ಕೆಐಎ ಸೂಪರ್ ಲೀಗ್​ನಲ್ಲಿ ಶತಕದ ಮಂದಹಾಸ ಬೀರಿದ ಸ್ಮೃತಿ ಮಂದಾನ: ವೆಸ್ಟರ್ನ್ ಸ್ಟೋಮ್ ತಂಡಕ್ಕೆ ಗೆಲುವು

news18
Updated:August 4, 2018, 11:26 AM IST
ಕೆಐಎ ಸೂಪರ್ ಲೀಗ್​ನಲ್ಲಿ ಶತಕದ ಮಂದಹಾಸ ಬೀರಿದ ಸ್ಮೃತಿ ಮಂದಾನ: ವೆಸ್ಟರ್ನ್ ಸ್ಟೋಮ್ ತಂಡಕ್ಕೆ ಗೆಲುವು
news18
Updated: August 4, 2018, 11:26 AM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್  (ಆ. 4) : ಇಲ್ಲಿ ನಡೆಯುತ್ತಿರುವ ಕೆಐಎ ಸೂಪರ್ ಲೀಗ್ (ಕೆಎಸ್ಎಲ್) ಟಿ 20 ಪಂದ್ಯದಲ್ಲಿ ವೆಸ್ಟರ್ನ್ ಸ್ಟೋಮ್ ತಂಡವನ್ನು ಪ್ರತಿನಿಧಿಸಿರುವ ಭಾರತದ ಸ್ಮೃತಿ ಮಂದಾನ ಅವರು ಕೇವಲ 61 ಎಸೆತಗಳಲ್ಲಿ 102 ರನ್ ಗಳಿಸುವ ಮೂಲಕ ದಿಟ್ಟ ಆಟವನ್ನು ಪ್ರದರ್ಶಿಸಿದರು. ಸ್ಮೃತಿ ಅವರ ಶತಕದ ನೆರವಿನಿಂದಾಗಿ ವೆಸ್ಟರ್ನ್ ಸ್ಟೋಮ್ ತಂಡ ಲಂಕಾಷೈರ್ ಥಂಡರ್ ತಂಡವನ್ನು ಏಳು ವಿಕೆಟ್​ಗಳಿಂದ ಪರಾಭವಗೊಳಿಸಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಲಂಕಾಷೈರ್ ಥಂಡರ್ ತಂಡ ನಿಗದಿತ 20 ಓವರ್​ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 153 ರನ್ ಕಲೆ ಹಾಕಿತು. ಈ ತಂಡದಲ್ಲಿರುವ ಭಾರತೀಯ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಯಾವುದೇ ರನ್ ಗಳಿಸುವಲ್ಲಿ ಸಫಲರಾಗದೆ ನಿರಾಸೆ ಮೂಡಿಸಿದರು.

ಈ ಗುರಿಯನ್ನು ಬೆನ್ನತ್ತಿದ್ದ ವೆಸ್ಟರ್ನ್ ಸ್ಟೋಮ್ ತಂಡದ ಸ್ಮೃತಿ ಅವರು 61 ಎಸೆತಗಳಲ್ಲಿ 12 ಬೌಂಡರಿ ಹಾಗೂ ಆಕರ್ಷಕ ನಾಲ್ಕು ಸಿಕ್ಸರ್​ನೊಂದಿಗೆ 102 ರನ್ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

ಕೆಐಎ ಸೂಪರ್​ಲೀಗ್​ನಲ್ಲಿ ಈವರೆಗೂ 282 ರನ್ ಕಲೆ ಹಾಕಿರುವ ಮಂದಾನ ಅವರು ಇನ್ನಿಂಗ್ಸ್ ಟಾಪ್ ಸ್ಕೋರರ್ ಆಗಿದ್ದಾರೆ.

 

First published:August 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...