮ್ಮ ಹರಾಜಿನ ಬೆಲೆಯು ನನ್ನ ಆಟವನ್ನು ವಿಚಲಿತಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.

ಹರ್ಷಲ್ ಪಟೇಲ್

ಹರ್ಷಲ್ ಪಟೇಲ್

  • Share this:
ಇನ್ನೇನು ಕ್ರಿಕೆಟ್ ಲೋಕದ ಹಬ್ಬ ಐಪಿಎಲ್‌ 2022 (IPL 2022) ದಿನಗಣನೆ ಶುರುವಾಗಿದೆ. ಕಣದಲ್ಲಿ ಉತ್ತಮ ಪ್ರದರ್ಶನ ನೀಡಲು 10 ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಮಾರ್ಚ್ 26ರಿಂದ ಐಪಿಎಲ್​ನ (IPL) 15ನೇ ಆವೃತ್ತಿಯು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡಗಳು ಸೆಣಸಾಟ ನಡೆಸಲಿದೆ. ಈ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ತಯಾರಿಯನ್ನು ಬೆಂಗಳೂರು ರಾಯಲ್​ ಚಾಲೆಂಜರ್ಸ್ (RCB) ತಂಡವು ಈಗಾಗಲೇ ಪ್ರಾರಂಭಿಸಿದ್ದು, ಹರಿಯಾಣ ವೇಗಿ ಹರ್ಷಲ್ ಪಟೇಲ್ (Harshal Patel) ಇತ್ತೀಚೆಗೆ ಆರ್‌ಸಿಬಿ ತರಬೇತಿ ಶಿಬಿರವನ್ನು ಸೇರಿಕೊಂಡಿದ್ದಾರೆ. ಅಭ್ಯಾಸದ ವೇಳೆ ಆರ್‌ಸಿಬಿಯ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಮಾತನಾಡುತ್ತಾ, ಹರ್ಷಲ್ ತಮ್ಮ ಹರಾಜಿನ ಬೆಲೆಯು ನನ್ನ ಆಟವನ್ನು ವಿಚಲಿತಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.

ಹರಾಜಿನ ಬೆಲೆಯು ನನ್ನ ಆಟವನ್ನು ವಿಚಲಿತಗೊಳಿಸುವುದಿಲ್ಲ:

ನಾನು 10 ಲಕ್ಷಕ್ಕೆ ಆಡಲಿ ಅಥವಾ 10.75 ಕೋಟಿಗೆ ಆಡಲಿ, ಅದು ನಿಜವಾಗಿಯೂ ಅಪ್ರಸ್ತುತವಾಗುತ್ತದೆ ಎಂದು ಆರ್‌ಸಿಬಿ ಬೌಲರ್ ಹರ್ಷಲ್ ಪಟೇಲ್ ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವೇಗದ ಬೌಲರ್ ಹರ್ಷಲ್ ಪಟೇಲ್ ಅವರು ತಮ್ಮ ಬೆಲೆ ಬಗ್ಗೆ ಯೋಚಿಸುವುದಿಲ್ಲ. ಬದಲಿಗೆ ಮೈದಾನದಲ್ಲಿ ತಮ್ಮ ಕೌಶಲ್ಯವನ್ನು ಕಾರ್ಯಗತಗೊಳಿಸುವ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇನೆ, ಹೆಚ್ಚಿನ ಹರಾಜಿನ ಬೆಲೆಯು ತನ್ನ ಮೂಲ ಆಟದ ಯೋಜನೆಯಿಂದ ತನ್ನನ್ನು ವಿಚಲಿತಗೊಳಿಸುವುದಿಲ್ಲ ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ.

ಪರ್ಪಲ್ ಕ್ಯಾಪ್ ಹೋಲ್ಡರ್:

ಕಳೆದ ತಿಂಗಳ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಸೀಸನ್ 15 ಮೆಗಾ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಸೇಲ್ ಆಗಿದ್ದರು. ಹರ್ಷಲ್ ಅವರು ಕಳೆದ ವರ್ಷದ ಅತ್ಯುತ್ತಮ ಬೌಲಿಂಗ್ ಪ್ರದರ್ಶನಕ್ಕಾಗಿ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಮತ್ತು ಕೆಲವು ಅನಿವಾರ್ಯದ ಪರಿಸ್ಥಿತಿಯಲ್ಲಿ ಹರ್ಷಲ್ ಅವರ ಬ್ಯಾಟಿಂಗ್‌ನಿಂದ ರನ್‌ಗಳನ್ನು ಸಹ ನಿರೀಕ್ಷೆ ಮಾಡಬಹುದಾಗಿದೆ. ಈ ಎಲ್ಲಾ ಕಾರಣಕ್ಕಾಗಿಯೇ ಆರ್‌ಸಿಬಿ ಫ್ರಾಂಚೈಸಿ ಹರ್ಷಲ್‌ರನ್ನು ತನ್ನ ತಂಡದಲ್ಲಿಯೇ ಉಳಿಸಿಕೊಂಡಿದೆ. ಹರ್ಷಲ್ ಪಟೇಲ್ ಖರೀದಿಸಲು ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ತೀವ್ರ ಪೈಪೋಟಿ ನಡೆಸಿತ್ತು. ಆದರೆ ಪಟ್ಟು ಬಿಡದ ಆರ್‌ಸಿಬಿ 10.75 ಕೋಟಿ ರೂಪಾಯಿ ನೀಡಿ ಡೆತ್ ಓವರ್ ಸ್ಪೆಷಲಿಸ್ಟ್ ವೇಗಿಯನ್ನು ಖರೀದಿಸಿತ್ತು.

ಇದನ್ನೂ ಓದಿ: IPL 2022: ಇವ್ರ್​​ ಆಡದೇ ಇರೋ ಟೀಮ್​ ಇಲ್ಲ.. 9ನೇ ತಂಡದ ಪರ ಬ್ಯಾಟ್ ಬೀಸಲು ರೆಡಿಯಾದ ಪ್ಲೇಯರ್​ ಯಾರ್​ ಗೊತ್ತಾ?

ಹರ್ಷಲ್​ ಮಾತು:

ನಾನು ಕಳೆದ ವರ್ಷ ಆಡಿದ ರೀತಿಯಲ್ಲಿಯೇ ಈ ಸೀಸನ್‌ನಲ್ಲೂ ಆಡಲಿದ್ದೇನೆ, ನಾನು 10 ಲಕ್ಷ ಅಥವಾ 10.75 ಕೋಟಿಗೆ ಆಡುತ್ತೇನೆ ಎಂಬುದು ನಿಜವಾಗಿಯೂ ಅಪ್ರಸ್ತುತವಾಗುತ್ತದೆ. ನನ್ನ ಬೌಲಿಂಗ್ ಶೈಲಿ ನನಗೆ ತಿಳಿದಿದೆ ಮತ್ತು ಅದು ಬದಲಾಗುವುದಿಲ್ಲ ಎಂದು ಈ ವರ್ಷದ ಐಪಿಎಲ್‌ನಲ್ಲಿ ಬ್ಯಾಟಿಂಗ್ ಸ್ನೇಹಿ ಟ್ರ್ಯಾಕ್‌ಗಳನ್ನು ಎದುರಿಸಲು ಅವರ ಸಿದ್ಧತೆಗಳ ಕುರಿತು ಹರ್ಷಲ್ ಪಟೇಲ್ ಹೇಳಿದರು.

ಆದರೆ ಬದಲಾವಣೆ ಏನೆಂದರೆ ಈ ಪರಿಸ್ಥಿತಿಗಳಿಗೆ ನೀವು ಹೇಗೆ ಹೊಂದಿಕೊಳ್ಳುತ್ತೀರಿ. ನಿಮ್ಮ ಆರು ಎಸೆತಗಳನ್ನು ನೀವು ಹೇಗೆ ಪ್ಯಾಕೇಜ್ ಮಾಡುತ್ತೀರಿ? ಎಂಬುವುದನ್ನು ನೋಡಿಕೊಳ್ಳಬೇಕು ಎಂದಿದ್ದಾರೆ. ಏಕೆಂದರೆ ನಾನು ಚೆನ್ನೈನಲ್ಲಿ ಆಡುತ್ತಿದ್ದರೆ ನಾನು ಹೆಚ್ಚು ನಿಧಾನವಾದ ಎಸೆತಗಳನ್ನು ಬೌಲ್ ಮಾಡುತ್ತೇನೆ; ನಾನು ಈ ಬ್ಯಾಟಿಂಗ್ ಸ್ನೇಹಿ ಬೌನ್ಸಿ ಪಿಚ್‌ಗಳಲ್ಲಿ ಆಡುತ್ತಿದ್ದರೆ, ನಾನು ನನ್ನ ಓವರ್‌ಗಳನ್ನು ಸ್ವಲ್ಪ ವಿಭಿನ್ನವಾಗಿ ಪ್ಯಾಕ್ ಮಾಡುತ್ತೇನೆ. ಇದು ಕೇವಲ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು, ಯಾವುದೇ ಉತ್ತಮ ಆಟಗಾರ ಅದನ್ನು ಮಾಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯ:

ಆರ್‌ಸಿಬಿ ತನ್ನ ಐಪಿಎಲ್ 2022 ಅಭಿಯಾನವನ್ನು ಮಾರ್ಚ್ 27 ರಂದು ಪ್ರಾರಂಭಿಸಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2022ರ ಬಿ ಗುಂಪಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಜೊತೆಗೆ ಸ್ಪರ್ಧಿಸಲಿದೆ.

ಇದನ್ನೂ ಓದಿ: ನಮ್ಮ RCB ತಂಡದ ಮಾಲೀಕರು ಯಾರು? ನಿಮಗೆ ಗೊತ್ತಿಲ್ಲದ ಮಾಹಿತಿ ಇದು!

ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಮಾರ್ಚ್ 27ರಂದು ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 2022ರ ಐಪಿಎಲ್ ಅಭಿಯಾನವನ್ನು ಪ್ರಾರಂಭಿಸಲಿದೆ. ಜೊತೆಗೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ನಿನ್ನೆ ಆರ್‌ಸಿಬಿ ಬಳಗವನ್ನು ಸೇರಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಈ ಬಾರಿ ಆರ್‌ಸಿಬಿ ತಂಡವನ್ನು ಮುನ್ನಡೆಸಲಿದ್ದು, ಮೈದಾನದಲ್ಲಿ ಸೆಣೆಸಾಡಲು ಆರ್‌ಸಿಬಿ ತಂಡ ಭರ್ಜರಿ ತಯಾರಿ ನಡೆಸುತ್ತಿದೆ.
Published by:shrikrishna bhat
First published: