150 ಕಿಮೀ ವೇಗದ ಚೆಂಡನ್ನು ಹಾರಿ ಹಿಡಿದ ಪ್ರೇಕ್ಷಕ: ಆಸೀಸ್​ಗೆ 7 ರನ್​ಗಳ ರೋಚಕ ಜಯ

6ನೇ ಓವರ್​ನ ಮಿಚೆಲ್ ಸ್ಟಾರ್ಕರ​ 150ಕಿಮೀ ವೇಗದ ಚೆಂಡನ್ನು​​​ ದ. ಆಫ್ರಿಕಾ ಬ್ಯಾಟ್ಸ್​ಮನ್​​​​​​ ಆ್ಯಡಂ​ ಮಾರ್ಕ್​​ರಾಮ್​​ ಅವರು ಸಿಕ್ಸ್​ಗೆ ಅಟ್ಟುತ್ತಾರೆ. ಈ ಶರ ವೇಗದ ಬಾಲ್​ ಪ್ರೇಕ್ಷಕ ಗ್ಯಾಲರಿ ಕಡೆ ತಲುಪಿದ್ದು, ಅಲ್ಲೇ ಕೂತಿದ್ದ ಕ್ರೀಡಾಭಿಮಾನಿಯೊಬ್ಬ ಮಿಂಚಿನ ವೇಗದ ಚೆಂಡನ್ನು ಹಾರಿ ಹಿಡಿದು ಒಮ್ಮೆಗೆ ಎಲ್ಲರನ್ನು ದಂಗಾಗುವಂತೆ ಮಾಡಿದ್ದಾರೆ.

ಆಸ್ಟ್ರೇಲಿಯಾ vs  ನ್ಯೂಜಿಲೆಂಡ್ ಪಂದ್ಯ

ಆಸ್ಟ್ರೇಲಿಯಾ vs ನ್ಯೂಜಿಲೆಂಡ್ ಪಂದ್ಯ

  • News18
  • Last Updated :
  • Share this:
ನ್ಯೂಸ್ 18 ಕನ್ನಡ

ಅಡಿಲೇಡ್​​​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಕೊನೆಗೂ ಗೆಲುವಿನ ರುಚಿಕಂಡು ನಿಟ್ಟುಸಿರು ಬಿಟ್ಟಿದೆ. ಸತತ ಏಳು ಸೋಲುಗಳಿಂದ ಕಂಗೆಟ್ಟಿದ ಆಸೀಸ್ 7 ರನ್​ಗಳ ರೋಚಕ ಜಯದೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಆದರೆ, ಪಂದ್ಯದ ಮಧ್ಯೆ ಎಲ್ಲರ ಗಮನ ಸೆಳೆದಿದ್ದು ಸಾಮಾನ್ಯ ಪ್ರೇಕ್ಷಕರೊಬ್ಬರು.

ಇದನ್ನೂ ಓದಿ: ಸೋಲಿನೊಂದಿಗೆ ಕ್ರಿಕೆಟ್ ಜೀವನ ಅಂತ್ಯಗೊಳಿಸಿದ ರಂಗನಾ ಹೆರಾತ್..!

ಆಸ್ಟ್ರೇಲಿಯಾ ನೀಡಿದ್ದ 232 ರನ್​ಗಳ ಗುರಿ ಬೆನ್ನತ್ತುತ್ತಿದ್ದ ಆಫ್ರಿಕನ್ನರು ಆರಂಭಿಕ ಆಘಾತ ಅನುಭವಿಸಿದ್ದರು. 6ನೇ ಓವರ್​ನ ಮಿಚೆಲ್ ಸ್ಟಾರ್ಕರ​ 150ಕಿಮೀ ವೇಗದ ಚೆಂಡನ್ನು​​​ ದ. ಆಫ್ರಿಕಾ ಬ್ಯಾಟ್ಸ್​ಮನ್​​​​​​ ಆ್ಯಡಂ​ ಮಾರ್ಕ್​​ರಾಮ್​​ ಅವರು ಸಿಕ್ಸ್​ಗೆ ಅಟ್ಟುತ್ತಾರೆ. ಈ ಶರ ವೇಗದ ಬಾಲ್​ ವೀಕ್ಷಣಾ ಗ್ಯಾಲರಿ ಕಡೆ ತಲುಪಿದ್ದು, ಅಲ್ಲೇ ಕೂತಿದ್ದ ಕ್ರೀಡಾಭಿಮಾನಿಯೊಬ್ಬ ಮಿಂಚಿನ ವೇಗದ ಚೆಂಡನ್ನು ಹಾರಿ ಹಿಡಿದು ಒಮ್ಮೆಗೆ ಎಲ್ಲರನ್ನು ದಂಗಾಗುವಂತೆ ಮಾಡಿದ್ದಾರೆ. ಈತ ಕ್ಯಾಚ್ ಪಡೆದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಹರ್ಮನ್​​​​​​ ಶತಕದ ದಾಖಲೆ: ಟಿ-20 ವಿಶ್ವಕಪ್​​​ನಲ್ಲಿ ಭಾರತ ಭರ್ಜರಿ ಶುಭಾರಂಭ

  ಈ ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 48.3 ಓವರ್​​ನಲ್ಲಿ 231 ರನ್ ಗಳಿಸಿ ಆಲೌಟ್ ಆಯಿತು. ತಂಡದ ಪರ ಅಲೆಕ್ಸ್​​ ಕ್ಯಾರಿ 47, ಕ್ರಿಸ್ ಲೈನ್ 44 ಹಾಗೂ ನಾಯಕ ಆ್ಯರೋನ್ ಫಿಂಚ್ 41 ರನ್ ಬಾರಿಸಿ ತಂಡಕ್ಕೆ ನೆರವಾದರು. 232 ರನ್​ಗಳ ಗುರಿ ಬೆನ್ನತ್ತಿದ ಆಫ್ರಿಕನ್ ಪರ ಡೇವಿಡ್ ಮಿಲ್ಲರ್ 51 ಹಾಗೂ ಫಾಫ್​​ ಡುಪ್ಲೆಸಿಸ್  47 ರನ್ ಬಾರಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 20ರ ಗಡಿ ದಾಟಲಿಲ್ಲ. ಪರಿಣಾಮ 50 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

 

First published: