ಶ್ರೀಲಂಕಾ ನಾಯಕ ದಿನೇಶ್ ಚಂದೀಮಾಲ್ ವಿರುದ್ಧ ಚೆಂಡು ವಿರೂಪ ಆರೋಪ

news18
Updated:June 17, 2018, 5:03 PM IST
ಶ್ರೀಲಂಕಾ ನಾಯಕ ದಿನೇಶ್ ಚಂದೀಮಾಲ್ ವಿರುದ್ಧ ಚೆಂಡು ವಿರೂಪ ಆರೋಪ
  • News18
  • Last Updated: June 17, 2018, 5:03 PM IST
  • Share this:
ನ್ಯೂಸ್ 18 ಕನ್ನಡ

ಚೆಂಡು ವಿರೂಪ ಪ್ರಕರಣ ಆಸ್ಟ್ರೇಲಿಯಾ ಕ್ರಿಕೆಟ್​​ನಲ್ಲಿ ದೊಡ್ಡ ಸುದ್ದಿಯಾದ ಬೆನ್ನಲ್ಲೆ ಇದೀಗ ಇಂತಹದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆತಿಥೇಯ ವೆಸ್ಟ್​ ಇಂಡೀಸ್ ಹಾಗೂ ಶ್ರೀಲಂಕಾ ನಡುವಣ ಎರಡನೇ ಟೆಸ್ಟ್​ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಂದೀಮಾಲ್ ಅವರಮೇಲೆ ಚೆಂಡು ವಿರೂಪ ಗೊಳಿಸಿರುವ ಆರೋಪ ಕೇಳಿಬಂದಿದೆ.

ಈ ಬಗ್ಗೆ ಸ್ವತಃ ಐಸಿಸಿ ಸ್ಪಷ್ಟ ಪಡಿಸಿದ್ದು ಟ್ವೀಟ್ ಮಾಡುವ ಮೂಲಕ, ‘ಶ್ರೀಲಂಕಾ ತಂಡದ ನಾಯಕ ದಿನೇಶ್ ಚಂದೀಮಾಲ್ ಅವರು ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2.9 ರ ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿದೆ. ವೆಸ್ಟ್​ ಇಂಡೀಸ್ ಹಾಗೂ ಶ್ರೀಲಂಕಾ ನಡುವಣ  ಟೆಸ್ಟ್​ ಪಂದ್ಯದಲ್ಲಿ ಚೆಂಡಿನ ಸ್ವರೂಪವನ್ನು ಚಂದೀಮಲ್ ಅವರು ಬದಲಾವಣೆ ಮಾಡಿದ್ದಾರೆ’ ಎಂದು ತಿಳಿಸಿದೆ. ಆದರೆ ಶ್ರೀಲಂಕಾ ಆಟಗಾರರು ಈ ಆರೋಪನ್ನು ತಳ್ಳಿಹಾಕಿದ್ದು, ಈ ರೀತಿಯ ಯಾವುದೇ ಕೃಥ್ಯ ಎಸಗಿಲ್ಲ ಎಂದು ಸ್ಪಷ್ಟಪಡಿಸಿದೆ.

 ಈ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ 3ನೇ ದಿನ ಶ್ರೀಲಂಕಾ ಕ್ರಿಕೆಟಿಗರು ಪ್ರತಿಭಟಿಸಿ ಮೈದಾನಕ್ಕೆ ಇಳಿಯಲು ನಿರಾಕರಿಸಿದರು. ಕೊನೆಗೆ ಮ್ಯಾಚ್ ರೆಫ್ರಿ ಜಾವಗಲ್ ಶ್ರಿನಾಥ್ ಅವರು ಮಧ್ಯ ಪ್ರವೇಶಿಸಿ, ಮಾತುಕತೆ ನಡೆಸಿದ ಬಳಿಕ 2 ಗಂಟೆ ತಡವಾಗಿ ಪಂದ್ಯ ಆರಂಭವಾಯಿತು. ಈ ಹಿನ್ನಲೆಯಲ್ಲಿ ವಿಂಡೀಸ್​ಗೆ 5 ಪೆನಾಲ್ಟಿ ರನ್ ನೀಡಲು ನಿರ್ಧರಿಸಿದರು.
First published: June 17, 2018, 5:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading