Yuvraj Singh: ಆ ದಿನ ಇಡೀ ರಾತ್ರಿ ನಾನು ನಿದ್ರೆ ಮಾಡಿರಲಿಲ್ಲ, ಹಳೆಯ ದಿನಗಳನ್ನು ನೆನದ ಯುವರಾಜ್ ಸಿಂಗ್

ಸ್ಪೋರ್ಟ್ಸ್ 18 ನ ಹೊಸ ಕಾರ್ಯಕ್ರಮವಾದ ‘ಹೋಮ್ ಆಫ್ ಹೀರೋಸ್‌‘ನಲ್ಲಿ ಭಾಗವಹಿಸಿದ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತನ್ನ ಚೊಚ್ಚಲ ಇನ್ನಿಂಗ್ಸ್‌ಗೆ ಒಂದು ರಾತ್ರಿ ಮೊದಲು ಟೀಂ ಇಂಡಿಯಾದ ನಾಯಕ ಸೌರವ್ ಗಂಗೂಲಿ ತನ್ನೊಂದಿಗೆ ಮಾತನಾಡಿದ ಕ್ಷಣವನ್ನು ನೆನಪಿಸಿಕೊಂಡರು.

ಯುವರಾಜ್ ಸಿಂಗ್

ಯುವರಾಜ್ ಸಿಂಗ್

  • Share this:
ಸ್ಪೋರ್ಟ್ಸ್ 18 (Sports 18) ನ ಹೊಸ ಕಾರ್ಯಕ್ರಮವಾದ ‘ಹೋಮ್ ಆಫ್ ಹೀರೋಸ್‌‘ನಲ್ಲಿ (Home Of Heroes) ಭಾಗವಹಿಸಿದ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ತನ್ನ ಚೊಚ್ಚಲ ಇನ್ನಿಂಗ್ಸ್‌ಗೆ ಒಂದು ರಾತ್ರಿ ಮೊದಲು ಟೀಂ ಇಂಡಿಯಾದ ನಾಯಕ ಸೌರವ್ ಗಂಗೂಲಿ (Sourav Ganguly) ತನ್ನೊಂದಿಗೆ ಮಾತನಾಡಿದ ಕ್ಷಣವನ್ನು ನೆನಪಿಸಿಕೊಂಡರು. ಅಂದು 18 ವರ್ಷದ ಯುವರಾಜ್‌ ಸಿಂಗ್ ಮುಂದಿನ ದಿನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡುವವರಿದ್ದರು. ಅದರ ಹಿಂದಿನ ರಾತ್ರಿ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ ಅವರು ಯುವರಾಜ್ ಸಿಂಗ್ ಬಳಿ ನೀವು ನಾಳೆ ನಿಮ್ಮ ಖಾತೆಯನ್ನು ತೆರೆಯುತ್ತಿರಿ ಎಂದು ಹೇಳಿದ್ದರು. ಇದನ್ನೂ ಕೇಳಿದ ನನಗೆ ಆ ದಿನ ಇಡೀ ರಾತ್ರಿ ನಾನು ನಿದ್ರೆ ಮಾಡಿರಲಿಲ್ಲ ಎಂದು ಅಂದಿನ ದಿನವನ್ನು ನೆನಪಿಸಿಕೊಂಡರು. ಪಂದ್ಯದ ದಿನ ಆಸ್ಟ್ರೇಲಿಯಾದ ವಿರುದ್ಧ ನಾಯಕ ಗಂಗೂಲಿ ಅವರು ಸ್ವತಃ ಇನ್ನಿಂಗ್ಸ್ ಆರಂಭಿಸಿದರು. ನಂ.5 ರಲ್ಲಿ ಬ್ಯಾಟಿಂಗ್‌ಗೆ ಬಂದ ಯುವರಾಜ್ ಅವರು 84 ರನ್‌ಗಳಿಂದ ಭಾರತವು ಆಸ್ಟ್ರೇಲಿಯಾ ವಿರುದ್ಧ 265 ರನ್ ಗಳಿಸಿತು.

ಚೊಚ್ಚಲ ಏಕದಿನ ಕಿವೀಸ್ ವಿರುದ್ಧ ಆಡಿದ ಯುವಿ:

ಇನ್ನು, ಯುವರಾಜ್ ಸಿಂಗ್ ತಮ್ಮ ವೃತ್ತಿ ಜೀವನದ ಚೊಚ್ಚಲ ಏಕದಿನವನ್ನು ನ್ಯೂಜಿಲ್ಯಾಂಡ್ ವಿರುದ್ಧ ಆಡಿದ್ದರು. ಆದರೆ ಆ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಆದರೆ ತಮ್ಮ ಆಸೀಸ್ ನ ಮೊದಲ ಪಂದ್ಯದಲ್ಲಿಯೇ 84 ರನ್ ಗಳಿಸುವ ಮೂಲಕ ಮೊದಲ ಪಂದ್ಯದಲ್ಲಿಯೇ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇನ್ನು, ತಮ್ಮ ಬ್ಯಾಟಿಂಗ್ ಕುರಿತು ಮಾತನಾಡಿದ ಯುವರಾಜ್, ‘ನಾನು ನಂ. 5 ರಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ, ಆ ವೇಳೆ ತುಂಬಾ ಆತಂಕದಿಂದ ಇದ್ದೆ. ಆದರೆ ನಾನು ಬ್ಯಾಟಿಂಗ್‌ಗೆ ಹೋದಾಗ, ಚೆಂಡಿನತ್ತ ಹೆಚ್ಚು ಗಮನಹರಿಸುತ್ತಿದ್ದೆ. ಬ್ರೆಟ್ ಲೀ, ಗ್ಲೆನ್ ಮೆಕ್‌ಗ್ರಾತ್, ಜೇಸನ್ ಗಿಲ್ಲೆಸ್ಪಿ ಮತ್ತು ಟ್ರೇಡ್‌ಮಾರ್ಕ್ ಆಸೀಸ್ ಸ್ಲೆಡ್ಜಿಂಗ್‌ನಂತಹವರನ್ನು ಎದುರಿಸಿದ್ದು ಎಂದಿಗೂ ಮರೆಯಲಾಗುವುದಿಲ್ಲ‘ ಎಂದು ಯುವರಾಜ್ ತಮ್ಮ ಹಳೆಯ ನೆನಪುಗಳನ್ನು ನೆನಪಿಸಿಕೊಂಡರು.

ಆದರೆ ತಾನು 37 ರನ್‌ ಗಳಿಸಿದ್ದಾಗ ಔಟ್ ಆಗುವು ಸಂಭವದಿಂದ ಬದುಕುಳಿದೆ. ಆದ್ದರಿಂದ ಆ ದಿನ ನನ್ನದಾಯಿತು. ಆಸ್ಟ್ರೇಲಿಯ ವಿರುದ್ಧದ ನನ್ನ ಚೊಚ್ಚಲ ಪಂದ್ಯದಲ್ಲಿ ನಾನು 37 ರನ್ ಗಳಿಸಿದ್ದರೆ, ನಾನು ಎದುರಿಸುತ್ತಿರುವ ದಾಳಿಯಿಂದಾಗಿ ನಾನು ತುಂಬಾ ಸಂತೋಷಪಡುತ್ತಿದ್ದೆ" ಎಂದು ಯುವರಾಜ್ ಹೇಳುತ್ತಾರೆ.

ಇದನ್ನೂ ಓದಿ: IPL 2022 GT vs SRH: ಗುಜರಾತ್ ತಂಡಕ್ಕೆ ಹೈದರಾಬಾದ್ ಸವಾಲ್, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ 11

ಅಂದು ಅದು ನನ್ನ ಪಾಲಿಗೆ ಬಹು ದೊಡ್ಡ ಕ್ಷಣವಾಗಿತ್ತು:

ಅದೃಷ್ಟವಶಾತ್, ನಾನು 84 ರನ್ ಗಳಿಸಿದೆ, ಅಂದಿನ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಸೋಲಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವುದು ನನ್ನ ಪಾಲಿಗೆ ಬಹಳ ದೊಡ್ಡ ಕ್ಷಣವಾಗಿತ್ತು ಎಂದು ಮೈಕಲ್ ಬೆವನ್‌ರನ್ನು ರನ್ ಔಟ್ ಮಾಡುವ ಮಹತ್ವವನ್ನು ನೆನಪಿಸಿಕೊಂಡ ಯುವರಾಜ್ ಹೇಳುತ್ತಾರೆ. ಅಲ್ಲದೇ ಅಂದು ಇಯಾನ್ ಹಾರ್ವೆಯನ್ನು ಔಟ್ ಮಾಡಿದ್ದು ನಮ್ಮ ಟೀಂ ಗೆಲ್ಲಲು ಸಹಾಯವಾಯಿತು. ಆ ಮೂಲಕ ನಾನೊಬ್ಬ ಆಲ್​ರೌಂಡರ್ ಎಂದು ಮೊದಲ ಪಂದ್ಯದಲ್ಲಿಯೇ ತೋರಿಸಿಕೊಡುವ ಅವಕಾಶ ನನಗೆ ದೊರಕಿತು ಎಂದು ಯುವರಾಜ್ ಸಿಂಗ್ ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

ರಿಷಬ್ ಪಂತ್ ಟೆಸ್ಟ್ ನಾಯಕರಾಗಲು ಅತ್ಯುತ್ತಮ ಆಯ್ಕೆ:

ಸ್ಪೋರ್ಟ್ಸ್ 18 ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಭಾರತೀಯ ಟೆಸ್ಟ್ ನಾಯಕತ್ವದ ಬಗ್ಗೆ ಕೆಲವು ಆಸಕ್ತಿದಾಯಕ ಮಾತುಗಳನ್ನು ಆಡಿದ್ದಾರೆ. ಹೌದು, ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ, ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಲು ನಿರ್ಧರಿಸಿದೆ. ಆದರೆ, ರೋಹಿತ್‌ಗಿಂತ ಹೆಚ್ಚಾಗಿ ರಿಷಬ್ ಪಂತ್ ಟೆಸ್ಟ್ ನಾಯಕರಾಗಲು ಅತ್ಯುತ್ತಮ ಆಯ್ಕೆ ಎಂದು ಯುವರಾಜ್ ಹೇಳಿದ್ದಾರೆ. 'ಹೋಮ್ ಆಫ್ ಹೀರೋಸ್' ಭಾಗವಾಗಿರುವ ಈ ಸಂದರ್ಶನದ ಪೂರ್ಣ ಸಂಚಿಕೆ ಏಪ್ರಿಲ್ 29 ರಂದು ರಾತ್ರಿ ಪ್ರಸಾರವಾಗುತ್ತದೆ. ಇದು ಸ್ಪೋರ್ಟ್ಸ್ 18 ರಂದು ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

ಇದನ್ನೂ ಓದಿ: IPL 2022: ಪ್ಲೇ ಆಫ್ ಪ್ರವೇಶಿಸಲಿದ್ಯಾ RCB? ಏನು ಹೇಳುತ್ತಿದೆ ಐಪಿಎಲ್ ಅಂಕಪಟ್ಟಿ

ಪಂಥ್​ಗೆ ನಾಯಕತ್ವ ನೀಡಲು ಇದು ಸೂಕ್ತ ಸಮಯ:

ಯಾರೂ ನಿರೀಕ್ಷಿಸದ ರೀತಿಯಲ್ಲಿ ಧೋನಿ ಟೀಂ ಇಂಡಿಯಾ ನಾಯಕರಾದರು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಜೊತೆಗೆ ಅವರು ಯಶಸ್ವಿಯೂ ಆದರು. ಅದೇ ರೀತಿ ಪಂತ್ ಗೆ ನಾಯಕತ್ವ ಹಸ್ತಾಂತರಿಸುವುದು ಉತ್ತಮ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಯುವರಾಜ್ ಸಿಂಗ್ ಕೂಡ ಪಂತ್ ಗೆ ಒಂದು ವರ್ಷ ನಾಯಕತ್ವ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಯುವ ಆಟಗಾರನ ಕೈಗೆ ಟೀ ಇಂಡಿಯಾವನ್ನು ಹಾಕಲು ಇದು ಸೂಕ್ತ ಸಮಯ ಎಂದೂ ಅವರು ಹೇಳಿದ್ದಾರೆ.
Published by:shrikrishna bhat
First published: